ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಂಜೂರಾತಿ ಅರ್ಜಿಗಳ ಪುನರ್ ಪರಿಶೀಲನೆ ಡಿಸಿಎಂ ಗೋವಿಂದ ಕಾರಜೋಳ ಭರವಸೆ

ಬೆಂಗಳೂರು, ಮಾ. 16(ಕೆಎಂಶಿ)- ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಂಜೂರಾತಿಗಾಗಿ ಸಲ್ಲಿಸಿರುವ ಅರ್ಜಿಗಳು ತಿರಸ್ಕøತಗೊಂಡಿದ್ದರೆ, ಮತ್ತೊಮ್ಮೆ ಅವುಗಳನ್ನು ಪುನರ್ ಪರಿಶೀಲನೆಗೆ ಅವಕಾಶ ಕಲ್ಪಿಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಹೊಣೆಯನ್ನು ಹೊತ್ತಿ ರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಅರಗ ಜ್ಞಾನೇಂದ್ರ ಮತ್ತಿತರರು ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಕೇಂದ್ರದ ಹೊಸ ಮಾರ್ಗಸೂಚಿ ಬಂದ ನಂತರ ಕೆಲವು ಕಾನೂನು ಕ್ರಮಗಳನ್ನು ಸಡಿಲಿಸುವು ದಾಗಿಯು ಭರವಸೆ ನೀಡಿದ್ದಾರೆ. ಇನ್ನು ಮುಂದೆ ಕಡ್ಡಾಯವಾಗಿ ಆಗಿಂದಾಗ್ಗೆ ಸಭೆಗಳನ್ನು ನಡೆಸಿ, ಇಂತಹ ಅರ್ಜಿ ಗಳನ್ನು ವಿಲೇವಾರಿ ಮಾಡುವಂತೆ ಆದೇಶ ಮಾಡಲಾಗುವುದು ಎಂದರು.

ಭೂಮಿ ಹಕ್ಕು ಪಡೆಯಲು ಮೂರನೇ ತಲೆ ಮಾರು ಇಲ್ಲವೆ 75 ವರ್ಷಗಳ ಹಿಂದಿನಿಂದ ದಾಖಲೆ ಗಳು ಒದಗಿಸಬೇಕೆಂಬ ನಿಯಮಾವಳಿಗಳನ್ನು ಬದಲಾ ವಣೆ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದೆ. ಕೇಂದ್ರದ ವರದಿ ಬಂದ ನಂತರ ಹಾಲಿ ಕಾನೂನು ಸಡಿಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿಯು ಹೇಳಿದ್ದಾರೆ.