ಆಗಸ್ಟ್‍ನಲ್ಲಿ ಕೊರೊನಾ 4ನೇ ಅಲೆ ಭೀತಿ

ಬೆಂಗಳೂರು, ಮಾ.21(ಕೆಎಂಶಿ)-ಇನ್ನೇನು ಕೊರೊನಾ ಭಯ ನಿವಾರಣೆಯಾಯಿತು ಎಂದು ನೆಮ್ಮದಿಯಲ್ಲಿರು ವಾಗಲೇ ಕೋವಿಡ್ 4ನೇ ಅಲೆ ಆಗಸ್ಟ್ ವೇಳೆಗೆ ಭಾರತದಲ್ಲೂ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ.

ಕೋವಿಡ್‍ನ ರೂಪಾಂ ತರ ಉಪತಳಿ ಬಿ.ಎ.2 ಫಿಲಿ ಪೈನ್ಸ್‍ನಲ್ಲಿ ಕಾಣಿಸಿಕೊಂಡು, ವಿಶ್ವದ 40 ರಾಷ್ಟ್ರಗಳಿಗೆ ಈಗಾ ಗಲೇ ಹರಡಿದೆ. ಈ ರೂಪಾಂತರ ಆಗಸ್ಟ್ ವೇಳೆಗೆ ಭಾರತದಲ್ಲೂ ಕಾಣಿಸಿಕೊಳ್ಳಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಮುನ್ನೆಚ್ಚರಿಕೆ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ವಿಧಾನಪರಿಷತ್ ನಲ್ಲಿಂದು ಶೂನ್ಯವೇಳೆಯಲ್ಲಿ ಶಿಶಿಲ್ ನಮೋಶಿ ಅವರ ಪ್ರಸ್ತಾವಕ್ಕೆ ಉತ್ತರ ನೀಡುವ ಸಂದರ್ಭದಲ್ಲಿ, ಸಾಂಕ್ರಾಮಿಕದ ಭೀತಿ ನಮಗೆ ಎದುರಾಗಬಹುದೆಂಬ ಮಾಹಿತಿ ನೀಡಿದರು. ನಮ್ಮಲ್ಲಿ ಲಸಿಕೆ ಅಭಿಯಾನ ಉತ್ತಮವಾಗಿದೆ. ನಾಲ್ಕನೇ ಅಲೆ ಎದುರಾದರೂ ಸಾರ್ವಜನಿಕರು ಹೆದರುವ ಅಗತ್ಯವಿಲ್ಲ, ಮುನ್ನೆಚ್ಚರಿಕೆಯಾಗಿ ಒಳಾಂ ಗಣ ಸಭೆ-ಸಮಾರಂಭಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳಲಿದೆ. ವಿಶ್ವ ಆರೋಗ್ಯ ಸಂಸ್ಥೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಕೆಲವು ಕಠಿಣ ತೀರ್ಮಾನಗಳನ್ನು ಮೊದಲೇ ಕೈಗೊಳ್ಳಲಾಗುವುದು. ಲಸಿಕಾಕರಣದಿಂದ ಕೋವಿಡ್ ನಿಯಂತ್ರಿಸಬಹುದಾಗಿದೆ. ಆದರೂ ನಾವು ಮುನ್ನೆಚ್ಚರಿಕೆ ಕೈಗೊಳ್ಳಲೇಬೇಕಿದೆ. ಈಗಾಗಲೇ ಮೂಲ ಸೌಲಭ್ಯಗಳನ್ನು ಹೆಚ್ಚಿಸಲು ಆದ್ಯತೆ ನೀಡ ಲಾಗಿದೆ. ಸೋಂಕು ಪತ್ತೆ ಹಚ್ಚಲು 265 ಪ್ರಯೋಗಾ ಲಯ ತೆರೆದು ಪ್ರತಿನಿತ್ಯ 2.5 ಲಕ್ಷ ಮಾದರಿ ಪರೀಕ್ಷೆ ಮಾಡುವ ಸಾಮಥ್ರ್ಯ ವೃದ್ಧಿಸಿಕೊಂಡಿದ್ದೇವೆ. ಈ ಮೊದಲ ಮೂರು ಅಲೆಗಳ ಅನುಭವದಿಂದ ವೈದ್ಯರು ಚಿಕಿತ್ಸೆ ನೀಡುವ ಅಭ್ಯಾಸ ಮಾಡಿಕೊಂಡಿದ್ದಾರೆ, ಆದ್ದರಿಂದ ನಾಲ್ಕನೇ ಅಲೆ ಬಂದರೂ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ, ಮುನ್ನೆಚ್ಚರಿಕೆ ಅಗತ್ಯ, ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊರಡಿಸುವ ಕೋವಿಡ್-19 ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಬೇಕು. ರೂಪಾಂತರ ತಳಿಗೂ ನಮ್ಮಲ್ಲಿ ಔಷಧಿ ಇದೆ, ಈ ಹಿಂದೆ ನೀಡಿರುವ ಔಷಧಿಗಳಲ್ಲೇ ಈ ಸೋಂಕು ನಿವಾರಣೆ ಆಗುತ್ತದೆ. ಬಿ.ಎ.2 ರೂಪಾಂತರ ತಳಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸತತ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ. ಅದು ನೀಡುವ ಮಾರ್ಗದರ್ಶನದಂತೆ ನಾವು ನಡೆದುಕೊಳ್ಳಬೇಕಿದೆ ಎಂದರು.