ಗಾಂಧಿ ಪಾರ್ಕ್ ಪಾದಚಾರಿ ಮಾರ್ಗದ ಕಾಮಗಾರಿ ಪರಿಶೀಲನೆ
ಮೈಸೂರು ಗ್ರಾಮಾಂತರ

ಗಾಂಧಿ ಪಾರ್ಕ್ ಪಾದಚಾರಿ ಮಾರ್ಗದ ಕಾಮಗಾರಿ ಪರಿಶೀಲನೆ

April 25, 2021

ಕೆ.ಆರ್.ನಗರ, ಏ. 24 (ಕೆಟಿಆರ್)-ಕೆ.ಆರ್.ನಗರದಲ್ಲಿ ನಿರ್ಮಾಣಗೊಂಡಿ ರುವ ಗಾಂಧಿ ಪಾರ್ಕ್‍ನಲ್ಲಿ ಇಂಟರ್ ಲಾಕ್ ಅಳವಡಿಸಿ ಪಾದಚಾರಿಗಳ ಮಾರ್ಗ ಅಭಿವೃದ್ಧಿಪಡಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಕೆ.ಜಿ.ಸುಬ್ರಮಣ್ಯ ಹೇಳಿದರು.

ಕಾಮಗಾರಿ ಪರಿಶೀಲಿಸಿದ ಅಧ್ಯಕ್ಷರು, 15ನೇ ಹಣಕಾಸಿನ ಅನುದಾನದಲ್ಲಿ ಸುಮಾರು 15 ಲಕ್ಷ ರೂ. ವೆಚ್ಚ ಮಾಡಿ ಇಂಟರ್‍ಲಾಕ್ ಅಳವಡಿಸುತ್ತಿದ್ದು, ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚಿಸಿದರು.

ಬನ್ನಿಮಂಟಪ, ಕುವೆಂಪು ಬಡಾವಣೆ, ಸುಭಾಷ್‍ನಗರ, ಈಶ್ವರನಗರ ಸೇರಿದಂತೆ ಹೊಸದಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲೂ ಡೆವಲಪರ್‍ಗಳು ಪಾರ್ಕ್‍ಗಾಗಿ ಜಾಗ ನಿಗದಿ ಮಾಡಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿ ವಿದ್ಯುತ್ ದೀಪ ಸೇರಿದಂತೆ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಪುರಸಭೆ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದರು.

ಕೋವಿಡ್-19 ಎರಡನೇ ಅಲೆ ಇದ್ದು ಸರ್ಕಾರ ರೋಗ ತಡೆಗಟ್ಟಲು ಸೂಚಿಸಿರುವ ಆದೇಶವನ್ನು ಸಾರ್ವಜನಿಕರು ಮತ್ತು ವಾಕಿಂಗ್‍ಗೆ ಬರುವ ಜನತೆ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು. ಪುರಸಭೆ ಇಂಜಿ ನಿಯರ್ ಪುಟ್ಟಸ್ವಾಮಿ, ಬಿಜೆಪಿ ಮುಖಂಡರಾದ ಉಮಾಶಂಕರ್(ಗುಂಡ), ಮಲ್ಲಿಕಾರ್ಜು ನಪ್ಪ, ಗುತ್ತಿಗೆದಾರ ಸಿ.ಜಿ.ಗೋಪಿ ಇದ್ದರು.

 

Translate »