ಇಂದು ರಾತ್ರಿಯಿಂದ ನೈಟ್ ಕಫ್ರ್ಯೂ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಜ.7ರ ತನಕ ಈ ನಿರ್ಬಂಧ

ಬೆಂಗಳೂರು, ಡಿ.27(ಕೆಎಂಶಿ)-ಹೊಸ ವರ್ಷ ಬಹಿರಂಗ ಆಚರಣೆಗೆ ತಡೆ ಹಾಕುವ ಉದ್ದೇಶ ದಿಂದ ಜಾರಿಗೆ ತಂದಿರುವ ನೈಟ್ ಕರ್ಫ್ಯೂ ನಾಳೆ (ಮಂಗಳವಾರ) ರಾತ್ರಿಯಿಂದ ಜಾರಿಯಾಗಲಿದೆ.

ರಾಜ್ಯಾದ್ಯಂತ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೂ ಜನವರಿ 7ರವರೆಗೆ ಕರ್ಫ್ಯೂ ಜಾರಿ ಯಲ್ಲಿರಲಿದೆ. ಈ ಸಂದರ್ಭದಲ್ಲಿ ಸಾರ್ವಜನಿಕ ವಾಹನ ಹಾಗೂ ತುರ್ತು ಚಿಕಿತ್ಸೆ ವಾಹನಗಳ ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಎಂದಿನಂತೆ ಕೈಗಾರಿಕೋದ್ಯಮ ರಾತ್ರಿ ಪಾಳೆಯದಲ್ಲಿ ತನ್ನ ಕೆಲಸ ಮಾಡಿಕೊಳ್ಳಬಹುದು.

ರಾತ್ರಿ 10 ಗಂಟೆಯವರೆಗೂ ಎಂದಿನಂತೆ ಚಟುವಟಿಕೆ ಗಳಿಗೆ ಅವಕಾಶ ನೀಡಲಾಗಿದೆ. ತದನಂತರ ಹೊಟೇಲ್, ಪಬ್, ಬಾರ್ ಕ್ಲಬ್ ಬಂದಾಗಿರುತ್ತವೆ. ಕಫ್ರ್ಯೂ ಸಂದರ್ಭ ದಲ್ಲಿ ಅನಗತ್ಯವಾಗಿ ಸಾರ್ವಜನಿಕರು ರಸ್ತೆಗಿಳಿದರೆ, ಪೆÇಲೀಸರು ಕಾನೂನು ಕ್ರಮ ತೆಗೆದುಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮದುವೆ ಹಾಗೂ ಸಡಭೆ ಸಮಾರಂಭ ಗಳಲ್ಲಿ 300 ಮಂದಿ ಭಾಗವಹಿಸಬಹುದು ಹಾಗೂ ಎಲ್ಲರೂ ಕೋವಿಡ್ ಮಾರ್ಗಸೂಚಿ ಪಾಲಿಸಬೇಕೆಂದು ತಿಳಿಸಲಾ ಗಿದೆ. ರಾಜ್ಯದಲ್ಲಿ ರೂಪಾಂತರಿ ವೈರಸ್ ಒಮಿಕ್ರಾನ್ ಮತ್ತು ಕೊರೊನಾ ಸೋಂಕಿತರ ಹೆಚ್ಚಳದ
ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಜನ ಗುಂಪುಗೂಡಿ ಹಬ್ಬದ ಸಂಭ್ರಮ ಆಚರಿಸಿಕೊಳ್ಳುವುದರಿಂದ ಸೋಂಕು ಮತ್ತಷ್ಟು ಹರಡಬಹು ದೆಂಬ ತಜ್ಞರ ಸೂಚನೆಯಂತೆ ಸರ್ಕಾರ ಈ ಆಚರಣೆಗೆ ಕಡಿವಾಣ ಹಾಕಿದೆ. ನಗರ ಪ್ರದೇಶಗಳಲ್ಲಿ ಆಚರಣೆ ಅವಕಾಶ ನೀಡದಿದ್ದರೂ, ಹೊರ ವಲಯದ ರೆಸಾರ್ಟ್ ಮತ್ತು ತೋಟಗಳಲ್ಲೂ ಗುಂಪು ಸೇರಿ ಹೊಸ ವರ್ಷ ಆಚರಣೆ ಮಾಡಿದರೆ ಪೆÇಲೀಸರು ಕ್ರಮ ಜರುಗಿಸಲಿದ್ದಾರೆ. ಸರ್ಕಾರ ರಾತ್ರಿ ಕರ್ಫ್ಯೂ ಜಾರಿಗೊಳಿಸುತ್ತಿದ್ದಂತೆ ಹೊಸ ವರ್ಷ ಆಚರಣೆ ಸಂಭ್ರಮದಲ್ಲಿದ್ದವರು ನಗರ ಹೊರ ವಲಯದ ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ಯಾತ್ರೆ ಆರಂಭಿಸಿದ್ದಾರೆ. ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಪ್ರವಾಸೋದ್ಯಮ ಹಾಗೂ ಹಸಿರು ತಾಣ ಗಳಲ್ಲಿ ಸಂಭ್ರಮಾಚರಣೆ ನಡೆಸಲು ಹೊರಟಿರುವ ಪ್ರವಾಸಿಗರ ಮೇಲೆ ಹದ್ದಿನಕಣ್ಣು ಇಡುವಂತೆ ಸರ್ಕಾರ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನೈಟ್ ಕರ್ಫ್ಯೂ ಜಾರಿಗೊಳಿ ಸಿರುವುದನ್ನು ಬಲವಾಗಿ ಸಮರ್ಥಿಸಿಕೊಂಡಿ ದ್ದಾರೆ. ಸಾರ್ವಜನಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅನಿವಾರ್ಯವಾಗಿ ನೈಟ್ ಕಫ್ರ್ಯೂವನ್ನು ರಾಜ್ಯದಲ್ಲಿ ಜಾರಿ ಮಾಡಲಾಗಿದೆ. ನಾಳೆಯಿಂದ ರಾಜ್ಯಾದ್ಯಂತ 10 ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಮುಂಜಾನೆ 5ರವರೆಗೆ ಕಫ್ರ್ಯೂ ಜಾರಿ ಮಾಡಿರುವುದಕ್ಕೆ ಹೋಟೆಲ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತಿತರರು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ ಅವರು, ಜನರಿಗೆ ತೊಂದರೆ ಕೊಟ್ಟು ನೈಟ್ ಕಫ್ರ್ಯೂ ವಿಧಿಸಬೇಕೆಂಬ ದುರುದ್ದೇಶ ಸರ್ಕಾರಕ್ಕಿಲ್ಲ. ಸಾರ್ವಜನಿಕರ ಆರೋಗ್ಯಕ್ಕಾಗಿ ಈ ಕ್ರಮ ಕೈಗೊಂಡಿದ್ದೇವೆ. ಅನಿವಾರ್ಯವಾದರೂ ಸರ್ಕಾರದ ನಿರ್ಧಾರವನ್ನು ಪಾಲಿಸಬೇಕು ಎಂದು ಹೇಳಿದರು. ವ್ಯಾಪಾರ, ವಹಿವಾಟು, ಉದ್ಯಮ ನಡೆಸುವವರಿಗೆ ತೊಂದರೆ ಕೊಡಬೇಕೆಂಬ ದುರುದ್ದೇಶ ನಮಗೂ ಇಲ್ಲ. ಈಗತಾನೆ ಆರ್ಥಿಕ ಚಟುವಟಿಕೆಗಳು ಸುಧಾರಿಸುತ್ತಿವೆ ಎಂಬುದು ಗೊತ್ತಿದೆ. ಆದರೆ ಕೋವಿಡ್ ನಿಯಂತ್ರಣಕ್ಕೆ ಇದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ನಾನು ಈಗಾಗಲೇ ಸ್ಪಷ್ಟಪಡಿಸಿರುವಂತೆ ಸರ್ಕಾರದ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಿದಾಗ ಮಾತ್ರ ಸೋಂಕು ನಿಯಂತ್ರಣ ಸಾಧ್ಯವಾಗುತ್ತದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.