ಅಂಕಣಗಳು

ಪರಿಸರ-ಮಾನವ ನಂಟಿನ ಸಂಕೇತ ‘ಪುತ್ತರಿ’
ಅಂಕಣಗಳು, ಪ್ರಸ್ತುತಿ

ಪರಿಸರ-ಮಾನವ ನಂಟಿನ ಸಂಕೇತ ‘ಪುತ್ತರಿ’

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೋ ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆಹೊಳೆ ಹೊಳೆವಳೋ ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ ಅಲ್ಲೆ ಆ ಕಡೆ ನೋಡಲಾ ಅಲ್ಲೆ ಕೊಡಗರ ನಾಡೆಲಾ ಅಲ್ಲೆ ಕೊಡಗರ ಬೀಡೆಲಾ ಮಂಗಳೂರು ಮೂಲದ ಮಡಿಕೇರಿಯಲ್ಲಿ ಕಾಲೇಜು ಉಪನ್ಯಾಸಕ ರಾಗಿದ್ದ ಕವಿ ಪಂಜೆ ಮಂಗೇಶರಾಯರು ಕೊಡಗನ್ನು ಹಾಡಿದ್ದು ಹೀಗೆ. ಕೆಲವೇ ಕೆಲವು ಪ್ಯಾರಾಗಳಲ್ಲಿ ಅವರು ಕೊಡಗಿನ ಚಿತ್ರವನ್ನು ಕಟ್ಟಿಕೊಟ್ಟ…

ಕಲಿಯಲು ಬದುಕಿರಿ… ಬದುಕಲು ಕಲಿಸಿರಿ!!
ಅಂಕಣಗಳು, ಚಿಂತನೆ

ಕಲಿಯಲು ಬದುಕಿರಿ… ಬದುಕಲು ಕಲಿಸಿರಿ!!

ನಮ್ಮ ಶಿಕ್ಷಣ ಪದ್ಧತಿ ಸರಿಯಾಗಿಲ್ಲ ಎಂಬುದು ತಿಳಿದಿರುವ ವಿಚಾರ. ಈ ಬಗ್ಗೆ ಅನೇಕ ಶಿಕ್ಷಣ ತಜ್ಞರೇ ಹೇಳುತ್ತಲೇ ಇದ್ದಾರೆ. ಅಷ್ಟಕ್ಕೂ ಈಗ ಜಾರಿಯಲ್ಲಿರುವ ಶಿಕ್ಷಣ ಪದ್ಧತಿ ನಮ್ಮದಲ್ಲ. ಅದು ಬ್ರಿಟಿಷರು ತಮ್ಮ ಆಡಳಿತ ನಿರ್ವಹಣೆಗೆ ಮಾಡಿಕೊಂಡಿದ್ದ ವ್ಯವಸ್ಥೆ. ತಮ್ಮ ಕಛೇರಿಗಳಲ್ಲಿ ಕಾರಕೂನರಾಗಿ ಕೆಲಸ ನಿರ್ವಹಿಸಲು ಇಂಗ್ಲೆಂಡ್‍ನಿಂದ ಜನರನ್ನು ಕರೆಸಬೇಕಾಗಿತ್ತು. ಇದು ಬಹಳ ದುಬಾರಿ. ಹಾಗಾಗಿ ಇಲ್ಲಿನವರನ್ನೇ ಈ ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅವರಿಗೆ ಬಹಳ ಕಡಿಮೆ ಖರ್ಚಿನಲ್ಲಿ ಜನ ಸಿಗುತ್ತಿದ್ದರು. ಹಾಗಾಗಿ ಅದನ್ನೇ ಶಿಕ್ಷಣ ನೀತಿ ಮಾಡಿದರು. ಕಚೇರಿಗಳಲ್ಲಿ…

ಕರ್ನಾಟಕದ `ಸಾಂದರ್ಭಿಕ ಕೂಸು’ ಎನ್ನುವ ಮುಖ್ಯಮಂತ್ರಿಯವರಿಗೆ ನನ್ನ ಒಂದು ಪಿಸುಮಾತು
ಅಂಕಣಗಳು, ಛೂಮಂತ್ರ

ಕರ್ನಾಟಕದ `ಸಾಂದರ್ಭಿಕ ಕೂಸು’ ಎನ್ನುವ ಮುಖ್ಯಮಂತ್ರಿಯವರಿಗೆ ನನ್ನ ಒಂದು ಪಿಸುಮಾತು

ನಾನು ಒಂದು ಪತ್ರಿಕಾ ಆಫ್ ಸೆಟ್ ಮುದ್ರಣಾಲಯದ ಮಾಲೀಕ ನಾಗಿ ಅದಕ್ಕೆ ಸಂಬಂಧಪಟ್ಟಂತೆ ತಿಳಿದುಕೊಂಡ ತಂತ್ರಜ್ಞಾನದ ಮೊದಲ ವಿಷಯವೆಂದರೆ ‘ನೀರು ಮತ್ತು ತೈಲ ಒಂದಕ್ಕೊಂದು ಮಿಶ್ರಣವಾಗುವುದಿಲ್ಲ.’ ಮೇ 12, 2018ರ ವಿಧಾನಸಭಾ ಚುನಾವಣೆಗೆ ಮುಂಚೆ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮದೇ ಆದ ರಾಜಕೀಯ ಸಿದ್ಧಾಂತಗಳನ್ನು ಮತ್ತು ಪ್ರಣಾಳಿಕೆಯನ್ನು ಜನರ ಮುಂದೆ ಇಟ್ಟು ಒಬ್ಬರನ್ನೊಬ್ಬರು ಸೋಲಿಸಲು ತಂತ್ರಗಾರಿಕೆಯಲ್ಲಿ ನಿರತರಾದರು. ಅದು ಎಷ್ಟರ ಮಟ್ಟಿಗೆ ತೀವ್ರವಾಗಿತ್ತೆಂದರೆ, ಆಫ್ ಸೆಟ್ ಮುದ್ರಣದಲ್ಲಿ ಬಳಸುವ ನೀರು ಮತ್ತು ತೈಲದಿಂದ ತಯಾರಿ ಸಿದ ಬಣ್ಣ…

ಅಂಕಣಗಳು, ಈ ಜೀವನ ನಮ್ಮದು

ಕಳೆದ ತಿಂಗಳು ಮಂಗಳೂರು ಆಕಾಶವಾಣಿ ‘ದಾಂಪತ್ಯ ಗೀತೆ’ ಎಂಬ ನನ್ನ ಕವಿತೆಯನ್ನು ತಿಂಗಳ ಹಾಡು ‘ಭಾವಗಾನ’ ಕಾರ್ಯಕ್ರಮ ದಲ್ಲಿ ಪ್ರಸಾರ ಮಾಡಿತು. ಪ್ರತಿ ಶುಕ್ರವಾರ ತಿಂಗಳಲ್ಲಿ ನಾಲ್ಕು ಬಾರಿ ಪ್ರಸಾರ ಮಾಡಿದ ಆಕಾಶವಾಣಿಗೆ ನನ್ನ ಕೃತಜ್ಞತೆಗಳು. ದಾಂಪತ್ಯ ಪ್ರಾರಂಭವಾಗುವ ಮೊದಲೇ ದಂಪತಿ ದೂರವಾಗುವ ಕಾಲವಿದು. ನೂರಾರು ವರ್ಷಗಳಿಂದ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಕೌಟುಂಬಿಕ ಮೌಲ್ಯ ಗಳು ನಮ್ಮ ಕಣ್ಣೆದುರೇ ಛಿದ್ರವಾಗು ತ್ತಿರು ವುದಕ್ಕೆ ನಮ್ಮ ಅಸಹಾಯಕತೆ ಕಾರಣವೋ ಅಥವಾ ಪ್ರತಿಷ್ಠೆಯೋ ನನಗಂತೂ ತಿಳಿಯುತ್ತಿಲ್ಲ. ಹತ್ತಾರು ವರ್ಷಗಳು…

ವಿಧಾನಸೌಧವೇ ಭ್ರಷ್ಟಾಚಾರದ ಗಂಗೋತ್ರಿ
ಅಂಕಣಗಳು, ಪ್ರಚಲಿತ

ವಿಧಾನಸೌಧವೇ ಭ್ರಷ್ಟಾಚಾರದ ಗಂಗೋತ್ರಿ

ಮಾನವೀಯತೆ ಜೊತೆಗೆ ಹೆಂಗರುಳು ಇರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬಡವರು-ಕಷ್ಟದಲ್ಲಿರುವವರನ್ನು ಕಂಡರೆ ಮನ ಕರಗಿ ಕಣ್ಣೀರು ಬರುತ್ತೆ. ದೇಹಿ ಎಂದು ಬಂದವರಿಗೆ ಕೈಲಾಗುವ ನೆರವು ನೀಡುವುದು, ಅಧಿಕಾರದಲ್ಲಿದ್ದಷ್ಟು ಕಾಲ ಜನ ಮೆಚ್ಚುವ ಕೆಲಸ ಮಾಡುವ ಕಳಕಳಿ ಇದ್ದಂತೆ ಕಾಣುತ್ತಿದೆ. ಗ್ರಾಮೀಣ ಜನರ ಜೀವನ ಹಾಗೂ ನಾಡಿ-ಮಿಡಿತಬಲ್ಲ ಅವರಿಗೆ ಸಹಾಯ ಮಾಡುವ ಹೃದಯ ಶ್ರೀಮಂತಿಕೆಯು ಇದೆ. ಶಕ್ತಿ ಕೇಂದ್ರವೆಂದು ಕರೆಯುವ ವಿಧಾನಸೌಧ ಹಾಗೂ ಅದರ ಸುತ್ತ ಮುತ್ತ ಇರುವ ಸರ್ಕಾರಿ ಕಛೇರಿ ಗಳು ಭ್ರಷ್ಟಾಚಾರದ ಗಂಗೋತ್ರಿ ಇದ್ದಂತೆ. ವಿಧಾನಸೌಧ ಒಂದು…

ಕಾಫಿ ಲೋಟದ ಹುಡುಗ ಐ ಲವ್ ಯು
ಅಂಕಣಗಳು, ದೀಪ ಸಾಲು

ಕಾಫಿ ಲೋಟದ ಹುಡುಗ ಐ ಲವ್ ಯು

ಬದುಕಿನ ತಿರುವಿನಲ್ಲಿ ಏನೆಲ್ಲಾ ನೆನಪುಗಳು ಅವಿತು ಕುಳಿತು ಮತ್ತೆ ಮತ್ತೆ ಮುತ್ತಿಕೊಳ್ಳುತ್ತವೆ ಎಂದರೆ ಕೆಲವೊಂದು ನೆನಪುಗಳು ನಮ್ಮನ್ನು ಎಚ್ಚರಿಸಿ ಪಾಠ ಹೇಳಿ ಹೋಗಿರುತ್ತವೆ. ಮತ್ತಷ್ಟು ನೆನಪುಗಳು ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತವೆ. ಇನ್ನೊಂದಿಷ್ಟು ನೆನಪುಗಳು ನಮ್ಮನ್ನು ಹೊಟ್ಟೆ ಹುಣ್ಣಾ ಗಿಸುವಂತೆ ನಗಿಸಿ ತಳದಲ್ಲೆಲ್ಲೋ ಒಂದು ಮೆಸೇಜು ಕೊಟ್ಟು ಹೋಗಿರುತ್ತವೆ. ಸಾಮಾನ್ಯವಾಗಿ ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ನಗೆ ದೀಪದ ಬೆಳಕು ಹೀಗೆ ಹಾದು ಹೋಗಿರುತ್ತದೆ. ಸರಳತೆ, ಸಜ್ಜನಿಕೆ, ಪ್ರಮಾಣಿಕತೆ, ದಕ್ಷತೆ, ಪ್ರೀತಿ, ಅಭಿಮಾನ ಮುಂತಾದ ಸಾಮಾಜಿಕ ಸೌಂದರ್ಯಗಳನ್ನು ನೆನಪಿಸುವ…

ಮಕ್ಕಳ ಕಳ್ಳರೆಂಬ ಸಮೂಹ ಸನ್ನಿ
ಅಂಕಣಗಳು, ದೀಪ ಸಾಲು

ಮಕ್ಕಳ ಕಳ್ಳರೆಂಬ ಸಮೂಹ ಸನ್ನಿ

ಇದೊಂದು ಘಟನೆಯನ್ನು ನಿಮಗೆ ಹೇಳಲೇಬೇಕು. ನಾವೆಲ್ಲ ಪ್ರೈಮರಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾಗ ಈಗಿನಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೋ, ವ್ಯಾನು, ಬಸ್ಸುಗಳು ಇನ್ನು ರೋಡಿಗಿಳಿಯದಿದ್ದ ಕಾಲ ಅದು. ಅಷ್ಟಕ್ಕೂ ಶಾಲೆ ಬಿಟ್ಟ ಮೇಲೆ ತಂದೆ-ತಾಯಿಗಳು ಗೇಟಿನ ಹತ್ತಿರ ನಿಂತು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವ ಧಾವಂತ ಗಳು ಇರದಿದ್ದ ಕಾಲವದು. ಶಾಲೆ ಬಿಟ್ಟ ಮೇಲೆ ಹಳೇ ಸ್ಕೂಲ್ ಬ್ಯಾಗಿನ ದಾರ ಕ್ಕೊಂದು ಗಂಟು ಹಾಕಿ, ಬೆನ್ನಿಗಾನಿಸಿ ಕೊಂಡು ಎದೆಯ ಮುಂಭಾಗದ ಬ್ಯಾಗಿನ ದಾರಕ್ಕೆ ಕೈ ಸಿಕ್ಕಿಸಿಕೊಂಡು ಅವರವರ…

ಕೊಡಗು ಕರ್ನಾಟಕ ಭೂಪಟದಿಂದ ಮರೆಯಾಗುವ ಆತಂಕ!
ಅಂಕಣಗಳು, ಛೂಮಂತ್ರ

ಕೊಡಗು ಕರ್ನಾಟಕ ಭೂಪಟದಿಂದ ಮರೆಯಾಗುವ ಆತಂಕ!

ಕೊಡಗಿನ, ಕರ್ನಾಟಕದ ಹಾಗೂ ದೇಶದ ಅಭಿವೃದ್ಧಿ ಹೆಸರಿ ನಲ್ಲಿ 60 ಹಾಗೂ 30 ಮೈಲಿ ಉದ್ದಗಲದ ಅತೀ ಪ್ರಾಕೃತಿಕ ಸೌಂದರ್ಯ ಹಾಗೂ ಪಶ್ಚಿಮ ಘಟ್ಟದ ಮಳೆಕೊಡುವ ಕಾಡು ಮೇಡುಗಳಿಂದ ಕೂಡಿದ ಕೊಡಗು ಜಿಲ್ಲೆ ಬಲಿಪಶುವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಇದರ ವಿರುದ್ಧ ಪ್ರತಿಭಟನೆ ಮಾಡುವ ಕೊಡಗಿನ ಜನರ ಅಸಹಾಯಕತೆಯನ್ನು ನೋಡಿ ದರೆ ಅಯ್ಯೋ ಪಾಪ ಎನಿಸುತ್ತಿದೆ. ಅಷ್ಟೇ ಅಲ್ಲ, ಇನ್ನು 10-20 ವರ್ಷ ಗಳಲ್ಲಿ ಕೊಡಗಿನ ಭೌಗೋಳಿಕ ಅಸ್ತಿತ್ವವೇ ಇಲ್ಲದೇ ಹೋದರೂ ಆಶ್ಚರ್ಯಪಡಬೇಕಾಗಿಲ್ಲ. ನಾಲ್ಕು ಪಥದ ರಾಜ್ಯ…

ಆಳುವವರಿಗೆ ವಿದ್ಯಾರ್ಹತೆ ಬೇಕಲ್ಲವೇ?
ಅಂಕಣಗಳು, ಚಿಂತನೆ

ಆಳುವವರಿಗೆ ವಿದ್ಯಾರ್ಹತೆ ಬೇಕಲ್ಲವೇ?

– ಡಾ. ವಿ. ರಂಗನಾಥ್ ಕರ್ನಾಟಕ ವಿಧಾನಸಭೆಗೆ 12.5.2018 ರಂದು ಚುನಾವಣೆ ನಡೆದು, 15.2.2018 ರಂದು ಮತಗಳ ಎಣಿಕೆಯೂ ಮುಗಿದಿದೆ. ಈ ಸಲದ ಚುನಾ ವಣೆಯ ಫಲಿತಾಂಶ ಹೇಗಿರಬಹುದೆಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಹತ್ತಾರು ದಿನ ರಾಜ್ಯ ಪ್ರವಾಸ ಮಾಡಿ, ಬಿಜೆಪಿಯವರು ಹೇಳಿಕೊಳ್ಳುವಂತೆ ‘ಮೋದಿ ಅಲೆ’ ಸೃಷ್ಟಿಸಿದ್ದರು. ಅದಕ್ಕೆ ಕೌಂಟರ್ ಎನ್ನುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಅನೇಕ ಬಾರಿ ರಾಜ್ಯ ಪ್ರವಾಸ ಮಾಡಿ, ಅವರ ಪಕ್ಷದ ಪರ ಪ್ರಚಾರ ಮಾಡಿದರು….

Nipah Virus: how to get rid of it?
ಅಂಕಣಗಳು, ವೈದ್ಯಕೀಯ

Nipah Virus: how to get rid of it?

– ಡಾ. ಎಸ್.ಪಿ. ಯೋಗಣ್ಣ ಮನುಷ್ಯ ಇಂದು ಹಲವಾರು ಸೋಂಕು ರೋಗಗಳಿಗೀಡಾಗುತ್ತಿದ್ದಾನೆ. 19ನೇ ಶತಮಾನ ಮತ್ತು 20ನೇ ಶತಮಾನದ ಪ್ರಾರಂಭದಲ್ಲಿ ಸಿಡುಬು, ಪ್ಲೇಗ್, ಪೋಲಿಯೋ ಇತ್ಯಾದಿ ಸೋಂಕು ರೋಗ ಗಳಿಗೀಡಾಗು ತ್ತಿದ್ದು, ಅವುಗಳನ್ನು ನಿರ್ಮೂಲನೆ ಮಾಡಿದ ಮೇಲೆ ಹೊಸ ಹೊಸ ಭಯಾನಕ ಸೋಂಕು ರೋಗ ಗಳು ಇಂದು ಜನ್ಮತಾಳುತ್ತಿವೆ. ಸೋಂಕಾಣುಗಳು ಸೂಕ್ಷ್ಮಜೀವಿ ನಿರೋಧಕ ಔಷಧಗಳಿಗೆ ಪ್ರತಿರೋಧತ್ವ ವನ್ನು ರೂಢಿಸಿಕೊಂಡು ನಾಶವಾಗದೆ ಉಳಿಯುವ ಉಪಾಯಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಇದು ಹೊಸ ಹೊಸ ಸೂಕ್ಷ್ಮಜೀವಿ ನಿರೋಧಕ ಔಷಧಗಳ ಅನ್ವೇಷಣೆಗಳಿಗೆ ನಾಂದಿಯಾಗುತ್ತಿದೆ. ಸೂಕ್ಷ್ಮಜೀವಿಗಳೂ…

1 2