ಮೈಸೂರು ಪರಿಸರ ಸಂರಕ್ಷಣೆಗೆ ಸರ್ವರೂ ಸಾಥ್ ನೀಡಿ
ಮೈಸೂರು

ಮೈಸೂರು ಪರಿಸರ ಸಂರಕ್ಷಣೆಗೆ ಸರ್ವರೂ ಸಾಥ್ ನೀಡಿ

June 3, 2023

ಮೈಸೂರು, ಜೂ.1(ಎಸ್‍ಬಿಡಿ)- ಪರಿ ಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈ ಜೋ ಡಿಸಬೇಕೆಂದು ಮೈಸೂರಿನ ಮೇಯರ್ ಶಿವಕುಮಾರ್ ಮನವಿ ಮಾಡಿದರು.

ಮೈಸೂರು ಮಹಾನಗರಪಾಲಿಕೆ, ಅಖಿಲ ಭಾರತೀಯ ಗ್ರಾಹಕ ಪಂಚಾ ಯತ್‍ನ ಮೈಸೂರು ಘಟಕ, ವಿದ್ಯಾರಣ್ಯ ಟ್ರಸ್ಟ್ ಮತ್ತು ಕೆಎಂಪಿಕೆ ಚಾರಿಟೆಬಲ್ ಟ್ರಸ್ಟ್ ಸಹಯೋಗದೊಂದಿಗೆ ವಿದ್ಯಾ ರಣ್ಯಪುರಂನಲ್ಲಿ ಗುರುವಾರ ಆಯೋ ಜಿಸಿದ್ದ `ನನ್ನ ಜೀವನ, ನನ್ನ ಸ್ವಚ್ಛ ನಗರ’ ಅಭಿಯಾನದ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್-2.0 ಯೋಜನೆಯಡಿ ಪರಿಸರ ಸಂರಕ್ಷಣೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸೇರಿ ಪುನರ್ಬಳಕೆ ಮಾಡಲಾಗದ ಉತ್ಪನ್ನಗಳ ತಯಾರಿಕೆಗೆ ಕಡಿವಾಣ ಹಾಕ ಲಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಸಾರ್ವ ಜನಿಕರ ಸಹಕಾರ ಬಹಳ ಮುಖ್ಯ. ಇದ ರಲ್ಲಿ ಎಲ್ಲರನ್ನೂ ಒಳಗೊಳ್ಳಿಸಿಕೊಳ್ಳುವ ಉದ್ದೇಶದಿಂದ `ನನ್ನ ಜೀವನ, ನನ್ನ ಸ್ವಚ್ಛ ನಗರ’ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು.

ಹಳೆಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರವನ್ನು ಹಾಳು ಮಾಡ ಬಾರದು. ಹಳೆಯ ಬಟ್ಟೆ, ಪುಸ್ತಕ, ದಿನ ಪತ್ರಿಕೆ, ಮಕ್ಕಳ ಆಟಿಕೆಗಳು, ಕ್ಯಾರಿ ಬ್ಯಾಗ್ ಗಳು ಸೇರಿದಂತೆ ಮತ್ತೆ ಬಳಸಬಹುದಾದ ವಸ್ತುಗಳನ್ನು ನಿಗದಿತ ಕೇಂದ್ರಗಳಿಗೆ ನೀಡುವ ಮೂಲಕ. ಸುಸ್ಥಿತಿಯಲ್ಲಿರುವ ಆಟಿಕೆಗಳನ್ನು ಪುನರ್ವಸತಿ ಕೇಂದ್ರಗಳಿಗೆ, ದಿನಪತ್ರಿಕೆಗಳನ್ನು ಮರು ಬಳಕೆ ಮಾಡುವ ಸಂಸ್ಥೆಗಳಿಗೆ, ಪುಸ್ತಕಗಳನ್ನು ಗ್ರಂಥಾ ಲಯಗಳಿಗೆ ಹೀಗೆ ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಲಾಗುವುದು. ಇದರಿಂದ ತ್ಯಾಜ್ಯದ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ವಸ್ತುಗಳ ಪುನರ್ಬಳಕೆ ಆದಂ ತಾಗುತ್ತದೆ ಎಂದು ಹೇಳಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಮನೆಗಳಲ್ಲಿ ಸಾಕಷ್ಟು ಹಳೆಯ ವಸ್ತುಗಳನ್ನು ಇಟ್ಟುಕೊಂಡಿ ರುತ್ತೇವೆ. ಯಾವುದನ್ನೂ ಬಳಸಲಾಗದೆ ಒಂದು ದಿನ ಹೊರಗೆ ಬಿಸಾಡುತ್ತೇವೆ. ಅದರಿಂದ ಪರಿಸರ ಹಾಳಾಗುತ್ತದೆ. ಇದರ ಬದಲು ಪುಸ್ತಕ, ಬಟ್ಟೆ, ಆಟಿಕೆ, ದಿನಪತ್ರಿಕೆ ಇನ್ನಿತರ ವಸ್ತುಗಳನ್ನು ನಗರಪಾಲಿಕೆಯ ಮರು ಬಳಕೆ ಕೇಂದ್ರಗಳಿಗೆ ನೀಡಿದರೆ ಸಮರ್ಪಕ ರೀತಿಯಲ್ಲಿ ಪುನರ್ಬಳಕೆ ಮಾಡ ಲಾಗುತ್ತದೆ. ಹಾಗಾಗಿ ಸಾರ್ವಜನಿಕರು `ನಮ್ಮ ಜೀವನ, ನಮ್ಮ ಸ್ವಚ್ಛ ನಗರ’ ಅಭಿಯಾನದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಶಿವಪ್ರಸಾದ್, ಪರಿಸರ ಇಂಜಿನಿ ಯರ್ ಜ್ಯೋತಿ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಜಿ.ವಿ.ರವಿಶಂಕರ್, ಕೆಎಂಪಿಕೆ ಚಾರಿಟೆಬಲ್ ಟ್ರಸ್ಟ್‍ನ ವಿಕ್ರಮ್ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಬೈರತಿ ಲಿಂಗರಾಜು, ಸುರೇಶ್, ಪಂಚಾಕ್ಷರಿ ಮತ್ತಿತರರು ಉಪಸ್ಥಿತರಿದ್ದರು.

ಜಾಗೃತಿ ಜಾಥಾ: ವಿದ್ಯಾರಣ್ಯಪುರಂನ ವಿದ್ಯಾರಣ್ಯ ಕೋಚಿಂಗ್ ಸೆಂಟರ್ ಬಳಿ ಯಿಂದ ಚಾಮುಂಡಿಪುರಂ ವೃತ್ತದವರೆಗೆ `ನನ್ನ ಜೀವನ ನನ್ನ ಸ್ವಚ್ಛ ನಗರ’ ಜಾಗೃತಿ ಜಾಥಾ ನಡೆಯಿತು. ಹಲವಾರು ವಿದ್ಯಾರ್ಥಿಗಳು ಘೋಷಣಾ ಫಲಕ ಹಿಡಿದು ಜಾಥಾದಲ್ಲಿ ಹೆಜ್ಜೆ ಹಾಕಿ, ಪರಿ ಸರ ಸಂರಕ್ಷಣೆಯ ಮಹತ್ವ ಸಾರಿದರು.

Translate »