ಹಾಸನ: ಜಿಲ್ಲೆಯಲ್ಲಿ ನಡೆದಿ ರುವ ರೈತರ ಆತ್ಮಹತ್ಯೆ ಪ್ರಕರಣಗಳ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಅಗತ್ಯ ಸೌಲಭ್ಯ ಗಳನ್ನು ಒದಗಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಧಿಕಾರಿ ಎಂ.ಎಲ್.ವೈಶಾಲಿ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಬುಧವಾರ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ ವಿಶೇಷ ಸೌಲಭ್ಯ ಗಳನ್ನು ದೊರಕಿಸಿಕೊಡುವ ಸಲುವಾಗಿ ನಡೆದ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಕಾರಣಗಳನ್ನು ತಿಳಿದು ಅವರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸ ಬೇಕು ಎಂದು…
ಗಾಳಿ ಮಳೆಗೆ ಧರೆಗುರುಳಿದ ಮರ, ವಿದ್ಯುತ್‍ಕಂಬಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತ
May 8, 2019ಬೇಲೂರು: ಅರೇಹಳ್ಳಿ ಸಮೀಪದ ಬಿಕ್ಕೋಡು ಹೋಬಳಿಯ ಸುತ್ತಮುತ್ತ ಹಳ್ಳಿಗಳಲ್ಲಿ ಸೋಮವಾರ ಸುರಿದ ಭಾರಿ ಗಾಳಿ ಮಳೆಗೆ ಅಪಾರ ಪ್ರಮಾಣ ನಷ್ಟ ಸಂಭವಿಸಿದೆ. ಜೊತೆಗೆ, ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಜನರು ಕತ್ತಲೆಯಲ್ಲಿ ಜೀವನ ನಡೆಸುವಂತಾಗಿದೆ. ಮಲೆನಾಡು ಭಾಗದ ಹಳ್ಳಿಗಳಿಗೆ ವಿದ್ಯುತ್ ಕೈಕೊಟ್ಟ ಪರಿಣಾಮ, ಕುಡಿಯುವ ನೀರಿನ ಸರಬರಾಜಿಗೂ ತೊಂದರೆ ಉಂಟಾಗಿದ್ದು, ಜನರ ಗೋಳು ಹೇಳತೀರದಾಗಿದೆ. ಭಾರಿ ಗಾಳಿ ಮಳೆಗೆ ರಸ್ತೆ ಬದಿಯ ಮರಗಳು ಅಲ್ಲಲ್ಲಿ ತೋಟಗಳ ಮಧ್ಯೆ ಹಾದು…
ಜಿಲ್ಲಾದ್ಯಂತ ಬಸವ ಜಯಂತಿ ಸಂಭ್ರಮ
May 7, 2019ವಿವಿಧ ಸಂಘ-ಸಂಸ್ಥೆಗಳಿಂದ ಕಾಯಕಯೋಗಿಗೆ ನಮನ, ಬಸವೇಶ್ವರರ ಪುತ್ಥಳಿಗೆ ಪುಷ್ಪಾರ್ಚನೆ ಹಾಸನ: ಜಿಲ್ಲಾದ್ಯಂತ ಮಂಗಳ ವಾರ ಬಸವ ಜಯಂತಿಯನ್ನು ಶ್ರದ್ಧೆ, ಗೌರವದಿಂದ ಆಚರಿಸಲಾಯಿತು. ಕಾಯಕ ಯೋಗಿ, ಸಮಾನತೆಯ ಹರಿಕಾರನ ಆದರ್ಶ, ತತ್ತ್ವಗಳನ್ನು ಜೀವನದಲ್ಲಿ ಅಳ ವಡಿಸಿಕೊಳ್ಳಲು ತಿಳಿಸಲಾಯಿತು. ಹಾಸನ, ಆಲೂರು, ಅರಸೀಕೆರೆ, ಬೇಲೂರು, ಸಕಲೇಶಪುರ, ಅರಕಲಗೂಡು, ಶ್ರವಣ ಬೆಳಗೊಳ, ರಾಮನಾಥಪುರ, ಹೊಳೆನರ ಸೀಪುರ, ಚನ್ನರಾಯಪಟ್ಟಣ ತಾಲೂಕು ಗಳ ವ್ಯಾಪ್ತಿಯಲ್ಲಿ ವಿವಿಧ ಸಂಘ-ಸಂಸ್ಥೆ ಗಳು ಹಾಗೂ ಜಿಲ್ಲಾ-ತಾಲೂಕು ಆಡಳಿತ ದಿಂದ ಬಸವೇಶ್ವರರ 886ನೇ ಜಯಂತಿ ಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿ ಕಾಯಕ…
ಹರ್ಡೀಕರ್‍ರ ತತ್ವಾದರ್ಶ ಪಾಲಿಸಿ
May 7, 2019ಬೇಲೂರು: ದೇಶದ ಸ್ವಾತಂತ್ರ್ಯದಲ್ಲಿ ಸಂಘಟನೆಯ ಶಿಸ್ತು, ಸಂಯಮ, ಬದ್ಧತೆಗಳಂತಹ ಗುಣಗಳನ್ನು ಬೆಳೆಸುವಲ್ಲಿ ನಾ.ಸು.ಹರ್ಡಿಕರ್ ಅವರ ಪಾತ್ರ ಮಹತ್ವದಾಗಿದ್ದು, ಅವರ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗಿ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸೈಯದ್ ತೌಫಿಕ್ ಸಲಹೆ ನೀಡಿದರು. ನಾ.ಸು.ಹರ್ಡಿಕರ್ ಅವರ 130ನೇ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದ ಹರ್ಡೀಕರ್ ವೃತ್ತದ ಬಳಿ ನಡೆದ ನಡೆದ ಕಾರ್ಯಕ್ರಮದಲ್ಲಿ ಹರ್ಡಿಕರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಬಾಲ್ಯದಿಂದಲೂ ದೇಶಪ್ರೇಮ, ತ್ಯಾಗಗಳಂತಹ ಗುಣ ಮೈಗೂಡಿಸಿಕೊಂಡಿದ್ದ ಹರ್ಡಿಕರ್…
ಶ್ರದ್ಧಾ ಭಕ್ತಿಯ ಬಸವ ಜಯಂತಿ ಆಚರಣೆ
May 7, 2019ಅರಸೀಕೆರೆ: ತಾಲೂಕು ಆಡಳಿತ ಸೇರಿದಂತೆ ಬಸವೇಶ್ವರ ಯುವಕ ಸಂಘ ಹಾಗೂ ಬಸವ ತತ್ವ ಅನುಯಾಯಿಗಳಿಂದ ತಾಲೂಕಿನ ವಿವಿಧೆಡೆ ಜಗಜ್ಯೋತಿ ಬಸವೇಶ್ವರರ ಜಯಂತಿ ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ ಶ್ಯಾನುಭೋಗರ ಬೀದಿಯಲ್ಲಿರುವ ಬಸವಣ್ಣ ದೇವಾ ಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಬ್ರಾಹ್ಮೀ ಮಹೂರ್ತ ದಲ್ಲಿ ಬಸವಣ್ಣನ ಮೂಲ ವಿಗ್ರಹಕ್ಕೆ ಜಲ ಕ್ಷೀರ ಸೇರಿದಂತೆ ವಿವಿಧ ಅಭಿಷೇಕಗಳು ಹಾಗೂ ಅರ್ಚನೆಗಳು ಧಾರ್ಮಿಕ ವಿಧಿವಿಧಾನ ಗಳೊಂದಿಗೆ ನೆರವೇರಿತು. ದೇವಾಲಯಕ್ಕೆ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ನಂದಿ ರೂಪದಲ್ಲಿರುವ ಬಸವಣ್ಣನಿಗೆ ಪೂಜೆ…
ವೈಭವದ ರಾಮೇಶ್ವರಸ್ವಾಮಿ ರಥೋತ್ಸವ
May 7, 2019ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ರಾಮನಾಥಪುರ ದಲ್ಲಿ ಮಂಗಳವಾರ ಚತುರ್ಯುಗ ಮೂರ್ತಿ ರಾಮೇಶ್ವರಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಹಾ ದಿವ್ಯರಥೋತ್ಸವಕ್ಕೆ ರಾಮನಾಥ ಪುರ ನಾಡಕಚೇರಿ ಉಪ ತಹಸೀಲ್ದಾರ್ ಜಿ.ಸಿ.ಚಂದ್ರ ಚಾಲನೆ ನೀಡಿದರು. ರಾಜ ಬೀದಿಯಲ್ಲಿ ಚಲಿಸಿದ ತೇರು ಪುನಃ ಅದೇ ಮಾರ್ಗವಾಗಿ ಸೂಸುತ್ರವಾಗಿ ಸಾಗಿ ಸ್ವಸ್ಥಾನಕ್ಕೆ ಮರಳಿತು. ರಥಕ್ಕೆ ಭಕ್ತರು ಈಡು ಗಾಯಿ ಒಡೆದು ತೇರಿತನತ್ತ ಹಣ್ಣು ಧವನ ಎಸೆದು ಭಕ್ತಿ ಸಮರ್ಪಿಸಿದರು. ರಾಮನಾಥಪುರದ ಕಾವೇರಿದಂಡೆ ಯಲ್ಲಿರುವ ಚತುರ್ಯುಗ ಮೂರ್ತಿ ಶ್ರೀ…
ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಸೂಚನೆ
May 7, 2019ಜಿಪಿಎಸ್ ದುರ್ಬಳಕೆ ಮಾಡಿಕೊಂಡವರನ್ನು ಕಪ್ಪು ಪಟ್ಟಿಗೆ ಸೇರಿಸಿ: ಜಿಲ್ಲಾಧಿಕಾರಿ ಹಾಸನ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆಯನ್ನು ಇನ್ನಷ್ಟು ಪರಿ ಣಾಮಕಾರಿಯಾಗಿ ನಿಯಂತ್ರಿಸಲು ಚೆಕ್ ಪೋಸ್ಟ್‍ಗಳನ್ನು ಬಲಗೊಳಿಸುವುದರ ಜೊತೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ವಿಶೇಷ ನಿಗಾವಹಿಸಲು ನಿಯೋಜಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ನಡೆದ ಜಿಲ್ಲಾ ಮರಳು ಉಸ್ತು ವಾರಿ ಸಮಿತಿ, ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಹಾಗೂ ಜಿಲ್ಲಾ ಕ್ರಷರ್ ಲೈಸೆ ನ್ಸಿಂಗ್ ಮತ್ತು ನಿಯಂತ್ರಣಾ…
3ನೇ ತಂಡದ ನಾಗರಿಕ ಪೆÇಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿ: ಕಿಶೋರ್ ಚಂದ್ರ
May 7, 2019ಹಾಸನ: ಯಾವುದೇ ದುರಾ ಲೋಚನೆ ಹಾಗೂ ಪ್ರಭಾವಗಳಿಗೆ ಒಳಗಾ ಗದೇ ಧೈರ್ಯ ಮತ್ತು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವುದು ಸಮಾಜಕ್ಕೆ ನೀವು ಕೊಡುವ ಒಂದು ಕೊಡುಗೆಯಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರು ಹಾಗೂ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ರಾದ ಕಿಶೋರ್ ಚಂದ್ರ ಹೇಳಿದರು. ತಾಲೂಕಿನ ಶಾಂತಿಗ್ರಾಮ ಪೊಲೀಸ್ ತರಬೇತಿ ಶಾಲೆ ಕವಾಯತು ಮೈದಾನ ಆವರಣದಲ್ಲಿ ನಡೆದ 3ನೇ ತಂಡದ ನಾಗ ರಿಕ ಪೊಲೀಸ್ ಕಾನ್ಸ್‍ಟೇಬಲ್‍ಗಳ ನಿರ್ಗ ಮನ…
ಬೆಟ್ಟಕ್ಕೆ ಪೈಪ್ ಹೊತ್ತು ಶ್ರಮದಾನ ಮಾಡಿದ ವಿದ್ಯಾರ್ಥಿಗಳು
May 7, 2019ಅರಸೀಕೆರೆ: ದಶಮಾನಗಳಿಂದ ಕುಡಿಯುವ ನೀರು ಸಮಸ್ಯೆ ಎದುರಿಸುತ್ತಿದ್ದ ಮಾಲೇಕಲ್ಲು ತಿರುಪತಿ ಲಕ್ಷ್ಮೀವೆಂಕಟರಮಣ ಸ್ವಾಮಿಯ ಬೆಟ್ಟದ ಮೇಲ್ಭಾಗಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ನಡೆಯುತ್ತಿರುವ ಕಾಮ ಗಾರಿಯಲ್ಲಿ ಚಂದ್ರಶೇಖರ ಭಾರತಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನ ಮಾಡುವುದರ ಮೂಲಕ ಪೈಪ್‍ಗಳನ್ನು ಬೆಟ್ಟದ ಮೇಲ್ಭಾಗಕ್ಕೆ ಕೊಂಡೊಯ್ಯುವ ಮೂಲಕ ಭಕ್ತಾದಿಗಳ ಶ್ಲಾಘನೆಗೊಳಗಾದರು. ರಾಜ್ಯದ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಅರಸೀಕೆರೆ ಮಾಲೇಕಲ್ಲು ತಿರುಪತಿ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದ ಬೆಟ್ಟವು 1,250 ಮೆಟ್ಟಿಲುಗಳನ್ನು ಹೊಂದುವ ಮೂಲಕ ಕಡಿದಾಗಿದ್ದು, ಬೆಟ್ಟದ ಮೇಲಿರುವ ದೇವರ ಪೂಜೆ…
ಹಾಸನ ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆ
May 7, 2019ರಸ್ತೆಗೆ ಬಿದ್ದ ಮರ, ಆಲೂರು-ಕಣತ್ತೂರು ರಸ್ತೆ ಬಂದ್ ಹಾಸನ/ಬೇಲೂರು(ಸೋಮೇಶ್, ಹರೀಶ್): ಬಿಸಿಲ ಬೇಗೆಗೆ ತತ್ತ ರಿಸಿ ಹೋಗಿದ್ದ ಜಿಲ್ಲೆಯ ಜನರು ವರುಣನ ಆಗಮನದಿಂದ ಹರ್ಷಗೊಂಡರು. ಸೋಮವಾರ ಸಂಜೆ ಆರಂಭವಾದ ಗುಡುಗು ಸಹಿತ ಮಳೆ ಗಂಟೆಗೂ ಹೆಚ್ಚು ಕಾಲ ಸುರಿದು ತಂಪೆರೆಯಿತು. ಬೆಳಿಗ್ಗೆಯಿಂದಲೇ ವಿಪರೀತ ಬಿಸಿಲು ವಾತಾವರಣ ಕೂಡಿತ್ತು. ಸಂಜೆಯಾಗು ತ್ತಿದ್ದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆಯ ಸಿಂಚನ ಪ್ರಾರಂಭವಾಯಿತು. ಮಳೆಯಿಂದ ಜಿಲ್ಲೆಯ ಜನತೆ ಹಾಗೂ ರೈತರು ಸಂತಸಗೊಂ ಡರು. ನಗರದ ಬಸ್ ನಿಲ್ದಾಣ ರಸ್ತೆ, ಬಿ.ಎಂ…