ಒಂದು ದಿನ ಮಾತ್ರವಲ್ಲ ವರ್ಷದ 365 ದಿನವೂ ತಂಬಾಕುರಹಿತ ದಿನವಾಗಬೇಕು: ಡಿಸಿ
ಮೈಸೂರು

ಒಂದು ದಿನ ಮಾತ್ರವಲ್ಲ ವರ್ಷದ 365 ದಿನವೂ ತಂಬಾಕುರಹಿತ ದಿನವಾಗಬೇಕು: ಡಿಸಿ

June 1, 2023

ಮೈಸೂರು, ಮೇ 31(ಎಂಟಿವೈ)- ಪ್ರತಿ ವರ್ಷ ಅರಣ್ಯ ಇಲಾಖೆಗೆ ಸೇರಿದ 2 ಲಕ್ಷ ಹೆಕ್ಟೇರ್ ಭೂಮಿಯನ್ನು ತಂಬಾಕು ಬೆಳೆ ಯಲು ಪರಿವರ್ತನೆ ಮಾಡಲಾಗುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಕೊರತೆ ಉಂಟಾಗಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆ ಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ವಿಷಾದಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಎನ್‍ಸಿಡಿ ಕೋಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯ ದಲ್ಲಿ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಆಯೋಜಿಸಿದ್ದ `ವಿಶ್ವ ತಂಬಾಕು ರಹಿತ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ತಂಬಾಕು ಉತ್ಪಾ ದನೆ ಹಾಗೂ ತಂಬಾಕು ಉತ್ಪನ್ನಗಳ ಸೇವನೆಯೂ ಹೆಚ್ಚಾಗುತ್ತಿದೆ. ಸರ್ಕಾರ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಎಷ್ಟೇ ಜಾಗೃತಿ ಮೂಡಿಸಿದರೂ ತಂಬಾಕು ಉತ್ಪನ್ನ ಬಳಕೆ ಕ್ಷೀಣಿಸುತ್ತಿಲ್ಲ ಎಂದರು.

ಸಮೀಕ್ಷೆಯೊಂದರ ವರದಿ ಪ್ರಕಾರ ಪ್ರತಿವರ್ಷ 2 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ವನ್ನು ತಂಬಾಕು ಬೆಳೆಯುವುದಕ್ಕಾಗಿಯೇ ಪರಿವರ್ತನೆ ಮಾಡಲಾಗುತ್ತಿದೆ. ಈಗಾ ಗಲೇ 35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ವರ್ಷ ದಿಂದ ವರ್ಷಕ್ಕೆ ತಂಬಾಕು ಬೆಳೆ ಹೆಚ್ಚುತ್ತಾ ಹೋದರೆ ಆಹಾರ ಪದಾರ್ಥ ಬೆಳೆಯು ವುದಕ್ಕೆ ಹಿನ್ನಡೆಯಾಗಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಆಹಾರ ಬೆಳೆಗಳ ಕೊರತೆ ಉಂಟಾ ಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇನ್ನಾ ದರೂ ತಂಬಾಕು ಬೆಳೆಯುವ ಪ್ರಮಾಣ ಕಡಿಮೆ ಮಾಡುವುದು ಸೂಕ್ತ. ತುಂಬಾಕು ಬೆಳೆಯುವ ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಉತ್ತೇಜನ ನೀಡಬೇಕು. ತಂಬಾಕು ಸೇವನೆ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತ ನಾಡಿ, ತಂಬಾಕು ಉತ್ಪನ್ನಗಳ ಮೇಲೆ ಆರೋ ಗ್ಯಕ್ಕೆ ಹಾನಿಕಾರಕ ಎಂದು ಎಚ್ಚರಿಕೆ ಸಂದೇಶ ಮುದ್ರಿಸಿದ್ದರೂ, ತಂಬಾಕು ಸೇವನೆ ಎಗ್ಗಿಲ್ಲದೆ ನಡೆಯುತ್ತಿದೆ. ಸಮಾಜದಲ್ಲಿ ಕಂಡು ಬರುವ ಕ್ಯಾನ್ಸರ್ ಪೀಡಿತರಲ್ಲಿ ಶೇ.30ರಿಂದ 40ರಷ್ಟು ಮಂದಿ ತಂಬಾಕು ಉತ್ಪನ್ನಗಳ ಸೇವನೆ ಯಿಂದಲೇ ಈ ಮಾರಕ ರೋಗಕ್ಕೆ ತುತ್ತಾಗಿ ರುವುದು ಪತ್ತೆಯಾಗಿದೆ. ಕಿದ್ವಾಯಿ ಸೇರಿ ದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆ ಯುತ್ತಿರುವ ಕ್ಯಾನ್ಸರ್ ರೋಗಿಗಳಲ್ಲಿ ಶೇ.90 ರಷ್ಟು ಮಂದಿ ತಂಬಾಕು ಸೇವನೆಗೆ ತುತ್ತಾಗಿ ರುವವರಾಗಿದ್ದಾರೆ ಎಂದು ವಿಷಾದಿಸಿದರು.

ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣ ಗಳಿಂದ ಯುವಜನರು ತಂಬಾಕು ಚಟಕ್ಕೆ ಬಲಿಯಾಗುತ್ತಿದ್ದಾರೆ. ಯುವ ಜನರನ್ನು ತಂಬಾಕು ಚಟದಿಂದ ರಕ್ಷಣೆ ಮಾಡುವು ದಕ್ಕೆ ಶ್ರಮಿಸಬೇಕು. ಶಾಲಾ ಕಾಲೇಜುಗಳ ಸುತ್ತಲೂ ತಂಬಾಕು ಮುಕ್ತ ವಲಯವಾಗಿ ಘೋಷಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಕಾಯ್ದೆಯ ಉಲ್ಲಂಘನೆ ಯಾಗುತ್ತದೆ. ಧೂಮಪಾನ ಮಾಡುವುದ ರಿಂದ ತಂಬಾಕು ಸೇವನೆ ಮಾಡದೆ ಇರು ವವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದರಿಂದ ಎಲ್ಲರೂ ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕು. ಕ್ಯಾಂಪಸ್ ಅಂಬಾ ಸಿಡರ್ ಆಗಿ ಕಾರ್ಯನಿರ್ವಹಿಸಿ. ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳ, ಶಾಲಾ-ಕಾಲೇಜುಗಳ ಬಳಿ ಧೂಮಪಾನ ಮಾಡು ವವರನ್ನು ಹಾಗೂ ತಂಬಾಕು ಮಾರಾಟ ಮಾಡುವವರನ್ನು ಪ್ರಶ್ನಿಸಬೇಕು. ಇಲ್ಲದಿ ದ್ದರೆ ಸಂಬಂಧಪಟ್ಟವರ ಗಮನಕ್ಕೆ ತರ ಬೇಕು ಎಂದು ಸಲಹೆ ನೀಡಿದರು.

ಡಿಹೆಚ್‍ಓ ಡಾ.ಕೆ.ಹೆಚ್.ಪ್ರಸಾದ್ ಮಾತ ನಾಡಿ, ಈ ಸಾಲಿನ ವಿಶ್ವ ತಂಬಾಕುರಹಿತ ದಿನವನ್ನು `ನಮಗೆ ತಂಬಾಕು ಬೇಡ ಆಹಾರ ಬೇಕು’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ತಂಬಾಕು ಉತ್ಪನ್ನಗಳ ಬಳಕೆ ನಿಯಂತ್ರಣಕ್ಕೆ ಹಾಗೂ ತಂಬಾಕು ನಿರ್ಮೂಲನೆಗಾಗಿ ಹಲವು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಆದರೂ, ಸಾಕಷ್ಟು ಮಂದಿ ತಂಬಾಕು ಸೇವನೆಗೆ ದಾಸರಾಗುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇ ಕ್ಷಣ ಅಧಿಕಾರಿ ಡಾ.ಮಹದೇವಪ್ರಸಾದ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿರಾಜ್ ಅಹಮದ್, ಜಿಲ್ಲಾ ತುಂಬಾಕು ನಿಯಂತ್ರಣದ ಸಲಹೆಗಾರ ಶಿವಕುಮಾರ್ ಜಿ, ಐಇಸಿ ಅಧಿಕಾರಿಗಳು ಹಾಗೂ ರೈತ ಮುಖಂಡ ವಸಂತ್, ಪ್ರಗತಿಪರ ರೈತ ಸುಪ್ರೀತ್ ಇನ್ನಿತರರು ಉಪಸ್ಥಿತರಿದ್ದರು.

Translate »