ಆಸ್ಪತ್ರೆಗೆ ಮಗು ಕರೆದೊಯ್ಯಬೇಕು… ಮತ್ತೆ ಇಂಥ ತಪ್ಪು ಮಾಡಲ್ಲ ಬಿಡಿ ಸಾ…
ಮಂಡ್ಯ

ಆಸ್ಪತ್ರೆಗೆ ಮಗು ಕರೆದೊಯ್ಯಬೇಕು… ಮತ್ತೆ ಇಂಥ ತಪ್ಪು ಮಾಡಲ್ಲ ಬಿಡಿ ಸಾ…

November 4, 2022

ಮಂಡ್ಯ,ನ.3-ಕಾನೂನಿಗೆ ಕರುಣೆ ಇಲ್ಲದಾಯ್ತಾ… ಏಳೆಂಟು ತಿಂಗಳ ಹಸುಗೂಸಿನೊಂದಿಗೆ ಜಿಲ್ಲಾ ಸ್ಪತ್ರೆಗೆ ಚಿಕಿತ್ಸೆಗೆಂದು ಬೈಕ್‍ನಲ್ಲಿ ತೆರಳುತ್ತಿದ್ದ ದಂಪತಿ ತಡೆದ ಸಂಚಾರಿ ಪೊಲೀಸರು ದಂಡ ಪಾವತಿಸು ವವರೆಗೂ ನಾವು ಬಿಡೆವು ಎಂದು ಪಟ್ಟು ಹಿಡಿದಿ ದ್ದರಿಂದ ತಾಯಿ ಮತ್ತು ಮಗು ಕಾದು ಕಾದು ಹೈರಾ ಣಾದ ಹೃದಯ ಕಲಕುವ ಚಿತ್ರಣ ಕಂಡ ಸಾರ್ವ ಜನಿಕರು ಪೊಲೀಸರಿಗೆ ಹಿಡಿಶಾಪ ಹಾಕಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಯಗುಚಗುಪ್ಪೆ ಗ್ರಾಮದ ಅಭಿಷೇಕ್, ತನ್ನ ಬೈಕ್‍ನಲ್ಲಿ ಏಳೆಂಟು ತಿಂಗಳ ಹಸುಗೂಸಿ ನೊಂದಿಗೆ ಪತ್ನಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಅಭಿಷೇಕ್ ಹಾಗೂ ಅವರ ಪತ್ನಿ ಹೆಲ್ಮೆಟ್ ಧರಿಸದ ಹಿನ್ನೆಲೆಯಲ್ಲಿ ಸಂಚಾರಿ ಎಎಸ್‍ಐ ರಘುಪ್ರಕಾಶ್ ಮಂಡ್ಯದ ಮಹಾವೀರ್ ವೃತ್ತದಲ್ಲಿ ಬೈಕ್ ಅಡ್ಡಗಟ್ಟಿ, ಕೀ ಕಸಿದುಕೊಂಡು 500 ರೂ. ದಂಡ ಪಾವತಿಸಿ, ಬೈಕ್ ತೆಗೆದುಕೊಂಡು ಹೋಗು ವಂತೆ ತಾಕೀತು ಮಾಡಿದ್ದಾರೆ. ಸಂಚಾರ ಪೆÇಲೀಸ ರಲ್ಲಿ ಅಭಿಷೇಕ್, ತನ್ನ ಬಳಿ ಹಣವಿಲ್ಲ. ಮಿಮ್ಸ್ ಆಸ್ಪತ್ರೆ ಯಲ್ಲಿ ಮಗು ಹಾಗೂ ಪತ್ನಿಗೆ ಉಚಿತ ಸಾಮಾನ್ಯ ತಪಾಸಣೆಗೆ ಬಂದಿದ್ದು, ಮತ್ತೊಮ್ಮೆ ಈ ರೀತಿ ತಪ್ಪು ಮಾಡುವುದಿಲ್ಲ. ದಯವಿಟ್ಟು ಬಿಟ್ಟು ಬಿಡಿ ಎಂದು ಪರಿ ಪರಿಯಾಗಿ ಅಂಗಲಾಚಿದ್ದಾರೆ.

ಯಾವುದಕ್ಕೂ ಕಿವಿಗೊಡದ ಪೊಲೀಸಪ್ಪ, ದಂಡ ಪಾವತಿಸಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಇದನ್ನು ಕಂಡ ಸ್ಥಳೀಯರು, ದಾರಿಹೋಕರು ಮರುಗಿ, ಮಗು ಇದೆ, ದಯವಿಟ್ಟು ಬಿಟ್ಟು ಬಿಡಿ ಸಾರ್… ಎಂದು ಅಭಿಷೇಕ್ ಮತ್ತು ಆತನ ಪತ್ನಿ, ಮಗು ಪರ ಬೇಡಿದರೂ ಮನ ಕರಗದ ಎಎಸ್‍ಐ, ದಂಡ ಕಟ್ಟದೇ ಬಿಡುವುದ್ಹೇಗೆ ಎಂದು ಹೇಳಿ ಗದರಿಸಿದ್ದಾರೆ.

ಕಾದು… ಕಾದು… ಬಳಿಕ ವಿಧಿ ಇಲ್ಲದೇ ಪತ್ನಿ ಹಾಗೂ ಮಗುವನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಾದಚಾರಿ ಮಾರ್ಗದಲ್ಲಿ ಕೂರಿಸಿ, ತನ್ನ ಸ್ನೇಹಿತನ ಕಾಡಿ-ಬೇಡಿ, ಆತನಿಂದ ಗೂಗಲ್ ಪೇ ಮೂಲಕ ಹಣ ಸ್ವೀಕರಿಸಿದ್ದಾರೆ. ವಿವಿ ರಸ್ತೆಯ ಎಟಿಎಂಗೆ ಓಡಿ ಹೋಗಿ ಹಣ ಡ್ರಾ ಮಾಡಿಕೊಂಡು ಬಂದು, ದಂಡ ಪಾವತಿಸಿ, ಪೆÇಲೀಸರಿಂದ ಬೈಕ್ ಬಿಡಿಸಿ ಕೊಂಡು ಪತ್ನಿ ಹಾಗೂ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ನೋಟೀಸ್ ನೀಡಿ, ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ತಿಳಿ ಹೇಳಿ ಬೈಕ್ ಸವಾರನನ್ನು ಕಳುಹಿಸಬಹುದಿತ್ತಲ್ಲವೇ? ಕಾನೂನಿನಲ್ಲೂ ಮಾನವೀಯತೆಗೆ ಅವಕಾಶವಿಲ್ಲವೇ. ಪರಿಸ್ಥಿತಿಗನುಸಾರ ವಿನಾಯ್ತಿಗಳಿಲ್ಲವೇ. ಇದ್ದರೂ ಶ್ರೀಮಂತರಿಗೆ ಮಾತ್ರ ಎಂದಿನಿಸುತ್ತದೆ. ಇವು ಬಡವರ ಪಾಲಿಗಿಲ್ಲ ಅನ್ನಿಸುತ್ತೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Translate »