ಪಾಕ್‍ನ ಐಎಸ್‍ಐಗೆ ಬೇಹುಗಾರಿಕೆ ಮಾಡುತ್ತಿದ್ದ ರಾಜಸ್ತಾನ ಮೂಲದ ವ್ಯಕ್ತಿ ಬಂಧನ!

ಬೆಂಗಳೂರು: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಯಾದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‍ಐ)ಗೆ ಪ್ರಮುಖ ಸ್ಥಳಗಳ ಫೆÇೀಟೋಗಳು ಮತ್ತು ವಿವರಗಳನ್ನು ಹಂಚಿಕೊಳ್ಳು ತ್ತಿದ್ದ ರಾಜಸ್ಥಾನ ಮೂಲದ ಗೂಢ ಚಾರನನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೆÇಲೀಸರು ತಿಳಿಸಿ ದ್ದಾರೆ. ದಕ್ಷಿಣ ಕಮಾಂಡ್ ಮಿಲಿ ಟರಿ ಇಂಟೆಲಿಜೆನ್ಸ್, ಬೆಂಗಳೂರು ಮತ್ತು ಕೇಂದ್ರೀಯ ಅಪರಾಧ ವಿಭಾಗದ ಜಂಟಿ ಕಾರ್ಯಾಚರಣೆ ನಡೆಸಿ ನಗರದ ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಜತೇಂದರ್ ಸಿಂಗ್ ಎಂಬಾತ ನನ್ನು ಬಂಧಿಸಿರುವುದಾಗಿ ಪೆÇಲೀಸ್ ಮೂಲಗಳು ತಿಳಿಸಿವೆ. ರಾಜಸ್ಥಾನದ ಬಾರ್ಮರ್‍ನಿಂದ ಬಂದಿದ್ದ ಶಂಕಿತನು ಬೆಂಗಳೂರಿನಲ್ಲಿ ಬಟ್ಟೆ ಮಾರಾಟಗಾರ ನಾಗಿ ಕೆಲಸ ಮಾಡುತ್ತಿದ್ದನು. ಇದರ ಜೊತೆಗೆ ಆತ ತನ್ನ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‍ಗಳೊಂದಿಗೆ (ಐಎಸ್‍ಐ) ಸಂಪರ್ಕ ಹೊಂದಿದ್ದನು.

ವಾಟ್ಸ್ ಆಪ್ ವಿಡಿಯೋ ಕರೆ ಮಾಡುವ ಮೂಲಕ ದೇಶದ ಆಯಕಟ್ಟಿನ ಸ್ಥಳಗಳು, ಕಟ್ಟಡ, ರಕ್ಷಣಾ ಸಂಸ್ಥೆಯ ಫೆÇೀಟೋಗಳನ್ನು ರವಾನಿ ಸುತ್ತಿದ್ದ ಎಂದು ತಿಳಿದು ಬಂದಿದೆ. ಬಂಧನದ ವೇಳೆ ಆತನ ಬಳಿ ಸೇನಾ ಸಮವಸ್ತ್ರ ಸಿಕ್ಕಿದೆ. ಈ ಕಾರ್ಯಗಳನ್ನು ನಿರ್ವಹಿಸಲು ಆತ ಸೇನಾ ಅಧಿ ಕಾರಿಯಂತೆ ವೇಷ ಹಾಕುತ್ತಿದ್ದನು. ಇನ್ನು ಬಾರ್ಮರ್ ಮಿಲಿಟರಿ ನಿಲ್ದಾಣದ ಫೆÇೀಟೋಗಳನ್ನು ಒದಗಿ ಸಿದ್ದನು. ಆ ಪ್ರದೇಶದ ಮಿಲಿಟರಿ ವಾಹನಗಳ ಚಲನೆಯನ್ನು ತನ್ನ ನಿರ್ವಾಹಕರಿಗೆ ವರದಿ ಮಾಡಿ ದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.