ನಂದಿನಿ ಉತ್ಪನ್ನಗಳ ದರ ಅಲ್ಪ ಇಳಿಕೆ

ಬೆಂಗಳೂರು, ಜು.18- ಆಹಾರ ಉತ್ಪನ್ನಗಳಿಗೆ ಕೇಂದ್ರ ಸರಕಾರ ಜಿಎಸ್‍ಟಿ ವಿಧಿಸಿದ ವಿವಾದದ ನಡುವೆ ನಂದಿನಿ ಮೊಸರು, ಲಸ್ಸಿ ಮತ್ತು ಮಜ್ಜಿಗೆ ದರಗಳನ್ನು ಸೋಮವಾರ ಮತ್ತೆ ಪರಿಷ್ಕರಿಸಿ ಬೆಲೆ ಯನ್ನು ತುಸು ಇಳಿಕೆ ಮಾಡಲಾಗಿದೆ. ಈ ಎಲ್ಲ ಹಾಲಿನ ಉತ್ಪನ್ನಗಳ ದರವನ್ನು 50 ಪೈಸೆಯಿಂದ 1.50ರಷ್ಟು ಕಡಿಮೆ ಮಾಡಲಾಗಿದೆ. ಪರಿಷ್ಕರಿಸಿದ ದರಗಳ ಅನ್ವಯ 200 ಗ್ರಾಂ ಮೊಸರಿಗೆ 10.50 ರೂ., ನಿಗದಿಪಡಿಸಲಾಗಿದೆ.

ಇದರಿಂದ, ಮೂಲ ಹಿಂದಿನ ದರಕ್ಕಿಂತ 50 ಪೈಸೆಯಷ್ಟು ಮಾತ್ರ ಹೆಚ್ಚಿಸಿದಂತಾಗಿದೆ. 200 ಮಿ.ಲೀ. ಸ್ಯಾಚೆಯ ಮಜ್ಜಿಗೆ ದರವು 7ರಿಂದ 8ರೂ. ಹೆಚ್ಚಿಸಲಾಗಿತ್ತು. ಪರಿಷ್ಕೃತ ದರಗಳ ಅನ್ವಯ 7.50ಕ್ಕೆ ನಿಗದಿಪಡಿಸಲಾಗಿದೆ. ಹಾಗೇ, 200 ಮಿ.ಲೀ. ಸ್ಯಾಚೆಯ ಲಸ್ಸಿ ದರವನ್ನು 10ರಿಂದ 11ಕ್ಕೆ ಹೆಚ್ಚಿಸಲಾಗಿತ್ತು. ಈಗ, ಹೊಸ ದರಗಳ ಅನ್ವಯ 10.50ರೂ.ಗೆ ನಿಗದಿಪಡಿಸಲಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಇಂದಿನಿಂದ(ಜು.19) ಜಾರಿಗೆ ಬರುವಂತೆ `ನಂದಿನಿ’ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೆÇಟ್ಟಣಗಳ ಮಾರಾಟ ದರಗಳನ್ನು ಮತ್ತೊಮ್ಮೆ ಮರುಪರಿಷ್ಕರಿಸಲಾಗಿದೆ. ಅಲ್ಲದೆ, ರವಿವಾರ ಈ ಉತ್ಪನ್ನಗಳ ದರಗಳನ್ನು 1ರಿಂದ 3ರಷ್ಟು ಹೆಚ್ಚಿಸಲಾಗಿತ್ತು. ಗ್ರಾಹಕರಿಂದ ಬೆಲೆ ಏರಿಕೆಗೆ ಅಸಮಾಧಾನ ವ್ಯಕ್ತವಾಗಿದ್ದರಿಂದ ಕೆಎಂಎಫ್ ಈ ಕ್ರಮ ಕೈಗೊಂಡಿದೆ.