ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಚಿರತೆ ಸಫಾರಿ

ಬೆಂಗಳೂರು, ಮಾ.24-ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಶೀಘ್ರವೇ ಚಿರತೆ ಸಫಾರಿ ಯನ್ನು ಆರಂಭಿಸಲಾಗುವುದು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದರು.

ಬುಧವಾರ ಬೆಳಗ್ಗೆ ಉದ್ಯಾನಕ್ಕೆ ಭೇಟಿ ನೀಡಿದ ಅವರು, ಚಿರತೆ ಸಫಾರಿ ಆರಂಭ ಸಂಬಂಧ ಕೈಗೊಂಡಿರುವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.
ಉದ್ಯಾನದ ಆವರಣದಲ್ಲಿ ಈಗಾಗಲೇ ಟೈಗರ್, ಲಯನ್ ಮತ್ತು ಕರಡಿ ಸಫಾರಿ ವ್ಯವಸ್ಥೆ ಇದೆ. ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ಉದ್ದೇಶದಿಂದ ಈಗ ಚಿರತೆ ಸಫಾರಿ ಯನ್ನು ಸಹ ಆರಂಭಿಸಲು ವ್ಯವಸ್ಥೆ ಮಾಡಲಾಗಿದೆ. ಅದ ಕ್ಕಾಗಿ ಉದ್ಯಾನದ 3.5 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಫೆನ್ಸಿಂಗ್ ಮಾಡಲಾಗಿದ್ದು, ಮೃಗಾಲಯದಲ್ಲಿರುವ 8 ಚಿರತೆಗಳನ್ನು ವೀಕ್ಷಣೆಗೆ ಬಿಡಲಾಗುವುದು ಎಂದು ಹೇಳಿದರು.

ಹೊಸ ಆಕರ್ಷಣೆ: ಮೃಗಾಲಯಕ್ಕೆ ಆಕರ್ಷಣೆಯಾಗಿ ಹೊಸದಾಗಿ ಚಿಂಪಾಂಜಿ ಮತ್ತು ಹಿಮಾಲಯನ್ ಕರಡಿ ಬರಲಿದ್ದು, ಚಿಂಪಾಂಜಿಗಾಗಿ ಮನೆ ಸಿದ್ಧಪಡಿಸ ಲಾಗುವುದು ಎಂದು ತಿಳಿಸಿದರು.

ಮರು ಟೆಂಡರ್: ಉದ್ಯಾನದಲ್ಲಿ ಮಾವುತರು ಮತ್ತು ಕಾವಾಡಿಗಳಿಗೆ ವಸತಿ ಯೋಜನೆ ಕಲ್ಪಿಸುವ ಯೋಜನೆ ನೆನೆಗುದಿಗೆ ಬಿದ್ದಿದ್ದು, 4.88 ಕೋಟಿ ರೂ. ವೆಚ್ಚದಲ್ಲಿ 36 ಮನೆಗಳನ್ನು ನಿರ್ಮಿಸಬೇಕಾಗಿದೆ. ಈಗ ಮನೆಗಳ ನಿರ್ಮಾಣ ಸಂಬಂಧ ಮರು ಟೆಂಡರ್ ಕರೆಯ ಲಾಗುವುದು ಎಂದು ಹೇಳಿದರು.

ಹೈಟೆಕ್ ಆಸ್ಪತ್ರೆ ನಿರ್ಮಾಣ: ಉದ್ಯಾನದ ಆವರಣ ದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆಯನ್ನು ಸಹ ನಿರ್ಮಿಸಲು ಕೇಂದ್ರಿಯ ಮೃಗಾಲಯ ಅನುಮೋದನೆ ಸಿಕ್ಕಿದೆ. ಈ ಸಂಬಂಧ ಅನುದಾನ ನೀಡುವಂತೆ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
ನೀರಿನ ಸಮಸ್ಯೆ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ದಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕಾವೇರಿ ನೀರು ಪೂರೈಕೆ ಅಗತ್ಯವಿದ್ದು, ಇದರಿಂದ ಸುತ್ತಲಿನ ಗ್ರಾಮ ಗಳ ನೀರಿನ ಸಮಸ್ಯೆಗೂ ಪರಿಹಾರ ಸಿಗಲಿದೆ. ನದಿ ನೀರು ಪಡೆಯಲು ಹೊಸ ಯೋಜನೆ ರೂಪಿಸಬೇಕಾಗಿದೆ. ಇದಕ್ಕೆ 1.93 ಕೋಟಿ ರೂ. ಅನುದಾನ ಬೇಕಾಗಿದೆ. ಇದನ್ನು ನೀಡುವಂತೆ ಸಿಎಂ ಅವರನ್ನು ಭೇಟಿ ಮಾಡಿ ಕೋರಲಾಗುವುದು ಎಂದರು. ಈ ಸಂದರ್ಭದಲ್ಲಿ ಚಿಟ್ಟೆ ಉದ್ಯಾನವನ್ನು ಅಧ್ಯಕ್ಷ ಮಹದೇವ ಸ್ವಾಮಿ ವೀಕ್ಷಿಸಿದರು. ಸಿಎಓ ವನಶ್ರೀ ವಿ.ಪಿ.ಸುರೇಶ್, ಖಾದಿ ಮತ್ತು ಗ್ರಾಮೋ ದ್ಯೋಗ ಮಂಡಳಿ ಅಧ್ಯಕ್ಷ ಕೃಷ್ಣಪ್ಪ, ಬಿಜೆಪಿ ಮುಖಂಡರಾದ ಅಶೋಕ್, ವಿನಯ್, ಕುಮಾರ್ ಈ ವೇಳೆ ಉಪಸ್ಥಿತರಿದ್ದರು.