ಕೊಡಗು

ಕೊಡಗಿನಾದ್ಯಂತ ಸಿದ್ಧಗಂಗಾಶ್ರೀಗಳಿಗೆ ನುಡಿನಮನ ಸಿದ್ಧಗಂಗಾಶ್ರೀ ಕಾಯಕ ನಿಷ್ಠೆಯ ಮಹಾಯೋಗಿ
ಕೊಡಗು

ಕೊಡಗಿನಾದ್ಯಂತ ಸಿದ್ಧಗಂಗಾಶ್ರೀಗಳಿಗೆ ನುಡಿನಮನ ಸಿದ್ಧಗಂಗಾಶ್ರೀ ಕಾಯಕ ನಿಷ್ಠೆಯ ಮಹಾಯೋಗಿ

ಮಡಿಕೇರಿ: ಶ್ರೀ ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹದ ಕಾಯಕ ನಿಷ್ಠೆಯ ಮೂಲಕ ತಮ್ಮ ಜೀವಿತಾವಧಿಯಲ್ಲಿ ಇಡೀ ಜನಸಮು ದಾಯವನ್ನು ಪ್ರಭಾವಿಸಿದ ಸಿದ್ಧಿ ಪುರುಷ ರಾಗಿದ್ದಾರೆ ಎಂದು ಕಾಯಕ ಯೋಗಿ ಬಗ್ಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಕೊಡಗು ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ ಮತ್ತು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾ ವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ನಗರದ ಪತ್ರಿಕಾ ಭವನದ ಸಭಾಂಗಣ ದಲ್ಲಿ ನಡೆದ `ಶ್ರದ್ಧಾಂಜಲಿ’ ಸಭೆಯಲ್ಲಿ ನಡೆದಾಡುವ ದೇವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ…

ಸೋಮವಾರಪೇಟೆಯಲ್ಲಿ ವಿವಿಧ ಧರ್ಮಗುರುಗಳ ನುಡಿನಮನ
ಕೊಡಗು

ಸೋಮವಾರಪೇಟೆಯಲ್ಲಿ ವಿವಿಧ ಧರ್ಮಗುರುಗಳ ನುಡಿನಮನ

ಸೋಮವಾರಪೇಟೆ: ಮಹಾ ಯೋಗಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗೆ ಪಟ್ಟಣದಲ್ಲಿ ವಿವಿಧ ಧರ್ಮ ಗುರುಗಳ ಸಮ್ಮುಖದಲ್ಲಿ ಜೇಸಿ ವೇದಿಕೆ ಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಬೆಳಿಗ್ಗೆಯಿಂದಲೇ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಮಹಿಳೆಯರಿಂದ ಭಜನೆ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿತ್ತು. ಪಟ್ಟಣದ ವರ್ತಕರು ಸಂಜೆ 3ಗಂಟೆಯಿಂದ 5ಗಂಟೆ ಯವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸಲ್ಲಿಸಿದರು. ಸಂಜೆ 4 ಗಂಟೆಗೆ ಜೇಸಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಗುರು ಗಳಾದ ಅಬ್ದುಲ್ ಅಝೀಜ್, ಟೆನ್ನಿ…

ಹೆಬ್ಬಾಲೆಯಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ
ಕೊಡಗು

ಹೆಬ್ಬಾಲೆಯಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ

ಕುಶಾಲನಗರ: ಹೆಬ್ಬಾಲೆ ಶ್ರೀ ಬಸವೇಶ್ವರ ದೇವಾಲಯ ಸಮಿತಿ ಮತ್ತು ಮರೂರು ಶ್ರೀಗಳ ಭಕ್ತ ಮಂಡಳಿ ಹಾಗೂ ಗ್ರಾಮಸ್ಥರ ವತಿಯಿಂದ ತುಮಕೂರು ಸಿದ್ಧ ಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು ಶಿವೈಕ್ಯ ರಾದ ಹಿನ್ನೆಲೆಯಲ್ಲಿ ಬೆಳ್ಳಿರಥದಲ್ಲಿ ಶ್ರೀಗಳ ಭಾವಚಿತ್ರವನ್ನು ಮೆರವಣಿಗೆ ನಡೆಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ವಿವಿಧ ಪುಷ್ಪಗಳಿಂದ ಅಲಂಕಾರ ಗೊಂಡಿದ್ದ ಏಳು ಕುದುರೆಗಳನ್ನು ಹೊಂದಿ ರುವ ಬೆಳ್ಳಿರಥದಲ್ಲಿ ಶ್ರೀಗಳ ಭಾವಚಿತ್ರವನ್ನು ಇರಿಸಿ ಪುಷ್ಪ್ಪಾಹಾರ ಹಾಕಿ ಪೂಜೆ ಸಲ್ಲಿ ಸುವ ಮೂಲಕ ಗ್ರಾಮದ ಬಸ್ ನಿಲ್ದಾಣ ದಿಂದ ಮೆರವಣಿಗೆ…

ಡಾ.ಶಿವಕುಮಾರಸ್ವಾಮೀಜಿ ಜೀವನಾದರ್ಶ ಮೈಗೂಡಿಸಿಕೊಳ್ಳಲು ಕರೆ
ಕೊಡಗು

ಡಾ.ಶಿವಕುಮಾರಸ್ವಾಮೀಜಿ ಜೀವನಾದರ್ಶ ಮೈಗೂಡಿಸಿಕೊಳ್ಳಲು ಕರೆ

ಸಿದ್ದಾಪುರ: ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಗ್ರಾಮ ಪಂಚಾ ಯಿತಿ ಅಧ್ಯಕ್ಷ ಎಂ.ಕೆ ಮಣಿ ಕರೆ ನೀಡಿದರು. ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿ, ಸಾಮಾಜಿಕ ಬದಲಾವಣೆಗಾಗಿ ಅವಿ ರತವಾಗಿ ಶ್ರಮಿಸಿದ್ದ ಮಹಾನ್ ಚೇತನ ಇಂದು ನಮ್ಮನ್ನೆಲ್ಲಾ ಅಗಲಿರುವುದು ವಿಷಯವಾಗಿದೆ. ಬಡ ವಿದ್ಯಾರ್ಥಿಗಳಗೆ ಅನ್ನ ದಾಸೋಹದೊಂದಿಗೆ ಅಕ್ಷರ ಜ್ಞಾನವನ್ನು ನೀಡಿದಂತಹ ಶ್ರೀಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದೇ ಆದಲ್ಲಿ ಅದುವೆ ನಾವು…

ದ್ವಿತೀಯ ಸ್ಥಾನ ಪಡೆದ ಮಹಿಳಾ ವೇದಿಕೆ
ಕೊಡಗು

ದ್ವಿತೀಯ ಸ್ಥಾನ ಪಡೆದ ಮಹಿಳಾ ವೇದಿಕೆ

ಮಡಿಕೇರಿ: ಮಂಡ್ಯದ ನಾಗಮಂಗಲದಲ್ಲಿನ ಶ್ರೀ ಆದಿಚುಂಚನಗಿರಿ ಮಠ ದಲ್ಲಿ ಆಯೋಜಿತ ಚುಂಚಾದ್ರಿ ಮಹಿಳಾ ಸಮಾವೇಶದಲ್ಲಿ ಸೋಮವಾರಪೇಟೆ ಮಹಿಳಾ ಪ್ರಗತಿ ಪರ ಮಹಿಳಾ ವೇದಿಕೆ ತಂಡವು ದ್ವಿತೀಯ ಸ್ಥಾನಗಳಿಸಿದೆ. ಪ್ರಗತಿಪರ ಮಹಿಳಾ ವೇದಿಕೆಯ ತಂಡದಲ್ಲಿ ಅಶ್ವಿನಿ ಕೃಷ್ಣಕಾಂತ್, ಸಂಧ್ಯಾಕೃಷ್ಣಪ್ಪ, ರೂಪ, ತೀರ್ಥ, ಭವ್ಯ, ಸೌಮ್ಯ ಮತ್ತು ವೀಣಾ ಪಾಲ್ಗೊಂಡಿದ್ದರು. ಈ ತಂಡದ ಜಾನಪದ ನೃತ್ಯ ತೀರ್ಪುಗಾರರೊಂದಿಗೆ ಪ್ರೇಕ್ಷಕರ ಅಪಾರ ಮೆಚ್ಚುಗೆಗೂ ಕಾರಣವಾಗಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಲು ಕಾರಣವಾಯಿತು.

ಕೊಡಗು ಜಿಲ್ಲೆಯಲ್ಲಿ ಉದ್ದೇಶಿತ ಹೆದ್ದಾರಿ, ರೈಲ್ವೆ ಯೋಜನೆ ಯಥಾಸ್ಥಿತಿ ಕಾಪಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಕೊಡಗು

ಕೊಡಗು ಜಿಲ್ಲೆಯಲ್ಲಿ ಉದ್ದೇಶಿತ ಹೆದ್ದಾರಿ, ರೈಲ್ವೆ ಯೋಜನೆ ಯಥಾಸ್ಥಿತಿ ಕಾಪಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಈ ಯೋಜನೆಯಿಂದ ಜಿಲ್ಲೆಯಲ್ಲಿ ಅಪಾರ ಹಾನಿ; ಐಐಎಸ್‍ಸಿ ವರದಿ ಎಚ್ಚರಿಕೆ ಮೈಸೂರು: ಕೊಡಗಿನ ಮೂಲಕ ಹಾದು ಹೋಗುವ ಉದ್ದೇಶಿತ ರೈಲ್ವೆ ಮಾರ್ಗ ಮತ್ತು ಹೆದ್ದಾರಿ ಯೋಜನೆಯನ್ನು ಯಥಾಸ್ಥಿತಿ ಕಾಪಾಡುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂ ಟರ್‍ಗೆ ನಿರ್ದೇಶನ ನೀಡಿದೆ. ಈ ಯೋಜನೆಯಿಂದ ಕೊಡಗಿನ ಅರಣ್ಯ ಸಂಪತ್ತು ಹಾಳಾಗುವುದಲ್ಲದೆ, ದಕ್ಷಿಣ ಭಾರತದ ಜೀವನಾಡಿ ಕಾವೇರಿ ನದಿಗೆ ಹಾನಿಯಾಗುವುದ ರಿಂದ, ಉದ್ದೇಶಿತ ರೈಲ್ವೆ ಮತ್ತು ಹೆದ್ದಾರಿ ಯೋಜನೆ ವಿರುದ್ಧ ಕೂರ್ಗ್ ವೈಲ್ಡ್‍ಲೈಫ್…

ಸಿದ್ಧಗಂಗಾ ಶ್ರೀಗಳಿಗೆ ಕೊಡಗಿನಲ್ಲಿ ಕಂಬನಿ
ಕೊಡಗು

ಸಿದ್ಧಗಂಗಾ ಶ್ರೀಗಳಿಗೆ ಕೊಡಗಿನಲ್ಲಿ ಕಂಬನಿ

ಮಡಿಕೇರಿ: ನಡೆದಾಡುವ ದೇವರಾಗಿದ್ದ ಶ್ರೀಶಿವಕುಮಾರ ಸ್ವಾಮೀಜಿಗಳ ಅಗಲಿಕೆಗೆ ಕೊಡಗು ಜಿಲ್ಲೆ ಕಂಬನಿ ಮಿಡಿದಿದೆ. ಶ್ರೀಗಳು ಈ ಹಿಂದೆ ಕೊಡಗಿಗೂ ಭೇಟಿ ನೀಡಿದ್ದರು. ತಮ್ಮ 101 ನೇ ವಯಸ್ಸಿನಲ್ಲಿ ಶನಿವಾರ ಸಂತೆಯ ಗುಡುಗಳಲೆಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮಕ್ಕೆ ಬಂದಿದ್ದ ಪರಮಪೂಜ್ಯರು ಅರಮೇರಿ ಮಠಕ್ಕೂ ಭೇಟಿ ನೀಡಿದ್ದರು. ವಿಶ್ವಮಾನವ ಸಂದೇಶ ವನ್ನು ಜಗತ್ತಿಗೇ ಸಾರಿದ ಸಂತಶ್ರೇಷ್ಠರು ಶ್ರೀಗಳಾಗಿದ್ದರು ಎಂದು ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಸ್ಮರಿಸಿದರು. ಶ್ರೀಶಿವಕುಮಾರ ಸ್ವಾಮೀಜಿಗಳು ವಿಶ್ವಮಾನವ ಸಂದೇಶವನ್ನು ವಿಶ್ವಕ್ಕೇ ಸಾರಿದ ಸಂತಶ್ರೇಷ್ಠರಾಗಿದ್ದರು. ಸಾಮಾಜಿಕ,…

ಚೆಂಬೆಬೆಳ್ಳೂರು ಒಂಟಿಯಂಗಡಿ ರಸ್ತೆ ಕಾಮಗಾರಿ ಪೂರ್ಣ
ಕೊಡಗು

ಚೆಂಬೆಬೆಳ್ಳೂರು ಒಂಟಿಯಂಗಡಿ ರಸ್ತೆ ಕಾಮಗಾರಿ ಪೂರ್ಣ

ವೀರಾಜಪೇಟೆ:ವಿರಾಜಪೇಟೆ ಸಮೀಪದ ಚೆಂಬೆಬೆಳ್ಳೂರು ಗ್ರಾಮದಿಂದ ಒಂಟಿಯಂಗಡಿಗೆ ಹೊಗುವ ರಸ್ತೆ 2.5 ಕೋಟಿ ರೂ. ಅನುದಾನದಲ್ಲಿ ಅಗಲೀಕರಣ ಮತ್ತು ಡಾಂಬರಿಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ಶಶಿ ಸುಬ್ರಮಣಿ ಅವರು ಕಾಮಗಾರಿ ವೀಕ್ಷಣೆ ನಡೆಸಿದರು. ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಈ ರಸ್ತೆ ಬಹಳ ದುಸ್ಥಿತಿಯಲ್ಲಿತ್ತು. ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದ ಈ ರಸ್ತೆ ಕಾಮಗಾರಿ ಉತ್ತಮ ರೀತಿ ನಡೆದಿದೆ ಎಂದರು. ಈ ಸಂದರ್ಭ ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ…

ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಆಗ್ರಹ
ಕೊಡಗು

ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಆಗ್ರಹ

ಕುಶಾಲನಗರ: ತುಮಕೂರು ಸಿದ್ಧಗಂಗಾ ಮಠದ ನಡೆದಾಡುವ ದೇವರು ಎಂದೇ ಖ್ಯಾತಿ ಗಳಿಸಿರುವ ಶ್ರೀಶಿವಕುಮಾರ್ ಸ್ವಾಮೀಜಿಗಳವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಆಗ್ರಹಿಸಿದರು. ಸಮೀಪದ ಶಿರಂಗಾಲ ಗ್ರಾಮದಲ್ಲಿ ಭಾನು ವಾರ ಏರ್ಪಡಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಹಾಗೂ ಗುರುವಂದನಾ ಮತ್ತು ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಕಂಪ್ಯೂಟರ್ ಶಿಕ್ಷಣವನ್ನು ಕಲಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಸರ್ಕಾರಿ ಶಾಲಾ…

ಕಾಲೇಜು ಆವರಣದಲ್ಲಿ ಶಾರದಾ ಪ್ರತಿಮೆ ಪ್ರತಿಷ್ಠಾಪನೆ
ಕೊಡಗು

ಕಾಲೇಜು ಆವರಣದಲ್ಲಿ ಶಾರದಾ ಪ್ರತಿಮೆ ಪ್ರತಿಷ್ಠಾಪನೆ

ಕುಶಾಲನಗರ: ಸಮೀಪದ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳಿಂದ ನಿರ್ಮಾಣ ಮಾಡಿರುವ ಶಾರದಾ ಮಂದಿರದಲ್ಲಿ ಭಾನುವಾರ ಶ್ರೀ ಶಾರದಾ ಮಾತೆಯ ಪ್ರತಿಮೆಯನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಪ್ರತಿಷ್ಠಾಪನೆ ನೆರವೇರಿಸಿದರು. ಕಾಲೇಜು 25 ವರ್ಷಕ್ಕೆ ಕಾಲಿಟ್ಟಿರುವ ಸವಿನೆನಪಿಗಾಗಿ ಶಾಲಾಭಿವೃದ್ಧಿ ಸಮಿತಿ, ಮಂಟಿಗಮ್ಮ ದೇವತಾ ಸಮಿತಿ, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮಸ್ಥರ ಸಹಕಾರದಿಂದ ರೂ.16 ಲಕ್ಷ ವೆಚ್ಚದಲ್ಲಿ ಶಾರದಾ ಮಂದಿರ, ಕ್ರೀಡಾ ಗ್ಯಾಲರಿ ಹಾಗೂ ಪ್ರವೇಶ ದ್ವಾರವನ್ನು…

1 2 3 112