ಮಂಡ್ಯ,ನ.16- ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಎಲ್ಲಾ ರಸ್ತೆಗಳು ಗುಂಡಿಗಳಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಮೊನ್ನೆಯಷ್ಟೇ ನಿವೃತ್ತ ಯೋಧನೋರ್ವ ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ಹೋಗಿ ಸಾವನ್ನಪ್ಪಿದ್ದರು. ಇದಾಗಿಯೂ ಎಚ್ಚೆತ್ತುಕೊಳ್ಳದ ಸಂಬಂಧಿಸಿದ ಅಧಿಕಾರಿಗಳು ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿರಲಿಲ್ಲ. ಆದರೆ ಇದೀಗ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ಮುಂದಾಗಿದ್ದು, ಇಂದಿನಿಂದ ನಗರದ ಪ್ರಮುಖ ರಸ್ತೆಗಳ ಗುಂಡಿಗಳನ್ನು ಸ್ವಂತ ಖರ್ಚಿನಿಂದ ಮುಚ್ಚಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ವೈಯಕ್ತಿಕ ವೆಚ್ಚದಲ್ಲಿ ಮಂಡ್ಯ ನಗರಾದ್ಯಂತ ಇರುವ ಅಪಾಯಕಾರಿ ರಸ್ತೆ…
ಆಸ್ಪತ್ರೆಗೆ ಮಗು ಕರೆದೊಯ್ಯಬೇಕು… ಮತ್ತೆ ಇಂಥ ತಪ್ಪು ಮಾಡಲ್ಲ ಬಿಡಿ ಸಾ…
November 4, 2022ಮಂಡ್ಯ,ನ.3-ಕಾನೂನಿಗೆ ಕರುಣೆ ಇಲ್ಲದಾಯ್ತಾ… ಏಳೆಂಟು ತಿಂಗಳ ಹಸುಗೂಸಿನೊಂದಿಗೆ ಜಿಲ್ಲಾ ಸ್ಪತ್ರೆಗೆ ಚಿಕಿತ್ಸೆಗೆಂದು ಬೈಕ್‍ನಲ್ಲಿ ತೆರಳುತ್ತಿದ್ದ ದಂಪತಿ ತಡೆದ ಸಂಚಾರಿ ಪೊಲೀಸರು ದಂಡ ಪಾವತಿಸು ವವರೆಗೂ ನಾವು ಬಿಡೆವು ಎಂದು ಪಟ್ಟು ಹಿಡಿದಿ ದ್ದರಿಂದ ತಾಯಿ ಮತ್ತು ಮಗು ಕಾದು ಕಾದು ಹೈರಾ ಣಾದ ಹೃದಯ ಕಲಕುವ ಚಿತ್ರಣ ಕಂಡ ಸಾರ್ವ ಜನಿಕರು ಪೊಲೀಸರಿಗೆ ಹಿಡಿಶಾಪ ಹಾಕಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಯಗುಚಗುಪ್ಪೆ ಗ್ರಾಮದ ಅಭಿಷೇಕ್, ತನ್ನ ಬೈಕ್‍ನಲ್ಲಿ ಏಳೆಂಟು ತಿಂಗಳ ಹಸುಗೂಸಿ ನೊಂದಿಗೆ ಪತ್ನಿಯನ್ನು ಚಿಕಿತ್ಸೆಗಾಗಿ…
ನಾನು ಛೀ-ಥೂ ಎನಿಸಿಕೊಂಡು ಅಧಿಕಾರ ನಡೆಸಲಿಲ್ಲ
October 29, 2022ಮಂಡ್ಯ,ಅ.28- ರಾಜ್ಯದ ಜನರ ಆಶೀರ್ವಾ ದದಿಂದ ಐದು ವರ್ಷ ಮುಖ್ಯಮಂತ್ರಿ ಯಾಗಿ ಆಡಳಿತ ನಡೆಸಿದ ನಾನು ಯಾರೊ ಬ್ಬರಿಂದಲೂ ಛೀ… ಥೂ… ಎನಿಸಿಕೊಂಡು ಅಧಿಕಾರ ನಡೆಸಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದೆ ತಟ್ಟಿಕೊಂಡು ಹೇಳಿದರು. ಶುಕ್ರವಾರ ತಾಲೂಕಿನ ಬಸರಾಳು ಹೋಬಳಿಯ ತಿರುಮಲಾಪುರ ಗ್ರಾಮದಲ್ಲಿ ಶ್ರೀ ಹುಲಿಯೂರಮ್ಮದೇವಿ (ಹಳೇ ಊರಮ್ಮ) ದೇವಾಲಯ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಸ್ಥಾಪಿತವಾಗಿರುವ ಶ್ರೀ ಹುಲಿಯೂರಮ್ಮದೇವಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಉದ್ಘಾಟನಾ ಮಹೋತ್ಸವದಲ್ಲಿ ಭಾಗ ವಹಿಸಿ ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗ…
ಕೆಆರ್‍ಎಸ್ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
October 29, 2022ಶ್ರೀರಂಗಪಟ್ಟಣ, ಅ.28(ವಿನಯ್ ಕಾರೇಕುರ)- ಮತ್ತೆ ಮತ್ತೆ ಕೆಆರ್‍ಎಸ್ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಮಾಡಿದೆ. ಕಳೆದ ಶನಿವಾರ ಕೆ.ಆರ್.ಎಸ್ ಅಣೆಕಟ್ಟೆ ಮೇಲೆ ಚಿರತೆ ಕಾಣಿಸಿಕೊಂಡಿತ್ತು. ಈಗ ಮತ್ತೆ ಇಂದು ಸಂಜೆ 6 ಗಂಟೆ ವೇಳೆಗೆ ಬೃಂದಾವನದ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ ವಾಗಿ ಮತ್ತೆ ಆತಂಕ ಸೃಷ್ಟಿ ಮಾಡಿದೆ. ಅಣೆಕಟ್ಟೆ ಪಕ್ಕದಲ್ಲಿರುವ ನಾರ್ತ್ ಗೇಟ್‍ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಉಸ್ತುವಾರಿ ಅಧಿಕಾರಿ ಸಂತೋಷ್ ಗಸ್ತು ತಿರುಗುವಾಗ ಚಿರತೆಯ ಚಲನವಲನ ಗಮನಿಸಿ ಅನುಮಾನಗೊಂಡು ಸಿಸಿಟಿವಿ…
ಪ್ರವಾಸಿಗರಿಗೆ ಬೃಂದಾವನ ಮುಕ್ತ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರಿಕೆ
October 24, 2022ಶ್ರೀರಂಗಪಟ್ಟಣ, ಅ.23- ಕೆಆರ್‍ಎಸ್ ಬೃಂದಾವನ ದಲ್ಲಿ ಚಿರತೆ ಶೋಧನೆ ನಂತರ ಇಂದು ಪ್ರವಾಸಿಗರಿಗೆ ಬೃಂದಾವನವನ್ನು ಮುಕ್ತಗೊಳಿಸಲಾಯಿತು. ಅಣೆಕಟ್ಟೆ ಬಳಿ ಶನಿವಾರ ಚಿರತೆ ಕಾಣಿಸಿಕೊಂಡಿದ್ದ ರಿಂದ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರನ್ನು ನಿರ್ಬಂ ದಿಸಿ, ಕೂಂಬಿಂಗ್ ಆರಂಭಿಸಲಾಗಿತ್ತು. ಅರಣ್ಯಾಧಿಕಾರಿ ಗಳಾದ ಮಹದೇವಸ್ವಾಮಿ ಹಾಗೂ ಅನಿತಾ ನೇತೃತ್ವ ದಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿ ಶನಿವಾರ ಸಂಜೆಯಿಂ ದಲೇ ಬೃಂದಾವನದ ಉತ್ತರ ಹಾಗೂ ದಕ್ಷಿಣ ದ್ವಾರ ಗಳು ಸೇರಿದಂತೆ ಅಣೆಕಟ್ಟೆ ಸುತ್ತಮುತ್ತ ಚಿರತೆ ಹೆಜ್ಜೆ ಗುರುತಿನ ಆಧಾರದಲ್ಲಿ ಹುಡುಕಾಟ ನಡೆಸಲಾಗಿತ್ತು. ಇದೇ ವೇಳೆ…
ದೀಪಾವಳಿ ಅಂಗವಾಗಿ ಫೋಟೊ ಸ್ಟುಡಿಯೋ ಬೋರ್ಡ್ ಸ್ವಚ್ಛಗೊಳಿಸುವ ವೇಳೆ ದುರಂತ ವಿದ್ಯುತ್ ತಂತಿ ತಗುಲಿ ಫೋಟೋಗ್ರಾಫರ್ಸ್ ಸಾವು
October 23, 2022ಮದ್ದೂರು, ಅ.22- ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಮರಳಿಗ ಗ್ರಾಮದ ರಾಮೇಗೌಡ-ಜಯಲಕ್ಷ್ಮಮ್ಮ ಅವರ ಪುತ್ರ ಎಂ.ಆರ್. ವಿವೇಕ(42) ಹಾಗೂ ತಾಲೂಕಿನ ಗೆಜ್ಜಲಗೆರೆ ಗ್ರಾಮದ ಜಿ.ಕೆ.ಶಿವಣ್ಣ-ಅನ್ನಪೂರ್ಣ ದಂಪತಿ ಪುತ್ರ ಜಿ.ಎಸ್. ಮಧುಕುಮಾರ್ (27) ದುರಂತ ಸಾವಿಗೀಡಾದವರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಸಗರಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮಿ ಫೋಟೋ ಸ್ಟುಡಿಯೋ ಸ್ವಚ್ಛಗೊಳಿಸಿದ ನಂತರ ನಾಮಫಲಕವನ್ನು ಶುದ್ಧಿಗೊಳಿಸಿ, ಅದನ್ನು ಅಂಗಡಿಯ ಮೇಲೆ ಅಳ ವಡಿಸಲು ಹೋದ ಸಂದರ್ಭದಲ್ಲಿ ಪಕ್ಕದಲ್ಲೇ ಹಾದು…
ಕೆಆರ್‍ಎಸ್ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ
October 23, 2022ಶ್ರೀರಂಗಪಟ್ಟಣ, ಅ.22-ತಾಲೂಕಿನ ಕೆಆರ್‍ಎಸ್ ಅಣೆಕಟ್ಟೆ ಹಾಗೂ ಬೃಂದಾವನ ಉದ್ಯಾನವನ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಬೃಂದಾವನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಶನಿವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ನಿಗಮದ ಕೆಲಸಗಾರರು ಅಣೆಕಟ್ಟೆ ಬಳಿ ಗಿಡ-ಗಂಟಿ ತೆರವು ಮಾಡುತ್ತಿದ್ದ ವೇಳೆ ಅಣೆಕಟ್ಟೆಯ ದಕ್ಷಿಣ ದ್ವಾರದ ಬಳಿಯ ನಗುವನ ತೋಟದಿಂದ ಅಣೆಕಟ್ಟೆ ಮೇಲ್ಭಾಗದ ಸೌತ್ ಗೇಟ್ ಮೂಲಕ ಚಿರತೆ ಬರುತ್ತಿರುವುದನ್ನು ಗಮನಿಸಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಮಾಹಿತಿ…
ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿ ಬಳಿಯ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳಕ್ಕೆ ಅದ್ಧೂರಿ ಚಾಲನೆ
October 15, 2022ಕೆ.ಆರ್.ಪೇಟೆ,ಅ.14- ನೀರು ನಮ್ಮ ಜೀವನಾಡಿಯಾಗಿದ್ದು, ಇದನ್ನು ಪೂಜಿಸಿ, ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ರಾಜ್ಯಸಭಾ ಸದಸ್ಯರೂ ಆದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಸಲಹೆ ನೀಡಿದ್ದಾರೆ. ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿ ಬಳಿಯ ತ್ರಿವೇಣಿ ಸಂಗಮದಲ್ಲಿ ಆಯೋಜಿಸಲಾಗಿದ್ದ ಮಹಾ ಕುಂಭಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಹಳಷ್ಟು ವಸ್ತುಗಳು ನಮ್ಮ ಜೀವನದಲ್ಲಿ ಸಹಕಾರಿಯಾಗಿರುತ್ತವೆ. ಆಯುಧ ಪೂಜೆಯಲ್ಲಿ ನಾವು ಬಳಸುವಂತಹ ಆಯುಧಗಳು ಹಾಗೂ ವಸ್ತುಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು. ನೀರು ಕೃಷಿ, ಕೈಗಾರಿಕೆ ಮಾತ್ರವಲ್ಲ,…
ಮಳವಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣ; ವೈದ್ಯಕೀಯ ವರದಿ ಆಧರಿಸಿ ಟ್ಯೂಷನ್ ಟೀಚರ್ ಕಾಂತರಾಜು ಬಂಧನ
October 14, 2022ಮಳವಳ್ಳಿ, ಅ.13-ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ನಿರ್ಮಾಣ ಹಂತದ ಕಟ್ಟಡದಲ್ಲಿರುವ ಸಂಪ್ ನಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ತಿರುವು ದೊರೆತಿದ್ದು, ಟ್ಯೂಷನ್ ಟೀಚರ್, ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಟ್ಯೂಷನ್ ಟೀಚರ್ ಕಾಂತರಾಜು, 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವೆಸಗಿ, ಹತ್ಯೆ ಮಾಡಿದ ಕಾಮುಕನಾಗಿದ್ದು, ಈತನನ್ನು ಬಂಧಿಸಿರುವ ಮಳವಳ್ಳಿ ಟೌನ್ ಠಾಣೆ ಪೊಲೀಸರು ಕೊಲೆ, ಸಾಕ್ಷ್ಯ ನಾಶ, ಅತ್ಯಾಚಾರ ಮತ್ತು ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ. ವಿವರ: ಮಳವಳ್ಳಿ ಪಟ್ಟಣದ ಖಾಸಗಿ ಶಾಲೆಯಲ್ಲಿ…
ಟ್ಯೂಷನ್‍ಗೆ ಹೋದ ಬಾಲಕಿ ಶವ ನಿರ್ಮಾಣ ಹಂತದ ಮನೆಯ ಸಂಪ್‍ನಲ್ಲಿ ಪತ್ತೆ
October 13, 2022ಮಳವಳ್ಳಿ.ಅ.12- ಟ್ಯೂಷನ್‍ಗೆ ತೆರಳಿದ್ದ ಬಾಲಕಿಯ ಶವ ನಿರ್ಮಾಣ ಹಂತದ ಮನೆಯ ಸಂಪ್‍ನಲ್ಲಿ ಪತ್ತೆ ಯಾಗಿರುವ ಘಟನೆ ಮಳವಳ್ಳಿ ಪಟ್ಟಣ ದಲ್ಲಿ ವರದಿಯಾಗಿದೆ. ಸುರೇಶ್ ಹಾಗೂ ಅಶ್ವಿನಿ ದಂಪತಿಯ ಪುತ್ರಿ, ಹತ್ತು ವರ್ಷದ ದಿವ್ಯಾ ನಿನ್ನೆ ಮಧ್ಯಾಹ್ನ ಕಾಂತರಾಜ್ ಎಂಬುವರ ಬಳಿ ಟ್ಯೂಷನ್‍ಗೆ ಹೋಗು ವುದಾಗಿ ಮನೆಯಿಂದ ಹೋಗಿದ್ದಳು. ಆದರೆ ಸಂಜೆಯಾದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಟ್ಯೂಷನ್ ನಡೆಯುವ ಸ್ಥಳ ಹಾಗೂ ಇತರೆಡೆ ಪೋಷಕರು ರಾತ್ರಿ ಯಿಡೀ ಹುಡುಕಾಟ ನಡೆಸಿದ್ದರೂ ಬಾಲಕಿಯ ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ಯಾರೋ…