ಹಾಸನ: ಗೌಡರ ಕುಟುಂಬದ ಕಿಚನ್ ಕ್ಯಾಬಿನೆಟ್‍ನಲ್ಲಿ ತೀರ್ಮಾನ ಮಾಡಿ, ದೇವೇಗೌಡರನ್ನು ತುಮಕೂರಿಗೆ ಕಳುಹಿಸಲಾಯಿತು. ದೇವೇಗೌಡರ ಸೋಲಿಗೆ ಸಚಿವ ಹೆಚ್.ಡಿ.ರೇವಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಹಾಗೂ ನೂತನ ಸಂಸದರಾಗಿ ಆಯ್ಕೆಗೊಂಡಿರುವ ಪ್ರಜ್ವಲ್ ಅವರೇ ಕಾರಣ ಎಂದು ಶಾಸಕ ಪ್ರೀತಂ ಜೆ.ಗೌಡ ಆರೋಪಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದ ಜನರು ದೇವೇಗೌಡರು ಸ್ಪರ್ಧಿಸಬೇಕು ಎಂದು ಆಸೆ ಪಟ್ಟಿದ್ದರು. ಆದರೆ, ಕುಟುಂಬ ರಾಜ ಕಾರಣ ವಿಸ್ತಾರ ಮಾಡುವುದಕ್ಕೆ ಹೋಗಿ ಯಡವಟ್ಟು ಮಾಡಿಕೊಂಡರು ಎಂದರು. ಜೆಡಿಎಸ್ ರಾಜಕೀಯ ತಂತ್ರಗಾರಿಕೆ…
ಹಾಸನ ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಜೋರು ಮಳೆ
May 26, 2019ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಹಾಗೂ ಶನಿವಾರ ಸುರಿದ ಗುಡುಗು-ಸಿಡಿಲು ಸಹಿತ ಜೋರು ಮಳೆಯಿಂದ ಭಾರಿ ನಷ್ಟ ಸಂಭವಿಸಿದ್ದು, ವಿವಿಧೆಡೆ ಮನೆ- ಕಟ್ಟಡಗಳ ಛಾವಣಿ ಹಾರಿ ಹೋಗಿದೆ. ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವೆಡೆ ವಾಹನಗಳು ಜಖಂಗೊಂಡಿರುವುದು, ವಿದ್ಯುತ್ ವ್ಯತ್ಯಯ ಸಂಭವಿಸಿರುವುದು, ವಾಹನ ಸಂಚಾರ ಸ್ಥಗಿತಗೊಂಡಿರುವ ಬಗ್ಗೆ ವರದಿಯಾಗಿದೆ. ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಆರಂಭವಾದ ಮಳೆ 11 ಗಂಟೆವರೆಗೆ ಬಿಡುವು ನೀಡದೆ ಸುರಿಯಿತು. ಜೋರು ಮಳೆ, ಗಾಳಿ, ಗುಡುಗು, ಮಿಂಚು ಭಯದ…
ಅರಸೀಕೆರೆಯಲ್ಲಿಯೂ ಅವಾಂತರ ಸೃಷ್ಟಿಸಿರುವ ಮಳೆರಾಯ!
May 26, 2019ಅರಸೀಕೆರೆ: ತಾಲೂಕಿನ ವಿವಿಧೆಡೆ ಶುಕ್ರವಾರ ಆಲಿಕಲ್ಲು ಸಹಿತ ಬಿದ್ದ ಮಳೆ, ಗಾಳಿಗೆ ಮರಗಳು ಧರೆಗೆ ಉರುಳಿದರೆ ಕಟ್ಟಡಗಳ ಛಾವಣಿಗಳು ಗಾಳಿಗೆ ಹಾರಿ ಹೋದ ಘಟನೆ ನಡೆದಿದೆ. ತೀವ್ರ ಬರಗಾಲದಿಂದ ತತ್ತರಿಸುತ್ತಿರುವ ಅರಸೀಕೆರೆ ತಾಲೂಕಿಗೆ ಕಳದೆರಡು ದಿನಗಳಿಂದ ಸಂಜೆ ಸಮಯದಲ್ಲಿ ಸುರಿಯುತ್ತಿರುವ ಗುಡುಗು ಸಿಡಿಲುಗಳ ಆಲಿಕಲ್ಲುಗಳ ಸಹಿತ ಮಳೆ ತಂಪನ್ನೆರೆಯುತ್ತಿದ್ದರೆ ಮತ್ತೊಂದೆಡೆ ಇದೇ ಮಳೆಯು ವಿದ್ಯುತ್ ಕಂಬ ಹಾಗೂ ಮರಗಳನ್ನು ಧರೆಗುರುಳಿಸಿದೆ. ನಗರದ ವಾಚನಾಲಯ ರಸ್ತೆ, ಸಾಯಿನಾಥ ರಸ್ತೆ, ಗರುಡನಗಿರಿ, ಚೌಡೇಶ್ವರಿ ನಗರ, ಮಲ್ಲೇಶ್ವರನಗರ, ಶಿವಾಲಯ ಬಡಾವಣೆ, ಶ್ರೀನಿವಾಸ…
ಜನ ಸಾಮಾನ್ಯರ ಕುಂದು-ಕೊರತೆಗೆ ಸ್ಪಂದಿಸಿ: ಸಿಇಓ
May 26, 2019ಚನ್ನರಾಯಪಟ್ಟಣ: ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು, ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂದಿಸಿ ಕೆಲಸ ಮಾಡ ಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ.ಕೆ.ಎನ್.ವಿಜಯ್‍ಪ್ರಕಾಶ್ ಸೂಚಿಸಿದರು. ಚನ್ನರಾಯಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಪಿ.ಡಿ.ಓಗಳೊಡನೆ ಸಭೆ ನಡೆಸಿದ ಅವರು, ಸಾರ್ವ ಜನಿಕರ ಅಹವಾಲುಗಳನ್ನು ಪರಿಹರಿಸದ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿ ಸಿಬ್ಬಂದಿಗಳ ಧೋರಣೆಗಳನ್ನು ತಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ…
ಶ್ರೀ ಗುರುಬಸವೇಶ್ವರಸ್ವಾಮಿ ದೇಗುಲ ಕಳಶಾರೋಹಣ
May 26, 2019ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ಯರಿಗೇನಹಳ್ಳಿಯಲ್ಲಿ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರವಾಗಿದ್ದು, ಕಳಶಾರೋ ಹಣ ಹಾಗೂ ವೀರಭದ್ರೇಶ್ವರ ಸ್ವಾಮಿಯ ಕೆಂಡೋತ್ಸವ ಕಾರ್ಯಕ್ರಮ ಬಲು ಭಕ್ತಿಭಾವದೊಂದಿಗೆ ಜರುಗಿತು. ಸಮಾರಂಭದಲ್ಲಿ ಆಶೀರ್ವಚನ ನೀಡಿದ ಪಾಂಡೋಮಟ್ಟಿಯ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಆಧ್ಯಾತ್ಮಿಕ ಚಿಂತನೆಯ ತಳಹದಿಯಲ್ಲಿ ಮಠ ಮಂದಿರ ಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಬೇಕೇ ಹೊರತು, ಸಂಘರ್ಷದ ಕಿಡಿ ಹೊತ್ತಿಸುವ ತಾಣಗಳಾಗಬಾರದು ಎಂದರು. ಸಮಾಜಮುಖಿ ಕಾರ್ಯಗಳನ್ನು ಮಾಡು ವಾಗ ಸ್ವಾರ್ಥ ಹಾಗೂ ಸಂಕುಚಿತ ಬುದ್ಧಿ ಮೊದಲು ತೊಲಗಬೇಕು….
ಹಾಸನ ಲೋಕಸಭಾ ಕ್ಷೇತ್ರ: ಫಲಿತಾಂಶಕ್ಕೆ ಕ್ಷಣಗಣನೆ: ಪ್ರಜಾಮತ ಮಂಜುಗೋ, ಪ್ರಜ್ವಲ್‍ಗೋ..?
May 23, 2019ಹಾಸನ: ಲೋಕಸಭಾ ಚುನಾ ವಣಾ ಫಲಿತಾಂಶಕ್ಕೆ ಇನ್ನು ಕೆಲವೇ ಕ್ಷಣ ಗಳು ಮಾತ್ರ ಉಳಿದಿದ್ದು, ಜಿಲ್ಲೆಯ ನೂತನ ಸಂಸದ ಯಾರು ಎನ್ನುವುದು ಸಂಜೆಯೊಳಗೆ ಬಹಿರಂಗಗೊಳಲಿದೆ. 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂ ಡಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ 6 ಅಭ್ಯರ್ಥಿಗಳು ಕಣದಲ್ಲಿದ್ದರೂ, ಜೆಡಿ ಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿ ಅಭ್ಯರ್ಥಿ ಎ.ಮಂಜು ನಡುವೆ ತೀವ್ರ ಹಣಾಹಣಿ ಕಂಡು ಬಂದಿತ್ತು. ಏ. 18ರಂದು ನಡೆದಿದ್ದ ಚುನಾವಣೆಯಲ್ಲಿ ಶೇ 77.28ರಷ್ಟು ಮತ ದಾನವಾಗಿದೆ. ಬರೋಬ್ಬರಿ ತಿಂಗಳ ನಂತರ…
ಕಾನೂನು ಅರಿವಿನಿಂದ ಸಮಸ್ಯೆಗಳು ದೂರ: ನ್ಯಾ.ಸಾಗರ್ ಜಿ.ಪಾಟೀಲ್
May 23, 2019ಚನ್ನರಾಯಪಟ್ಟಣ: ಸಾರ್ವಜನಿ ಕರು ಕಾನೂನು ತಿಳುವಳಿಕೆಯನ್ನು ಹೆಚ್ಚಿಸಿ ಕೊಳ್ಳುವ ಮೂಲಕ ಅನೇಕ ಸಮಸ್ಯೆಗಳಿಂದ ದೂರವಿರಬಹುದು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ಸಾಗರ್ ಜಿ.ಪಾಟೀಲ್ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆ ಗಳ ಸಹಯೋಗದಲ್ಲಿ ಕಾನೂನು ಸಾಕ್ಷರತಾ ರಥದೊಂದಿಗೆ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು. ನೆಮ್ಮದಿಯ ಜೀವನಕ್ಕೆ ಕಾನೂನಿನ ಅರಿ ವಿನ ಅವಶ್ಯಕತೆಯಿದ್ದು,…
ವೈದ್ಯನ ಎಡವಟ್ಟು: ಮಂಡಿ ನೋವಿನ ಚಿಕಿತ್ಸೆಗೆ ಬಂದ ಮಹಿಳೆ ಸಾವು
May 23, 2019ಹಾಸನ: ಮಂಡಿ ನೋವು ಎಂದು ಆಸ್ಪತ್ರೆಗೆ ಬಂದಿದ್ದ ಮಹಿಳೆಯು ವೈದ್ಯನ ಎಡವಟ್ಟಿನಿಂದ ಸಾವನ್ನಪ್ಪಿರುವ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಚನ್ನರಾಯಪಟ್ಟನ ತಾಲೂಕು ಬಾಗೂರು ಹೋಬಳಿಯ ಅಗಸರಹಳ್ಳಿಯ ನಿವಾಸಿ ರಾಧ ಮೃತಪಟ್ಟವರು. ರಾಧ ಅವರು ಎರಡು ದಿನಗಳ ಹಿಂದೆ ಮಂಡಿ ನೋವೆಂದು ವಾಯುಪುತ್ರ ಕ್ಲಿನಿಕ್‍ಗೆ ಚಿಕಿತ್ಸೆಗೆಂದು ಬಂದಿದ್ದರು. ವೈದ್ಯರು ಅವರನ್ನು ಪರೀಕ್ಷಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಂಪಿಗೆ ರಸ್ತೆಯಲ್ಲಿರುವ ಮಂಗಳಾ ಆಸ್ಪತ್ರೆಗೆ ದಾಖಲು ಮಾಡಲು ಸೂಚಿಸಿದರು. ಅದ ರಂತೆ ಮಂಗಳಾ ಆಸ್ಪತ್ರೆಗೆ ಕುಟುಂಬ ದವರು…
ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ
May 23, 2019ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಆಕ್ರೋಶ, ವಾರದೊಳಗೆ ಸಮಸ್ಯೆ ಪರಿಹರಿಸುವಂತೆ ತಾಕೀತು ಅರಸೀಕೆರೆ” ನಗರದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ದಿಢೀರ್ ಭೇಟಿ ನೀಡಿ ಕರ್ತವ್ಯದ ಸಮಯದಲ್ಲಿ ವೈದ್ಯರ ಗೈರು ಮತ್ತು ಅಲ್ಲಿನ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಅರಸೀಕೆರೆ ನಗರಸಭೆ ಆಡಳಿತದಲ್ಲಿ ಕೆಲವು ನಿರ್ಣಯ ಮತ್ತು ಅನುಮೋದನೆ ಗಳನ್ನು ಮಾಡಲು ಆಗಮಿಸಿದ್ದ ಜಿಲ್ಲಾಧಿ ಕಾರಿ ಅವರು ನಗರದ ಜಯಚಾಮ ರಾಜೇಂದ್ರ ಸರ್ಕಾರಿ ಆಸ್ಪತ್ರೆಯ ಅವ್ಯವ ಸ್ಥೆಯ ಬಗ್ಗೆ ಸಾರ್ವಜನಿಕರು ಮತ್ತು ರೋಗಿ ಗಳು…
ಮತ ಎಣಿಕೆ ವಿಧಾನದಲ್ಲಿ ಬದಲಾವಣೆ: ಫಲಿತಾಂಶ ಪ್ರಕಟ ವಿಳಂಬ
May 22, 2019ಸಂಜೆ ಹೊತ್ತಿಗೆ ಅಧಿಕೃತ ಫಲಿತಾಂಶ ಪ್ರಕಟ, ಭದ್ರತೆಗೆ 1200 ಸಿಬ್ಬಂದಿ ನೇಮಕ, ನಾಳೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಹಾಸನ: ಮತ ಎಣಿಕೆ ವಿಧಾನದಲ್ಲಿ ಬದಲಾವಣೆ ಆಗಿರುವು ದರಿಂದ ಈ ಬಾರಿ ಲೋಕಸಭಾ ಚುನಾ ವಣೆಯ ಫಲಿತಾಂಶ ಪ್ರಕಟವಾಗುವುದು ತಡವಾಗುತ್ತದೆ ಎಂದು ಜಿಲ್ಲಾ ಚುನಾ ವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು. ಮತ ಎಣಿಕೆ ಕೇಂದ್ರವಾಗಿರುವ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಸಿದ್ಧತೆಗಳ ಕುರಿತು ಪರಿ ಶೀಲನೆ ನಡೆಸಿದ ಅವರು ಬಳಿಕ ಸುದ್ದಿ…