ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೊರೊನಾ ನಿರ್ವಹಣೆ ಹೊಣೆ

  • ತಮ್ಮ ತಮ್ಮ ಜಿಲ್ಲೆಯಲ್ಲಿ ಬಿಡಾರ ಹೂಡಿ; ಸುಧಾರಿಸುವ ಕಾರ್ಯಕೈಗೊಳ್ಳಬೇಕು 
  • ಆಯಾ ಜಿಲ್ಲೆಯಲ್ಲಿ ಆಕ್ಸಿಜನ್ ಪೂರೈಕೆ, ರೆಮ್ಡಿಸಿವಿರ್ ಚುಚ್ಚುಮದ್ದು, ಲಸಿಕೆ ನೀಡುವುದು, ಬೆಡ್ ವ್ಯವಸ್ಥೆ ಎಲ್ಲವೂ ಉಸ್ತುವಾರಿಗಳ ಹೊಣೆ
  • ಮೇ 12ರವರೆಗೆ ಎಂದಿನಂತೆ ಜನತಾ ಕಫ್ರ್ಯೂ ಜಾರಿಯಲ್ಲಿರುತ್ತದೆ. 
  • ಸದ್ಯಕ್ಕೆ ಲಾಕ್‍ಡೌನ್ ಇಲ್ಲ; ಪರಿಸ್ಥಿತಿ ನೋಡಿಕೊಂಡು 12ರ ನಂತರ ತೀರ್ಮಾನ

ಬೆಂಗಳೂರು, ಮೇ 4(ಕೆಎಂಶಿ)- ಕೊರೊನಾ ನಿಯಂತ್ರಿಸಲು ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಇಲ್ಲ, ಆದರೆ ಮೇ 12ರವರೆಗೂ ಎಂದಿನಂತೆ ಜನತಾ ಕಫ್ರ್ಯೂ ಮುಂದು ವರೆಸಲು ಸಚಿವ ಸಂಪುಟ ತೀರ್ಮಾನಿಸಿದೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮೇ 12ರ ನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಚಾಮರಾಜ ನಗರದಲ್ಲಿ ನಡೆದಿರುವ ಘಟನೆ ಬಹಳ ಬೇಸರ ತಂದಿದೆ. ಇಂತಹ ಘಟನೆಗಳು ಮರುಕಳಿಸಬಾರದೆಂಬ ಉದ್ದೇಶದಿಂದ ಸೋಂಕು ನಿರ್ವಹಣೆ ಮತ್ತು ಸೋಂಕಿ ತರಿಗೆ ಚಿಕಿತ್ಸೆ ಕಲ್ಪಿಸುವುದು, ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಹೊಣೆ ಗಾರಿP Éಯನ್ನು ಜಿಲ್ಲಾ ಉಸ್ತು ವಾರಿ ಸಚಿವರಿಗೆ ವಹಿ ಸಲಾಗಿದೆ. ಅವರು ನಾಳೆಯಿಂದಲೇ ತಮ್ಮ ತಮ್ಮ ಜಿಲ್ಲೆಗಳಿಗೆ ತೆರಳಿ, ಸೋಂಕು ನಿಯಂತ್ರಣ ಹಾಗೂ ನಿವಾರಣೆಗೆ ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಯಾವುದೇ ಲೋಪವಾದರೂ ಅವರೇ ಹೊಣೆ ಹೊರಬೇಕಾಗುತ್ತದೆ. ಆಕ್ಸಿಜನ್ ಪೂರೈಕೆ, ರೆಮ್ಡಿಸಿವಿರ್ ಚುಚ್ಚುಮದ್ದು, ಲಸಿಕೆ ಕೊಡಿಸು ವುದು, ಬೆಡ್‍ಗಳ ವ್ಯವಸ್ಥೆ ಮಾಡುವ ಹೊಣೆಗಾರಿಕೆಯನ್ನು ಇವರಿಗೆ ವಹಿಸಲಾಗಿದೆ. ಸಾರ್ವಜನಿಕರು ಸರ್ಕಾರದ ಜೊತೆ ಸಹಕರಿ ಸಬೇಕು. ಮೊದಲನೇ ಅಲೆಗಿಂತ ಎರಡನೇ ಅಲೆ ಮೂರು ನಾಲ್ಕು ಪಟ್ಟು ಹೆಚ್ಚಿದೆ. ಹೀಗಾಗಿ ಸರ್ಕಾರ ಏನೆಲ್ಲ ಕ್ರಮ ಕೈಗೊಳ್ಳಬೇಕೋ, ಕೈಗೊಳ್ಳುತ್ತಿದ್ದೇವೆ. ರಾಜ್ಯಕ್ಕೆ ಅಗತ್ಯವಿ ರುವ ಆಕ್ಸಿಜನ್ ಮತ್ತು ರೆಮ್ಡಿಸಿವಿರ್ ಚುಚ್ಚುಮದ್ದನ್ನು ಹೆಚ್ಚು ಪ್ರಮಾಣದಲ್ಲಿ ಪೂರೈಸುವಂತೆ ಕೇಂದ್ರವನ್ನು ಕೋರಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವರು ಹಾಗೂ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿ ಸಿದ್ದೇನೆ. ರಾಜ್ಯದಲ್ಲಿ ಉತ್ಪಾದನೆಗೊಳ್ಳುವ ಆಕ್ಸಿಜನ್‍ಅನ್ನು ನಮಗೆ ನೀಡುವಂತೆ ಕೋರಿದ್ದೇನೆ. ಎರಡು ಮೂರು ದಿನದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಬೆಡ್, ಆಕ್ಸಿಜನ್ ಹಾಗೂ ರೆಮ್ಡಿಸಿವಿರ್, ಇವನ್ನು ದಂಧೆ ಮಾಡುವ ಒಂದು ವರ್ಗವಿದೆ. ಇವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಈ ಎಲ್ಲಾ ಜಿಲ್ಲೆ ಗಳಲ್ಲೂ ಕೋವಿಡ್‍ಗಾಗಿ ಮೀಸಲಿರಿಸಿ, ಹಾಸಿಗೆ ಗಳನ್ನು ಹೆಚ್ಚಿಸಲು ಆದೇಶಿಸಿದ್ದೇನೆ. ಕಳೆದ ಎರಡು ದಿನ ಗಳಿಂದ ಸತತವಾಗಿ ಸಭೆಗಳನ್ನು ನಡೆಸಿ, ಸೋಂಕು ನಿವಾರಣೆಗೆ ಕ್ರಮ ಕೈಗೊಳ್ಳುತ್ತಿದ್ದೇನೆ. ತಕ್ಷಣವೇ ವೈದ್ಯರು ಹಾಗೂ ನರ್ಸ್‍ಗಳನ್ನು ನೇಮಕ ಮಾಡಿಕೊಳ್ಳಲು ಸಂಪುಟ ತೀರ್ಮಾನಿಸಿದೆ ಎಂದರು.

ಸಚಿವರಿಗೆ ಜವಬ್ದಾರಿ:ಇದರ ಜೊತೆಗೆ ಆಕ್ಸಿಜನ್ ಕೊರತೆ ನಿವಾರಿಸುವ ಜವಾಬ್ದಾರಿ ಯನ್ನು ಸಚಿವ ಜಗದೀಶ್ ಶೆಟ್ಟರ್ ಅವರಿಗೂ, ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸುವ ಹೊಣೆಯನ್ನು ಬಸವರಾಜ್ ಬೊಮ್ಮಾಯಿ ಹಾಗೂ ಅಶೋಕ್ ಅವರಿಗೆ ನೀಡಲಾಗಿದೆ. ವಾರ್‍ರೂಮ್ ನಿರ್ವಹಣೆಯನ್ನು ಅರವಿಂದ್ ಲಿಂಬಾವಳಿ ಅವರು ಮಾಡಲಿದ್ದಾರೆ ಎಂದರು. ಚಾಮರಾಜನಗರ ಘಟನೆ ನನಗೆ ತುಂಬಾ ನೋವು ತಂದಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸುವಂತೆ ಜಿಲ್ಲಾಡಳಿತಕ್ಕೆ ಆದೇಶ ಮಾಡಿದ್ದೇನೆ. ಇನ್ನು ಮೈಸೂರು, ಚಾಮರಾಜನಗರ ಜಿಲ್ಲಾಧಿಕಾರಿಗಳ ಆಂತರಿಕ ಗುದ್ದಾಟದ ಬಗ್ಗೆ ಮುಖ್ಯಕಾರ್ಯದರ್ಶಿಯವರು ಪರಿಶೀಲನೆ ಮಾಡಲಿದ್ದಾರೆ.