ನೂರಾರು ತೊಡಕುಗಳು ‘ಮಾರ್ಗ’

ಝಮೋಹನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಮಾರ್ಗ ಚಿತ್ರದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಚೇತನ್ ಈ ಚಿತ್ರದಲ್ಲಿ ನಾಯಕನಾಗಿದ್ದು, ದಿಯಾ ಖ್ಯಾತಿಯ ಖುಷಿ ಹಾಗೂ ಎಕ್‍ಲವ್‍ಯಾ ಬೆಡಗಿ ಗ್ರೀಷ್ಮಾ ನಾಣಯ್ಯ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಮೈಸೂರು ಮೂಲದ ಗೌತಮ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ನಿರ್ದೇಶಕ ಮೋಹನ್ ಮಾತನಾಡುತ್ತ ಈ ಕಥೆ ರೆಡಿ ಮಾಡಿಕೊಂಡು ಚೇತನ್‍ರನ್ನು ಭೇಟಿಯಾದೆ, ಅವರೂ ಕಥೆ ಕೇಳಿ ಥ್ರಿಲ್ ಆದರು. ಇದೊಂದು ಕ್ರೈಮ್ ಥ್ರಿಲ್ಲರ್ ಕಥೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದೊಂದು ಮಾರ್ಗ ಇರುತ್ತದೆ. ಅವರು ಅದನ್ನು ತಲುಪುವ ಹಾದಿಯಲ್ಲಿ ಹಲವಾರು ತೊಂದರೆ, ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಚಿತ್ರದಲ್ಲಿ ನಾಯಕ, ನಾಯಕಿಯರಿಬ್ಬರೂ ತಂತಮ್ಮ ಗುರಿ ತಲುಪಲು ಹೊರಟಾಗ ಎದುರಾದ ರಿಸ್ಕ್‍ಗಳನ್ನು ಹೇಗೆ ಎದುರಿಸಿದರು. ಕೊನೆಗೆ ಅವರು ತಮ್ಮ ಗುರಿಯನ್ನು ತಲುಪಿದರಾ ಎನ್ನುವುದು ಈ ಚಿತ್ರದ ಕಥಾಹಂದರ. ಅಲ್ಲದೆ ಆ ಮೂವರ ಗುರಿ ಏನೆಂಬುದೇ ಚಿತ್ರದ ಸಸ್ಪೆನ್ಸ್. ಶೇ.90ರಷ್ಟು ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ನಡೆಸುತ್ತಿದ್ದು, ಉಳಿದ ಭಾಗದ ಚಿತ್ರೀಕರಣವನ್ನು ಚಿಕ್ಕಮಗಳೂರಿನಲ್ಲಿ ನಡೆಸುವ ಪ್ಲಾನ್ ಹಾಕಿಕೊಂಡಿದ್ದೇವೆ. 50 ದಿನಗಳಲ್ಲಿ ಚಿತ್ರದ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ಮಾಡುತ್ತಿದ್ದೇವೆ. ಈ ಚಿತ್ರದಲ್ಲಿ 3 ಹಾಡುಗಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ ಎಂದು ಹೇಳಿದರು.

ಚಿತ್ರದ ನಾಯಕನಟ ಚೇತನ್ ಮಾತನಾಡಿ, ನಿರ್ದೇಶಕರು ನನಗೆ ಸುಮಾರು ಆರೇಳು ವರ್ಷಗಳಿಂದ ಪರಿಚಯ. ಅವರು ಮಾಡಿಕೊಂಡು ತಂದಿದ್ದ ಈ ಸ್ಕ್ರಿಪ್ಟ್ ನನಗೆ ತುಂಬಾ ಖುಷಿ ಕೊಡ್ತು. ಇದರಲ್ಲಿ ನನ್ನ ಪಾತ್ರದ ಹೆಸರು ಆಕಾಶ್. ಈ ಪಾತ್ರಕ್ಕೆ ಬೇರೆ ಬೇರೆ ಶೇಡ್ಸ್ ಇದೆ. ಚಿತ್ರದ ಟೈಟಲ್ ಮಾರ್ಗ ಅಂತಿದ್ದರೂ, ಇದು ರೋಡ್ ಕಾನ್ಸೆಪ್ಟ್ ಅಲ್ಲ, ತಾಂತ್ರಿಕ ಕೆಲಸವೇ ಈ ಚಿತ್ರದ ಪ್ರಮುಖ ಅಂಶ. ತನ್ನ ಗುರಿ ತಲುಪಲು ನಾಯಕ ಯಾವ ಮಾರ್ಗ ಹಿಡಿಯುತ್ತಾನೆ, ಏಕೆ ಎನ್ನುವುದೇ ಚಿತ್ರದ ಕಂಟೆಂಟ್ ಎಂದು ಹೇಳಿದರು.

ನಾಯಕಿಯರಲ್ಲೊಬ್ಬಳಾದ ಖುಷಿ ಮಾತನಾಡಿ, ಇಲ್ಲಿ ನನ್ನದು ನಕ್ಷತ್ರ ಎಂಬ ಪಾತ್ರ, ಆಶ್ರಮದಲ್ಲಿ ಬೆಳೆದಂಥ ಸಿಂಪಲ್ ಹುಡುಗಿ, ಕಷ್ಟದಲ್ಲಿರುವವರನ್ನು ನೋಡಿ ಆಕೆ ತುಂಬಾ ಮರುಗುತ್ತಾಳೆ, ಸಹಾಯ ಮಾಡುತ್ತಾಳೆ ಎಂದು ಹೇಳಿಕೊಂಡರೆ, ಮತ್ತೊಬ್ಬ ನಾಯಕಿ ಗ್ರೀಷ್ಮಾ ನಾಣಯ್ಯ ಮಾತನಾಡಿ ಈ ಚಿತ್ರದಲ್ಲಿ ನಾನು ರೀಮಾ ಎನ್ನುವ ಎಲ್ಲರೂ ಪ್ರೀತಿಸುವಂಥ ಹುಡುಗಿಯ ಪಾತ್ರ ಮಾಡುತ್ತಿz್ದÉೀನೆ. ಈ ಪಾತ್ರ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆಯಿದೆ ಎಂದು ಹೇಳಿದರು. ನಿರ್ಮಾಪಕರ ಅನುಪಸ್ಥಿತಿಯಲ್ಲಿ ಮಾರ್ಗ ಚಿತ್ರದ ಮುಹೂರ್ತ ಕಾರ್ಯಕ್ರಮ ಸರಳವಾಗಿಯೇ ನಡೆಯಿತು. ಮಂಗಳ ಮೂರುತಿ ಪೆÇ್ರಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎಸ್.ಕೆ.ರಾವ್ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ, ವಿಕ್ರಂಮೋರ್ ಅವರ ಸಾಹಸ, ಶಂಕರ್ ರಾಮನ್ ಅವರ ಸಂಭಾಷಣೆ, ಕಲೈ ಅವರ ನೃತ್ಯ, ವೈಜಯಂತಿ ಅವರ ವಸ್ತ್ರಾಲಂಕಾರ, ರಂಜಿತ್ ಅವರ ಸಹಾಯಕ ನಿರ್ದೇಶನ ಹಾಗೂ ಎ.ಸತೀಶ್ ಅವರ ಕಲಾ ನಿರ್ದೇಶನವಿದೆ.