ಸಕ್ಕರೆ ಕಾರ್ಖಾನೆಗಳಲ್ಲಿಕಬ್ಬಿನ ತೂಕದಲ್ಲಿ ಮಹಾ ಮೋಸ

ಬೆಂಗಳೂರು, ಡಿ.20(ಕೆಎಂಶಿ)-ಕಬ್ಬಿನ ತೂಕದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀ ಕರು ಬೆಳೆಗಾರರನ್ನು ವಂಚಿಸುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳು, ಕಾರ್ಖಾನೆ ಮಾಲೀ ಕರ ಕಿಸೆಯಲ್ಲಿದ್ದು, ಅವರ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಆಗುತ್ತಿರುವ ಅನ್ಯಾಯ ವನ್ನು ಸರಿಪಡಿಸುತ್ತಿಲ್ಲ ಎಂದು ಆಡಳಿತ ಪಕ್ಷದ ಹಿರಿಯ ಸದಸ್ಯ ಲಕ್ಷ್ಮಣ್ ಸವದಿ ರೈತರಿಗಾಗುತ್ತಿರುವ ಅನ್ಯಾಯ ವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಪಕ್ಷದ ಸದಸ್ಯರ ಆರೋಪಕ್ಕೆ ತೆರೆ ಎಳೆ ಯಲು ಸಕ್ಕರೆ ಕಾರ್ಖಾನೆಗಳ ಮಾಲೀ ಕರೂ ಆಗಿರುವ ಕೈಗಾರಿಕಾ ಸಚಿವ ಮುರು ಗೇಶ್ ನಿರಾಣಿ ಮಧ್ಯೆ ಪ್ರವೇಶ ಮಾಡಿ ದಾಗ ಸದನ ಗೊಂದಲಕ್ಕೆ ಸಿಲು ಕಿತು. ನಿರಾಣಿ ಅವರು ಉತ್ತರ ನೀಡಲು ಹಂಗಾಮಿ ಸಭಾಪತಿ ರಘುನಾಥ್ ಮಲ್ಕಾಪುರೆ ಅವಕಾಶ ನೀಡದಿದ್ದಾಗ ಪ್ರತಿ ಪಕ್ಷದ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತ ಪಡಿಸಿ, ಸಭಾಪತಿ ಸ್ಥಾನದ ಮುಂದಿನ ಬಾವಿಯಲ್ಲಿ ಧರಣಿ ಕುಳಿತರು.

ಪ್ರಶ್ನೋತ್ತರ ಕಲಾಪದಲ್ಲಿ ಪ್ರಕಾಶ್ ರಾಥೋಡ್, ಪಿ.ಆರ್.ರಮೇಶ್ ಸದನ ದಲ್ಲಿ ಕಬ್ಬಿನ ತೂಕದ ವಂಚನೆಯ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಅವರು ಕಬ್ಬು ಕಾರ್ಖಾನೆಯ ಮಾಲೀಕರು ಬಡ ವರ ರಕ್ತ ಹೀರುತ್ತಿದ್ದಾರೆ. ಅದರಲ್ಲೂ ತೂಕದ ವಿಚಾರದಲ್ಲಿ ಟನ್‍ಗಟ್ಟಲೆ ಮೋಸ ಮಾಡು ತ್ತಿದ್ದಾರೆ ಎಂದು ಸದನದ ಗಮನಕ್ಕೆ ತಂದರು.

ಈ ವೇಳೆ ಮತ್ತೆ ನಿರಾಣಿ ಅವರು ಮಾತನಾಡಲು ಮುಂದಾಗಿದ್ದರಿಂದ ಸಭಾ ಪತಿಗಳು ಆಕ್ರೋಶಗೊಂಡು ಸುಮ್ಮನೆ ಕುಳಿತುಕೊಳ್ಳು ವಂತೆ ಏರಿದ ಧನಿಯಲ್ಲಿ ತಾಕೀತು ಮಾಡಿದರು.

ಇದರಿಂದ ಕೆರಳಿದ ಮರಿ ತಿಬ್ಬೇಗೌಡ ಇದು ಸಂವಿ ಧಾನ ವಿರೋಧಿ ನಡೆ. ಸಚಿವ ನಿರಾಣಿ ಅವರಿಗೆ ಮಾತನಾಡಲು ಅವಕಾಶ ನೀಡ ಬೇಕು ಎಂದು ಮನವಿ ಮಾಡಿದರು. ಬಳಿಕ, ವಿಪಕ್ಷ ನಾಯಕ ಹರಿಪ್ರಸಾದ್, ಪ್ರಕಾಶ್ ರಾಥೋಡ್, ಸಲೀಂ ಅಹ್ಮದ್ ಸೇರಿದಂತೆ ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸದ ಬಗ್ಗೆ ವಿವರ ನೀಡಲು ನಿರಾಣಿ ಅವರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಆನಂತರ ಸಭಾಪತಿ, ಅವಕಾಶ ನೀಡು ವುದಾಗಿ ಭರವಸೆ ನೀಡಿದ ನಂತರ ಧರಣಿ ವಾಪಸ್ ಪಡೆದುಕೊಂಡರು.

ನಂತರ ಉತ್ತರಿಸಿದ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕಬ್ಬಿನ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಡಿತದ ಕುರಿತು ಒಂದು ತಿಂಗಳಲ್ಲಿ ಸಮಿತಿ ರಚಿಸಿ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.

ತೂಕದಲ್ಲಿ ಮೋಸವಾಗುತ್ತಿರುವ ಬಗ್ಗೆ ರೈತರ ಆರೋಪದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 6.22 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಕಳೆದ ಬಾರಿ ಅರೆದಿ ದ್ದೆವು. ಈ ಬಾರಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚು ಅರೆದರೆ ರೈತರಿಗೆ ನೀಡುವ ಲಾಭವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದು ಹೇಳಿ ದರು. ಇದಕ್ಕೂ ಮುನ್ನ ಲಕ್ಷ್ಮಣ ಸವದಿ ಅವರು, ಸರ್ಕಾರ ಕಬ್ಬು ಕಾರ್ಖಾನೆಗಳ ಮೇಲೆ ದಾಳಿ ನಡೆಸಿದಾಗ ಯಾವುದೇ ಮಾಹಿತಿ, ತಪ್ಪು ಕಂಡುಬಂದಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ. ಇದಕ್ಕೆ ಶಂಕರ ಪಾಟೀಲ ಮುನೇನಕೊಪ್ಪ, ನಾವು ದಾಳಿ ಮೊದಲ ಬಾರಿ ಮಾಡಿದ್ದೇವೆ. ಆದರೆ, ಇದು ಇಲ್ಲಿಗೆ ನಿಲ್ಲುವುದಿಲ್ಲ, ಮುಂದು ವರೆಯಲಿದೆ. ಇದರಿಂದ ಮೋಸ ಮಾಡು ವವರಿಗೆ ಚುರುಕು ಮುಟ್ಟಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.
ಆರಂಭದಲ್ಲಿಯೇ ಸಭಾಪತಿ ನಡೆಗೆ ಬೇಸರ ವ್ಯಕ್ತಪಡಿಸಿದ ಮುರುಗೇಶ್ ನಿರಾಣಿ, ಸಣ್ಣ ಕಾರ್ಖಾನೆ ನಡೆಸುತ್ತೇನೆ. ನನಗೆ ಇದರ ಬಗ್ಗೆ ಅರಿವು ಇದೆ. ಆದರೆ, ನನಗೆ ಏಕೆ ಮಾತನಾಡಲು ಅವಕಾಶ ನೀಡಿಲ್ಲ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ನುಡಿದರು.

ಇನ್ನೂ, ಎಥೆನಾಲ್ ಹಾಗೂ ಸಕ್ಕರೆ ಉತ್ಪಾದನೆ ಬೆಲೆ, ಆದಾಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಇದೆ. ಹಾಗೇ ಕಬ್ಬು ತೂಕ ದಲ್ಲಿ ಯಾವುದೇ ಮೋಸ ಆಗುತ್ತಿಲ್ಲ. ಏಕೆಂ ದರೆ ಬೆಳೆಗಾರರು ಖಾಸಗಿ ಕಡೆಯೂ ತೂಕ ಮಾಡಿಸುತ್ತಾರೆ. ಹಾಗಾಗಿ, ಟನ್ ಗಟ್ಟಲೇ ಮೋಸ ಆಗುವುದಿಲ್ಲ. ಅಲ್ಪ ತೂಕ ಕಡಿಮೆ ಸಹಜ ಎಂದು ಸದನಕ್ಕೆ ತಿಳಿಸಿ ದರು. ಇದಕ್ಕೆ ಒಪ್ಪದ ಲಕ್ಷ್ಮಣ ಸವದಿ, ಕಬ್ಬು ಮಾಲೀಕರು ತೂಕದಲ್ಲಿ ಮೋಸ ಮಾಡುವುದೇ ಇಲ್ಲ ಎನ್ನುವುದು ಒಪ್ಪಲು ಸಾಧ್ಯವೇ ಇಲ್ಲ. ಈ ಬಗ್ಗೆ ಅರ್ಧ ಗಂಟೆಯ ಚರ್ಚೆಯಲ್ಲಿ ಇನ್ನಷ್ಟು ಉದಾಹರಣೆ ಹೇಳುವೆ ಎಂದು ಹೇಳಿದರು.