ಚಾಮರಾಜನಗರ, ಮಾ.7(ಎಸ್‍ಎಸ್)- ಸಂವಿಧಾನ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ. ಸಂವಿಧಾನಕ್ಕೆ ವಿರುದ್ಧವಾಗಿರುವ ಯಾವುದೇ ಕಾನೂನು ಬಂದರೂ ಅದನ್ನು ಎಲ್ಲರೂ ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಂವಿಧಾನ ಪ್ರಚಾರ ಸಮಿತಿ ವೇದಿಕೆ, ಇಸ್ಲಾಹುಲ್ ಮುಸ್ಲೀ ಮಿನ್ ಕಮಿಟಿ ಹಾಗೂ ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಅವರು ಮಾತನಾಡಿದರು. ಎನ್‍ಆರ್‍ಪಿ, ಸಿಎಎ ಹಾಗೂ ಎನ್‍ಆರ್ ಸಿಯಿಂದ ದೇಶದಲ್ಲಿರುವ ಕಡು ಬಡವರಿಗೆ, ಬಡ…
ತಂದೆ ಹೆಸರು ತಪ್ಪಾಗಿ ಹೇಳಿದ ಮಗಳನ್ನು ಕೊಂದು ಶವ ಹೂತು ಹಾಕಿದ್ದ ಅಪ್ಪನ ಬಂಧನ
March 8, 2020ಹನೂರು,ಮಾ.7(ಸೋಮಶೇಖರ್)- ತನ್ನ ಆರು ವರ್ಷದ ಪುತ್ರಿಯನ್ನು ತಂದೆಯೇ ಹತ್ಯೆಗೈಯ್ದು ಶವವನ್ನು ಹೂತು ಹಾಕಿದ್ದ ಪ್ರಕರಣವನ್ನು ಆರು ತಿಂಗಳ ಬಳಿಕ ಭೇದಿ ಸುವಲ್ಲಿ ಯಶಸ್ವಿಯಾಗಿರುವ ರಾಮಾಪುರ ಠಾಣೆ ಪೊಲೀಸರು, ಕೊಲೆ ಗಡುಕ ತಂದೆಯನ್ನು ಬಂಧಿಸಿ ಹೂತಿಟ್ಟ ಶವದ ಅಂಗಾಂಗ ಗಳನ್ನು ಹೊರ ತೆಗೆದು ಮರಣೋ ತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ರಾಮಾಪುರ ಹೊರ ವಲ ಯದ ಮುತ್ತುಶೆಟ್ಟಿಯೂರು ಗ್ರಾಮದ ನಾಗರಾಜ್ ಅಲಿಯಾಸ್ ಕೆಂಡ ತನ್ನ ಪುತ್ರಿ ಆರು ವರ್ಷದ ಪೂರ್ಣಿಮಾ ಎಂಬಾಕೆಯನ್ನು ಹತ್ಯೆ ಮಾಡಿ ಶವವನ್ನು ಹೂತು ಹಾಕಿದ್ದ. ಕಳೆದ…
ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತ್ಯೇಕ ಪ್ರತಿಭಟನೆ
March 7, 2020ಚಾಮರಾಜನಗರ, ಮಾ.6 (ಎಸ್‍ಎಸ್)- ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಅಂಗನವಾಡಿ ಹಾಗೂ ಕರ್ನಾ ಟಕ ಸೇನಾಪಡೆ ಕಾರ್ಯಕರ್ತರು ಶುಕ್ರವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು. ಜೈಲ್ ಭರೋ ಚಳವಳಿ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಒತ್ತಾಯಿಸಿ ಜಿಲ್ಲಾ ಅಂಗನವಾಡಿ ನೌಕರರು ನಗರದಲ್ಲಿ ಜೈಲ್ ಭರೋ ಚಳವಳಿ ನಡೆಸಿದರು. ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಎದುರು ಜಮಾಯಿಸಿದ ಅಂಗನವಾಡಿ ಕಾರ್ಯ ಕರ್ತರು ಹಾಗೂ ನೌಕರರು, ಅಲ್ಲಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಭುವನೇಶ್ವರಿ ವೃತ್ತಕ್ಕೆ…
ವಿದ್ಯುತ್ ಶಾರ್ಟ್ ಸಕ್ರ್ಯೂಟ್: ಕಬ್ಬು ಬೆಂಕಿಗಾಹುತಿ
March 7, 2020ಚಾಮರಾಜನಗರ,ಮಾ.6-ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗಾಹುತಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ತಾಲೂಕಿನ ಹೊಂಡರ ಬಾಳು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಗಳಾದ ಶ್ರೀನಿವಾಸ ಶೆಟ್ಟಿ ಹಾಗೂ ಸರೋಜಮ್ಮ ಅವರಿಗೆ ಸೇರಿದ 3 ಎಕರೆ ಜಮೀನಿ ನಲ್ಲಿ ಬೆಳೆದಿದ್ದ ಕಬ್ಬ ಬೆಂಕಿಗಾಹುತಿಯಾಗಿರುವುದು. ಈ ಘಟನೆಯಿಂದ ರೈತರಿಗೆ ಸುಮಾರು 10ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ವಿದ್ಯುತ್ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಟಾವಿಗೆ ಬಂದಿದ್ದ ಕಬ್ಬು ಹಾಗೂ ನೀರಾವರಿ ಸಾಮಾಗ್ರಿ, ಕೊಳವೆ ಬಾವಿ ಮತ್ತು…
ರಾಜ್ಯ ಬಜೆಟ್: ಚಾಮರಾಜನಗರಕ್ಕೆ ವಿಶೇಷ ಅನುದಾನವಿರಲಿ, ಹೆಸರೇ ಪ್ರಸ್ತಾಪವಿಲ್ಲ
March 6, 2020ಚಾಮರಾಜನಗರ, ಮಾ.5- ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮಂಡಿಸಿದ ಬಜೆಟ್‍ನಲ್ಲಿ ಗಡಿಜಿಲ್ಲೆ ಚಾಮರಾಜನಗರಕ್ಕೆ ವಿಶೇಷ ಅನುದಾನವಿರಲಿ, ಜಿಲ್ಲೆಯ ಹೆಸರೇ ಪ್ರಸ್ತಾಪ ಮಾಡದಿರುವುದು ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದ್ದು, ಜಿಲ್ಲಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳು ಮಂಡಿಸಿದ 2020-21ನೇ ಸಾಲಿನ ಬಜೆಟ್‍ನಲ್ಲಿ ಜಿಲ್ಲೆಗೆ ಸಾಕಷ್ಟು ಅನುದಾನ ಬಿಡುಗಡೆಯಾಗ ಲಿದೆ. ಹೊಸ-ಹೊಸ ಯೋಜನೆಗಳು ಜಾರಿಯಾಗಿ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಯಾಗಲಿದೆ. ಕೈಗಾರಿಕೆಗಳು ಸ್ಥಾಪನೆ ಗೊಂಡು ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯಲಿದೆ ಎಂಬ ನಿರೀಕ್ಷೆಯನ್ನು ಜಿಲ್ಲೆ ಜನರು ಇಟ್ಟುಕೊಂಡಿದ್ದರು. ಈ ಎಲ್ಲಾ ನಿರೀಕ್ಷೆ…
ತಮಿಳುನಾಡಿನ ಬೋರ್‍ವೆಲ್ ಲಾರಿಗಳ ದಂಧೆ ನಿಲುಗಡೆ, ಬಜೆಟ್‍ನಲ್ಲಿ ಜಿಲ್ಲೆ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
March 6, 2020ಚಾಮರಾಜನಗರ, ಮಾ.5(ಎಸ್‍ಎಸ್)- ಜಿಲ್ಲೆಯಲ್ಲಿ ತಮಿಳುನಾಡಿನ ಬೋರ್‍ವೆಲ್ ಲಾರಿಗಳ ದಂಧೆ ನಿಲ್ಲಿಸುವಂತೆ ಆಗ್ರಹಿಸಿ ಹಾಗೂ ರಾಜ್ಯ ಬಜೆಟ್‍ನಲ್ಲಿ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ತೆರಳಿದರು. ಬಳಿಕ ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಚಾ.ನಗರ ಜಿಲ್ಲೆಯಲ್ಲಿ ನೆರೆಯ ರಾಜ್ಯ ತಮಿಳು ನಾಡಿನ ರಿಜಿಸ್ಟ್ರೇಷನ್(ಟಿಎನ್) ಬೋರ್‍ವೆಲ್ ಲಾರಿ…
ಬೆಳಿಗ್ಗೆ ಮಾಡಿದ ಮನವಿಗೆ ಸಂಜೆಯೇ ಸಿಕ್ಕಿತು ಸೌಲಭ್ಯ
March 6, 2020ಅಹವಾಲು ಸಲ್ಲಿಸಲು ಬಂದ ವಿಕಲಚೇತನರೊಬ್ಬರ ಅಳಲಿಗೆ ದೊರೆಯಿತು ಪರಿಹಾರ, ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಚಾಮರಾಜನಗರ, ಮಾ.5- ಸಾಧನ-ಸಲಕರಣೆ ಗಳ ಸೌಲಭ್ಯ ಬಯಸಿ ಬೆಳಿಗ್ಗೆ ಮನವಿ ಸಲ್ಲಿಸಲು ದೂರದ ಊರಿನಿಂದ ಬಂದ ವಿಕಲಚೇತನರೊಬ್ಬ ರಿಗೆ ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ ಸಂಜೆಯೊಳಗೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬುಧವಾರ ಬೆಳಿಗ್ಗೆ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಮೆಟ್ಟಿಲುಗಳ ಬಳಿ ಮನವಿ ಸಲ್ಲಿಸಲು ಗುಂಡ್ಲುಪೇಟೆ ತಾಲೂಕಿನ ದೊಡ್ಡಆಲತ್ತೂರು ಗ್ರಾಮದ ನಿವಾಸಿ ಶ್ರೀನಿವಾಸಾಚಾರಿ ಕಾದು ಕುಳಿತಿದ್ದರು….
ಜಾನಪದ ನಗರದಲ್ಲಿ ‘ಮೈಸೂರು ರೇಷ್ಮೆ ಸೀರೆ’ಗಳ ಹಬ್ಬ
March 5, 2020ಚಾಮರಾಜನಗರ,ಮಾ.4-ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬುಧವಾರದಿಂದ ಆರಂಭವಾಗಿ ರುವ ‘ಮೈಸೂರು ರೇಷ್ಮೆ ಸೀರೆ’ಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಚಾಲನೆ ನೀಡಿದರು. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಿಂದ ನಗರದಲ್ಲಿ ಮಾ. 4ರಿಂದ 7ರವರೆಗೆ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಸಲಾಗುತ್ತಿದ್ದು, ಮೇಳಕ್ಕೆ ಅಭೂತಪೂರ್ವ ಚಾಲನೆ ನೀಡಲಾಯಿತು. ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಇದ್ದರು. 106…
ಉಚಿತ ಲ್ಯಾಪ್‍ಟಾಪ್ ವಿತರಣೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
March 5, 2020ಚಾಮರಾಜನಗರ, ಮಾ.4 (ಎಸ್‍ಎಸ್)- ಸರ್ಕಾರಿ ಇಂಜಿನಿಯ ರಿಂಗ್ ಪದವಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಮುಂಭಾಗ ಬುಧವಾರ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಆಲ್‍ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗ ಸಮಾವೇಶಗೊಂಡ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದರು. ಬಳಿಕ, ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಲ್.ಆನಂದ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರವು ರಾಜ್ಯದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್…
ಚಾಮುಲ್ ಸೂಪರ್‍ಸೀಡ್‍ಗೆ ಒತ್ತಾಯಿಸಿ ಪ್ರತಿಭಟನೆ
March 4, 2020ಚಾಮರಾಜನಗರ,ಮಾ.3- ಚಾಮುಲ್ ಅಕ್ರಮ ನೇಮಕಾತಿ ರದ್ದು ಮಾಡಿ ಆಡಳಿತ ಮಂಡಳಿಯನ್ನು ಸೂಪರ್‍ಸೀಡ್ ಮಾಡು ವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆ ಗಳ ಒಕ್ಕೂಟದ ವತಿಯಿಂದ ಮಂಗಳ ವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಡಳಿತ ಭವನದ ಎದುರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವೆಂಕಟರಮಣಸ್ವಾಮಿ(ಪಾಪು) ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟ ನಾಕಾರರು, ಚಾಮುಲ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ವೆಂಕಟರಮಣಸ್ವಾಮಿ ಮಾತನಾಡಿ, ಚಾ.ನಗರ…