ಅವಧಿಗೂ ಮುನ್ನ ವಿಧಾನಸಭೆ ಚುನಾವಣೆ ಪ್ರಸ್ತಾಪ: ಮಾಹಿತಿ ಸಂಗ್ರಹಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ ಬಿಜೆಪಿ ವೀಕ್ಷಕರು

ಬೆಂಗಳೂರು,ಮಾ.31(ಕೆಎಂಶಿ)-ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ ಭ್ರಷ್ಟಾಚಾರ ಆರೋಪ ಹಾಗೂ ಅವಧಿಗೂ ಮುನ್ನ ಚುನಾವಣೆ ನಡೆ ಸುವ ಸಂಬಂಧ ಮಾಹಿತಿ ಸಂಗ್ರ ಹಿಸಲು ಕೇಂದ್ರ ಬಿಜೆಪಿ, ವೀಕ್ಷ ಕರನ್ನು ಕಳುಹಿಸುತ್ತಿದೆ.

ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಇಲ್ಲವೇ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವೀಕ್ಷಕರಾಗಿ ಬರುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಪ್ರವಾಸದಲ್ಲಿದ್ದು, ಅವರು ದೆಹಲಿಗೆ ಹಿಂತಿರುಗಿದ ನಂತರ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ. ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ನಂತರ ಪ್ರತಿಪಕ್ಷಗಳು, ಸಾರ್ವಜನಿಕರು ಹಾಗೂ ಗುತ್ತಿಗೆ ದಾರರು, ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಕಮಿಷನ್ ಆರೋಪ ಮಾಡುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲ, ರಾಜ್ಯ ಗುತ್ತಿಗೆದಾರರ ಸಂಘ ಶೇ.40ರಷ್ಟು ಕಮಿಷನ್ ನೀಡದೇ ಬಿಲ್‍ಗಳನ್ನು ಪಾವತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೇ ದೂರಿದ್ದಾರೆ.

ಶೇ.40ರಷ್ಟು ಕಮಿಷನ್ ನೀಡಿ, ನಾವು ಗುಣಮಟ್ಟದ ಕಾಮ ಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಕೇವಲ ಲೋಕೋ ಪಯೋಗಿ, ನೀರಾವರಿ ಇಲಾಖೆಗೆ ಸೀಮಿತವಾಗಿಲ್ಲ. ಎಲ್ಲ ಇಲಾಖೆಯಲ್ಲೂ ಇದೇ ಪದ್ಧತಿ ನಡೆದು ಬಂದಿದೆ. ಈ ಮೊದಲು ಶೇ.10ರಿಂದ 15ರಷ್ಟಿದ್ದ ಕಮಿಷನ್ ಏಕಾಏಕಿ ಈ ಮಟ್ಟಕ್ಕೆ ಬಂದು ನಿಂತಿದೆ. ದಂಧೆಯನ್ನು ನಿಲ್ಲಿಸದಿದ್ದರೆ, ಗುತ್ತಿಗೆದಾರರು ಮುಂದೆ ಕೆಲಸ ತೆಗೆದುಕೊಳ್ಳುವುದೇ ಕಷ್ಟ ವಾಗುತ್ತದೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದರು.
ಇದಾದ ನಂತರ ಪ್ರತಿಪಕ್ಷಗಳು, ಸರ್ಕಾರದ ವಿರುದ್ಧ ಭ್ರಷ್ಟಾ ಚಾರದ ಆರೋಪಗಳನ್ನು ಮಾಡಿದ್ದಲ್ಲದೆ, ಮಾಧ್ಯಮಗಳಲ್ಲಿ ದಿನನಿತ್ಯ ವರದಿಗಳು ಪ್ರಕಟಗೊಳ್ಳುತ್ತಿವೆ. ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವ ಬೆನ್ನಲ್ಲೇ ಸರ್ಕಾರದ ವಿರುದ್ಧ ಇಂತಹ ಆರೋಪಗಳು ಕೇಳಿ ಬರುತ್ತಿರುವ ಬಗ್ಗೆ ಸಂಘ ಮತ್ತು ರಾಜ್ಯ ಬಿಜೆಪಿ ಘಟಕ ಕೇಂದ್ರಕ್ಕೆ ಮಾಹಿತಿ ನೀಡಿತ್ತು. ಇದರ ಆಧಾರದ ಮೇಲೆ ವರಿಷ್ಠರು ವೀಕ್ಷಕರನ್ನು ಕಳು ಹಿಸಿ, ವಾಸ್ತವಾಂಶ ತಿಳಿದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಈ ವಿಚಾರÀದಲ್ಲಿ ಸತ್ಯವಿದ್ದರೆ, ಆಡಳಿತದಲ್ಲಿ ಮಹತ್ತರ ಬದಲಾವಣೆಯಾಗುವುದನ್ನು ತಳ್ಳಿ ಹಾಕುವಂತಿಲ್ಲ. ಪ್ರಧಾನ್ ಮತ್ತು ಫಡ್ನವೀಸ್ ನೆರೆಯ ರಾಜ್ಯದ ಮಹಾರಾಷ್ಟ್ರದವರಾಗಿದ್ದಾರೆ. ಅವರಿಗೆ ರಾಜ್ಯದ ಪೂರ್ಣ ಚಿತ್ರಣ ತಿಳಿದಿದೆ. ಪ್ರಧಾನ್ ಈ ಹಿಂದೆ ರಾಜ್ಯ ಉಸ್ತುವಾರಿ ಹೊಣೆಗಾರಿಕೆ ವಹಿಸಿಕೊಂಡಿದ್ದರು. ಯಡಿಯೂರಪ್ಪ ಬದ ಲಾವಣೆಯಾದ ನಂತರ ಹೊಸ ನಾಯಕನ ಆಯ್ಕೆಯ ಸಂದರ್ಭದಲ್ಲೂ ವೀಕ್ಷಕರಾಗಿ ಬಂದಿದ್ದನ್ನು ಸ್ಮರಿಸಬಹುದು. ಇನ್ನು ಫಡ್ನವೀಸ್ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪತನಗೊಳಿಸಿ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಇವರಲ್ಲಿ ಒಬ್ಬರನ್ನು ವೀಕ್ಷಕರಾಗಿ ಕಳುಹಿಸುವ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಅವರು, ದೆಹಲಿಗೆ ಹಿಂತಿರುಗಿದ ನಂತರ ತೆಗೆದುಕೊಳ್ಳುವ ನಿಲುವಿನ ಮೇಲೆ ಕರ್ನಾಟಕದ ರಾಜಕೀಯ ಚಿತ್ರಣವೇ ಬದ ಲಾವಣೆಯಾಗಲಿದೆ. ಆಡಳಿತದಲ್ಲಿ ಬದಲಾವಣೆ ಮಾಡಬೇಕೇ ಇಲ್ಲವೇ ಅವಧಿಗೂ ಮುನ್ನ ಚುನಾ ವಣೆಗೆ ತೆರಳಬೇಕೆನ್ನುವ ಬಗ್ಗೆ ಅಮಿತ್ ಷಾ ದೆಹ ಲಿಗೆ ಹಿಂತಿರುಗಿದ ನಂತರವೇ ನಿರ್ಧಾರವಾಗಲಿದೆ.