ಮಡಿಕೇರಿ, ಅ.18- ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿಯ ಶ್ರೀ ಕಾವೇರಿ ಭಕ್ತ ಮಂಡಳಿಯಿಂದ 68ನೇ ವರ್ಷದ ಕಾವೇರಿ ತೀರ್ಥ ವಿತರಣಾ ರಥಯಾತ್ರೆ ಮಂಗಳವಾರ ನಗರದಲ್ಲಿ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಶ್ರೀ ಕಾವೇರಿ ಭಕ್ತಮಂಡಳಿ ವರ್ಷಂಪ್ರತಿ ತಲಕಾವೇರಿಯ ತುಲಾ ಸಂಕ್ರಮಣದ ತೀರ್ಥೋದ್ಭವದ ಬಳಿಕ, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತೀರ್ಥ ವಿತರಣಾ ರಥಯಾತ್ರೆಯನ್ನು ನಡೆಸಿ ಕೊಂಡು ಬರುತ್ತಿದೆ. ಈ ಬಾರಿ ಕಾವೇರಿಯ ಅತ್ಯಾಕರ್ಷಕ ಮಂಟಪ ದಲ್ಲಿ ಕಾವೇರಿ ತೀರ್ಥ ಪ್ರಸಾದವÀನ್ನು ನಗರದ ವಿವಿಧ ಬಡಾವಣೆಗಳಿಗೆ ಮೆರವಣಿಗೆಯ ಮೂಲಕ…
ತಲಕಾವೇರಿಯಲ್ಲಿ ತೀರ್ಥೋದ್ಭವ
October 18, 2022ಮಡಿಕೇರಿ,ಅ.17- ತಣ್ಣನೆ ಧರೆಗಿಳಿಯು ತ್ತಿದ್ದ ದಟ್ಟ ಮಂಜಿನೊಂದಿಗೆ ಪುಷ್ಪವೃಷ್ಟಿ ಗರೆಯುವಂತೆ ತೋರುತ್ತಿದ್ದ ಹನಿಮಳೆ, ವೇದ ಮಂತ್ರ ಘೋಷಗಳ ಅನುರಣನದ ನಡುವೆ ಬ್ರಹ್ಮಗಿರಿಯ ತಪ್ಪಲಿನ ತಲಕಾವೇ ರಿಯ ಪವಿತ್ರ ಬ್ರಹ್ಮಕುಂಡಿಕೆಯಿಂದ ಸೋಮವಾರ ರಾತ್ರಿ ಮೇಷ ಲಗ್ನದ ಶುಭ ಮುಹೂರ್ತದಲ್ಲಿ 7 ಗಂಟೆ 22 ನಿಮಿ ಷಕ್ಕೆ ಮಾತೆ ಕಾವೇರಿ ತೀರ್ಥರೂಪಿಣಿ ಯಾಗಿ ತನ್ನ ನಂಬಿದ ಭಕ್ತ ಜನಸಾಗರಕ್ಕೆ ದರ್ಶನ ನೀಡಿದಳು. ಸಹಸ್ರಾರು ಭಕ್ತಾದಿಗಳ ‘ಜೈ ಜೈ ಮಾತಾ ಕಾವೇರಿ ಮಾತಾ’ ಉದ್ಘೋಷಗಳ ನಡುವೆ ಪ್ರಧಾನ ಅರ್ಚಕರುಗಳಾದ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ,…
ತಲಕಾವೇರಿ ತೀರ್ಥೋದ್ಭವ ಸಿದ್ಧತೆ: ಉಸ್ತುವಾರಿ ಸಚಿವರ ಸಭೆ
October 11, 2022ಮಡಿಕೇರಿ, ಅ.10- ನಾಡಿನ ಜೀವನದಿ, ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಜರುಗುವ ತುಲಾಸಂಕ್ರಮಣ ತೀರ್ಥೋದ್ಭವ ಸಿದ್ಧತೆ ಸಂಬಂಧ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ನಗರದ ಜಿಪಂ ಸಿಇಒ ಅವರ ಕಚೇರಿ ಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆದ ಸಭೆಯಲ್ಲಿ ಮಾಹಿತಿ ಪಡೆದ ಸಚಿವರು ಕೋವಿಡ್-19 ಕಡಿಮೆಯಾಗಿರುವ ಹಿನ್ನೆಲೆ ಈ ಬಾರಿ ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು. ಸಂಜೆ ವೇಳೆಯಲ್ಲಿ ತೀರ್ಥೋದ್ಭವ ಸಂಭವಿ ಸುವುದರಿಂದ ಬೆಳಕಿನ ವ್ಯವಸ್ಥೆ, ಸುಗಮ ಸಾರಿಗೆ ಸಂಚಾರ…
ಜಿಲ್ಲೆಗೆ ರೈಲು ಮಾರ್ಗ ಬೇಕು-ಬೇಡ ಎನ್ನುವ ಚರ್ಚೆಯ ನಡುವೆಯೇ ನೈಋತ್ಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್‍ಗೆ ಬೀಗ
October 10, 2022ಮಡಿಕೇರಿ,ಅ.9- ಕೊಡಗು ಜಿಲ್ಲೆಗೆ ರೈಲು ಮಾರ್ಗ `ಬೇಕು-ಬೇಡ’ ಎನ್ನುವ ಕುರಿತು ಬಿಸಿಬಿಸಿ ಚರ್ಚೆಗಳು ಇಂದಿಗೂ ನಡೆಯುತ್ತಿವೆ. ಈ ನಡುವೆಯೇ ರಾಜ್ಯದ `ಹಳಿಗಳೇ ಇಲ್ಲದ ಜಿಲ್ಲೆ’ ಕೊಡಗಿನಲ್ಲಿದ್ದ ಏಕೈಕ `ನೈಋತ್ಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್’ ಅನ್ನು ಯಾವ ಸದ್ದಿಲ್ಲದೆ ಮುಚ್ಚಲಾಗಿದೆ. ಕಳೆದ ಒಂದೂವರೆ ದಶಕದ ಹಿಂದೆ ಮಡಿಕೇರಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ನಗರಸಭೆ ಕಟ್ಟಡದ ಎರಡನೇ ಮಹಡಿಯಲ್ಲಿ `ನೈಋತ್ಯ ರೈಲ್ವೆ ಕಂಪ್ಯೂಟರ್ ಟಿಕೆಟ್ ಬುಕ್ಕಿಂಗ್ ಸೆಂಟರ್’ ಅನ್ನು ಸಾರ್ವಜನಿಕರ ಉಪಯೋಗ ಕ್ಕಾಗಿ ತೆರೆಯಲಾಗಿತ್ತು….
ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಕೊಡಗು ವಿವಿ ಕೇಂದ್ರ ಕಚೇರಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಕಾರಾತ್ಮಕ ಸ್ಪಂದನೆ
October 2, 2022ಮಡಿಕೇರಿ, ಅ.1- ಕುಶಾಲನಗರದ ಚಿಕ್ಕ ಅಳುವಾರದಲ್ಲಿ ಪ್ರಾರಂಭವಾಗಲಿರುವ ಕೊಡಗು ವಿಶ್ವವಿದ್ಯಾನಿಲಯದ ಕೇಂದ್ರ ಕಚೇರಿಯನ್ನು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ತೆರೆಯುವ ಬೇಡಿಕೆಗೆ ಸಕಾರಾ ತ್ಮಕವಾಗಿ ಸ್ಪಂದಿಸುವುದಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರ ಹ್ಮಣ್ಯ ಯಡಪಡಿತ್ತಾಯ ಭರವಸೆ ನೀಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಕೊಡವ ಸಾಂಸ್ಕøತಿಕ ಅಧ್ಯಯನ ಪೀಠ ಪ್ರಸಾರಾಂಗ ಮತ್ತು ಕೊಡವ ಮಕ್ಕಡ ಕೂಟದ ಜಂಟಿ ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಪಟ್ಟೋಲೆ ಪಳಮೆ (ಕೊಡವ-ಕನ್ನಡ- ಇಂಗ್ಲೀಷ್ ಆವೃತ್ತಿ) ಕೃತಿ ಬಿಡುಗಡೆ ಕಾರ್ಯ ಕ್ರಮದ ಅಧ್ಯಕ್ಷತೆ…
ಅಂತಾರಾಷ್ಟ್ರೀಯ ಕಾಫಿ ದಿನ ಆಚರಣೆ
October 2, 2022ಮಡಿಕೇರಿ,ಅ.1- ಕೊಡಗು ಮಹಿಳಾ ಕಾಫಿ ಜಾಗೃತಿ ವೇದಿಕೆ ವತಿಯಿಂದ ಅಂತಾ ರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಲಾಯಿತು. ಕಾರಗುಂದ ಗ್ರಾಮದ ಕುಮಾರೀಸ್ ಕಿಚನ್ ಸಭಾಂಗಣದಲ್ಲಿ ನಡೆದ ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮವನ್ನು ಕಾಫಿ ಬೆಳೆಗಾರ, ಉದ್ಯಮಿ ತೇಲಪಂಡ ಪ್ರದೀಪ್ ಪೂವಯ್ಯ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ತೇಲಪಂಡ ಪ್ರದೀಪ್ ಪೂವಯ್ಯ, ಮಾನವನ ದೈಹಿಕ ಆರೋಗ್ಯ ಕಾಪಾಡಲು ನಿಗದಿತ ಪ್ರಮಾಣದ ಕಾಫಿ ಸೇವನೆ ಅತ್ಯಗತ್ಯವಾಗಿದೆ. ಯುರೋಪಿಯನ್ ದೇಶಗಳಲ್ಲಿ ಕಾಫಿ ಸೇವಿಸುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅವರು…
ಮಡಿಕೇರಿಯಲ್ಲಿ ಭಾರೀ ಮಳೆ
September 2, 2022ಮಡಿಕೇರಿ,ಸೆ.1- ಗುರುವಾರ ಸಂಜೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಏಕಾಏಕಿ ಭಾರೀ ಮಳೆ ಸುರಿದಿದ್ದು, ಅವಾಂತರಗಳನ್ನು ಸೃಷ್ಟಿಸಿದೆ. ವರುಣನ ರೌದ್ರಾವತಾರಕ್ಕೆ ಮಡಿಕೇರಿ ನಗರ ಬೆಚ್ಚಿ ಬಿದ್ದಿದ್ದು, ಹಲವು ಕಡೆಗಳಲ್ಲಿ ಚರಂಡಿ ಹಾಗೂ ರಾಜಕಾಲುವೆಗಳ ನೀರು ಉಕ್ಕಿ ಹರಿದ ಪರಿಣಾಮ ಜನ ವಸತಿ ಪ್ರದೇಶಗಳನ್ನು ಜಲಾವೃತಗೊಳಿಸಿದೆ. ನಗರದ ಕೈಗಾರಿಕಾ ಬಡಾವಣೆ, ಓಂಕಾ ರೇಶ್ವರ ದೇವಾಲಯ ರಸ್ತೆ, ಪ್ರಕೃತಿ ಬಡಾವಣೆ, ನಿಸರ್ಗ ಬಡಾವಣೆ, ಎಲ್.ಐ.ಸಿ. ಸಮೀಪ, ಜ್ಯೂನಿಯರ್ ಕಾಲೇಜು ರಸ್ತೆ, ಪತ್ರಿಕಾ ಭವನ ರಸ್ತೆಗಳ ಚರಂಡಿಗಳಲ್ಲಿ ಏಕಾಏಕಿ ನೀರು ಉಕ್ಕಿ ಹರಿದು…
ಮಡಿಕೇರಿ ಚಲೋ, ಬಿಜೆಪಿ ಸಮಾವೇಶ ಮುಂದೂಡಲ್ಪಟ್ಟರೂ ಕೊಡಗಲ್ಲಿ ಕಟ್ಟೆಚ್ಚರ
August 25, 2022ಮಡಿಕೇರಿ,ಆ.24- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಡಿಕೇರಿ ಚಲೋ ಮತ್ತು ಪೂರ್ವ ನಿಗದಿತ ಬಿಜೆಪಿ ಜನಜಾಗೃತಿ ಸಮಾವೇಶವನ್ನು ಮುಂದೂಡಿದ್ದರೂ ಜಿಲ್ಲೆಯಲ್ಲಿ ಒಂದು ರೀತಿಯ ಬಿಗುವಿನ ವಾತಾವರಣವಿದ್ದು, ಬುಧವಾರ ಮುಂಜಾನೆಯಿಂದ 144 ಸೆಕ್ಷನ್ನಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಕೊಡಗಿನಲ್ಲಿ ಬೀಡುಬಿಟ್ಟಿದ್ದು, ವಿಪಕ್ಷ ನಾಯಕ ಸಿದ್ದ ರಾಮಯ್ಯರು ಜಿಲ್ಲೆಗೆ ಭೇಟಿ ನೀಡಿದ ವೇಳೆ ನಡೆದ ಘಟನಾವಳಿ ಗಳ ಹಿನ್ನೆಲೆಯಲ್ಲಿ ಉಂಟಾಗಿದ್ದ ಅಹಿತಕರ…
ಥೈಲ್ಯಾಂಡ್ ಮುಕ್ತ ವಿಶ್ವ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಕೊಡಗಿನ ಕರಾಟೆ ಪಟುವಿಗೆ ಕಂಚಿನ ಪದಕ
August 24, 2022ಮಡಿಕೇರಿ, ಆ.23- ಥೈಲ್ಯಾಂಡ್ ದೇಶದ ಫುಕೆಟ್ನಲ್ಲಿ ನಡೆದ ಥೈಲ್ಯಾಂಡ್ ಮುಕ್ತ ವಿಶ್ವ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಕೊಡಗು ಮೂಲದ ಬಬ್ಬೀರ ಅಂಕಿತಾ ತಿಮ್ಮಯ್ಯ ಕಂಚಿನ ಪದಕ ಜಯಿಸಿದ್ದಾರೆ. ಆ.19ರಿಂದ 23ರವರೆಗೆ ನಡೆದ ಈ ಕ್ರೀಡಾಕೂಟದಲ್ಲಿ ವಿಶ್ವದ ವಿವಿಧ ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಮಹಿಳೆಯರ ಕುಮಿಟೆ 68 ಕೆಜಿ ವಿಭಾಗ ದಲ್ಲಿ ಭಾರತವನ್ನು ಪ್ರತಿನಿಧಿಸಿದ ಅಂಕಿತಾ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಎದುರಾಳಿ ಗಳ ವಿರುದ್ಧ ಸುಲಭ ಜಯ ಸಾಧಿಸಿದರು. ಬಳಿಕ ಪದಕ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾ ಎದುರು 1-3…
ಡಿಸಿ ಅಧ್ಯಕ್ಷತೆಯಲ್ಲಿ ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ವಹಣಾ ಸಮಿತಿ ಸಭೆ
August 23, 2022ಮಡಿಕೇರಿ, ಆ.22- ಜನರಲ್ ತಿಮ್ಮಯ್ಯ ಸ್ಮಾರಕ ಭವನ ಕಾರ್ಯ ಚಟುವಟಿಕೆ ಸಂಬಂಧ `ಸ್ಮಾರಕ ಭವನ ನಿರ್ವಹಣಾ ಸಮಿತಿ’ ಸಭೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನ ಸ್ವಾಮಿ ಅವರು ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಸುತ್ತುಗೋಡೆ ನಿರ್ಮಾಣಕ್ಕೆ ಸರ್ಕಾ ರದಿಂದ 25 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ನಿರ್ಮಿತಿ ಕೇಂದ್ರದ…