ಮೈಸೂರಲ್ಲಿ ಹೆಚ್‍ಐವಿ/ಏಡ್ಸ್ ಕುರಿತ ವಾರ್ಷಿಕ ಸಮ್ಮೇಳನ ಆರಂಭ

ಮೈಸೂರು, ಫೆ. 8(ಆರ್‍ಕೆ)- ಹೆಚ್‍ಐವಿ/ಏಡ್ಸ್ ಅಪ್‍ಡೇಟ್-2020 ಕುರಿತ ಎರಡು ದಿನಗಳ ವಾರ್ಷಿಕ ಸಮ್ಮೇಳನ ಮೈಸೂ ರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹೋಟೆಲ್ ರಿಯೋ ಮೆರಿಡಿಯನ್ ಸಭಾಂಗಣದಲ್ಲಿ ಇಂದು ಆರಂಭವಾಯಿತು.

ಮೈಸೂರಿನ ಆಶಾಕಿರಣ ಆಸ್ಪತ್ರೆ ವತಿಯಿಂದ ಕರ್ನಾಟಕ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಮತ್ತು ಏಡ್ಸ್ ಸೊಸೈಟಿ ಆಫ್ ಇಂಡಿಯಾ (ಂSI) ಸಹಯೋಗದಲ್ಲಿ ಆಯೋಜಿಸಿರುವ ‘ಹೆಚ್‍ಐವಿಇ ಮೈಸೂರು -2020’ 7ನೇ ವಾರ್ಷಿಕ ಸಮ್ಮೇಳನವನ್ನು ಮೈಸೂರಿನ ಸಿಐಐ ಅಧ್ಯಕ್ಷ ಭಾಸ್ಕರ್ ಕಳಲೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಕಾಣಿಸಿ ಕೊಳ್ಳುತ್ತಿರುವ ಹೆಚ್1ಎನ್1, ಕೊರೋನಾ ವೈರಸ್‍ನಂತೆಯೇ ಹೆಚ್‍ಐವಿ/ಏಡ್ಸ್ ಸೋಂಕು ಅಪಾಯಕಾರಿಯಾದುದು ಎಂದರು. ಯುವಜನತೆ ಅಧಿಕ ಸಂಖ್ಯೆಯಲ್ಲಿರುವ ನಮ್ಮ ದೇಶದಲ್ಲಿ ಹೆಚ್‍ಐವಿ ಸೋಂಕಿನ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಮೂಲಕ ಈ ಮಹಾಮಾರಿ ರೋಗ ಬರದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಸಲಹೆ ನೀಡಿದರು.

ಮಕ್ಕಳ ಹಂತದಲ್ಲೇ ಚಿಕಿತ್ಸೆ ನೀಡಲು ಆಶಾಕಿರಣ ಆಸ್ಪತ್ರೆ ಹಲವು ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿರುವುದು ಶ್ಲಾಘನೀಯ. ಅದೇ ಕಾರಣಕ್ಕಾಗಿ ತಾವೂ ಆಸ್ಪತ್ರೆಯ ಸಾಮಾಜಿಕ ಸೇವಾ ಕಾರ್ಯ ದಲ್ಲೇ ತೊಡಗಿಸಿಕೊಳ್ಳುತ್ತೇವೆ ಎಂದು ಇದೇ ವೇಳೆ ನುಡಿದರು.

ಇದಕ್ಕೂ ಮೊದಲು ಪರಿಚಯಾತ್ಮಕ ನುಡಿಗಳನ್ನಾಡಿದ ಆಶಾ ಕಿರಣ ಆಸ್ಪತ್ರೆ ಟ್ರಸ್ಟ್ ಮುಖ್ಯಸ್ಥರಾದ ಸಮ್ಮೇಳನದ ಆರ್ಗನೈಸಿಂಗ್ ಛೇರ್ಮನ್ ಡಾ. ಎಸ್.ಎನ್. ಮೋತಿ ಅವರು, ಜನರ ನಡುವೆ ಹೆಚ್‍ಐವಿ/ಏಡ್ಸ್ ಸೋಂಕು ಹರಡದಂತೆ ಟ್ರಸ್ಟ್ ಹಲವು ವರ್ಷ ಗಳಿಂದ ಹಲವು ಕಾರ್ಯಕ್ರಮ ನೀಡುತ್ತಿದೆ ಎಂದರು.

ವೈದ್ಯಾಧಿಕಾರಿಗಳು, ವೈದ್ಯವೃತ್ತಿಪರರು, ಪುಟ್ಟ ಮಕ್ಕಳಿಗಾಗಿ ಆಶಾಕಿರಣ ಆಸ್ಪತ್ರೆಯು ‘ಪುಟ್ಟ ಹೆಜ್ಜೆ’ ಸೇರಿದಂತೆ ಹಲವು ವಿನೂತನ ತರಬೇತಿ ಕಾರ್ಯಕ್ರಮಗಳನ್ನು ನಡೆಸಿ ಹೆಚ್‍ಐವಿ/ಏಡ್ಸ್ ನಿಯಂ ತ್ರಣಕ್ಕೆ ಪರಿಶ್ರಮಿಸುವ ಮೂಲಕ ಹೆಲ್ತ್‍ಕೇರ್ ಮಾಡುತ್ತಿದ್ದೇವೆ ಎಂದ ಡಾ.ಮೋತಿ, ಭವಿಷ್ಯದಲ್ಲಿ ನೆರೆಯ ಜಿಲ್ಲೆಗಳಲ್ಲಿ ಸೆಟಲೈಟ್ ಕ್ಲಿನಿಕ್‍ಗಳನ್ನು ಸ್ಥಾಪಿಸಿ ಸೇವೆ ವಿಸ್ತರಿಸಲಾಗುವುದು ಎಂದರು.

ಏಡ್ಸ್ ಸೊಸೈಟಿ ಆಫ್ ಇಂಡಿಯಾ ಉಪಾಧ್ಯಕ್ಷರಾದ ಹೈದರಾ ಬಾದ್‍ನ ಎಐಎಂಎಸ್‍ಆರ್ ಡೀನ್ ಡಾ. ದಿಲೀಪ್ ಮತಾಯಿ ಹೆಚ್‍ಐವಿ/ಏಡ್ಸ್ ಕುರಿತು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಉಪನ್ಯಾಸ ನೀಡಿದರು. ಏಡ್ಸ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ ಡಾ.ಐ.ಎಸ್.ಗಿಲಾಡ, ಸಮ್ಮೇಳನದ ಸಂಘಟನಾ ಕಾರ್ಯ ದರ್ಶಿ ಕೆ.ಎಸ್.ಗುರುರಾಜ ಹಾಗೂ ಡಾ.ಮಹೇಶ್‍ಕುಮಾರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.