ಮೈಸೂರು, ಮೇ 18(ಪಿಎಂ)- ಮೈಸೂರು ನಗರ ಕಾಂಗ್ರೆಸ್‍ನ ಮಹಿಳಾ ಕಾರ್ಯಕರ್ತೆಯರಲ್ಲಿ ಆರ್ಥಿಕ ವಾಗಿ ಹಿಂದುಳಿದವರಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಅವರ ವತಿಯಿಂದ ಸೋಮವಾರ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುಮಾರು 100 ಮಂದಿಗೆ ಅಕ್ಕಿ, ಬೇಳೆ, ಟೀ ಪುಡಿ, ಉಪ್ಪು, ಸಕ್ಕರೆ, ಅಡುಗೆ ಎಣ್ಣೆ ಹಾಗೂ ತರಕಾರಿ ಒಳಗೊಂಡ ಕಿಟ್‍ಗಳನ್ನು ಡಾ. ಪುಷ್ಪಾ ಅಮರನಾಥ್ ವಿತರಣೆ ಮಾಡಿ ದರು. ಜೊತೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರಿ ನ್ಯಾಪ್ಕಿನ್ ವಿತರಣೆ ಮಾಡಲಾಯಿತು. ಇದೇ ವೇಳೆ ಕೆಪಿಸಿಸಿ ಕೊರೊನಾ ವಿಪತ್ತು ಪರಿಹಾರ ನಿಧಿಗೆ ಕಾಂಗ್ರೆಸ್ ಮುಖಂಡ ಕೆ.ಹರೀಶ್ ಗೌಡ ಹಾಗೂ ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರ ಶೇಖರ್ ತಲಾ 1 ಲಕ್ಷ ರೂ. ದೇಣಿಗೆಯ ಚೆಕ್‍ಗಳನ್ನು ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಮೂಲಕ ಸಲ್ಲಿಸಿದರು. ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ ಮತ್ತಿತರರು ಹಾಜರಿದ್ದರು.