ಮೈಸೂರು

ಕಾಯಕ ಯೋಗಿ ಶಿವನಲ್ಲಿ ಐಕ್ಯ
ಮೈಸೂರು

ಕಾಯಕ ಯೋಗಿ ಶಿವನಲ್ಲಿ ಐಕ್ಯ

ಗುರು ಉದ್ಧಾನ ಶ್ರೀ ಗದ್ದುಗೆ ಸಮೀಪವೇ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಕ್ರಿಯಾ ಸಮಾಧಿ ತುಮಕೂರು: ವಿಶ್ವಚೇತನ, ವಿಶ್ವರತ್ನ, ಕಾಯಕಯೋಗಿ, ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಗಳ ಯುಗಾಂತ್ಯವಾಗಿದೆ. ಸೋಮವಾರ ಬೆಳಿಗ್ಗೆ 11 ಗಂಟೆ 44 ನಿಮಿಷಕ್ಕೆ ಲಿಂಗೈಕ್ಯರಾದ ಮಹಾನ್ ಮಾನವತಾವಾದಿಗೆ ಕೋಟಿ ಮನಸುಗಳು ಭಾರ ಹೃದಯದಿಂದ ಬೀಳ್ಕೊಡುಗೆ ನೀಡಿದ್ದಾರೆ. ಸಿದ್ಧಗಂಗಾ ಮಠದ ಆವರಣದಲ್ಲಿ ಗುರು ಉದ್ಧಾನ ಶಿವಯೋಗಿಗಳ ಪಕ್ಕದಲ್ಲಿ ಶಿವಕುಮಾರ ಸ್ವಾಮೀಜಿ ಅವರನ್ನು ಗದ್ದುಗೆಯಲ್ಲಿ ಐಕ್ಯಗೊಳಿಸಲಾಗಿದೆ. ಕ್ರಿಯಾ ಸಮಾಧಿ: ಮಂಗಳವಾರ ಸಂಜೆ 4.30ರ ವೇಳೆಗೆ ಆರಂಭವಾದ ಕ್ರಿಯಾ…

ಮೂರೂವರೆ ದಶಕದ ಹಿಂದೆಯೇ ನಿರ್ಮಾಣವಾಗಿತ್ತು ಸಮಾಧಿ ಭವನ
ಮೈಸೂರು

ಮೂರೂವರೆ ದಶಕದ ಹಿಂದೆಯೇ ನಿರ್ಮಾಣವಾಗಿತ್ತು ಸಮಾಧಿ ಭವನ

ತುಮಕೂರು: ಸೋಮವಾರ ಶಿವೈಕ್ಯರಾದ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾ ಸಮಾಧಿಗೆ ಮೂರು ದಶಕಗಳ ಹಿಂದೆಯೇ ಜಾಗ ನಿಗದಿಯಾಗಿ, ಸಮಾಧಿ ಭವನವನ್ನು ನಿರ್ಮಿಸಲಾಗಿದೆ. 1982ರಲ್ಲೇ ಕಾಯಕ ಯೋಗಿಯ ಸಮಾಧಿಗೆ ಸ್ಥಳ ನಿಗದಿ ಮಾಡಿ ಸುಮಾರು 3 ಕೋಟಿ ರೂ.ಗಳ ವೆಚ್ಚದಲ್ಲಿ ಸಮಾಧಿ ಭವನವನ್ನು ನಿರ್ಮಿಸಲಾಗಿದೆ. ಶ್ರೀ ಮಠದ ಆವರಣದಲ್ಲಿದ್ದ ಆಲದ ಮರ ಕಡಿದು ಭವನ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಆದರೆ ಶ್ರೀಗಳು ಆಲದಮರ ಕಡಿಯಲು ಒಪ್ಪಲಿಲ್ಲ. ಇದರಿಂದ ಈ ಸ್ಥಳ ನೆನೆಗುದಿಗೆ ಬಿದ್ದಿತು. ವಿಸ್ಮಯ ಎಂಬಂತೆ…

ಭಾರವಾದ ಮನಸ್ಸಿಂದ ಭಕ್ತಸಾಗರದ ಬೀಳ್ಕೊಡುಗೆ
ಮೈಸೂರು

ಭಾರವಾದ ಮನಸ್ಸಿಂದ ಭಕ್ತಸಾಗರದ ಬೀಳ್ಕೊಡುಗೆ

ಸಿದ್ಧಗಂಗೆ: ಶ್ರೀ ವಿಳಂಬಿನಾಮ ಸಂವತ್ಸರದ ಉತ್ತರಾಯಣ ಪುಣ್ಯಕಾಲ. ಹೇಮಂತ ಋತುವಿನ ಪಾಡ್ಯ ದಿನ. ಮಂಗಳವಾರ ಸಂಜೆ 5ರ ವೇಳೆ. ಪಶ್ಚಿಮ ದಿಗಂತದ ಅಂಚಿನತ್ತ ಸಾಗುತ್ತಿದ್ದ ಸೂರ್ಯ ನಿರ್ಗಮಿಸುವುದನ್ನೂ ಮರೆತು ಭುವಿಯತ್ತ ತಿರುಗಿ ಒಂದೆಡೆ ದಿಟ್ಟಿಸಿ ನೋಡುತ್ತಲೇ ಇದ್ದ. ತುಮಕೂರು ಜಿಲ್ಲೆಯ ಸಿದ್ಧಗಂಗೆಯ ಬೆಟ್ಟದ ಭಾರೀ ಬಂಡೆಗಳು, ಬೃಹತ್ ಕಟ್ಟಡಗಳ ನಡುವೆ ಮತ್ತೊಂದು ಸೂರ್ಯನ ಮೆರವಣಿಗೆ ನಿಧಾನವಾಗಿ ಸಾಗುತ್ತಿತ್ತು. ಬಗೆ ಬಗೆ ಹೂವುಗಳಿಂದ ಅಲಂಕೃತವಾದ ರುದ್ರಾಕ್ಷಿ ರಥದಲ್ಲಿ ಮಂದಸ್ಮಿತರಾಗಿ ಆಸೀನರಾಗಿದ್ದ ಕಾವಿಧಾರಿ ಸೂರ್ಯನ ತೇಜಸ್ಸು ಕಂಡು ರವಿತೇಜನೇ ಬೆರಗಾಗಿದ್ದ!…

ಎಲ್ಲರೂ ದಯವಿಟ್ಟು ಪ್ರಸಾದ ಸ್ವೀಕರಿಸಿ: ಭಕ್ತರಿಗೆ ಶ್ರೀಮಠದ ಮಕ್ಕಳ ಮನವಿ
ಮೈಸೂರು

ಎಲ್ಲರೂ ದಯವಿಟ್ಟು ಪ್ರಸಾದ ಸ್ವೀಕರಿಸಿ: ಭಕ್ತರಿಗೆ ಶ್ರೀಮಠದ ಮಕ್ಕಳ ಮನವಿ

ತುಮಕೂರು: ಸಿದ್ದಗಂಗೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಹೇಗೆ ತ್ರಿವಿಧ ದಾಸೋಹಕ್ಕೆ ಹೆಸರಾಗಿದ್ದರೋ, ಅವರ ಮಠದ ಪುಟ್ಟ ವಿದ್ಯಾರ್ಥಿಗಳೂ ಅದೇ ಕಾಯಕವನ್ನು ಮುಂದುವರಿಸಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕೆ ಬಂದ ಎಲ್ಲಾ ಭಕ್ತಾದಿಗಳೂ ನಂತರ ಶ್ರೀ ಮಠದಲ್ಲಿ ಪ್ರಸಾದ ಸ್ವೀಕರಿಸಿಯೇ ತೆರಳಬೇಕು. ಆ ಮೂಲಕ ಶ್ರೀಗಳ ಮನದಾಸೆಯನ್ನು ಪೂರೈಸಬೇಕು ಎಂದು ಮಠದ ಶಿಷ್ಯರು, ಶ್ರೀಗಳ ಅನುಯಾಯಿಗಳು ಭಕ್ತಾದಿಗಳಿಗೆ ಮೈಕ್ ಮೂಲಕ ವಿನಂತಿ ಮಾಡುತ್ತಿದ್ದರು. ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನ ಪಡೆಯಲು ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು….

109ನೇ ವಯಸ್ಸಿನವರೆಗೂ ಆಸ್ಪತ್ರೆ ಕಾಣದ ಶ್ರೀಗಳು
ಮೈಸೂರು

109ನೇ ವಯಸ್ಸಿನವರೆಗೂ ಆಸ್ಪತ್ರೆ ಕಾಣದ ಶ್ರೀಗಳು

ತುಮಕೂರು: ಜನರಿಂದ ಜನರಿಗಾಗಿ ಜೋಳಿಗೆ ಹಿಡಿದ ಮಹಾ ಯೋಗಿ ನಡೆದಾಡುವ ದೇವರು ತಮ್ಮ 109ನೇ ವರ್ಷದವರೆಗೂ ಆಸ್ಪತ್ರೆಯತ್ತ ಸುಳಿದಿರಲಿಲ್ಲ. ಶತಾ ಯುಷಿಯಾದರೂ ಆರೋಗ್ಯ ಕಾಪಾಡಿಕೊಂಡಿದ್ದ ಡಾ. ಶಿವಕುಮಾರ ಸ್ವಾಮೀಜಿ, ಒಂದು ಮಾತ್ರೆಯನ್ನೂ ಸಹ ಸೇವಿಸಿರಲಿಲ್ಲ. ಮಿತ ಆಹಾರ, ಎರಡು ಸೀಳು ಸೇಬು, ಬೇವಿನ ಕಷಾಯ ಸೇರಿದಂತೆ ಮಿತ ಆಹಾರ ದೊಂದಿಗೆ ಮಕ್ಕಳೊಂದಿಗೆ ಲವಲವಿಕೆ ಯಿಂದಲೇ ಇದ್ದರು. 109ನೇ ವಯಸ್ಸಿನ ನಂತರ ವಯೋಸಹಜ ಸಣ್ಣಪುಟ್ಟ ಸಮಸ್ಯೆಗಳಿಗೆ ಮಾತ್ರೆಗಳನ್ನು ಸೇವಿಸ ಲಾರಂಭಿಸಿದರು. ಕಾಲ ಕಳೆದಂತೆ 111ನೇ ವಯಸ್ಸಿಗೆ ಶ್ರೀಗಳು ಶ್ವಾಸ…

ಶ್ರೀಗಳು ನನ್ನನ್ನು ಮಗನಂತೆ ನೋಡುತ್ತಿದ್ದರು
ಮೈಸೂರು

ಶ್ರೀಗಳು ನನ್ನನ್ನು ಮಗನಂತೆ ನೋಡುತ್ತಿದ್ದರು

ವಾರಣಾಸಿ: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಗಳು ಲಿಂಗೈಕ್ಯರಾಗಿದ್ದು ನಿಜಕ್ಕೂ ಬೇಸರದ ಸಂಗತಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ವಾರಾಣಸಿಯಲ್ಲಿ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ಧಗಂಗಾ ಶ್ರೀಗಳನ್ನು ನೆನಪಿಸಿ ಕೊಂಡರು. ಪ್ರತಿ ಬಾರಿ ತುಮಕೂರು ಸಮೀ ಪದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದಾಗ ಲೆಲ್ಲ ಶ್ರೀಗಳ ಆಶೀರ್ವಾದ ಪಡೆಯುವ ಸೌಭಾಗ್ಯ ದೊರೆತಿದೆ. ಶ್ರೀಗಳು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ಅವರು ಸಮಾಜಕ್ಕೆ, ಮಾನವ ಕಲ್ಯಾಣಕ್ಕೆ ನೀಡಿರುವ ಕೊಡುಗೆ…

ನಡೆದಾಡುವ ದೇವರಿಗೆ ಮೈಸೂರಿನಲ್ಲಿ ಭಕ್ತಿ ನಮನ
ಮೈಸೂರು

ನಡೆದಾಡುವ ದೇವರಿಗೆ ಮೈಸೂರಿನಲ್ಲಿ ಭಕ್ತಿ ನಮನ

ಮೈಸೂರು: ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ, ಅಭಿನವ ಬಸವಣ್ಣ ಎಂದೇ ಹೆಸರಾಗಿದ್ದ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅಗಲಿಕೆಗೆ ಮೈಸೂರಿನಾದ್ಯಂತ ಮಂಗಳವಾರ ನಾನಾ ಕಡೆಗಳಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆದವು. ಮೈಸೂರು ಜಿಲ್ಲಾ ಕುಂಚ ನಾಮಫಲಕ ಕಲಾವಿದರ ಸಂಘ, ಮೈಸೂರು ಕನ್ನಡ ವೇದಿಕೆ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಬಸವೇಶ್ವರ ಸೇವಾ ಸಂಘ, ಸಂತೇಪೇಟೆ ಕಾರ್ಮಿಕರ ಸಂಘ, ಬಸವ ಚಿಂತನ ಬಳಗ, ಶ್ರೀಗಳ ಭಕ್ತ ವೃಂದ ಸೇರಿದಂತೆ ನಾನಾ ಸಂಘಟನೆಗಳು ಶ್ರೀಗಳ ಭಾವಚಿತ್ರ ಪೂಜಿಸಿ,…

ಸರ್ಕಾರಿ ಕಚೇರಿಗಳ ಮೇಲೆ ಅರ್ಧ ಮಟ್ಟಕ್ಕೆ ಹಾರಿದ ರಾಷ್ಟ್ರಧ್ವಜ
ಮೈಸೂರು

ಸರ್ಕಾರಿ ಕಚೇರಿಗಳ ಮೇಲೆ ಅರ್ಧ ಮಟ್ಟಕ್ಕೆ ಹಾರಿದ ರಾಷ್ಟ್ರಧ್ವಜ

ಮೈಸೂರು: ನಡೆದಾಡುವ ದೇವರು ಡಾ.ಶಿವಕು ಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆ ಯಲ್ಲಿ ರಾಜ್ಯಾದ್ಯಂತ ಮೂರು ದಿನ ಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮಂಗಳ ವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಮಟ್ಟಕ್ಕೆ ಹಾರಿಸಿ ಸಿದ್ಧಗಂಗಾ ಶ್ರೀಗಳಿಗೆ ಗೌರವ ಸಲ್ಲಿಸಲಾಯಿತು. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ರಾಷ್ಟ್ರಧ್ವಜ ಅರ್ಧ ಮಟ್ಟಕ್ಕೆ ಇಳಿಸಿ ಗೌರವಿಸಲಾಯಿತು. ಮೈಸೂರಿನ ಹಲವು ಚಿತ್ರಮಂದಿರ ಗಳಲ್ಲಿ ಎರಡು ಪ್ರದರ್ಶನಗಳನ್ನು ರದ್ದುಪಡಿಸಲಾಗಿತ್ತು. ಶೋಕಾಚರಣೆ ನಡುವೆಯೂ ಕೆಲವು ಚಿತ್ರಮಂದಿರ ಗಳಲ್ಲಿ ಚಿತ್ರ…

ಮೂರು ದಶಕದ ಹಿಂದೆಯೇ ಸಿದ್ದಲಿಂಗ ಸ್ವಾಮೀಜಿ  ಸಿದ್ಧಗಂಗಾ ಪೀಠದ ಉತ್ತರಾಧಿಕಾರಿಯಾಗಿ ನಿಯೋಜಿತರಾಗಿದ್ದರು
ಮೈಸೂರು

ಮೂರು ದಶಕದ ಹಿಂದೆಯೇ ಸಿದ್ದಲಿಂಗ ಸ್ವಾಮೀಜಿ ಸಿದ್ಧಗಂಗಾ ಪೀಠದ ಉತ್ತರಾಧಿಕಾರಿಯಾಗಿ ನಿಯೋಜಿತರಾಗಿದ್ದರು

ತುಮಕೂರು: ತುಮಕೂರು ಸಿದ್ಧಗಂಗಾ ಮಠದ ಹಿರಿಯ ಶ್ರೀಗಳು, ನಾಡಿನ ನಡೆದಾಡುವ ದೇವರು ಲಿಂಗೈಕ್ಯರಾಗುವ ಮುನ್ನವೇ ಶ್ರೀ ಮಠದ ಉತ್ತರಾಧಿಕಾರಿಯನ್ನಾಗಿ ಶ್ರೀ ಸಿದ್ದಲಿಂಗ ಸ್ವಾಮೀಜಿಗಳನ್ನು ನಿಯೋಜಿಸಿದ್ದರು ಎಂಬ ಸತ್ಯ ಇದೀಗ ಬಹಿರಂಗಗೊಂಡಿದೆ. ಡಾ.ಶಿವಕುಮಾರಸ್ವಾಮೀಜಿಯವರು ತಮ್ಮ 81ನೇ ವಯಸ್ಸಿನಲ್ಲೇ ತಮ್ಮ ಉತ್ತರಾಧಿಕಾರಿಯ ನ್ನಾಗಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ನಿಯೋಜಿಸಿದ್ದರಾದರೂ ಶ್ರೀ ಸಿದ್ದಲಿಂಗಸ್ವಾಮೀಜಿ ಸಹ ಇದನ್ನು ಎಲ್ಲೂ ಬಹಿರಂಗಪಡಿಸದೆ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಬೆನ್ನೆಲು ಬಾಗಿ ನಿಂತು ತಮ್ಮ ಸ್ವಾಮಿನಿಷ್ಠೆಯನ್ನು ತೋರಿ, ಹಿರಿಯ ಶ್ರೀಗಳ ಅನುಮತಿ ಇಲ್ಲದೆ ಯಾವ ತೀರ್ಮಾ…

ಉತ್ತರಾಧಿಕಾರಿ ಸಿದ್ದಲಿಂಗ ಸ್ವಾಮೀಜಿ ಅವರಿಗೆ ನಡೆದಾಡುವ ದೇವರ ಸಂದೇಶವಿದು…
ಮೈಸೂರು

ಉತ್ತರಾಧಿಕಾರಿ ಸಿದ್ದಲಿಂಗ ಸ್ವಾಮೀಜಿ ಅವರಿಗೆ ನಡೆದಾಡುವ ದೇವರ ಸಂದೇಶವಿದು…

ತುಮಕೂರು: ಕಳೆದ 2011 ರಲ್ಲಿ ಕಿರಿಯ ಶ್ರಿಗಳಿಗೆ ಶ್ರೀ ಸಿದ್ಧಗಂಗಾ ಮಠದ ಅಧಿಕಾರ ಹಸ್ತಾಂ ತರಿಸಿದ ವೇಳೆ ಶ್ರೀ ಶಿವಕುಮಾರ ಸ್ವಾಮೀಜಿ ಅವರು ನೀಡಿದ ಆಶೀರ್ವಚನದ ಪೂರ್ಣ ಪಾಠವಿದು: “ಭಗವಂತನ ಸೃಷ್ಟಿಯಲ್ಲಿ ಮನುಷ್ಯನಿಗೆ ಶ್ರೇಷ್ಠವಾದ ಸ್ಥಾನವಿದೆ. ಅದನ್ನು ಅರಿತು ನಡೆದು ಕೊಂಡರೆ ಸಮಾಜ ದಲ್ಲಿ ಶಾಂತಿ ನೆಲೆಸುತ್ತದೆ. ಮನುಷ್ಯತ್ವ ಬೆಳೆಯಲು ಧರ್ಮ ಪೀಠಗಳು ನೆರವಾಗಬೇಕು. ಭಕ್ತರಲ್ಲಿ ಸಮಾಜಮುಖಿ ಭಾವನೆ ಬೆಳೆಸುವುದು ಧರ್ಮಪೀಠಗಳ ಕರ್ತವ್ಯ. ಭ್ರಷ್ಟಾಚಾರದ ಪಿಡುಗು ತೊಲಗಿಸಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ವಯಸ್ಸಿನಿಂದಲೇ…

1 2 3 448