ಚಾಮರಾಜನಗರ, ಡಿ.26(ಎಸ್‍ಎಸ್)- ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಬಿಳಿಕಲ್ಲು ಕ್ವಾರಿ ಕುಸಿದು ಮೂವರು ಸಾವನ್ನಪ್ಪಿದ್ದ ಘಟನೆ ಈ ಭಾಗದ ಜನರ ಮನಸ್ಸಿ ನಿಂದ ಮಾಸುವ ಮುನ್ನವೇ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದ ಬಳಿ ಇಂತಹುದೇ ದುರಂತವೊಂದು ಸಂಭವಿಸಿ, ಮೂವರು ದುರಂತ ಸಾವಿಗೀಡಾಗಿದ್ದಾರೆ. ಬಿಳಿಕಲ್ಲು ಕ್ವಾರಿಯ ಕಲ್ಲುಗುಡ್ಡ ಕುಸಿದು ಚಾಮರಾಜನಗರ ತಾಲೂಕಿನ ಕಾಗಲವಾಡಿ ಮೋಳೆ ಗ್ರಾಮದ ಮಹದೇವಶೆಟ್ಟಿ ಅವರ ಪುತ್ರ ಶಿವರಾಜು(29), ಮಾದಶೆಟ್ಟಿಯವರ ಪುತ್ರ ಕುಮಾರ(35) ಹಾಗೂ ಕುಳ್ಳಮಾದಶೆಟ್ಟಿಯವರ ಪುತ್ರ ಸಿದ್ದರಾಜು (31) ಮೃತ ಕಾರ್ಮಿಕರು. ಈ ಪೈಕಿ…
ಅಳಿವಿನಂಚಿನಲ್ಲಿರುವ‘ಕಾಡುಪಾಪ’ಗಳ ರಕ್ಷಣೆ
December 16, 2022ಕೊಳ್ಳೇಗಾಲ, ಡಿ.15- ಬೆಂಗಳೂರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಅಳಿವಿನಂಚಿನಲ್ಲಿರುವ ಎರಡು ಕಾಡುಪಾಪ, ಬೇಟೆಗಾರರಿಂದ ರಕ್ಷಿಸುವಲ್ಲಿ ಕೊಳ್ಳೇ ಗಾಲ ಸಿಐಡಿ ಅರಣ್ಯ ಸಂಚಾರಿ ದಳದ ಪೆÇಲೀಸರು ಯಶಸ್ವಿಯಾಗಿದ್ದಾರೆ. ಮಹದೇಶ್ವರ ಬೆಟ್ಟದ ಜಡೇಶೆಟ್ಟಿ ಪುತ್ರ ವೀರಭದ್ರ (58) ಮತ್ತು ಮೈಸೂರು ತಾಲೂಕು ದೊಡ್ಡಕಾನ್ಯ ಗ್ರಾಮದ ನಿವಾಸಿ ಪುಟ್ಟಸ್ವಾಮ ಪ್ಪರ ಪುತ್ರ ರಾಜುವನ್ನು ಈ ಸಂಬಂಧ ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಆಣೆಹೊಲ ಗ್ರಾಮದ ಮಹದೇವ ತಲೆಮರೆಸಿಕೊಂಡಿದ್ದಾನೆ. ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪದ ಕೈಗಾರಿಕಾ ಪ್ರದೇಶವೊಂದರ ಮುಖ್ಯ ರಸ್ತೆಯ ಬಳಿ ಎರಡು ಕಾಡುಪಾಪ…
ಪೊಲೀಸ್ ಜೀಪಿನಿಂದ ಹಾರಿ ಆರೋಪಿ ದುರಂತ ಸಾವಿನ ಪ್ರಕರಣ ಸರ್ಕಲ್ ಇನ್ಸ್‍ಪೆಕ್ಟರ್ ಸೇರಿ ಐವರು ಅಮಾನತು
December 1, 2022ಚಾಮರಾಜನಗರ, ನ.30- ಬಾಲಕಿ ಅಪ ಹರಣ ಪ್ರಕರಣದ ಆರೋಪಿ ತಪ್ಪಿಸಿಕೊಳ್ಳುವ ಸಲುವಾಗಿ ಚಲಿಸುತ್ತಿದ್ದ ಪೊಲೀಸ್ ಜೀಪಿನಿಂದ ಹಾರಿ ದುರಂತ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಯಳಂದೂರು ಪೊಲೀಸ್ ಠಾಣೆಯ ಸರ್ಕಲ್ ಇನ್‍ಸ್ಪೆಕ್ಟರ್ ಶಿವಮಾದಯ್ಯ, ಮಾಂಬಳ್ಳಿ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಮಾದೇಗೌಡ, ಎಎಸ್‍ಐ ಚೆಲುವರಾಜು, ಮಹಿಳಾ ಕಾನ್‍ಸ್ಟೇಬಲ್ ಭದ್ರಮ್ಮ ಹಾಗೂ ಕಾನ್‍ಸ್ಟೇಬಲ್ ಸೋಮ ಶೇಖರ್ ಅಮಾನತುಗೊಂಡವರು. ಅಮಾನತು ಗೊಂಡಿರುವ ಐವರ ಪೈಕಿ ಶಿವಮಾದಯ್ಯ, ಮಾದೇಗೌಡ ಹಾಗೂ ಸೋಮಶೇಖರ್ ವಿರುದ್ಧ ಎಫ್‍ಐಆರ್…
ಸಿದ್ದರಾಮಯ್ಯ ರಾಜಕೀಯ ಅಲೆಮಾರಿ
November 10, 2022ಚಾಮರಾಜನಗರ, ನ.9- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಉಪಕಾರ ಸ್ಮರಣೆ ಇಲ್ಲ. ಕೇವಲ ವೀರಾವೇಶದ ಮಾತುಗಳನ್ನು ಆಡ್ತಾರೆ. ಆತ ರಾಜಕೀಯ ಅಲೆಮಾರಿ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ಏಕವಚನದಲ್ಲೇ ವಾಗ್ಧಾಳಿ ನಡೆಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತನಗೆ ಸಹಾಯ ಮಾಡಿದವರನ್ನು ನೆನೆಯವುದಿಲ್ಲ. ಆತನಿಗೆ ಉಪಕಾರ ಸ್ಮರಣೆ ಇಲ್ಲ. ಸಭೆ ಸಮಾರಂಭಗಳಲ್ಲಿ ಕೇವಲ ವೀರಾ ವೇಶದ ಮಾತುಗಳನ್ನು ಆಡುತ್ತಾರೆ ಅಷ್ಟೇ ಎಂದು ತಮ್ಮದೇ ಧಾಟಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು…
ಚಾ.ನಗರ ಜಿಲ್ಲೆಯಾದ್ಯಂತ ಭಾರೀ ಮಳೆ
October 15, 2022ಚಾಮರಾಜನಗರ,ಅ.14-ಜಿಲ್ಲೆಯಾ ದ್ಯಂತ ಗುರುವಾರ ಮಧ್ಯರಾತ್ರಿಯಿಂದ ಶುಕ್ರ ವಾರ ಮುಂಜಾನೆವರೆಗೆ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಗುರುವಾರ ಮಧ್ಯರಾತ್ರಿ ಸುಮಾರು 2 ಗಂಟೆಯಿಂದ ಶುಕ್ರವಾರ ಬೆಳಗ್ಗೆ 6.30ರ ವರೆಗೂ ಸತತವಾಗಿ ಮಳೆ ಸುರಿಯತು. ನಗರದಲ್ಲಿ ಅವಾಂತರ: ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಮಳೆಯಿಂದ ಅವಾಂ ತರ ಸೃಷ್ಟಿಯಾಯಿತು. ಜೋಡಿರಸ್ತೆಯಲ್ಲಿ ರುವ ಜಿಲ್ಲಾಡಳಿತ ಭವನ ಮುಂಭಾಗ ಯಥಾ ಪ್ರಕಾರ ಕೆರೆಯಂತಹ ಪರಿಸ್ಥಿತಿ ನಿರ್ಮಾಣ ವಾಗಿತ್ತು. ರಾಜಕಾಲುವೆ ತುಂಬಿದ್ದರಿಂದ ಭಾರೀ ಪ್ರಮಾಣದ ನೀರು ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಹರಿಯಿತು. ಚರಂಡಿಗೆ ನೀರು…
ಚಾಮರಾಜನಗರ ಜಿಲ್ಲೆಯಲ್ಲಿ ಸಿಡಿಲಿಗೆ ಇಬ್ಬರು ಬಲಿ
September 7, 2022ಚಾಮರಾಜನಗರ, ಸೆ.6- ಸಿಡಿಲು ಬಡಿದು ಇಬ್ಬರು ರೈತರು ಸೇರಿದಂತೆ 6 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದೆ. ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ರೇವಣ್ಣ(45) ಹಾಗೂ ಹನೂರು ತಾಲೂಕಿನ ಮೀಣ್ಯಂ ಗ್ರಾಮದ ನಿವಾಸಿ ಎಸ್.ಮಾದಪ್ಪ(64) ಮೃತಪಟ್ಟವರು. ಕೆಸ್ತೂರು ಗ್ರಾಮದ ರೈತ ರೇವಣ್ಣ ಅವರು ತಮ್ಮ ಜಮೀನಿನಲ್ಲಿ ಭತ್ತ ನಾಟಿ ಮಾಡು ತ್ತಿದ್ದರು. ಈ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೀಣ್ಯಂ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ…
ಚಾಮರಾಜನಗರ ಜಿಲ್ಲೆಯಲ್ಲಿವರುಣನ ಅಟ್ಟಹಾಸ
September 6, 2022ಚಾಮರಾಜನಗರ, ಸೆ.5-ಜಿಲ್ಲೆಯಲ್ಲಿ ಮಳೆಯ ರೌದ್ರಾವತಾರ ಮುಂದುವರೆ ದಿದ್ದು, ಜಿಲ್ಲೆಯ ಚಿತ್ರಣವೇ ಬದಲಾ ಗಿದೆ. ಭಾನುವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗುಂಡ್ಲು ಪೇಟೆ ತಾಲೂಕಿನಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ವರು ಗಾಯ ಗೊಂಡಿದ್ದಾರೆ. ಜಿಲ್ಲೆಯ ಹಲವೆಡೆ ಭಾರೀ ಮಳೆಯಿಂದ ಬೆಳೆ ನಾಶವಾಗಿದ್ದರೆ, ಒಳ ಹರಿವು ಹೆಚ್ಚಳದಿಂದ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಾಗೂ ಚಿಕ್ಕ ಹೊಳೆ ಜಲಾಶಯಗಳಿಂದ ಅಪಾರ ಪ್ರಮಾಣ ದಲ್ಲಿ ಹೊರ ನೀರು ಬಿಟ್ಟಿದ್ದು, ಹಲವು ಗ್ರಾಮ ಗಳು…
ಹುಟ್ಟುಹಬ್ಬದಂದೇ ಉಪನ್ಯಾಸಕಿ ನೇಣಿಗೆ ಶರಣು
August 10, 2022ಚಾಮರಾಜನಗರ, ಆ.9- ತನ್ನ ಹುಟ್ಟುಹಬ್ಬದಂದೇ ಕಾಲೇಜು ಉಪನ್ಯಾಸಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ದುರಂತ ನಗರದಲ್ಲಿ ನಡೆದಿದೆ. ಯಳಂದೂರು ತಾಲೂ ಕಿನ ಅಂಬಳೆಯ ನಿವಾಸಿ ಮಹ ದೇವಸ್ವಾಮಿ ಪುತ್ರಿ ಚಂದನಾ(26) ಆತ್ಮಹತ್ಯೆ ಮಾಡಿಕೊಂಡವರು. ಇವರು ನಗರದ ಖಾಸಗಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಯಾಗಿದ್ದು, ಸಂಸ್ಥೆಯ ಹಾಸ್ಟೆಲ್ ನಲ್ಲೇ ವಾಸ್ತವ್ಯ ಹೂಡಿದ್ದರು. ಮಂಗಳವಾರ ಚಂದನಾ ಹುಟ್ಟುಹಬ್ಬ. ಸ್ನೇಹಿತರು, ವಿದ್ಯಾರ್ಥಿಗಳು ಬೆಳಗ್ಗೆಯೇ ಶುಭಾ ಶಯ ಕೋರಿದ್ದಾರೆ. ತನ್ನ ರೂಂನ ಗೆಳತಿಯರು ಹೊರಹೋದ ನಂತರ ಬೆಳಗ್ಗೆ 10.30ರಲ್ಲಿ ಚಂದನಾ…
ವೈಭವದ ಶ್ರೀ ಚಾಮರಾಜೇಶ್ವರ ಸ್ವಾಮಿಯ ರಥೋತ್ಸವ
July 14, 2022ಚಾಮರಾಜನಗರ, ಜು.13(ಎಸ್‍ಎಸ್)- ಇತಿಹಾಸ ಪ್ರಸಿದ್ಧ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಬ್ರಹ್ಮರಥೋತ್ಸವವು ಬುಧವಾರ ವಿಜೃಂಭಣೆಯಿಂದ ಜರು ಗಿತು. ಐದು ವರ್ಷಗಳಿಂದ ರಥೋ ತ್ಸವವು ಸ್ಥಗಿತಗೊಂಡಿದ್ದ ಕಾರಣ ಈ ಬಾರಿಯ ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಬೆಳಗ್ಗೆ 11ರಿಂದ 11.30ರವರೆಗಿನ ಶುಭ ಕನ್ಯಾ ಲಗ್ನದಲ್ಲಿ ಅಲಂಕೃತ ಶ್ರೀ ಚಾಮ ರಾಜೇಶ್ವರ ಉತ್ಸವಮೂರ್ತಿಯನ್ನು ನೂತನ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಪೂಜೆ ಸಲ್ಲಿಸಲಾಯಿತು. ಬಳಿಕ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಥದ ಮುಂದೆ ಈಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ…
ವಿಕಲಚೇತನರು, ಹಿರಿಯ ನಾಗರಿಕರಿಗೆ ಮೂಲ ಆಧಾರ ಕೇಂದ್ರದ ಮಹತ್ವದ ಯೋಜನೆಗೆ ಚಾಮರಾಜನಗರ ಆಯ್ಕೆ
July 12, 2022ಚಾಮರಾಜನಗರ, ಜು.11-ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಅವಶ್ಯ ಹಾಗೂ ಆಧಾರ ವಾಗಿ 36 ಬಗೆಯ ಆಧುನಿಕ ಸಾಧನ-ಸಲಕರಣೆ ವಿತರಿಸಲು ಕೇಂದ್ರ ಸರ್ಕಾರ ದೇಶದ 36 ಲೋಕ ಸಭಾ ಕ್ಷೇತ್ರಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ರಾಜ್ಯದ ಏಕೈಕ ಕ್ಷೇತ್ರವಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರ ಇದಕ್ಕೆ ಆಯ್ಕೆಯಾಗಿದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದರು, ಜಿಲ್ಲೆಯ ವಿಕಲಚೇತನರು ಹಾಗೂ 60…