ಪ್ಯಾರಾಲಿಂಪಿಕ್ಸ್ ಅಥ್ಲೀಟ್‍ಗಳಿಗೆ ಆತಿಥ್ಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಗುರುವಾರ ತಮ್ಮ ಅಧಿ ಕೃತ ನಿವಾಸದಲ್ಲಿ ಟೋಕಿಯೊ ಪ್ಯಾರಾ ಲಿಂಪಿಕ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದು ತಂದ ಕ್ರೀಡಾಪಟುಗಳನ್ನು ಭೇಟಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಮೋದಿ ಭಾನುವಾರ ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.

ಗುರುವಾರ ಪ್ರಧಾನಿ ಮೋದಿ ಪ್ಯಾರಾ ಲಿಂಪಿಕ್ಸ್ ಕ್ರೀಡಾಪಟುಗಳು ಹಾಗೂ ಅವರ ತರಬೇತುದಾರರಿಗೆ ತಮ್ಮ ನಿವಾಸದಲ್ಲಿ ಆತಿಥ್ಯ ಆಯೋಜಿಸಿದ್ದರು. ಈ ಸಂದರ್ಭ ದಲ್ಲಿ, ಪ್ಯಾರಾಲಿಂಪಿಕ್ಸ್‍ನಲ್ಲಿ ಪದಕ ವಿಜೇತ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದರು.
ಪ್ಯಾರಾಲಿಂಪಿಕ್ಸ್‍ನಲ್ಲಿ ಭಾರತೀಯ ಕ್ರೀಡಾ ಪಟುಗಳ ಸಾಧನೆ, ದೇಶಾದ್ಯಂತ ಕ್ರೀಡಾ ಸಮುದಾಯದ ಧೈರ್ಯವನ್ನು ಹೆಚ್ಚಿಸುತ್ತಿದೆ. ನಿಮ್ಮ ಯಶಸ್ಸು ಭಾರತದಿಂದ ಇನ್ನೂ ಹೆಚ್ಚಿನ ಆಟಗಾರರನ್ನು ಅಭಿವೃದ್ಧಿಪಡಿಸುತ್ತದೆ. ಅಂತರಾಷ್ಟ್ರೀಯ ವೇದಿಕೆಯಲ್ಲಿ ಮನ್ನಣೆ ಪಡೆಯಲು ಪೆÇ್ರೀತ್ಸಾಹಿ ಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ನೀವು ಪಟ್ಟ ಕಷ್ಟದಿಂದಾಗಿ ಇಂದು ಖ್ಯಾತಿ ಗಳಿಸಿ ದ್ದೀರಿ. ನೀವೆಲ್ಲರೂ ಜನರನ್ನು ಪ್ರೇರೇಪಿಸಬಹುದು. ದೊಡ್ಡ ಬದಲಾವಣೆ ತರಲು ಸಹಾಯ ಮಾಡಬಹುದು. ನಾನು ನಿಮ್ಮೆಲ್ಲರೊಂದಿಗೆ ಸದಾ ಇರುತ್ತೇನೆ ಎಂದು ಮೋದಿ ಕ್ರೀಡಾಪಟುಗಳಿಗೆ ಹೇಳಿದ್ದರು. ಪ್ರಧಾನಿ ತಮ್ಮೊಂದಿಗೆ ಕುಳಿತು ಮಾತನಾಡಿದ್ದು, ತಮ್ಮನ್ನು ಆಹ್ವಾನಿಸಿ ಅಭಿನಂದಿಸಿರುವುದು ಅತ್ಯಂತ ಗೌರವ ಎಂದು ಭಾವಿಸುವುದಾಗಿ ಕ್ರೀಡಾಪಟುಗಳು ಹೇಳಿದರು. ಪ್ಯಾರಾಲಿಂಪಿಕ್ಸ್‍ನಲ್ಲಿ ಪದಕ ಗಳನ್ನು ಗೆದ್ದ ಕ್ರೀಡಾಪಟುಗಳು ಅವರ ಆಟೋಗ್ರಾಫ್‍ನೊಂದಿಗಿನ ಉಪಕರಣಗಳನ್ನು ಕೊಡಿಗೆಯಾಗಿ ನೀಡಿದರು. ಈ ಕೊಡಿಗೆಗಳನ್ನು ನಂತರ ಹರಾಜು ಹಾಕಲಾಗುವುದು ಎಂಬ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಕ್ರೀಡಾಪಟುಗಳು ಸ್ವಾಗತಿಸಿದರು.