ಮೈಸೂರು ಗ್ರಾಮಾಂತರ

ಮನೆಯಿಂದ ಹೊರಬಂದು ಆತಂಕ ಸೃಷ್ಟಿಸಿದ ಕೊರೊನಾ ಶಂಕಿತ
ಮೈಸೂರು ಗ್ರಾಮಾಂತರ

ಮನೆಯಿಂದ ಹೊರಬಂದು ಆತಂಕ ಸೃಷ್ಟಿಸಿದ ಕೊರೊನಾ ಶಂಕಿತ

April 3, 2020

ತಿ.ನರಸೀಪುರ, ಏ.2-ಹೋಂ ಕ್ವಾರೆಂಟೈನ್ ಸೀಲ್ ಹಾಕಲಾಗಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಸಂಚರಿಸುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ಪಟ್ಟಣದ ಶ್ರೀರಾಮಪುರ ಬೀದಿಯಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಹೈದರಾಬಾದ್‍ನಿಂದ ಪಟ್ಟಣಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಪುರಸಭೆಯ 20ನೇ ವಾರ್ಡ್‍ನ(ಮಡಿವಾಳರ ಕಾಲೋನಿ)ತನ್ನ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಅವರನ್ನು ಗುರುತಿಸಿದ ತಾಲೂಕು ಆಡಳಿತ ಕ್ವಾರೆಂಟೈನ್ ಸೀಲ್ ಹಾಕಿ ಮನೆಯಿಂದ ಹೊರಹೋಗದಂತೆ ಸೂಚಿಸಿತ್ತು. ಆದರೆ ಆತ ಮನೆಯಿಂದ ಹೊರ ಬಂದು ನಿತ್ಯದ ಕೆಲಸಗಳಲ್ಲಿ ತೊಡಗಿದ್ದ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸಂಬಂಧಿಸಿದ…

ಕಲ್ಲಂಗಡಿ ಬೆಳೆ ರೈತ ಕಾಂಗಾಲು
ಮೈಸೂರು ಗ್ರಾಮಾಂತರ

ಕಲ್ಲಂಗಡಿ ಬೆಳೆ ರೈತ ಕಾಂಗಾಲು

April 3, 2020

ಮಲ್ಕುಂಡಿ, ಏ.2(ಚನ್ನಪ್ಪ)-ಕೊರೊನಾ ಭೀತಿ ಹಿನ್ನೆಲೆಯಲ್ಲಿ ಎಲ್ಲಡೆ ಲಾಕ್‍ಡೌನ್ ಜಾರಿಯಲ್ಲಿದೆ. ಇದರಿಂದ ಕೊಳ್ಳುವವರಿಲ್ಲದೆ ಕಲ್ಲಂಗಡಿ ಬೆಳೆದ ರೈತ ಕಂಗಾಲಾಗಿದ್ದಾರೆ. ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ರೈತ ಮಂಜುನಾಥ್ ತಮ್ಮ 2 ಎಕರೆ ಜಮೀನಿನಲ್ಲಿ ಸುಮಾರು ಆರೇಳು ಲಕ್ಷ ರೂ. ಸಾಲ ಸೋಲ ಮಾಡಿ ಕಲ್ಲಂಗಡಿ ಬೇಸಾಯ ಮಾಡಿದ್ದರು. ಸದ್ಯ ಫಸಲು ಕಟಾವಿಗೆ ಬಂದಿದ್ದು, ಕೊರೊನಾ ವೈರಸ್ ಭೀತಿ, ಲಾಕ್‍ಡೌನ್‍ನಿಂದ ಕೊಳ್ಳುವವರಿಲ್ಲದ ಕಾರಣ ಕೋಯ್ಲು ಮಾಡದೆ ಕಲ್ಲಂಗಡಿ ಫಸಲು ಬಿಸಿಲು ತಾಪಕ್ಕೆ ಸಂಪೂರ್ಣ ನಾಶವಾಗುತ್ತಿದ್ದು, ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಇದರಿಂದ…

ಬೆಂಕಿ ಕೆನ್ನಾಲಿಗೆ ಮಾವಿನ ಫಸಲು ಭಸ್ಮ
ಮೈಸೂರು ಗ್ರಾಮಾಂತರ

ಬೆಂಕಿ ಕೆನ್ನಾಲಿಗೆ ಮಾವಿನ ಫಸಲು ಭಸ್ಮ

April 3, 2020

ಹುಣಸೂರು, ಏ.2(ಕೆಕೆ)-ಸಮೀಪದ ಜಮೀನಿನ ರೈತರು ಕಳೆ ನಿಯಂತ್ರಣಕ್ಕೆ ತೆವರಿಗೆ ಇಟ್ಟ ಬೆಂಕಿಗೆ ರೈತರೊಬ್ಬರ ಮಾವಿನ ಫಸಲು ಭಸ್ಮವಾಗಿರುವ ಘಟನೆ ತಾಲೂಕಿನ ಮಾದಹಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮ ಸ್ವಾಮಿನಾಯಕ ಅವರ ಮಾವಿನ ತೋಟದಲ್ಲಿ ಘಟನೆ ನಡೆದಿದ್ದು, ಪಕ್ಕದ ಜಮೀನಿನ ರೈತರು ಕಳೆ ನಿಯಂತ್ರಣಕ್ಕಾಗಿ ಜಮೀನಿನ ತೆವರಿಗೆ ಬೆಂಕಿ ಇಟ್ಟದ್ದರು ಎನ್ನಲಾಗಿದೆ. ಗಾಳಿಗೆ ಹರಡಿದ ಬೆಂಕಿ ಸ್ವಾಮಿನಾಯಕ ಅವರ ಮಾವಿನ ಮರಗಳಿಗೆ ವ್ಯಾಪಿಸಿ ಮರಗಳು ಸೇರಿದಂತೆ ಫಸಲು ಬೆಂಕಿಗಾಹುತಿಯಾಗಿದೆ. ಇದರಿಂದ ಸ್ವಾಮಿನಾಯಕರಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಈ ಸಂಬಂಧ…

ಚುಂಚನಕಟ್ಟೆ ಸಂತೆ ರದ್ದು
ಮೈಸೂರು ಗ್ರಾಮಾಂತರ

ಚುಂಚನಕಟ್ಟೆ ಸಂತೆ ರದ್ದು

March 19, 2020

ಚುಂಚನಕಟ್ಟೆ, ಮಾ.18(ಮಧು)- ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಾತ್ರೆ-ಸಂತೆ, ಸಭೆ-ಸಮಾ ರಂಭಗಳಿಗೆ ನಿಷೇಧ ಹೇರಿ ಆದೇಶ ಹೊರಡಿ ಸಿದೆ. ಆದರೆ ಇದರ ಅರಿವೇ ಇಲ್ಲದೆ ತಮ್ಮ ಜಾನುವಾರು-ಸಾಕುಪ್ರಾಣಿಗಳೊಂದಿಗೆ ಆಗಮಿಸಿದ್ದ ರೈತರು, ವ್ಯಾಪಾರಿಗಳು ಸಂತೆ ರದ್ದುಗೊಂಡಿದ್ದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಬೇಕಾಯಿತು. ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚುಂಚನಕಟ್ಟೆ ಗ್ರಾಮದ ಎಪಿಎಂಸಿ ಮಾರು ಕಟ್ಟೆ ಆವರಣದಲ್ಲಿ ಪ್ರತಿ ಬುಧವಾರ ಜಾನುವಾರು ಹಾಗೂ ಕೃಷಿ ಉತ್ಪನ್ನಗಳ ಮಾರಾಟ ಸಂತೆ ನಡೆಯುತ್ತದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗಳು ಹೊರಡಿಸಿರುವ…

ದಕ್ಷಿಣಕಾಶಿಗೂ ತಟ್ಟಿದ ಕೊರೊನಾ ಭೀತಿ
ಮೈಸೂರು ಗ್ರಾಮಾಂತರ

ದಕ್ಷಿಣಕಾಶಿಗೂ ತಟ್ಟಿದ ಕೊರೊನಾ ಭೀತಿ

March 19, 2020

ನಂಜನಗೂಡು, ಮಾ.18(ರವಿ)-ಜಗತ್ತಿನೆಲ್ಲೆಡೆ ತಲ್ಲಣ ಸೃಷ್ಟಿಸಿರುವ ಕೊರೊನಾ ಭೀತಿ ದಕ್ಷಿಣಕಾಶಿ ಪ್ರಸಿದ್ಧಿಯ ನಂಜನಗೂಡಿಗೂ ತಟ್ಟಿದ್ದು, ಇಲ್ಲಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಾ.31ರವರೆಗೆ ಪ್ರವೇಶ ನಿಷೇಧಿಸಿ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣಾ ಇಲಾಖೆ ಬೆಂಗಳೂರು ವಲಯ ಆದೇಶ ಹೊರಡಿಸಿದೆ. ಪೂಜಾ ಪುನಸ್ಕಾರ, ಧಾರ್ಮಿಕ ಕೈಂಕರ್ಯ ಎಂದಿನಂತೆ ನಡೆಯಲಿದೆ. ಈ ಬಗ್ಗೆ ದೇಗುಲ ಕಾರ್ಯ ನಿರ್ವಾ ಹಕ ಅಧಿಕಾರಿ ಶಿವಕುಮಾರಯ್ಯ ಮಾತ ನಾಡಿ, ಪುರಾತತ್ವ ಇಲಾಖೆಯಿಂದ ಇಂದು ಮಧ್ಯಾಹ್ನ ಭಕ್ತರಿಗೆ ದೇಗುಲ ಪ್ರವೇಶ ನಿಷೇಧ ಹೇರುವ ಕುರಿತ ಆದೇಶದ…

ರಸ್ತೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಮೈಸೂರು ಗ್ರಾಮಾಂತರ

ರಸ್ತೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

March 13, 2020

ಬೆಟ್ಟದಪುರ, ಮಾ.12(ಶಿವದೇವ್)- ರಸ್ತೆ ಅವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿ ದೊಡ್ಡ ನೇರಳೆ ಗ್ರಾಮದಲ್ಲಿ ಗುರುವಾರ ಮಹಿಳಾ ಸಂಘಟಣೆಗಳಿಂದ ಪ್ರತಿಭಟನೆ ನಡೆಯಿತು. ಚಿಕ್ಕನೇರಳೆ, ದೊಡ್ಡನೇರಳೆ, ನಿಲವಾಡಿ ಗ್ರಾಮಗಳ ರಸ್ತೆಗಳು 15 ವರ್ಷಗಳಿಂದಲೂ ಹದಗೆಟ್ಟಿದ್ದು, ವಾಹನ ಸವಾರರು ಸಂಚಾರಿಸಲು ಪ್ರತಿನಿತ್ಯ ಪರದಾಡುವಂತಾಗಿದೆ. ಗರ್ಭಿಣಿಯರು ಮತ್ತು ಬಾಣಂತಿಯರನ್ನು ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯಲು ಯಾವುದೇ ಬಾಡಿಗೆ ವಾಹನಗಳು ಬರುವುದಿಲ್ಲ. ಶಾಲಾ- ಕಾಲೇಜು ಮಕ್ಕಳು ಹಾಗೂ ಆರೋಗ್ಯ ಹದಗೆಟ್ಟರೇ ಸುಮಾರು 3, 4 ಕಿ.ಮೀ. ನಡೆದುಕೊಂಡು ಆರೋಗ್ಯ ಕೇಂದ್ರಕ್ಕೆ ಬರಬೇಕಾಗಿದೆ. ಸರ್ಕಾರಿ ಬಸ್‍ಗಳು ರಸ್ತೆ…

ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಮೈಸೂರು ಗ್ರಾಮಾಂತರ

ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು

March 13, 2020

ತಿ.ನರಸೀಪುರ ಮಾ.12(ಎಸ್‍ಕೆ)- ಗ್ರಾಮ ದೇವತೆ ಹಬ್ಬಕ್ಕೆ ಬಂದಿದ್ದ ಇಬ್ಬರು ಯುವಕರು ಈಜಲು ಹೋಗಿ ನೀರು ಪಾಲಾಗಿರುವ ದುರ್ಘಟನೆ ತಾಲೂಕಿನ ಯಡದೊರೆ ಗ್ರಾಮದಲ್ಲಿ ಗುರುವಾರ ನಡೆದಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರು ದುರ್ಗದ ಹೊಸಳ್ಳಿ ಗ್ರಾಮದ ಗಿರೀಶ್ ಬಿನ್ ಚಿಕ್ಕಣ್ಣ(27) ಹಾಗೂ ವಿನಯ್‍ಕುಮಾರ್ ಬಿನ್ ರಮೇಶ್(28) ಮೃತಪಟ್ಟ ಯುವಕರು. ಗ್ರಾಮದ ಸಂಬಂಧಿಕರ ಮನೆಗೆ ಹಬ್ಬ ಕ್ಕೆಂದು ಬಂದಿದ್ದು, ಸಮೀಪದ ಕಾವೇರಿ ನದಿಯಲ್ಲಿ ಈಜಲು ಹೋದ ವೇಳೆ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ….

ಹೆಬ್ಬಾಳ ಗಿರಿಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ
ಮೈಸೂರು ಗ್ರಾಮಾಂತರ

ಹೆಬ್ಬಾಳ ಗಿರಿಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

March 10, 2020

ಹುಣಸೂರು, ಮಾ.9(ಹೆಚ್‍ಎಸ್‍ಎಂ)- ಹನಗೋಡು ಹೋಬಳಿಯ ಹೆಬ್ಬಾಳ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೋಮವಾರ ಭೇಟಿ ನೀಡಿ, ಆದಿವಾಸಿಗಳ ಸಮಸ್ಯೆ ಆಲಿಸಿದರು. ಹೆಬ್ಬಾಳ ಗಿರಿಜನ ಪುನರ್ವಸತಿ ಕೇಂದ್ರದ ನಿವಾಸಿ ಗಳು ಕಳೆದ 3-4 ತಿಂಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ತಮ್ಮ ಪುರ್ನವಸತಿ ಕೇಂದ್ರದಲ್ಲಿ ರುವ ಸಮಸ್ಯೆಗಳನ್ನು ಬಗೆಹರಿಸುವುದರೊಂದಿಗೆ ತಮ್ಮ ಪುನರ್ವಸತಿ ಯೋಜನೆಯ ಪ್ಯಾಕೇಜ್‍ನಲ್ಲಿರುವ ಉಳಿತಾಯ ಹಣದಲ್ಲಿ ಪುನರ್ವಸತಿ ಕೇಂದ್ರ, ಜಮೀನಿನ ಸುತ್ತ ತಂತಿಬೇಲಿ ನಿರ್ಮಾಣ ಹಾಗೂ ಕೇಂದ್ರದಲ್ಲಿ ವಾಸವಿರುವ 33 ಮಂದಿ ಆದಿವಾಸಿಗಳಿಗೆ…

ಹದಿನಾರು ಗ್ರಾಮದ ಬಂಡೀಜಾತ್ರೆ ಸಿದ್ಧತೆ ಪರಿಶೀಲನೆ
ಮೈಸೂರು ಗ್ರಾಮಾಂತರ

ಹದಿನಾರು ಗ್ರಾಮದ ಬಂಡೀಜಾತ್ರೆ ಸಿದ್ಧತೆ ಪರಿಶೀಲನೆ

March 10, 2020

ಸುತ್ತೂರು, ಮಾ.9- ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಬಂಡೀ ಜಾತ್ರೆಗೆ ಸಿದ್ಧತೆ ಭರದಿಂದ ಸಾಗಿದ್ದು, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮ ದಲ್ಲಿ ಶ್ರೀ ಚೌಡೇಶ್ವರಿ, ಕಾಳಿಕಾಂಬ, ಮಣಿ ಯಮ್ಮ ಅಮ್ಮನವರ ಜಾತ್ರೆ ವಿಜೃಂಭಣೆ ಯಿಂದ ನಡೆಯಲಿದೆ. ಭಕ್ತಾದಿಗಳು ನೂಕು ನುಗ್ಗಲಿಲ್ಲದೆ ಜಾತ್ರೆ, ಕೊಂಡೋತ್ಸವ ವೀಕ್ಷಿ ಸಲು ಅನುಕೂಲವಾಗುವಂತೆ ಕ್ರೀಡಾಂಗಣ ಮಾದರಿಯಲ್ಲಿ 100ಕ್ಕೂ ಹೆಚ್ಚು ಮೆಟ್ಟಿಲು ಗಳನ್ನು ನಿರ್ಮಾಣ ಮಾಡಲಾಗಿದೆ. ಯದು ವಂಶದ ಮೂಲವಾದ ಈ ಗ್ರಾಮವನ್ನು ಅಭಿವೃದ್ಧಿಗೊಳಿಸಲಾಗಿದೆ. ಗ್ರಾಮದ ಕೆರೆಯನ್ನು…

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.40 ಲಕ್ಷ ರೂ. ವಶ
ಮೈಸೂರು ಗ್ರಾಮಾಂತರ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.40 ಲಕ್ಷ ರೂ. ವಶ

March 10, 2020

ಹುಣಸೂರು ಮಾ.9(ಎಚ್‍ಎಸ್‍ಎಂ)- ಹುಣಸೂರು ತಾಲೂಕು ಗಾವಡಗೆರೆ ಚೆಕ್ ಪೋಸ್ಟ್‍ನಲ್ಲಿ ಮದ್ಯದ ವ್ಯಾಪಾರಿಯೊಬ್ಬರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.40 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ವೃತ್ತ ನಿರೀಕ್ಷಕ ಶಿವಕುಮಾರ್ ತಿಳಿಸಿದ್ದಾರೆ. ಹುಣಸೂರು ತಾಲೂಕು ಗುರುಪುರ ಗ್ರಾಮದ ಬಾರ್ ಮಾಲೀಕ ಲಕ್ಷ್ಮಣ್ ಅವರು ತಮ್ಮ ಎರಿಟಿಗಾ ಕಾರಿ(ಕೆಎ45, ಎಂ3483) ನಲ್ಲಿ ಹೊಳೆನರಸೀಪುರದಿಂದ ಹುಣಸೂರು ಕಡೆಗೆ ಬರುತ್ತಿದ್ದ ವೇಳೆ ಗಾವಡಗೆರೆ ಚೆಕ್ ಪೋಸ್ಟ್‍ನಲ್ಲಿ ತನಿಖಾಧಿಕಾರಿ ಪ್ರಕಾಶ್ ನೇತೃತ್ವದ ತಂಡ ತಪಾಸಣೆ ನಡೆಸಿದ ವೇಳೆ ದಾಖಲೆ ಇಲ್ಲದ…

1 2 3 6