ಮಂಡ್ಯ

ಜಿಲ್ಲಾದ್ಯಂತ `ಶತಮಾನದ ಸಂತ’ನಿಗೆ ಭಾವಪೂರ್ಣ ನಮನ
ಮಂಡ್ಯ

ಜಿಲ್ಲಾದ್ಯಂತ `ಶತಮಾನದ ಸಂತ’ನಿಗೆ ಭಾವಪೂರ್ಣ ನಮನ

ಡಾ.ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ, ಭಾರತರತ್ನ ಪುರಸ್ಕಾರಕ್ಕೆ ಆಗ್ರಹ ಮಂಡ್ಯ: ಜಿಲ್ಲಾದ್ಯಂತ ಮಂಗಳವಾರ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಶಿವೈಕ್ಯ ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿಗಳಿಗೆ ಭಕ್ತಿ, ಭಾವ ಪೂರ್ಣ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾ ಕೇಂದ್ರ ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲೂ ನಡೆದಾಡುವ ದೇವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಬಗ್ಗೆ ವರದಿಯಾಗಿದೆ. ಭಾರತೀನಗರದಲ್ಲಿ ಶ್ರೀಗಳ ಗೌರವಾರ್ಥ ವರ್ತಕರಿಂದ ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು….

ಕೆ.ಆರ್.ಪೇಟೆ ವಿವಿಧೆಡೆ ಸಿದ್ಧಗಂಗಾ ಶ್ರೀಗಳಿಗೆ ನಮನ
ಮಂಡ್ಯ

ಕೆ.ಆರ್.ಪೇಟೆ ವಿವಿಧೆಡೆ ಸಿದ್ಧಗಂಗಾ ಶ್ರೀಗಳಿಗೆ ನಮನ

ಕೆ.ಆರ್.ಪೇಟೆ: ಪಟ್ಟಣ ಸೇರಿ ದಂತೆ ತಾಲೂಕಿನ ವಿವಿಧೆಡೆ ವಿವಿಧ ಸಂಘ ಟನೆಗಳ ಪದಾಧಿಕಾರಿಗಳು ಲಿಂಗೈಕ್ಯರಾದ ತ್ರಿವಿಧ ದಾಸೋಹಿ ಶ್ರೀಶಿವಕುಮಾರಶ್ರೀ ಗಳಿಗೆ ಗೌರವ ನಮನ ಸಲ್ಲಿಸಿದವು. ತಾಲೂಕು ವೀರಶೈವ, ಲಿಂಗಾಯಿತ ಮಹಾ ಸಭಾ: ಸಿದ್ಧಗಂಗಾ ಶ್ರೀಮಠದ ಪೀಠಾಧ್ಯಕ್ಷ ಡಾ.ಶಿವಕುಮಾರಶ್ರೀಗಳಿಗೆ ತಾಲೂಕು ವೀರಶೈವ-ಲಿಂಗಾಯಿತ ಮಹಾಸಭಾ ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಶಿವೈಕ್ಯರಾದ ಶ್ರೀಗಳಿಗೆ ಕಂಬನಿ ಮಿಡಿದು ಗೌರವ ಸಲ್ಲ್ಲಿಸಿದರು. ಈ ವೇಳೆ ತಾಲೂಕು ದಲಿತ ಸಂಘ ಟನೆಗಳ…

ತ್ರಿವಿಧ ದಾಸೋಹಿಗೆ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ
ಮಂಡ್ಯ

ತ್ರಿವಿಧ ದಾಸೋಹಿಗೆ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ

ಪಾಂಡವಪುರ: ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ.ಶಿವಕುಮಾರಸ್ವಾಮೀಜಿ ಅವರಿಗೆ ತಾಲೂಕಿನ ವಿವಿಧ ಸಂಘಟನೆ ಗಳು ಶ್ರದ್ಧಾಂಜಲಿ ಸಲ್ಲಿಸಿದವು. ಕರ್ನಾಟಕ ರಾಜ್ಯ ರೈತ ಸಂಘ: ಕರ್ನಾ ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶ್ರೀಶಿವಕುಮಾರಶ್ರೀಗಳಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಪಟ್ಟಣದ ಐದು ದೀಪದ ವೃತ್ತದಲ್ಲಿ ಸಿದ್ಧ ಗಂಗಾ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ರ್ಪಾಚನೆ ಮಾಡುವ ಮೂಲಕ ರೈತ ಸಂಘದ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ರೈತ…

ರಜೆ ಘೋಷಣೆ ನಡುವೆಯೂ ನಡೆದ ಕಾಲೇಜು: ಪ್ರತಿಭಟನೆ
ಮಂಡ್ಯ

ರಜೆ ಘೋಷಣೆ ನಡುವೆಯೂ ನಡೆದ ಕಾಲೇಜು: ಪ್ರತಿಭಟನೆ

ಕೆ.ಆರ್.ಪೇಟೆ: ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಿದ್ದರೂ, ಪಟ್ಟಣದ ಕ್ರೈಸ್ತ ದಿ ಕಿಂಗ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಕಾಲೇಜಿಗೆ ರಜೆ ಘೋಷಿಸದೇ ಆಂತರಿಕ ಪರೀಕ್ಷೆ ನಡೆಸುವ ಮೂಲಕ ಶ್ರೀಗಳಿಗೆ ಅಗೌರವ ತೋರಿದ ಕ್ರಮ ಖಂಡಿಸಿ ಭಕ್ತಾದಿಗಳು ಕಾಲೇಜಿನ ಎದುರು ಧರಣಿ ನಡೆಸಿದರು. ಪ್ರಥಮ ಪಿಯುಸಿ ಮಕ್ಕಳಿಗೆ ಆಂತರಿಕ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಪೂರ್ವ ಸಿದ್ದತಾ ಪರೀಕ್ಷೆ ಮಾಡುತ್ತಾ ಸರ್ಕಾರಿ ಆದೇಶ ಗಾಳಿಗೆ ತೂರಿರುವ ಆಡಳಿತ…

ಮಹಿಳೆ ಸೇರಿ ಐವರ ಬಂಧನ
ಮಂಡ್ಯ

ಮಹಿಳೆ ಸೇರಿ ಐವರ ಬಂಧನ

ಮಂಡ್ಯ: ಮಳವಳ್ಳಿ ಕಿಡ್ನಿ ಮಾರಾಟ ದಂಧೆಗೆ ಮಹಿಳೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಐವರು ಆರೋಪಿ ಗಳನ್ನು ಬಂಧಿಸುವಲ್ಲಿ ಮಳವಳ್ಳಿ ಪೊಲೀ ಸರು ಯಶಸ್ವಿಯಾಗಿದ್ದಾರೆ. ಮಳವಳ್ಳಿ ಮಾಸ್ತಮ್ಮ ಕೇರಿಯ ತಾರಾ ನಾಗೇಂದ್ರ, ರಾಮನಗರ ಟೌನ್ ಶಾಂತಿ ಲಾಲ್ ಲೇಔಟ್‍ನ ಅಡುಗೆ ಗುತ್ತಿಗೆ ದಾರ ಗೋಪಾಲ್(ಕಿಡ್ನಿ ಗೋಪಾಲ್), ಮಂಡ್ಯ ತಾಲೂಕಿನ ಹೊಳಲು ಗ್ರಾಮದ ವಡೆ, ಸಮೋಸ ವ್ಯಾಪಾರಿ ಜವರಯ್ಯ, ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರದ ಹೂವಿನ ವ್ಯಾಪಾರಿ ರಾಜು ಹಾಗೂ ರಾಮನಗರ ಟೌನ್ ವಿಜಯನಗರದ ಗಾರೆ ಕೆಲಸಗಾರ…

ಜಿಲ್ಲಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ
ಮಂಡ್ಯ

ಜಿಲ್ಲಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ

ಮಂಡ್ಯ: ನಗರ ಸೇರಿದಂತೆ ಜಿಲ್ಲಾದ್ಯಂತ ಮಕರ ಸಂಕ್ರಮಣ ಹಬ್ಬವನ್ನು ಮಂಗಳ ವಾರ ಸಡಗರ- ಸಂಭ್ರಮದಿಂದ ಆಚರಿಸಲಾಯಿತು. ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕು ಕೇಂದ್ರಗಳು ಸೇರಿದಂತೆ ಹಳ್ಳಿ ಹಳ್ಳಿಗ ಳಲ್ಲೂ ರಾಸುಗಳನ್ನು ಕಿಚ್ಚು ಹಾಯಿಸುವ ಜೊತೆಗೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಕ್ರಾಂತಿ ಆಚರಿಸಲಾಯಿತು. ಮಹಿಳೆಯರು, ಹೆಣ್ಣು ಮಕ್ಕಳು ನೆರೆಯವರು ಹಾಗೂ ಬಂಧುಗಳಿಗೆ ಎಳ್ಳು-ಬೆಲ್ಲ, ಕಬ್ಬು ಹಂಚಿ ಸಂಭ್ರಮಿಸಿದರು. ಹಬ್ಬದ ಅಂಗವಾಗಿ ದೇವಾಲಯ ಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು….

ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು
ಮಂಡ್ಯ

ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು

ಶ್ರೀರಂಗಪಟ್ಟಣ: ತನ್ನ ಸಹಪಾಠಿಗಳೊಂದಿಗೆ ಈಜಲು ಕಾವೇರಿ ನದಿಗಿಳಿದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೂವರು ಪ್ರಾಣಾಪಾಯ ದಿಂದ ಪಾರಾಗಿರುವ ಘಟನೆ ತಾಲೂಕಿನ ಕಾರೇಕುರ ಗ್ರಾಮದ ಬಳಿ ಇಂದು ಮಧ್ಯಾಹ್ನ ನಡೆದಿದೆ. ಮೈಸೂರಿನ ರಘುರಾಮ್ ಅವರ ಪುತ್ರ ಹೇಮಂತ್ (21) ಮೃತ ವಿದ್ಯಾರ್ಥಿಯಾಗಿದ್ದು, ಈತನ ಸಹಪಾಠಿ ಗಳಾದ ಕೌಶಿಕ್, ಮನೋಜ್ ಹಾಗೂ ಲೋಕರಂಜನ್ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಈ ನಾಲ್ವರು ಮೈಸೂರು ತಾಲೂಕಿನ ಬೆಳವಾಡಿಯ ಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಬಿ.ಇ ವ್ಯಾಸಂಗ ಮಾಡುತ್ತಿದ್ದರು. ಮೃತ ಹೇಮಂತ್…

ಕರೀಘಟ್ಟಕ್ಕೆ ಕಿಡಿಗೇಡಿಗಳ ಬೆಂಕಿ; ಅಪಾರ ಅರಣ್ಯ, ಹುಲ್ಲುಗಾವಲು ಭಸ್ಮ
ಮಂಡ್ಯ

ಕರೀಘಟ್ಟಕ್ಕೆ ಕಿಡಿಗೇಡಿಗಳ ಬೆಂಕಿ; ಅಪಾರ ಅರಣ್ಯ, ಹುಲ್ಲುಗಾವಲು ಭಸ್ಮ

ಮಂಡ್ಯ: ಪ್ರಸಿದ್ಧ ಪ್ರವಾಸಿತಾಣ ಕರೀಘಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು, ಹತ್ತಾರು ಎಕರೆ ಅರಣ್ಯ ಭೂಮಿ ಮರಗಳ ಸಹಿತ ಬೆಂಕಿಯ ಜ್ವಾಲೆಗೆ ಭಸ್ಮವಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ಸಮೀಪದ ಕರೀಘಟ್ಟ ದಲ್ಲಿ ಎತ್ತರವಾಗಿ ಹುಲ್ಲು ಬೆಳೆದಿದ್ದು, ಒಣಗಿ ದ್ದವು. ಶ್ರೀನಿವಾಸ ದೇವಾಲಯದ ಮುಂಭಾಗದ ಈ ಬೆಟ್ಟಕ್ಕೆ ಚಿನ್ನನಾಯಕ ನಹಳ್ಳಿ ಭಾಗದಿಂದ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು, ವಾತಾವರಣದಲ್ಲಿ ಗಾಳಿ ಬೀಸಿದಂತೆಲ್ಲಾ ಬೆಂಕಿಯ ಜ್ವಾಲೆ ಇತರೆಡೆಗೂ ಹಬ್ಬಿ ಬೆಂಕಿಗೆ ಹತ್ತಾರು ಎಕರೆ ಬೆಟ್ಟದ ಪ್ರದೇಶ, ಮರಗಿಡಗಳು ಸೇರಿದಂತೆ ಬೆಟ್ಟದಲ್ಲಿದ್ದ…

ಭೂಮಿ-ವಸತಿ ಕಲ್ಪಿಸಲು ಆಗ್ರಹಿಸಿ ಭಾರೀ ಪ್ರತಿಭಟನೆ
ಮಂಡ್ಯ

ಭೂಮಿ-ವಸತಿ ಕಲ್ಪಿಸಲು ಆಗ್ರಹಿಸಿ ಭಾರೀ ಪ್ರತಿಭಟನೆ

ಮಂಡ್ಯ: ಜಿಲ್ಲೆಯಲ್ಲಿ ಹಲವು ದಶಕಗಳಿಂದ ವಾಸವಾಗಿರುವ ಹಕ್ಕಿಪಿಕ್ಕಿ ಮತ್ತು ಅಲೆಮಾರಿ ಸಮುದಾಯಕ್ಕೆ ಭೂಮಿ- ವಸತಿ ನೀಡಲು ಆಗ್ರಹಿಸಿ ಕರ್ನಾಟಕ ಜನಶಕ್ತಿ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಭಾರೀ ಪ್ರತಿಭಟನೆ ನಡೆಸಲಾಯಿತು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಪ್ರತಿಭಟನಾ ಮೆರವಣಿಗೆ ಹೊರಟ ಹಕ್ಕಿಪಿಕ್ಕಿ ಸಮುದಾಯದ ನೂರಾರು ಪ್ರತಿಭಟನಾಕಾ ರರು, ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆ ಗೊಂಡು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಿತಿಯ ಸಂಚಾಲಕ ಸಿದ್ದರಾಜು ಮಾತ…

ನರ್ಸ್ ಕೊಲೆ ಪ್ರಕರಣ: ಭಗ್ನಪ್ರೇಮಿಗೆ  ಜೀವಾವಧಿ ಸಜೆ, 75 ಸಾವಿರ ರೂ. ದಂಡ
ಮಂಡ್ಯ

ನರ್ಸ್ ಕೊಲೆ ಪ್ರಕರಣ: ಭಗ್ನಪ್ರೇಮಿಗೆ ಜೀವಾವಧಿ ಸಜೆ, 75 ಸಾವಿರ ರೂ. ದಂಡ

ಮಂಡ್ಯ:ನಾಲ್ಕು ವರ್ಷಗಳ ಹಿಂದೆ ಪ್ರೀತಿ, ಮದುವೆಗೆ ನಿರಾಕ ರಿಸಿದ ಯುವತಿಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಗ್ನಪ್ರೇಮಿ ಯೊಬ್ಬನಿಗೆ ಮಂಡ್ಯ ಜಿಲ್ಲಾ ಸತ್ರನ್ಯಾಯಾ ಲಯ ಜೀವಾವಧಿ ಶಿಕ್ಷೆ ಹಾಗೂ 75 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಚಂದ ಗಾಲು ಗ್ರಾಮದ ಉಮೇಶ್ (28) ಎಂಬಾತನೇ ಜೀವಾವಧಿ ಶಿಕ್ಷೆಗೆ ಒಳಗಾದ ಭಗ್ನಪ್ರೇಮಿ. ಪ್ರಕರಣದ ಹಿನ್ನೆಲೆ: ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದ ಉಮೇಶ್ ಅದೇ ಗ್ರಾಮದ ಪ್ರತಿಮಾ ಎಂಬ ಯುವತಿಯನ್ನು ಪ್ರೀತಿ ಮಾಡುವಂತೆ ಹಾಗೂ ತನ್ನನ್ನೆ ಮದುವೆ…

1 2 3 53