ನಾಗಮಂಗಲ: ಪಕ್ಷೇತರ ಅಭ್ಯರ್ಥಿ ಸುಮ ಲತಾ ಅವರ ಪರವಾಗಿ ಕಾಂಗ್ರೆಸ್ ಬಾವುಟ ಹಿಡಿದು ಪ್ರಚಾರ ನಡೆಸಿದರೆ, ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷೆ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿರುವುದಕ್ಕೂ ಕೇರ್ ಮಾಡದ ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಮುಖಂಡರು ತಾವು ಕಾಂಗ್ರೆಸ್‍ನ ಅಸ್ತಿತ್ವಕ್ಕಾಗಿ ಸುಮ ಲತಾ ಅಂಬರೀಶ್ ಪರವಾಗಿ ಕಾಂಗ್ರೆಸ್ ಬಾವುಟ ಹಿಡಿದೇ ಪ್ರಚಾರ ಮಾಡುತ್ತೇವೆ ಎಂದು ಘೋಷಿಸಿದ್ದಾರೆ. ಇಂದು ನಾಗಮಂಗಲ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಹೆಚ್.ಟಿ.ಕೃಷ್ಣೇಗೌಡ, ಎನ್.ಜೆ.ರಾಜೇಶ್, ರಾಜ್ಯ…
ಮೈಸೂರು ಜಿಲ್ಲೆಯಲ್ಲಿ ಅಂತಿಮವಾಗಿ 25.09 ಲಕ್ಷ ಮತದಾರರು
April 4, 2019ಮೈಸೂರು: ತ್ವರಿತ ಪರಿಷ್ಕರಣೆ ನಂತರ ಮೈಸೂರು ಜಿಲ್ಲೆಯಲ್ಲಿ ಈಗ ಒಟ್ಟು 25,09,232 ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಮೈಸೂರು ಡಿಸಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪ ಡೆಯುವ ಕಡೇ ದಿನವಾದ ಮಾರ್ಚ್ 29 ರವರೆಗೂ ಮತದಾರರ ಪಟ್ಟಿ ಪರಿಷ್ಕ ರಣೆ ಪ್ರಕ್ರಿಯೆ ನಡೆಸಲಾಗಿದ್ದು, ಹಾಗಾಗಿ ಮೈಸೂರು ಜಿಲ್ಲೆಯಲ್ಲಿ 30,000ಕ್ಕೂ ಅಧಿಕ ಮಂದಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಅಂತಿಮ ಘಳಿಗೆಯಲ್ಲಿ ಸೇರ್ಪಡೆ ಯಾಗಿದ್ದಾರೆ ಎಂದು ತಿಳಿಸಿದರು.4 ಮಾರ್ಚ್ 29 ರಂದೇ ರಾಜ್ಯದ…
ಎಲ್ಲೆ ಮೀರಿತೋ ನಾಯಕರ ಮಾತು…!?
April 4, 2019ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪ್ರಕ್ರಿಯೆ ಎಂಬುದು ಜನತೆಯ ಪಾಲಿಗೆ ಒಂದು ಉತ್ಸವ. ಸಾಂವಿಧಾನಿಕ ಹಕ್ಕನ್ನು ಚಲಾಯಿಸಲು ಸದಾವಕಾಶ. ಹಾಗೆಯೇ, ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳು ತಮ್ಮ ಧ್ಯೇಯೋ ದ್ದೇಶ, ಸಾಧನೆಯನ್ನು ಸಾದರಪಡಿಸಿ ಜನಾಭಿಪ್ರಾಯ ಸಂಗ್ರಹಿಸುವ ಸಂದರ್ಭವೂ ಹೌದು. ಇಂತಹ ಪವಿತ್ರ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ನಡೆದುಕೊಳ್ಳುವ ರೀತಿ, ಬಳಸುವ ಭಾಷೆ ಮತ್ತು ತೋರಿಸುವ ಆಸೆ ಆಮಿಷಗಳು ಸಾರ್ವಜನಿಕ ರಲ್ಲಿ ಹೇಸಿಗೆ ಉಂಟು ಮಾಡುತ್ತಿವೆ. ಅದರಲ್ಲೂ ನಾಗರಿಕತೆಯ ಎಲ್ಲೆ ಮೀರಿದ ಮಾತುಗಳಿಂದಾಗಿ ಸಾಮಾಜಿಕ…
ಲಂಚ ಸ್ವೀಕಾರ: ಸಿಬಿಐ ಬಲೆಗೆ ಐಟಿ ಅಧಿಕಾರಿ
April 4, 2019ಬೆಂಗಳೂರು: ಐಟಿ ದಾಳಿಗೆ ಒಳಗಾಗಿದ್ದ ಬಿಲ್ಡರ್‍ವೊಬ್ಬರ ಬಳಿ 14 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಆದಾಯ ತೆರಿಗೆ ಅಧಿಕಾರಿಯನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿ ನಾಗೇಶ್ ಎಂಬುವರೇ ಸಿಬಿಐ ಬಲೆಗೆ ಬಿದ್ದವರಾಗಿದ್ದು, ಮಾ.6ರಂದು ಐಟಿ ದಾಳಿಗೆ ಒಳಗಾಗಿದ್ದ ಬಿಲ್ಡರ್‍ವೊಬ್ಬರನ್ನು ಪ್ರಕರಣದಿಂದ ಖುಲಾಸೆಗೊಳಿಸಲು ನಾಗೇಶ್ 40 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಸಿಬಿಐ ಅಧಿಕಾರಿಗಳಿಗೆ ಬಿಲ್ಡರ್ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಸಿಬಿಐ ಅಧಿಕಾರಿ ಗಳು ಐಟಿ ಅಧಿಕಾರಿಗಳನ್ನು…
ಮತದಾನ ಜಾಗೃತಿಗೆ ಹತ್ತು ಹಲವು ವಿಧಾನ
April 4, 2019ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿ ಸಲು ಮೈಸೂರು ಮೃಗಾಲಯದಲ್ಲಿ ವಿವಿಧ ಪ್ರಾಣಿಗಳ ಮಾಡೆಲ್‍ಗಳನ್ನು ರಚಿಸಿ `ಸೆಲ್ಫಿ ಜೋನ್’ ನಿರ್ಮಿಸಿ, ಕಡ್ಡಾಯ ಮತದಾನದ ಬಗ್ಗೆ ಪೋಸ್ಟರ್‍ಗಳನ್ನು ಹಾಕಲಾಗುವುದು. ಜತೆಗೆ ದೀಪಾಲಂಕಾರ, ಬೃಹತ್ ಜಾಥಾ, ಟಾಂ.. ಟಾಂ.. ಮೂಲಕವೂ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ತಿಳಿಸಿದರು. ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ…
ದೇಶದ ಮತ್ತಷ್ಟು ಅಭಿವೃದ್ಧಿಗೆ ಮೋದಿ ಅನಿವಾರ್ಯ
April 4, 2019ಮೈಸೂರು: ಸರ್ಕಾ ರದ ವಿವಿಧ ಸೌಲಭ್ಯವನ್ನು ಬಡವರಿಗೆ ನೇರವಾಗಿ ತಲುಪಿಸುವುದರೊಂದಿಗೆ ಹಲವು ಸುಧಾರಣೆ ತಂದಿರುವ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ. ಈ ಹಿನ್ನೆಲೆಯಲ್ಲಿ ಅವರಿಗೆ ದೇಶದಾ ದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕರ್ಣಿಕ್ ಅಭಿಪ್ರಾಯಪಟ್ಟಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನ ರಾಜೇಂದ್ರ ಕಲಾಮಂದಿರದ ಮಿನಿ ಸಭಾಂಗಣದಲ್ಲಿ ಬುಧವಾರ ಗಾಣಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸುಮಾರು 70 ವರ್ಷ…
ಎಸ್‍ಟಿ ಗೊಂದಲಕ್ಕೆ ಬಿಜೆಪಿಯಿಂದ ಅಂತಿಮ ತೆರೆ
April 4, 2019ಮೈಸೂರು: ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಎಸ್.ಟಿ. ಪ್ರವರ್ಗದಡಿಯಲ್ಲಿ ಸೇರಿಸುವ ಮೂಲಕ ಕಳೆದ ಮೂರು ದಶಕಗಳಿಂದಲೂ ಗೊಂದಲ ಮತ್ತು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದ ನಾಯಕ ಸಮುದಾಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾ ರಕ್ಕೆ ಕೃತಜ್ಞತೆ ಸಲ್ಲಿಸುವ ದ್ಯೋತಕವಾಗಿ ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ನಾಯಕ (ವಾಲ್ಮೀಕಿ) ಸಮುದಾಯ ಬೆಂಬಲಿಸ ಬೇಕು ಎಂದು ರಾಜ್ಯ ಬಿಜೆಪಿ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ. ಅಪ್ಪಣ್ಣ ಕರೆ ನೀಡಿದರು. ಹುಣಸೂರಿನ ವಿವಿಧ…
ಸರಿದೂಗಿಸಿ 48 ಗಂಟೆಯೊಳಗೆ ಮಾಹಿತಿ ನೀಡಲು ಅಭ್ಯರ್ಥಿಗಳಿಗೆ ನೋಟೀಸ್
April 4, 2019ಮೈಸೂರು: ವೆಚ್ಚದಲ್ಲಿ ಕಂಡು ಬಂದಿರುವ ವ್ಯತ್ಯಾಸವನ್ನು ಸರಿದೂಗಿಸಿ 48 ಗಂಟೆಯೊಳ ಗಾಗಿ ಮಾಹಿತಿ ನೀಡುವಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಅಭ್ಯರ್ಥಿಗಳಾದ ಸಿ.ಹೆಚ್. ವಿಜಯ ಶಂಕರ್, ಪ್ರತಾಪ್ ಸಿಂಹ ಸೇರಿದಂತೆ 6 ಮಂದಿಗೆ ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಅಭಿರಾಂ ಜಿ. ಶಂಕರ್ ಅವರು ನೋಟೀಸ್ ಜಾರಿ ಮಾಡಿದ್ದಾರೆ. ಎಸ್‍ಯುಸಿಐನ ಪಿ.ಎಸ್. ಸಂಧ್ಯಾ, ಕೆಪಿಪಿಯ ಬಿ.ಕೆ. ಬಿದ್ದಪ್ಪ, ಪಕ್ಷೇತರರಾದ ಆನಂದಕುಮಾರ್, ಬಿ.ಡಿ. ನಿಂಗಪ್ಪ ಸಹ ತಾವು ಮಾಡಿ ರುವ ವೆಚ್ಚದ ಬಗ್ಗೆ ನೀಡಿರುವ ಮಾಹಿತಿಗಳು ವೆಚ್ಚ ವೀಕ್ಷಕರು ನೀಡಿರುವ ಮಾಹಿತಿಗೆ…
ಕೆ.ಆರ್.ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಕೈ-ದಳ ಜಂಟಿ ಪ್ರಚಾರ
April 4, 2019ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಬುಧವಾರ ಕೆ.ಆರ್.ವಿಧಾನಸಭಾ ಕ್ಷೇತ್ರದ ಗುಂಡೂರಾವ್ ನಗರದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರವಾಗಿ ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರು ಜಂಟಿಯಾಗಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂ ಡರು ಹಾಗೂ ಕಾರ್ಯಕರ್ತರ ನಡುವೆ ಒಮ್ಮತ ಮೂಡುತ್ತಿಲ್ಲ. ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲಿಸಲು ಜೆಡಿಎಸ್ ಕಾರ್ಯ ಕರ್ತರು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಬಳಿಕ ಮೈಸೂರಿನ ಕೆ.ಆರ್. ವಿಧಾನಸಭಾ ಕ್ಷೇತ್ರದಲ್ಲಿ…
ಗಣ್ಯರು, ಸರ್ಕಾರಿ ಅಧಿಕಾರಿಗಳ ವಾಹನಗಳ ತಪಾಸಣೆಗೆ ಸೂಚನೆ
April 4, 2019ಮೈಸೂರು:ಸ್ಟ್ಯಾಟಿಕ್ ಚೆಕ್‍ಪೋಸ್ಟ್‍ಗಳಲ್ಲಿ ಗಣ್ಯರು, ಸರ್ಕಾರಿ ಅಧಿಕಾರಿಗಳ ವಾಹನ ಗಳನ್ನು ತೀವ್ರ ತಪಾಸಣೆ ಗೊಳಪಡಿಸುವಂತೆ ಸೂಚಿಸ ಲಾಗಿದೆ ಎಂದು ಜಿಲ್ಲಾ ಚುನಾ ವಣಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು, ಸರ್ಕಾರಿ ವಾಹನಗಳಲ್ಲಿ ಹಣ ಹಾಗೂ ಪ್ರಚಾರ ಸಾಮಗ್ರಿಗಳನ್ನು ಸಾಗಿಸಲಾಗು ತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಾಪಿಸಿ ರುವ ಎಲ್ಲಾ ಸ್ಟ್ಯಾಟಿಕ್ ಚೆಕ್‍ಪೋಸ್ಟ್ ಗಳಲ್ಲಿ ಸಾರ್ವಜನಿಕರ ವಾಹನಗಳಂತೆಯೇ ವಿವಿಐಪಿ ಹಾಗೂ ಪೊಲೀಸ್…