ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ – ಪೆನಾಲ್ಟಿ ಶೂಟೌಟ್: ಕ್ರೊವೇಷಿಯಾ ಸೆಮಿಫೈನಲ್‍ಗೆ

ಮಾಸ್ಕೋ: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ ಅತಿಥೇಯ ರಷ್ಯಾ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಮಣಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್‍ನಲ್ಲಿ ಕ್ರೊವೇಷಿಯಾ ತಂಡ ರಷ್ಯಾವನ್ನು 4-3 (2-2)ರಲ್ಲಿ ರೋಚಕವಾಗಿ ಮಣಿಸಿ ಸೆಮಿಫೈನಲ್‍ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ.

ಪಂದ್ಯದ 31 ನೇ ನಿಮಿಷದಲ್ಲಿ ಚೆರಿಶೇವ್ ಮೊದಲ ಗೋಲು ಬಾರಿಸುವ ಮೂಲಕ ಕ್ರೊವೇಷಿಯಾ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಅದೇ ದಾಟಿಯಲ್ಲಿ ತಿರುಗೇಟು ನೀಡಿದ ರಷ್ಯಾ 39ನೇ ನಿಮಿಷದಲ್ಲಿ ಆಕರ್ಷಕ ಗೋಲು ಗಳಿಸಿ ತಂಡ ಸಮಬಲ ಸಾಧಿಸುವಂತೆ ನೋಡಿಕೊಂಡರು.

ಆ ಬಳಿಕ ಉಭಯ ತಂಡಗಳು ಗೋಲಿಗಾಗಿ ಹರಸಾಹವನ್ನೇ ಪಟ್ಟರೂ ಗೋಲು ಗಳಿಸುವಲ್ಲಿ ಉಭಯ ತಂಡಗಳು ವಿಫಲವಾದವು. ಹೀಗಾಗಿ ಪಂದ್ಯದ ಫಲಿತಾಂಶಕ್ಕಾಗಿ ಹೆಚ್ಚುವರಿ ಸಮಯ ತೆಗದುಕೊಳ್ಳಲಾಯಿತು. ನಂತರ ಆರಂಭಿಕ ಮುನ್ನಡೆ ಸಾಧಿಸಿದ ಕ್ರೊವೇಷಿಯಾ 100ನೇ ನಿಮಿಷದಲ್ಲಿ ಗೋಲು ಬಾರಿಸಿ ಗೆಲುವಿನ ವಿಶ್ವಾಸ ಮೂಡಿಸಿತು. ಆದರೆ ತಕ್ಷಣವೇ ತಿರುಗೇಟು ನೀಡಿದ ರಷ್ಯಾ 115ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿತು. ಆ ಮೂಲಕ ಉಭಯ ತಂಡಗಳು ಸಮಬಲ ಸಾಧಿಸಿದವು.
ಹೀಗಾಗಿ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಆಗ ರಷ್ಯಾ ಪರ ಬ್ರಾಂಜೋವಿಕ್, ಮೋಡ್ರಿಕ್, ವಿಡಾ ಗೋಲು ಗಳಿಸಿದರು. ಆದರೆ ಕ್ರೊವೇಷಿಯಾ ಪರ ಡ್ಜಾಗೋವ್, ಫರ್ನಾಂಡ್ಸ್, ಇಗ್ನಾಶೆವಿಚ್, ಕುಝಾಯೇವ್ ಒಟ್ಟು ನಾಲ್ಕು ಗೋಲು ಗಳಿಸಿ ಕ್ರೊವೇಷಿಯಾ ಗೆಲುವಿಗೆ ಕಾರಣರಾದರು. ಅಂತಿಮವಾಗಿ ಕ್ರೊವೇಷಿಯಾ ತಂಡ ಅತಿಥೇಯ ರಷ್ಯಾ ತಂಡವನ್ನು 4-3 ಅಂತರದಲ್ಲಿ ರೋಚಕವಾಗಿ ಮಣಿಸಿ ಸೆಮಿಫೈನಲ್ ಗೇರಿತು.

ಅತ್ಯಂತ ಪ್ರಬಲ ಹೋರಾಟದ ಹೊರತಾಗಿಯೂ ವಿಶ್ವಕಪ್ ಗೆಲ್ಲಬೇಕು ಎಂದು ಹೋರಾಡಿದ್ದ ರಷ್ಯಾ ನಿರಾಸೆಯೊಂದಿಗೆ ಟೂರ್ನಿಯಿಂದ ಹೊರ ನಡೆಯಿತು.