80 ಆಕ್ಸಿಜನ್ ಘಟಕ ಸ್ಥಾಪನೆಗೆ ಗೂಗಲ್‍ನಿಂದ 113 ಕೋಟಿ ಅನುದಾನ

ನವದೆಹಲಿ, ಜೂ.17- 80 ಆಕ್ಸಿಜನ್ ಪ್ಲಾಂಟ್‍ಗಳ ಅಳವಡಿಕೆ, ಖರೀದಿ ಮತ್ತು ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರ ಕೌಶಲ್ಯ ತರಬೇತಿ ನೆರ ವಿಗಾಗಿ 133 ಕೋಟಿ ರೂ. ಅನುದಾನ ವನ್ನು ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿ ಗೂಗಲ್ ಗುರುವಾರ ಪ್ರಕಟಿಸಿದೆ.
ಆರೋಗ್ಯ ಸೇವೆಗಳಲ್ಲಿ 80 ಆಕ್ಸಿಜನ್ ಉತ್ಪಾದನಾ ಘಟಕಗಳ ಅಳವಡಿಕೆ ಹಾಗೂ ಖರೀದಿಯನ್ನು ಗೂಗಲ್ ಬೆಂಬಲಿಸಲಿದ್ದು 90 ಕೋಟಿಯನ್ನು ಗಿವ್ ಇಂಡಿಯಾ ಮತ್ತು 18.5 ಕೋಟಿಯನ್ನು ಪಾತ್ ಸಂಸ್ಥೆಗೆ ನೀಡ ಲಿದೆ. ಕೋವಿಡ್-19 ನಿರ್ವಹಣೆ ತರಬೇತಿ ಯೊಂದಿಗೆ 20 ಸಾವಿರ ಆರೋಗ್ಯ ಕಾರ್ಯ ಕರ್ತರ ಕೌಶಲ್ಯ ತರಬೇತಿಗೆ ನೆರವಾಗಲು ಅಪೆÇಲೋ ವೈದ್ಯಕೀಯ ಕೌಶಲ್ಯಕ್ಕೆ ಹಣಕಾಸು ಪ್ರಯತ್ನ ಮಾಡಲಿದೆ. ಅಲ್ಲದೇ, ಗ್ರಾಮೀಣ ಆರೋಗ್ಯ ಕಾರ್ಯಕರ್ತರು ಮತ್ತು ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನು ಬಲ ಪಡಿಸುವುದಾಗಿ ಪ್ರತಿಪಾದಿಸಿದೆ. ಈ ನಿಟ್ಟಿ ನಲ್ಲಿ ದೇಶದಲ್ಲಿನ 15 ರಾಜ್ಯಗಳಲ್ಲಿ 180000 ಆಶಾ ಕಾರ್ಯಕರ್ತೆಯರು ಮತ್ತು 40 ಸಾವಿರ ಸಹಾಯಕ ನರ್ಸ್‍ಗಳ ಕೌಶಲ್ಯ ಕಾರ್ಯಕ್ರಮ ಕ್ಕಾಗಿ ಆರ್ಮನ್‍ಗೆ 3.6 ಕೋಟಿ ರೂ. ಅನುದಾನವನ್ನು ಗೂಗಲ್ ಸಂಸ್ಥೆ ನೀಡ ಲಿದೆ. ಅಗತ್ಯವಿರುವಲ್ಲಿ ಆಶಾ ಕಾರ್ಯ ಕರ್ತರು ಮತ್ತು ದಾದಿಯರಿಗೆ ಹೆಚ್ಚುವರಿ ಸಹಾಯ, ಸಲಹೆ ಒದಗಿಸಲು ಸಹಾಯ ವಾಣಿ ಸ್ಥಾಪಿಸಲು ಆರ್ಮನ್ ಅನುದಾನ ವನ್ನು ಬಳಸಿಕೊಳ್ಳಬಹುದಾಗಿದೆ.

ಜನರಿಗೆ ಮಾಹಿತಿ, ಸಾಧನಗಳು, ಸಂಪರ್ಕ ಮತ್ತು ಸುರಕ್ಷತೆಗೆ ಗೂಗಲ್ ಗಮನ ನೀಡಿ ರುವುದಾಗಿ ಗೂಗಲ್ ಇಂಡಿಯಾ ದೇಶದ ಮುಖ್ಯಸ್ಥ ಹಾಗೂ ಉಪಾಧ್ಯಕ್ಷ ಸಂಜಯ್ ಗುಪ್ತಾ ತಿಳಿಸಿದ್ದಾರೆ. ಭಾರತದ ಆರೋಗ್ಯ ಮೂಲಸೌಕರ್ಯ ಮತ್ತು ಕಾರ್ಯಪಡೆ ಗಳನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶ ಗಳಲ್ಲಿ ಬಲಪಡಿಸಲು ಕಂಪನಿಯು ಪ್ರಯ ತ್ನಿಸುತ್ತಿದೆ ಎಂದು ಅವರು ವರ್ಚು ಯಲ್ ಸಭೆಯಲ್ಲಿ ತಿಳಿಸಿದರು. ಆಕ್ಸಿಜನ್ ಕಾರ್ಯಕ್ರಮ ಕುರಿತಂತೆ ಪಾತ್ ಸಂಸ್ಥೆ ಜೊತೆಗೂಡಿ ಕಾರ್ಯನಿರ್ವಹಿಸುತ್ತೇವೆ. ಆಕ್ಸಿಜನ್ ತಯಾರಿಕಾ ಘಟಕಗಳ ಅಳ ವಡಿಕೆ, ಸಂಗ್ರಹ ಒಳಗೊಂಡಂತೆ, ಪ್ರಾಜೆಕ್ಟ್ ನಿರ್ವಹಣಾ ಬೆಂಬಲವನ್ನು ನೀಡುವು ದಾಗಿ ಗಿವ್ ಇಂಡಿಯಾ ಸಂಸ್ಥೆ ಸಿಇಒ ಅತುಲ್ ಸತಿಜಾ ಹೇಳಿದ್ದಾರೆ.