ಉನ್ನತ ಶಿಕ್ಷಣ ವಂಚಿತರಿಗೆ ಮುಕ್ತ ವಿವಿ ಆಸರೆ
ಮೈಸೂರು

ಉನ್ನತ ಶಿಕ್ಷಣ ವಂಚಿತರಿಗೆ ಮುಕ್ತ ವಿವಿ ಆಸರೆ

June 3, 2023

ಮೈಸೂರು,ಜೂ.1(ಎಸ್‍ಬಿಡಿ)- ಕಾಲೇ ಜಿಗೆ ಹೋಗಲಾಗದೆ ಉನ್ನತ ಶಿಕ್ಷಣದಿಂದ ವಂಚಿತರಾದವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆಸರೆಯಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.

ಕರಾಮುವಿ ಘಟಿಕೋತ್ಸವ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಕಾರಣಗಳಿಂದ ಹಲವರು ಉನ್ನತ ಶಿಕ್ಷಣದಿಂದ ವಂಚಿತರಾಗಿರುತ್ತಾರೆ. ಅಂತಹವ ರಿಗೆ ಮುಕ್ತ ವಿವಿ ಆಸರೆಯಾಗಿದೆ. ಮೈಸೂರು ವಿವಿ ಸ್ಥಾಪಿಸುವ ಸಂದರ್ಭದಲ್ಲಿ ಶಿಕ್ಷಣವು ಮನೆ ಬಾಗಿಲಿಗೆ ತಲುಪಬೇಕೆಂದು ಮಹಾ ರಾಜರು ಆಶಿಸಿದ್ದರಂತೆ. ದೂರ ಶಿಕ್ಷಣದಿಂದ ಅದು ಸಾಕಾರವಾಗಿದೆ ಎಂದರು.

ವಿದ್ಯಾರ್ಜನೆ ಹಸಿವು ಹೆಚ್ಚಾಗಿದೆ. ಕಲಿಯು ವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಶಿಕ್ಷಣ ಕೇಂದ್ರಗಳ ಅಗತ್ಯತೆಯೂ ಹೆಚ್ಚಾಗಿದೆ. ಈ ಕಾರಣದಿಂದಲೇ ಮೈಸೂರಿನಲ್ಲಿ 2ನೇ ವಿಶ್ವ ವಿದ್ಯಾನಿಲಯ ಸ್ಥಾಪನೆಯಾಗಿದೆ. ಕರ್ನಾ ಟಕ ರಾಜ್ಯ ಮುಕ್ತ ವಿವಿ ಸ್ಥಾಪನೆಯಾಗಿ 27 ವರ್ಷಗಳು ಕಳೆದಿದ್ದು ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ. ಇದೀಗ ನ್ಯಾಕ್‍ನಿಂದ `ಎ +’ ಗ್ರೇಡ್ ಪಡೆದಿರುವುದು ವಿವಿಯ ಗುಣಮಟ್ಟ ಹಾಗೂ ಬೆಳವಣಿಗೆ ವೇಗವನ್ನು ಸಾಬೀತುಪಡಿಸುತ್ತದೆ ಎಂದರು.
ಎರಡೂವರೆ ದಶಕಗಳ ಕಾಲ ಶೈಕ್ಷಣಿಕ ಸೇವೆ ಸಲ್ಲಿಸಿರುವ ಮುಕ್ತ ವಿವಿಗೆ ಸಂಸ್ಥಾ ನದ ದಿನದ ಸಂಭ್ರಮ. ಈ ಸಂದರ್ಭದಲ್ಲಿ ವಿವಿ ನಡೆದು ಬಂದ ದಾರಿ, ಸಿಹಿ-ಕಹಿಯ ಕ್ಷಣಗಳನ್ನು ನೆನೆದು ಭವಿಷ್ಯದತ್ತ ಗಟ್ಟಿ ಯಾದ ಹೆಜ್ಜೆ ಇಡಬೇಕು. ಹಳೆ ಬೇರು ಹೊಸ ಚಿಗುರು ಎನ್ನುವಂತೆ ವಿವಿ ಮೂಲಕ ಶಿಕ್ಷಣ ಪಡೆದು, ಉನ್ನತ ಸ್ಥಾನಗಳಲ್ಲಿರುವ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಒಂದು ಗೂಡಿಸಬೇಕು. ಈ ಮೂಲಕ ಸಂಸ್ಥೆಯ ಬೆಳ ವಣಿಗೆಗೆ ಅಗತ್ಯವಾದ ಸಲಹೆ, ಸಹಕಾರ ಲಭ್ಯವಾಗುತ್ತದೆ. ಆಡಳಿತ ಮಂಡಳಿ ಮೇಲಿನ ಕಾರ್ಯಭಾರವನ್ನೂ ಕಡಿಮೆ ಮಾಡಿ ಕೊಳ್ಳಬಹುದು ಎಂದು ಸಲಹೆ ನೀಡಿದರು.

ದೂರ ಶಿಕ್ಷಣದ ವ್ಯವಸ್ಥೆಯಡಿ ಶಿಕ್ಷಣ ಪಡೆಯುವವರು ಸ್ವಯಂ ಅಧ್ಯಯನ ಮಾಡು ತ್ತಾರೆ. ನಿತ್ಯ ತರಗತಿಗಳು, ಮಾರ್ಗದರ್ಶನ ಇರುವುದಿಲ್ಲ. ಹಾಗಾಗಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಎದುರಿಸಲು ಸಿದ್ಧರಿರುತ್ತಾರೆ. ವಿವಿಯ ಬೆಳವಣಿಗೆಯಲ್ಲಿ ಅಧ್ಯಾಪಕರು ಹಾಗೂ ಸಿಬ್ಬಂದಿ ಪರಿಶ್ರಮ ಮಹತ್ವದ್ದಾಗಿದೆ. ಕಲಿಕೆ ಸಾಧ್ಯತೆಗಳನ್ನು ಹೆಚ್ಚಿಸುವುದು, ಪರಿಣಾ ಮಕಾರಿ ಶೈಕ್ಷಣಿಕ ವಿಚಾರಗಳನ್ನು ಅಳ ವಡಿಸಿಕೊಳ್ಳುವ ಅವಕಾಶಗಳನ್ನು ಸದುಪ ಯೋಗಪಡಿಸಿಕೊಳ್ಳಬೇಕು. ಪ್ರಸಕ್ತ ವರ್ಷ ದಿಂದ ಆರಂಭಿಸಿರುವ ಆನ್‍ಲೈನ್ ಕೋರ್ಸ್ ಗಳನ್ನೂ ಹೆಚ್ಚು ಜನರಿಗೆ ತಲುಪಿಸಬೇಕು. ಒಟ್ಟಾರೆ ಮುಕ್ತ ವಿವಿ ಯಶಸ್ಸಿನ ಹಾದಿ ಯಲ್ಲಿ ಮುನ್ನಡೆಯಲಿ ಎಂದು ಆಶಿಸಿದರು.

ಕುಲಪತಿ ಪೆÇ್ರ.ಶರಣಪ್ಪ ವಿ.ಹಲಸೆ, ಕುಲಸಚಿವ(ಆಡಳಿತ) ಕೆ.ಎಲ್.ಎನ್.ಮೂರ್ತಿ, ಪರೀಕ್ಷಾಂಗ ಕುಲ ಸಚಿವ ಪೆÇ್ರ.ಕೆ.ಬಿ.ಪ್ರವೀಣ, ಶೈಕ್ಷಣಿಕ ಮುಖ್ಯಸ್ಥೆ ಪೆÇ್ರ.ಎನ್.ಲಕ್ಷ್ಮಿ, ಹಣ ಕಾಸು ಅಧಿಕಾರಿ ಡಾ.ಖಾದರ್ ಪಾಷಾ, ಅಧ್ಯಯನ ಕೇಂದ್ರದ ಮುಖ್ಯಸ್ಥ ಪೆÇ್ರ.ಎಂ. ರಾಮನಾಥಂ ನಾಯ್ಡು, ಆಂತರಿಕ ಗುಣ ಮಟ್ಟ ಮೌಲ್ಯಮಾಪನ ಕೇಂದ್ರದ ನಿರ್ದೇಶಕ ಡಾ.ಎಸ್.ನಿರಂಜನ್‍ರಾಜ್ ಮತ್ತಿತರರಿದ್ದರು.

Translate »