ಸಂಪುಟ ಸಭೆ ನಂತರ ನಾಳೆಯೇ ಗ್ಯಾರಂಟಿಗಳು ಜಾರಿ

ಬೆಂಗಳೂರು, ಮೇ 31(ಕೆಎಂಶಿ)-ಷರತ್ತುಗಳ ಅಳವಡಿಕೆಯೊಂದಿಗೆ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ.
ಗ್ಯಾರಂಟಿ ಅನುಷ್ಠಾನಕ್ಕೆ ಸಂಬಂಧಿಸಿ ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ಸೇರಿದ್ದ ಅನೌಪ ಚಾರಿಕ ಮಂತ್ರಿ ಪರಿಷತ್ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಜನತೆಗೆ ನೀಡಿ ರುವ ಭರವಸೆಗಳನ್ನು ಅನುಷ್ಠಾನಗೊಳಿ ಸುವ ಪೂರ್ಣ ಹೊಣೆಗಾರಿಕೆಯನ್ನು ಮುಖ್ಯ ಮಂತ್ರಿ ಅವರ ಹೆಗಲಿಗೆ ಸಭೆ ಹಾಕಿದೆ.

ಐದು ಇಲಾಖೆಗಳು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಇರುವ ಸಾಧಕ-ಬಾಧಕಗಳನ್ನು ಸಂಬಂಧಪಟ್ಟ ಸಚಿವರು ಹಾಗೂ ಇಲಾಖೆ ಕಾರ್ಯದರ್ಶಿಗಳು ಸಭೆಯ ಗಮನಕ್ಕೆ ತಂದಿದ್ದಾರೆ. ಯೋಜನೆ ಅನುಷ್ಠಾನಕ್ಕೆ ದೊಡ್ಡ ಪ್ರಮಾಣದ ಹಣದ ಅವಶ್ಯಕತೆ ಇದೆ. ಈ ವಿಭಾಗಕ್ಕೆ ಹಣ ಒದ ಗಿಸಲು ನಮ್ಮಲ್ಲಿ ಆರ್ಥಿಕ ಸಂಪನ್ಮೂಲ ಸಮರ್ಪಕವಾಗಿಲ್ಲ. ಹಣಕಾಸು ಇಲಾಖೆ ನಮಗೆ ಸಹಕರಿಸಿದರೆ, ಯೋಜನೆ ಅನು ಷ್ಠಾನಗೊಳಿಸುವುದಾಗಿ ಎಲ್ಲಾ ಇಲಾಖೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದು ಕೈತೊಳೆದುಕೊಂಡಿದ್ದಾರೆ. ಪ್ರಧಾನ ಕಾರ್ಯ ದರ್ಶಿಗಳ ವರದಿಯ ಬಳಿಕ ಮುಖ್ಯ ಕಾರ್ಯ ದರ್ಶಿ ಅವರು ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ವರದಿ ಮತ್ತು ಮಾಹಿತಿ ನೀಡಲು ಒಂದು ದಿನದ ಸಮಯಾವಕಾಶವಿದೆ. ಹೀಗಾಗಿ ನಾಳೆ ನಡೆಯ ಬೇಕಿದ್ದ ಸಂಪುಟ ಸಭೆಯನ್ನು ಜೂ.2ರಂದು ನಡೆಸಿ ಅಲ್ಲಿ ಪೂರ್ಣ ವರದಿ ಮಂಡಿಸು ವುದಾಗಿ ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು. ಅಧಿಕಾರಿಗಳ ಮಾಹಿತಿಯ ಬಳಿಕ ಸಚಿವರು, ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರಾದರೂ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಒಮ್ಮತ ಸಾಧ್ಯವಾಗಲಿಲ್ಲ.

ನಂತರ ಗ್ಯಾರಂಟಿಗಳನ್ನು ಎಂದಿನಿಂದ ಜಾರಿಗೊಳಿಸಬೇಕು. ಅವುಗಳ ದುರುಪ ಯೋಗ ಆಗುವುದನ್ನು ತಪ್ಪಿಸಲು ಕೆಲವು ಷರತ್ತುಗಳ ಅಗತ್ಯವಿದೆ ಎಂಬ ಅಭಿಪ್ರಾಯವೂ ಕೇಳಿಬಂದಿತು. ಇದಕ್ಕೆ ಮುಖ್ಯಮಂತ್ರಿ ಅವರು ತಲೆದೂಗಿದರು. ಹಿರಿಯ ಸಚಿವರೊಬ್ಬರ ಅಭಿಪ್ರಾಯದಂತೆ ಯೋಜನೆಯ ಅನುಷ್ಠಾನದ ಹೊಣೆಯನ್ನು ಮುಖ್ಯಮಂತ್ರಿ ಅವರಿಗೆ ಬಿಡಲು ಸಭೆ ಸರ್ವಾನುಮತದ ತೀರ್ಮಾನ ಕೈಗೊಂಡಿದೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ತೀರ್ಮಾನಿಸಿದ್ದು, ಜೂನ್ 2 ರಂದು ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ, ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಐದು ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಸಚಿವರಿಗೆ ಗ್ಯಾರಂಟಿ ಯೋಜನೆಗಳ ಆರ್ಥಿಕ ಪರಿಣಾಮ ಸೇರಿದಂತೆ ವಿವರಗಳ ಪ್ರಾತ್ಯಕ್ಷಿಕೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯವೂ ಉಳಿಯಬೇಕು. ಜನತೆಗೂ ಅನುಕೂಲವಾಗುವ ಮಾನದಂಡವನ್ನಿಟ್ಟುಕೊಂಡು ನಾವು ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದರು. ಯಾರು ಏನೇ ಹೇಳಿಕೊಳ್ಳಲಿ, ನಾವು ಭರವಸೆಯನ್ನು ಈಡೇರಿಸುತ್ತೇವೆ. ಇಲ್ಲಿ ಷರತ್ತು ಮುಖ್ಯ ಎನ್ನಲಾಗುವುದಿಲ್ಲ. ರೀತಿ, ನೀತಿ, ಲೆಕ್ಕಾಚಾರದ ಅಗತ್ಯವಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟು ಕೊಂಡು ಅಧಿಕಾರಿಗಳು ನಾಲ್ಕೈದು ಆಯ್ಕೆಗಳನ್ನು ಮುಂದಿಟ್ಟಿದ್ದಾರೆ. ಜೂ.2ರಂದು ನಡೆಯುವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದರು ಹೇಳಿದರು.