ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಕೊಡಗು ವಿವಿ ಕೇಂದ್ರ ಕಚೇರಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಕಾರಾತ್ಮಕ ಸ್ಪಂದನೆ
ಕೊಡಗು

ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಕೊಡಗು ವಿವಿ ಕೇಂದ್ರ ಕಚೇರಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಕಾರಾತ್ಮಕ ಸ್ಪಂದನೆ

October 2, 2022

ಮಡಿಕೇರಿ, ಅ.1- ಕುಶಾಲನಗರದ ಚಿಕ್ಕ ಅಳುವಾರದಲ್ಲಿ ಪ್ರಾರಂಭವಾಗಲಿರುವ ಕೊಡಗು ವಿಶ್ವವಿದ್ಯಾನಿಲಯದ ಕೇಂದ್ರ ಕಚೇರಿಯನ್ನು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ತೆರೆಯುವ ಬೇಡಿಕೆಗೆ ಸಕಾರಾ ತ್ಮಕವಾಗಿ ಸ್ಪಂದಿಸುವುದಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರ ಹ್ಮಣ್ಯ ಯಡಪಡಿತ್ತಾಯ ಭರವಸೆ ನೀಡಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಕೊಡವ ಸಾಂಸ್ಕøತಿಕ ಅಧ್ಯಯನ ಪೀಠ ಪ್ರಸಾರಾಂಗ ಮತ್ತು ಕೊಡವ ಮಕ್ಕಡ ಕೂಟದ ಜಂಟಿ ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಪಟ್ಟೋಲೆ ಪಳಮೆ (ಕೊಡವ-ಕನ್ನಡ- ಇಂಗ್ಲೀಷ್ ಆವೃತ್ತಿ) ಕೃತಿ ಬಿಡುಗಡೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡಗಿನಲ್ಲಿ ಕೊಡವತನ ಉಳಿಯಬೇಕು, ಆ ನಿಟ್ಟಿನಲ್ಲಿ ಎಲ್ಲಾ ಸಹಕಾರವನ್ನು ನೀಡ ಲಾಗುವುದು. ಕೊಡಗಿನ ಶೈಕ್ಷಣಿಕ ಪ್ರಗತಿಯ ಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿದರು. ಪಟ್ಟೋಲೆ ಪಳಮೆ ಕೃತಿ ಕೊಡವರಿಗೆ ಭಗವದ್ಗೀತೆ ಇದ್ದಂತೆ. ಪ್ರಸ್ತುತ ಕನ್ನಡ, ಇಂಗ್ಲಿಷ್‍ಗೆ ತರ್ಜುಮೆ ಆಗುವ ಮೂಲಕ ಸಪ್ತಸಾಗರದಾಚೆಗೆ ಹೋಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಪಟ್ಟೋಲೆ ಪಳಮೆ ಕೃತಿಯಲ್ಲಿ ಕೊಡವರ ಪ್ರಾಚೀನ ಕಾಲದ ಪದ್ಧತಿ, ಪರಂಪರೆ, ಸಂಸ್ಕøತಿಯನ್ನು ಸಂಗ್ರಹಿಸಲಾಗಿದ್ದು, ಕಾವೇರಿ ಪುರಾಣ, ವಿವಾಹ ಪದ್ಧತಿ, ಸಾವಿನ ಪದ್ಧತಿ, ಕೊಡಗಿನ ಐತಿಹಾಸಿಕ ವಿವರ, ಕೊಡವ ಗಾದೆ, ಒಗಟು, ಮೂಢನಂಬಿಕೆ ಸೇರಿದಂತೆ ಹುಟ್ಟಿನಿಂದ ಸಾವಿನವರೆಗಿನ ಎಲ್ಲಾ ವಿವರ ಗಳನ್ನು ನೀಡಲಾಗಿದೆ. ಇದರಿಂದ ಕೊಡಗಿನ ಸಂಸ್ಕøತಿ, ಆಚಾರ-ವಿಚಾರಗಳು ಇನ್ನೂ ಜೀವಂತವಾಗಿ ಉಳಿಯಲು ಸಹಕಾರಿ ಯಾಗಿದೆ ಎಂದು ತಿಳಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದಿಂದ ಏಳು ವರ್ಷ ನಡೆಸಲಾದ ಆಟ್ ಪಾಟ್ ಪಡಿಪು ಕಾರ್ಯಕ್ರಮದಲ್ಲಿ ಪಟ್ಟೋಲೆ ಪಳಮೆ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಹಾಗೂ 4 ಸಾವಿರ ಆಟುಪಾಟ್ ಪಡಿಪು ಪುಸ್ತಕಗಳನ್ನು ಶಾಲೆಗಳಿಗೆ ಉಚಿತವಾಗಿ ನೀಡುವ ಮೂಲಕ ಯುವ ಪೀಳಿಗೆಗೆ ಕೊಡವ ಆಚಾರ, ವಿಚಾರ, ಪದ್ಧತಿಯನ್ನು ತಿಳಿಸುವ ಕೆಲಸ ಮಾಡಲಾಗಿದೆ ಎಂದರು. ಅಲ್ಲದೆ ಪಟ್ಟೋಲೆ ಪಳಮೆ ಅತೀ ಹೆಚ್ಚು ಬಾರಿ ಮುದ್ರಣವಾಗಿರುವ ಪುಸ್ತಕವಾಗಿದ್ದು, ಇದು ಕೊಡವರ ಧರ್ಮಗ್ರಂಥವಾಗಿದೆ ಎಂದು ಅಭಿಪ್ರಾಯಪಟ್ಟರು.

ಚಿಕ್ಕಅಳುವಾರದಲ್ಲಿ ಪ್ರಾರಂಭಿಸಲಾಗುವ ಕೊಡಗು ವಿಶ್ವಾವಿದ್ಯಾನಿಲಯದ ಕೇಂದ್ರ ಕಚೇರಿಯನ್ನು ನಗರದ ಫೀಲ್ಡ್ ಮಾರ್ಷಿಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ತೆರೆಯಲು ಅವಕಾಶ ಕಲ್ಪಿಸುವಂತೆ ಇದೇ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಿಗೆ ಮನವಿ ಮಾಡಿದರು.
ಮುಂಬೈ ಎಸ್.ಎನ್.ಡಿ.ಟಿ ಮಹಿಳಾ ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ವೀಣಾ ಪೂಣಚ್ಚ ಪಟ್ಟೋಲೆ ಪಳಮೆ ಕೃತಿಯ ಕುರಿತು ಪರಿಚಯ ಮಾಡಿದರು.

ಕಾರ್ಯಕ್ರಮದಲ್ಲಿ ಪಟ್ಟೋಲೆ ಪಳಮೆ ಕೃತಿಯ ಕೊಡವ-ಕನ್ನಡ-ಇಂಗ್ಲಿಷ್ ಆವೃತ್ತಿಯ ಅನುವಾದಕರಾದ ಬೊವ್ವೇರಿಯಂಡ ನಂಜಮ್ಮ ಮತ್ತು ಚಿಣ್ಣಪ್ಪ ವರ್ಚುವಲ್ ಮೂಲಕ ಮಾತನಾಡಿ, ಕೊಡವ ಭಾಷೆ, ಸಂಸ್ಕøತಿ, ಆಚಾರ, ವಿಚಾರ, ಜನಪದ ಕಲೆಗಳ ಕುರಿತು ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭ ಪಾಲೆಯಂಡ ಕಾವ್ಯ, ಕೊಡವ ಸಾಂಸ್ಕøತಿಕ ಅಧ್ಯಯನ ಪೀಠದ ಸಂಯೋಜಕಿ ಡಾ. ಎಂ.ಎಂ.ಮೀನಾಕ್ಷಿ, ಚೋಕಿರ ಅನಿತಾ ದೇವಯ್ಯ, ಐಚಂಡ ರಶ್ಮಿ ಮೇದಪ್ಪ ಹಾಜರಿದ್ದರು.

Translate »