ಹಾಸನ: ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಆಗ್ರಹಿಸಿ ಸಕಲೇಶಪುರದ ಸಿಪಿಸಿ ಹಾಗೂ ರಾಘವೇಂದ್ರ ಬಡಾವಣೆ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಸಕಲೇಶಪುರ ಪುರಸಭೆ ವ್ಯಾಪ್ತಿಯ ಸಿಪಿಸಿ ಮತ್ತು ರಾಘವೇಂದ್ರ ಬಡಾವಣೆಯ ಒಳಗೆ ವಿವಿಧ ಸಮುದಾಯದವರು ಶಾಂತಿಯಿಂದ ವಾಸಿಸುತ್ತಿದ್ದು, ಕೆಲ ಪ್ರಭಾವಿಗಳು ತಮ್ಮ ಪ್ರಭಾವದಿಂದ ಮದ್ಯದಂಗಡಿ ತೆರೆಯಲು ಮುಂದಾಗಿದ್ದಾರೆ. ವಸತಿ ಪ್ರದೇಶ ಸಮೀಪವೇ ಮದ್ಯದಂಗಡಿ ತೆರೆದರೆ ಮದ್ಯವ್ಯಸನಿಗಳಿಂದ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ಅಳಲು ತೋಡಿಕೊಂಡರಲ್ಲದೆ, ಜನ ಸಾಮಾನ್ಯರ ಹಿತದೃಷ್ಟಿಯಿಂದ ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿ…
ಬಂದ್‍ಗೆ ಹಾಸನದಲ್ಲಿ ನೀರಸ ಪ್ರತಿಕ್ರಿಯೆ
August 8, 2018ಹಾಸನ: ಕೇಂದ್ರ ಜಾರಿಗೊಳಿಸುತ್ತಿರುವ ಮೋಟಾರು ವಾಹನ ತಿದ್ದುಪಡಿ ಮಸೂದೆ ವಿರೋಧಿಸಿ ಇಂದು ಕರೆ ನೀಡಿದ್ದ ಬಂದ್‍ಗೆ ಹಾಸನದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಎಸ್ಆರ್‌ಟಿಸಿ, ನಗರ ಸಾರಿಗೆ ಬಸ್‍ಗಳು, ಆಟೋ ಸೇರಿದಂತೆ ಇತರೆ ವಾಹಣಗಳು ಎಂದಿನಂತೆ ಸಂಚರಿಸಿದವು. ಜನ ಜೀವನ ಎಂದಿನಂತಿತ್ತು. ಅಂಗಡಿ ಮುಂಗಟ್ಟುಗಳು ತೆರದಿದ್ದವು. ಕೆಎಸ್‍ಆರ್‍ಟಿಸಿ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಂಜುನಾಥ್ ಜು.3ರಂದು ಸುದ್ದಿಗೋಷ್ಠಿ ನಡೆಸಿ ಮುಷ್ಕರಕ್ಕೆ ಬೆಂಬಲಿಸಲು ಮನವಿ ಮಾಡಿದ್ದರು. ಆದರೆ ಹಾಸನದ ಸಾರಿಗೆ ಸಂಬಂಧಿತ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡದೇ ಎಂದಿನಂತೆ…
ಬೇಲೂರು: ಗೂಡಂಗಡಿಗಳ ತೆರವು
August 8, 2018ಬೇಲೂರು: ಹಳೇಬೀಡಿನ ಹೊಯ್ಸಳ ದೇವಾಲಯದ ಬಳಿ ಮುಖ್ಯರಸ್ತೆಗೆ ಹೊಂದಿ ಕೊಂಡಂತಿದ್ದ ಗೂಡಂಗಡಿಗಳನ್ನು ಗ್ರಾಪಂನಿಂದ ತೆರವುಗೊಳಿಸಲಾಯಿತು. ಇಂದು ಬೆಳಿಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಹರೀಶ್, ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಪರಿಶೀಲಿಸಿದರು. ನಂತರ ವಾಹನ ಮೂಲಕ ಹಲವಾರು ಗೂಡಂಗಡಿಗಳನ್ನು ತೆರವುಗೊಳಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ಪಿಡಿಓ ಹರೀಶ್, ದೇವಾಲಯದ ಬದಿಯಲ್ಲಿ ಹಲವರು ಗೂಡಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇನ್ನು ಕೆಲವರು ಸ್ಥಳಕ್ಕಾಗಿ ವ್ಯಾಪಾರ ನಡೆಸದೆ ಅಂಗಡಿಗಳನ್ನು ಇಟ್ಟಿರುತ್ತಾರೆ. ಇದರಿಂದ ಸ್ವಚ್ಛತೆ ಇಲ್ಲವಾಗಿದೆ. ನೋಡಲು ಅಸಹ್ಯವೆನಿಸುತ್ತಿದೆ. ಹೊರ…
ಅಧಿಕಾರಿಗಳ ವರ್ಗಾವಣೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ
August 7, 2018ಹಾಸನ: ವಿವಿಧ ಇಲಾಖೆ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ನಾನು ಯಾವುದೇ ಇಲಾಖೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕಾರಿಣಿ ಸಭೆಯ ವೊಂದರಲ್ಲಿ ಯಡಿಯೂರಪ್ಪ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದರು. ಯಾವ ಸಚಿವರ ಬಳಿಯೂ ವರ್ಗಾವಣೆ ವಿಚಾರದಲ್ಲಿ ಚರ್ಚಿಸಿಲ್ಲ. ನನ್ನ ವೈಯಕ್ತಿಕ ಕೆಲಸಗಳನ್ನು ಯಾರಿಂದಲೂ ಮಾಡಿಸಿಕೊಂಡಿಲ್ಲ. ನನ್ನ ಇಲಾಖೆಯಲ್ಲಿ ನಡೆದಿರುವ ವರ್ಗಾವಣೆ ದಾಖಲೆಗಳನ್ನು…
ಸಾಮಾಜಿಕ ನ್ಯಾಯದಡಿ ಅರಸೀಕೆರೆ ನಗರಸಭೆ ಮೀಸಲಾತಿ ಪಟ್ಟಿ
August 7, 2018ಅರಸೀಕೆರೆ: ನಗರಸಭೆ ಚುನಾ ವಣೆಯಲ್ಲಿ ನಿಗದಿಯಾಗಿರುವ ಮೀಸ ಲಾತಿಯು ಸರ್ವ ಜನಾಂಗಕ್ಕೂ ಸಾಮಾಜಿಕ ನ್ಯಾಯ ದೊರಕುವ ನಿಟ್ಟಿನಲ್ಲಿ ಸಿದ್ ಪಡಿಸಲಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು. ನಗರದ ಮಾರುತಿನಗರದ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಮತ್ತು ಚುನಾಚಣಾ ಆಯೋಗ ಅಧಿಕೃತ ಮೀಸಲಾತಿ ಪಟ್ಟಿಯನ್ನು ಘೋಷಣೆ ಮಾಡಿದ ನಂತರ ನಗರದಲ್ಲಿ ಇಲ್ಲ ಸಲ್ಲದ ಚರ್ಚೆ ಗಳು ನಡೆಯುತ್ತಿವೆ. ಈ ಚರ್ಚೆಗಳು ಅನಾವಶ್ಯಕವಾಗಿದ್ದು, ಚುನಾವಣೆ ಕಡೆ ಮಾತ್ರ ಆಕಾಂಕ್ಷಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಯೋಚಿಸಬೇಕು….
ನಕಲಿ ಗುರುತಿನ ಚೀಟಿ ವಂಚನೆ: ವ್ಯಕ್ತಿ ಬಂಧನ
August 7, 2018ಹಾಸನ: ವಿಕಲಚೇತನರು ಮತ್ತು ವೃದ್ಧಾಪ್ಯ ವೇತನಕ್ಕೆ ಗುರುತಿನ ಚೀಟಿ ಕೊಡಿಸುವುದಾಗಿ ಹಣ ವಸೂಲಿ ಮಾಡಿ ವಂಚಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ವ್ಯಕಿಯೋರ್ವನನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೋಹನ್ ಕುಮಾರ್ ಎಂಬಾತ ಬಂಧಿತ ಆರೋಪಿ. ನಗರದ ಹೇಮಾವತಿ ಪ್ರತಿಮೆ ಬಳಿ ನಕಲಿ ಸರ್ಟಿಫಿಕೇಟ್‍ಗಳನ್ನು ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಡಾವಣೆ ಪೊಲೀಸರು, ದಾಖಲೆ ಸಮೇತ ಬಂಧಿಸಿದ್ದಾರೆ. ಈತ ಹಲವು ದಿನಗಳಿಂದ ಈ ದಂಧೆಯಲ್ಲಿ ಪಾಲ್ಗೊಂಡಿದ್ದ ಎಂದು ತಿಳಿದು ಬಂದಿದ್ದು, ಪೊಲೀಸರು ಈತನನ್ನು…
ನಾಲೆಗಳಿಗೆ ನೀರು; ವಿವಿಧೆಡೆ ಭತ್ತದ ಕೃಷಿ ಚುರುಕು
August 6, 2018ರಾಮನಾಥಪುರ: ಸತತ ಮಳೆಯಿಂದ ಹೇಮಾವತಿ, ಹಾರಂಗಿ ಜಲಾಶಯ ಭರ್ತಿಯಾಗಿದ್ದು, ನಾಲೆಗಳಿಗೆ ನೀರು ಬಿಟ್ಟಿರುವುದರಿಂದ ಅರಕಲಗೂಡಿನ ವಿವಿಧ ಹೋಬಳಿಗಳ ವ್ಯಾಪ್ತಿಗಳಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ರೈತರ ಭತ್ತ ಬೆಳೆಯುವ ಆಸೆ ಚಿಗುರೊಡೆದಿದೆ. ನಾಲೆಗಳಿಗೆ ಹರಿದ ನೀರು: ಕೊಡಗು ಸೇರಿದಂತೆ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೊಡಗಿನ ಹಾರಂಗಿ ಮತ್ತು ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ಕಟ್ಟೇಪುರ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಬಿಡಲಾಗಿದೆ. ಹೀಗಾಗಲೇ ಕೆಲವು ಕೆರೆ-ಕಟ್ಟೆಗಳು ತುಂಬಿವೆ. ಇದ ರಿಂದ ತಾಲೂಕಿನ ರಾಮನಾಥಪುರ ಕೊಣನೂರು, ದೊಡ್ಡಮಗ್ಗೆ…
ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿ
August 6, 2018ರಾಮನಾಥಪುರ: ಸರ್ಕಾರದ ಸವಲತ್ತುಗಳನ್ನು ಸುಲಭವಾಗಿ ಜನರ ಬಳಿಗೆ ತಲುಪುವ ನಿಟ್ಟಿನಲ್ಲಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ತಿಳಿಸಿದರು. ರಾಮನಾಥಪುರ ಹೋಬಳಿ ಕೇರಳಾಪುರದ ಗ್ರಾಪಂ ಆವರಣದಲ್ಲಿ ನಡೆದ ಜನ ಸಂರ್ಪಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಜನರನ್ನು ಕಚೇರಿಗಳಿಗೆ ಅಲೆಸಬಾರದು ಎಂಬ ದೃಷ್ಟಿಯಿಂದ ಜನ ಸಂಪರ್ಕ ಸಭೆ ನಡೆಸಲಾಗುತ್ತಿದೆ. ನೀರಾವರಿ, ಕಂದಾಯ, ವಿದ್ಯುತ್, ಶಿಕ್ಷಣ, ಕೃಷಿ ಸಂಬಂಧಿಸಿದ ಇಲಾಖೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ 150ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವುಗಳನ್ನು…
ನಗರಸಭೆ ಚುನಾವಣೆ: ಬಿಜೆಪಿ ನಗರ ಘಟಕದಿಂದ ಸಭೆ
August 6, 2018ಹಾಸನ: ಅಗಸ್ಟ್ 29ರಂದು ನಡೆಯಲಿರುವ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಎಂ.ಜಿ. ರಸ್ತೆ ಬಳಿಯ ಕಲ್ಯಾಣ ಮಂಟಪದಲ್ಲಿ ಬಿಜೆಪಿಯ ನಗರ ಘಟಕದ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಪ್ರೀತಮ್ ಜೆ.ಗೌಡ ಮಾತನಾಡಿ, ಕೇಂದ್ರ ಬಿಜೆಪಿ ಆಡಳಿತದ ಮತ್ತು ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಮಾಡಿದ ಜನಪರ ಕೆಲಸಗಳನ್ನು ನಗರದ ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಬೇಕು. ನಗರಸಭೆ ಚುನಾವಣೆಯಲ್ಲಿ ನಗರದ 35 ವಾರ್ಡ್‍ಗಳಲ್ಲೂ ಉತ್ತಮ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸುವ ಕೆಲಸ ಎಲ್ಲಾ ಒಟ್ಟಾಗಿ ಮಾಡುವಂತೆ…
ಅತಿವೃಷ್ಠಿ ಹಾನಿಗೆ ಪರಿಹಾರ ಕ್ರಮ ಕೈಗೊಳ್ಳಿ: ಡಿಸಿ
August 4, 2018ಹಾಸನ: ‘ಜಿಲ್ಲೆಯ ವಿವಿಧೆಡೆ ಅತಿವೃಷ್ಠಿಯಿಂದ ಸಾಕಷ್ಟು ಹಾನಿ ಸಂಭವಿ ಸಿದ್ದು, ರಾಷ್ಟೀಯ ಪ್ರಕೃತಿ ವಿಕೋಪ ನಿಧಿ ಮಾನದಂಡದಂತೆ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು. ಬೆಂಗಳೂರಿನಲ್ಲಿ ನಡೆದ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅನುಪಾಲನೆ ಕುರಿತು ನಗರದ ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಅತಿವೃಷ್ಠಿ ಹಿನ್ನೆಲೆಯಲ್ಲಿ ಎನ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಬೆಳೆ, ಮನೆ, ಜಾನುವಾರು,…