ಮಂಡ್ಯ

ಕ್ಷಯರೋಗ ಮುಕ್ತ ಗ್ರಾಪಂ ಮಾಡಲು ಕ್ರಮ
ಮಂಡ್ಯ

ಕ್ಷಯರೋಗ ಮುಕ್ತ ಗ್ರಾಪಂ ಮಾಡಲು ಕ್ರಮ

March 25, 2022

ಭಾರತೀನಗರ, ಮಾ.24(ಅ.ಸತೀಶ್)- ಕ್ಷಯರೋಗ ಮುಕ್ತ ಗ್ರಾಮಪಂಚಾಯಿತಿಯನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಇಂದು ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ವಕ್ರತುಂಡ ವೆಂಕಟೇಶ್ ತಿಳಿಸಿದರು. ಇಲ್ಲಿಗೆ ಸಮೀಪದ ಮಣಿಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾ.ಪಂ, ಆರೋಗ್ಯ ಇಲಾಖೆ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಯೋಗದೊಂದಿಗೆ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕ್ಷಯ ರೋಗ…

ಭಗತ್‌ಸಿಂಗ್, ಸುಖ್‌ದೇವ್, ರಾಜ್‌ಗುರುಗೆ  ಇನ್ನೂ ಹುತಾತ್ಮರ ಪಟ್ಟ ದೊರೆತಿಲ್ಲ
ಮಂಡ್ಯ, ಮೈಸೂರು

ಭಗತ್‌ಸಿಂಗ್, ಸುಖ್‌ದೇವ್, ರಾಜ್‌ಗುರುಗೆ ಇನ್ನೂ ಹುತಾತ್ಮರ ಪಟ್ಟ ದೊರೆತಿಲ್ಲ

March 24, 2022

ಮಂಡ್ಯ, ಮಾ.೨೩- ದೇಶದ ಸ್ವಾತಂತ್ರ್ಯ ಹೋರಾಟ ದಿಂದ ಮಡಿದ ಭಗತ್‌ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಅನೌಪಚಾರಿಕವಾಗಿ ‘ಹುತಾತ್ಮ’ರು ಎಂದು ಕರೆಯಲಾಗುತ್ತದೆಯೇ ಹೊರತು, ಭಾರತ ಸರಕಾರದಿಂದ ಅಧಿಕೃತವಾಗಿ ಅವರಿಗೆ ‘ಹುತಾತ್ಮ’ ಪಟ್ಟ ಸಿಕ್ಕಿಲ್ಲ. ಸುಖ್ ದೇವ್ ಕುಟುಂಬ ಈ ಮೂವರಿಗೂ ಹುತಾತ್ಮ ಪಟ್ಟ ನೀಡು ವಂತೆ ಹೋರಾಡುತ್ತಲೇ ಇದೆ ಎಂದು ನೇಗಿಲ ಯೋಗಿ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ರೋಟರಿ ರಮೇಶ್ ಹೇಳಿದರು. ನಗರದ ಅರಕೇಶ್ವರ ನಗರದಲ್ಲಿರುವ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಭಾರತ ಸರ್ಕಾರ ಯುವ ಕಾರ್ಯ…

ಮಂಡ್ಯ ಜಿಲ್ಲಾದ್ಯಂತ ಪುನೀತ್ ‘ಜೇಮ್ಸ್’ ವೈಭವ
ಮಂಡ್ಯ

ಮಂಡ್ಯ ಜಿಲ್ಲಾದ್ಯಂತ ಪುನೀತ್ ‘ಜೇಮ್ಸ್’ ವೈಭವ

March 18, 2022

ಮಂಡ್ಯ, ಮಾ.17(ಮೋಹನ್‍ರಾಜ್)- ಕನ್ನಡ ಚಿತ್ರರಂಗದ ಖ್ಯಾತ ನಟ, ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ಕುಮಾರ್ ಅವರ 47ನೇ ವರ್ಷದ ಹುಟ್ಟುಹಬ್ಬವನ್ನು ಮಂಡ್ಯ ನಗರ ಸೇರಿದಂತೆ ಜಿಲ್ಲಾದ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರ ಬೃಹತ್ ಪ್ಲೆಕ್ಸ್ ಹಾಗೂ ಕಟೌಟ್‍ಗಳನ್ನು ಹಾಕಿ ಅದಕ್ಕೆ ಹೂಮಾಲೆ, ಕ್ಷೀರಾಭಿಷೇಕ ನಡೆಸಿ, ಅನ್ನಸಂತರ್ಪಣೆ ಮಾಡಿ ನೆಚ್ಚಿನ ನಟನನ್ನು ಸ್ಮರಿಸಿದರು. ಮಂಡ್ಯ ನಗರದ ವಿವಿಧ ವೃತ್ತಗಳಲ್ಲಿ ಪುನೀತ್ ರಾಜ್‍ಕುಮಾರ್ ಪ್ಲೆಕ್ಸ್‍ಗಳಿಗೆ ಹಾರ ಹಾಕಿ ಅನ್ನಸಂತರ್ಪಣೆ ಮಾಡುವ ಮೂಲಕ ಅಪ್ಪುಗೆ ನಮನ ಸಲ್ಲಿಸಲಾಯಿತು….

ತಜ್ಞರ ಸಮಿತಿಯಿಂದ ಮೈಷುಗರ್ ಕಾರ್ಖಾನೆ ಪರಿಶೀಲನೆ
ಮಂಡ್ಯ

ತಜ್ಞರ ಸಮಿತಿಯಿಂದ ಮೈಷುಗರ್ ಕಾರ್ಖಾನೆ ಪರಿಶೀಲನೆ

March 8, 2022

ಮಂಡ್ಯ, ಮಾ.7(ಮೋಹನ್‍ರಾಜ್)- ರಾಜ್ಯ ಸರ್ಕಾರ ಜೂನ್ ವೇಳೆಗೆ ಆರಂಭಿಸ ಬೇಕೆಂದುಕೊಂಡಿರುವ ಜಿಲ್ಲೆಯ ಪ್ರತಿಷ್ಠಿತ ಮೈಷುಗರ್ ಸಕ್ಕರೆ ಕಾರ್ಖಾನೆಯ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲು ಪುಣೆಯಿಂದ ಮೂವರು ಅಧಿಕಾರಿಗಳ ತಜ್ಞರ ಸಮಿತಿ ಕಾರ್ಖಾನೆಗೆ ಆಗಮಿಸಿದ್ದು, ಸೋಮ ವಾರದಿಂದ ಪರಿಶೀಲನೆ ಆರಂಭವಾಗಿದೆ. ಪುಣೆಯ ತಜ್ಞ ಅಧಿಕಾರಿಗಳಾದ ಡಾ. ಕಾಳಯ್ಯ, ಡಾ.ಲೊಂಡೆ, ಡಾ.ಸಂಜಯ್ ನೇತೃತ್ವದಲ್ಲಿ ಪರಿಶೀಲನೆ ಪ್ರಾರಂಭ ವಾಗಿದ್ದು, ಇಂದು ಬೆಳಗ್ಗೆ ಅಧಿಕಾರಿಗಳ ಆಗಮನಕ್ಕೂ ಮುನ್ನ ಕಾರ್ಖಾನೆಯ ಜಿಎಂ ಶಿವಾನಂದಮೂರ್ತಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕಾರ್ಖಾನೆಯ ಸಿಬ್ಬಂದಿ ಹಾಗೂ ಪ್ರಮುಖ…

ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ
ಮಂಡ್ಯ

ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ

March 5, 2022

ಶ್ರೀರಂಗಪಟ್ಟಣ, ಮಾ.4(ವಿನಯ್ ಕಾರೇಕುರ)- ಕತ್ತು ಕೊಯ್ದು ಯುವಕನನ್ನು ಗುರುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಿದ್ದರೆ, ಶುಕ್ರವಾರ ವೃದ್ಧೆ ಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ. ಬೆಳಗೊಳ ಹೋಬಳಿಯ ಕಾರೇಕುರ ಗ್ರಾಮದಲ್ಲಿ ಸಾಗರ್(28) ಎಂಬ ಯುವಕನನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ, ನಂತರ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದರೆ, ಬೆಳಗೊಳ ಗ್ರಾಮದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಮಂಗಳಮ್ಮ(65) ಎಂಬ ವೃದ್ಧೆಯನ್ನು ಶುಕ್ರವಾರ ಮಧ್ಯಾಹ್ನದಿಂದ ರಾತ್ರಿ 9.30ರೊಳಗೆ ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಂದಿದ್ದಾರೆ. ಯುವಕನ…

ಹಿರಿಯ ಮುತ್ಸದ್ದಿ ಹೆಚ್.ಡಿ.ಚೌಡಯ್ಯ ಇನ್ನಿಲ್ಲ
ಮಂಡ್ಯ

ಹಿರಿಯ ಮುತ್ಸದ್ದಿ ಹೆಚ್.ಡಿ.ಚೌಡಯ್ಯ ಇನ್ನಿಲ್ಲ

February 17, 2022

ಮಂಡ್ಯ, ಫೆ.೧೬(ಮೋಹನ್‌ರಾಜ್)- ಮಂಡ್ಯ ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿ ಶಿಕ್ಷಣ ತಜ್ಞ, ಸಹಕಾರಿ ಧುರೀಣ ಹಾಗೂ ಮಾಜಿ ಶಾಸಕ ಡಾ.ಹೆಚ್.ಡಿ. ಚೌಡಯ್ಯ(೯೪) ತಡರಾತ್ರಿ ೨.೩೦ರಲ್ಲಿ ಸ್ವಗ್ರಾಮ ತಾಲೂಕಿನ ಹೊಳಲು ಗ್ರಾಮ ದಲ್ಲಿ ವಿಧಿವಶರಾದರು. ಇತ್ತೀಚೆಗೆ ಅವರ ಪತ್ನಿ ದೊಡ್ಡಲಿಂಗಮ್ಮನವರ ಅಗಲಿಕೆಯ ನಂತರ ತೀವ್ರವಾಗಿ ನೊಂದಿದ್ದ ಹೆಚ್.ಡಿ. ಚೌಡಯ್ಯ ಅವರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ೧೯೨೮ರಲ್ಲಿ ಮಂಡ್ಯ ತಾಲೂ ಕಿನ ಹೊಳಲು ಗ್ರಾಮದಲ್ಲಿ ಜನಿಸಿದ ಚೌಡಯ್ಯ, ಬಿಎಸ್ಸಿ (ಅಗ್ರಿ) ಪದವೀಧರ…

ಮಹಿಳೆ, ನಾಲ್ವರು ಮಕ್ಕಳೂ ಸೇರಿ ಒಂದೇ ಕುಟುಂಬದ ಐವರ ಭೀಕರ ಹತ್ಯೆ
ಮಂಡ್ಯ

ಮಹಿಳೆ, ನಾಲ್ವರು ಮಕ್ಕಳೂ ಸೇರಿ ಒಂದೇ ಕುಟುಂಬದ ಐವರ ಭೀಕರ ಹತ್ಯೆ

February 7, 2022

ಶ್ರೀರಂಗಪಟ್ಟಣ, ಫೆ.6(ವಿನಯ್ ಕಾರೇ ಕುರ)-ಶ್ರೀರಂಗಪಟ್ಟಣ ತಾಲೂಕು ಕೆಆರ್‍ಎಸ್ ಗ್ರಾಮದಲ್ಲಿ ಶನಿವಾರ ತಡರಾತ್ರಿ ಮಹಿಳೆ ಹಾಗೂ ನಾಲ್ವರು ಮಕ್ಕಳು ಸೇರಿ ದಂತೆ ಒಂದೇ ಕುಟುಂಬದ ಐವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಗ್ರಾಮದ ಬಜಾರ್ ಲೈನ್ ಬಡಾ ವಣೆಯ ಗಂಗಾರಾಮ್ ಎಂಬುವರ ಪತ್ನಿ ಲಕ್ಷ್ಮಿ(30), ಮಕ್ಕಳಾದ ರಾಜು(10), ಕೋಮಲ್(7), ಕುನಾಲ್(4) ಮತ್ತು ಗಂಗಾರಾಮ್ ಅವರ ಸಹೋದರ ಗಣೇಶ್ ಅವರ ಮಗ ಗೋವಿಂದ(8) ಹತ್ಯೆಗೀಡಾದವರಾಗಿದ್ದಾರೆ. ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಗಂಗಾ ರಾಮ್, ತನ್ನ ಸಹೋದರ ಗಣೇಶ್ ಮತ್ತು ಅತ್ತಿಗೆ ಚಂಪಾಡಿ…

ಕುಡಿಯುವ ನೀರಿನ ಯೋಜನೆ ಅಪೂರ್ಣ
ಮಂಡ್ಯ

ಕುಡಿಯುವ ನೀರಿನ ಯೋಜನೆ ಅಪೂರ್ಣ

February 6, 2022

ಮಳವಳ್ಳಿ, ಫೆ.5(ಮೋಹನ್‍ರಾಜ್)-ಪುರಸಭೆಯ 24×7 ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಲೋಕಾ ಯುಕ್ತ ಅಥವಾ ಸಿಬಿಐ ತನಿಖೆಗೆ ಒತ್ತಾಯಿಸಿ ಸದಸ್ಯರು ಹೋರಾಟ ನಡೆಸಿದ ಘಟನೆ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆಯಿತು. ಪಟ್ಟಣದ ಪುರಸಭೆಯ ಸಭಾಂ ಗಣದಲ್ಲಿ ಅಧ್ಯಕ್ಷೆ ರಾಧಾ ನಾಗರಾಜು ಅಧ್ಯಕ್ಷತೆ ಹಾಗೂ ಶಾಸಕ ಡಾ.ಕೆ.ಅನ್ನ ದಾನಿ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಸಭೆಯು ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು 14ನೇ ಹಣಕಾಸಿನ ಯೋಜನೆಯಲ್ಲಿ ಬಿಜೆಪಿ ಸದಸ್ಯರ ವಾರ್ಡ್ ಗಳಿಗೆ ಬರೀ 1.5 ಲಕ್ಷ ಅನುದಾನ ನೀಡಿದ್ದು, ಜೆಡಿಎಸ್ ಸದಸ್ಯರ…

ರಾಸಾಯನಿಕ ಸೋರಿಕೆಯಿಂದ ಬೆಳೆ ನಾಶ ಪ್ರಕರಣ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಎಂ.ಶ್ರೀನಿವಾಸ್
ಮಂಡ್ಯ

ರಾಸಾಯನಿಕ ಸೋರಿಕೆಯಿಂದ ಬೆಳೆ ನಾಶ ಪ್ರಕರಣ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಎಂ.ಶ್ರೀನಿವಾಸ್

February 6, 2022

ಮಂಡ್ಯ,ಫೆ.5(ಮೋಹನ್‍ರಾಜ್)- ತಾಲೂಕಿನ ಬಸರಾಳು ಹೋಬಳಿಯ ಕಾರೇಕಟ್ಟೆ ಗ್ರಾಮದ ಸಮೀಪ ಕೀರ್ತಿ ಇಂಡ ಸ್ಟ್ರೀಸ್ ಹೆಸರಿನ ರಾಸಾಯನಿಕಗಳ ತಯಾ ರಿಕಾ ಕಾರ್ಖಾನೆಯಲ್ಲಿ ಸಲ್ಫೂರಿಕ್ ಆಸಿಡ್ ಸೋರಿಕೆಯಿಂದ ಉಂಟಾದ ದುರಂತದಿಂ ದಾಗಿ ಸುತ್ತಮುತ್ತಲಿನ 10 ಎಕರೆ ಪ್ರದೇಶ ದಲ್ಲಿ ಬೆಳೆ ನಾಶವಾಗಿದ್ದ ಹಿನ್ನೆಲೆಯಲ್ಲಿ ಶಾಸಕ ಎಂ.ಶ್ರೀನಿವಾಸ್ ಅಧಿಕಾರಿಗಳೊಂ ದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಕಾರ್ಖಾ ನೆಯ ರಾಸಾಯನಿಕ ಸೋರಿಕೆಯಿಂದಾಗಿ ತೆಂಗು, ಟೊಮ್ಯಾಟೋ, ರಾಗಿ ಮುಂತಾದ ಬೆಳೆ ನಾಶವಾಗಿವೆ. ಇದಕ್ಕೆ ಹೊಂದಿ ಕೊಂಡಂತಿರುವ ಬಾಳೇನಹಳ್ಳಿ ಅರಣ್ಯ…

ಪಿಡಿಓ ವಿರುದ್ಧ ಅಗಸರಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಮಂಡ್ಯ

ಪಿಡಿಓ ವಿರುದ್ಧ ಅಗಸರಹಳ್ಳಿ ಗ್ರಾಮಸ್ಥರ ಪ್ರತಿಭಟನೆ

February 6, 2022

ಕೆ.ಆರ್.ಪೇಟೆ, ಫೆ.5-ಮೀನು ಸಾಕಾ ಣಿಕೆಗೆ ಈಗಾಗಲೇ ನಿಯಮಾನುಸಾರ ಹರಾಜಾಗಿರುವ ಅಗಸರಹಳ್ಳಿ ಕೆರೆಯನ್ನು ಮರು ಹರಾಜಿಗೆ ಒಳಪಡಿಸಿರುವ ಪಿಡಿಓ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ತಾಲೂಕಿನ ಅಗಸರಹಳ್ಳಿ ಗ್ರಾಮಸ್ಥರು ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಅಗಸರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜು ಮಾತನಾಡಿ, ತಾಲೂಕಿನ ಮುರು ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅಗಸರಹಳ್ಳಿ ಕೆರೆಯಲ್ಲಿ ಅಗಸರಹಳ್ಳಿ ಗ್ರಾಮದ ವೆಂಕಟೇಶ್ ಬಿನ್ ವೆಂಕಟೇಗೌಡ ಅವರಿಗೆ 2016 ರ ಜ. 22ರಲ್ಲಿ ಹರಾಜು ಮೂಲಕ 5 ವರ್ಷಗಳ ಅವಧಿಗೆ…

1 2 3 4 5 105
Translate »