ಚಾಮರಾಜನಗರ

ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್‍ನಿಂದ ಪ್ರತಿಭಟನೆ
ಚಾಮರಾಜನಗರ

ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್‍ನಿಂದ ಪ್ರತಿಭಟನೆ

August 26, 2021

ಚಾಮರಾಜನಗರ, ಆ.25- ನಾವು ಭಾರತೀಯರು- ಕೋಮುವಾದದ ದಲ್ಲಾಳಿ ಗಳನ್ನು ಸಹಿಸುವುದಿಲ್ಲ ಎಂಬ ಘೋಷಣೆ ಯೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರ್ರುವನಾರಾಯಣ್ ಪರ ಹಾಗೂ ಬಿಜೆಪಿ ವಿರುದ್ಧ ನಗರದಲ್ಲಿ ಬುಧವಾರ ಯುವ ಕಾಂಗ್ರೆಸ್ ಸಮಿತಿ ಹಾಗೂ ಮುಂಚೂಣಿ ಘಟಕಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಪ್ರವಾಸಿ ಮಂದಿರದ ಆವರಣ ದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾ ರರು ಅಲ್ಲಿಂದ ಮೆರವಣಿಗೆ ಹೊರಟು  ಸತ್ತಿ ರಸ್ತೆ, ಡೀವಿಯೇಷನ್ ರಸ್ತೆ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರಧಾನಿ…

15 ದಿನದೊಳಗೆ ವಸತಿ ಯೋಜನೆ ಅನುಷ್ಠಾನಕ್ಕೆ  ಅಗತ್ಯವಿರುವ ಪೂರ್ಣ ವಿವರÀ ನೀಡಲು ಸೂಚನೆ
ಚಾಮರಾಜನಗರ

15 ದಿನದೊಳಗೆ ವಸತಿ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಪೂರ್ಣ ವಿವರÀ ನೀಡಲು ಸೂಚನೆ

August 26, 2021

ಚಾಮರಾಜನಗರ, ಆ.25- ಜಿಲ್ಲೆಯನ್ನು ಗುಡಿಸಲು ರಹಿತವನ್ನಾಗಿಸಲು ಆದ್ಯತೆ ನೀಡಬೇಕಿದ್ದು, ವಸತಿ ಅಗತ್ಯವಿರುವ ಕುಟುಂಬ ಗಳು ಹಾಗೂ ವಸತಿ ಯೋಜನೆ ಅನು ಷ್ಠಾನಕ್ಕೆ ಅಗತ್ಯವಿರುವ ಸಂಪೂರ್ಣ ವಿವರ ಗಳನ್ನು 15 ದಿನಗಳೊಳಗೆ ಸಲ್ಲಿಸಬೇಕು ಎಂದು ವಸತಿ ಹಾಗೂ ಮೂಲ ಸೌಲಭ್ಯ ಅಭಿ ವೃದ್ಧಿ ಸಚಿವ ವಿ.ಸೋಮಣ್ಣ ಸೂಚಿಸಿದರು. ನಗರದ ಸರ್ಕಾರಿ ಅತಿಥಿ ಗೃಹದ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ವಸತಿ ಯೋಜನೆಗಳ ಕುರಿತು ಅಧಿಕಾರಿ ಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ…

ಧ್ರುವನಾರಾಯಣ್ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಚಾಮರಾಜನಗರ

ಧ್ರುವನಾರಾಯಣ್ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

August 24, 2021

ಚಾಮರಾಜನಗರ, ಆ.23(ಎಸ್‍ಎಸ್)- ಆರ್‍ಎಸ್‍ಎಸ್‍ನವರು ಭಾರತದ ತಾಲಿ ಬಾನಿಗಳು ಎಂಬ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾ ಯಣ್ ಅವರ ಹೇಳಿಕೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಆರ್.ಧ್ರುವ ನಾರಾಯಣ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಧ್ರುವನಾರಾಯಣ್ ಈ ಕೂಡಲೇ ಆರ್‍ಎಸ್‍ಎಸ್ ವಿರುದ್ಧ ನೀಡಿರುವ ಹೇಳಿಕೆ ಯನ್ನು ಹಿಂಪಡೆಯಬೇಕು ಹಾಗೂ ಬಹಿರಂಗವಾಗಿ…

ಶಾಲಾ-ಕಾಲೇಜಿನಲ್ಲಿ ಕೋವಿಡ್  ಮಾರ್ಗಸೂಚಿ ಉಲ್ಲಂಘಿಸದಂತೆ ಸೂಚನೆ
ಚಾಮರಾಜನಗರ

ಶಾಲಾ-ಕಾಲೇಜಿನಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸದಂತೆ ಸೂಚನೆ

August 24, 2021

ಹನೂರು, ಆ.23(ಸೋಮು)- ಶಾಲಾ- ಕಾಲೇಜುಗಳಲ್ಲಿ ಸರ್ಕಾರ ನೀಡಿರುವ ಮಾರ್ಗಸೂಚಿ ಉಲ್ಲಂಘನೆಯಾಗದ ರೀತಿಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಶಾಸಕ ಆರ್.ನರೇಂದ್ರ ಸೂಚಿಸಿದರು. ಸೋಮವಾರದಿಂದ 9, 10 ಮತ್ತು ಪಿಯುಸಿ ಭೌತಿಕ ತರಗತಿಗಳು ಪ್ರಾರಂಭವಾದ ಹಿನ್ನೆಲೆ ಪಟ್ಟಣದ ಜಿ.ವಿ.ಗೌಡ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಗಳಿಗೆ ಶಾಸಕ ನರೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋವಿಡ್ ನಿಯಮಾವಳಿ ಪಾಲನೆ ಸಂಬಂಧ ಶಾಲೆಯ ಮುಖ್ಯಶಿಕ್ಷಕ ನಿಂಗರಾಜು ಅವರಿಂದ ಮಾಹಿತಿ ಪಡೆದರು. ಬಳಿಕ ತರಗತಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ…

ಜಿಲ್ಲೆಯಾದ್ಯಂತ ಪ್ರೌಢಶಾಲಾ, ಕಾಲೇಜು ಪುನರಾರಂಭ: ಹಾಜರಾತಿ ಕಡಿಮೆ
ಚಾಮರಾಜನಗರ

ಜಿಲ್ಲೆಯಾದ್ಯಂತ ಪ್ರೌಢಶಾಲಾ, ಕಾಲೇಜು ಪುನರಾರಂಭ: ಹಾಜರಾತಿ ಕಡಿಮೆ

August 24, 2021

ಚಾಮರಾಜನಗರ, ಆ.23(ಎಸ್‍ಎಸ್)- ಕೋವಿಡ್ ಕಾರಣದಿಂದ ಜಿಲ್ಲೆಯಲ್ಲಿ ಒಂದೂ ವರೆ ವರ್ಷದಿಂದ ಸ್ಥಗಿತವಾಗಿದ್ದ ಪ್ರೌಢಶಾಲಾ, ಕಾಲೇಜು ತರಗತಿಗಳು ಪುನರಾರಂಭವಾ ಗಿದ್ದು, ಪ್ರಥಮ ದಿನವಾದ ಸೋಮವಾರ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿತ್ತು. 9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳು ಭೌತಿಕ ತರಗತಿ ಗಳಿಗೆ ಖುಷಿಯಿಂದ ತೆರಳಿದರು. ಬಹಳ ತಿಂಗಳ ಬಳಿಕ ಸಹಪಾಠಿ, ಶಿಕ್ಷಕರನ್ನು ಭೇಟಿಯಾದ ಸಂತಸ ವಿದ್ಯಾರ್ಥಿಗಳ ಮೊಗದಲ್ಲಿ ಕಂಡುಬಂದಿತು. ಎರಡು ದಿನಗಳ ಮೊದಲೇ ಸ್ವಚ್ಛಗೊಂಡು, ಸ್ಯಾನಿಟೈಜ್ ಆಗಿದ್ದ ಶಾಲಾವರಣವನ್ನು ತಳಿರು, ತೋರಣಗಳಿಂದ ಸಿಂಗಾರಗೊಳಿಸ ಲಾಗಿತ್ತು. ಶಿಕ್ಷಕರು ಮತ್ತು ಸಿಬ್ಬಂದಿ…

ಗೂಡ್ಸ್ ಟೆಂಪೋ ಪಲ್ಟಿ: ಓರ್ವ ಸಾವು
ಚಾಮರಾಜನಗರ

ಗೂಡ್ಸ್ ಟೆಂಪೋ ಪಲ್ಟಿ: ಓರ್ವ ಸಾವು

August 23, 2021

ಚಾಮರಾಜನಗರ, ಆ.22(ಎಸ್‍ಎಸ್)- ಗೂಡ್ಸ್ ಟೆಂಪೋವೊಂದು ಪಲ್ಟಿ ಹೊಡೆದು ಓರ್ವ ಸಾವನ್ನಪ್ಪಿ, 7 ಮಂದಿ ಗಾಯಗೊಂಡಿರುವ ಘಟನೆ ನಗರದ ಸಮೀಪದ ಬೇಡರ ಪುರ ಬಳಿಯ ಸರ್ಕಾರಿ ಇಂಜಿ ನಿಯರಿಂಗ್ ಕಾಲೇಜು ಬಳಿ ಶನಿವಾರ ರಾತ್ರಿ ನಡೆದಿದೆ. ತಾಲೂಕಿನ ಬ್ಯಾಡ್‍ಮೂಡ್ಲು ಗ್ರಾಮದ ಚಿಕ್ಕ ಮಹದೇವು (48) ಮೃತಪಟ್ಟವರು. ಉಳಿದಂತೆ ಚಾಲಕ ಸಿದ್ದಪ್ಪಾಜಿ, ನಾಗರಾಜು, ನಂದೀಶ್, ಮಹೇಶ್, ಪ್ರವೀಣ್, ನಿಂಗರಾಜು ಗಾಯಗೊಂಡು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಡ್‍ಮೂಡ್ಲು ಗ್ರಾಮದ ಈ 7 ಜನರು ಶನಿವಾರ ಬೆಳಗ್ಗೆ ಗೂಡ್ಸ್…

ಮೆಗಾ ಲೋಕ ಅದಾಲತ್‍ನಲ್ಲಿ ಹಲವು ಪ್ರಕರಣ ಇತ್ಯರ್ಥ
ಚಾಮರಾಜನಗರ

ಮೆಗಾ ಲೋಕ ಅದಾಲತ್‍ನಲ್ಲಿ ಹಲವು ಪ್ರಕರಣ ಇತ್ಯರ್ಥ

August 23, 2021

ಚಾಮರಾಜನಗರ, ಆ.22- ಜಿಲ್ಲೆಯಲ್ಲಿ ಆ. 14 ಹಾಗೂ 16ರಂದು ನಡೆದ ಮೆಗಾಲೋಕ್ ಅದಾ ಲತ್‍ನಲ್ಲಿ ಹಲವಾರು ವರ್ಷಗಳಿಂದ ಇತ್ಯರ್ಥವಾ ಗದೇ ಇರುವ ವ್ಯಾಜ್ಯ ಪ್ರಕರಣಗಳು ಇತ್ಯರ್ಥವಾ ಗಿದ್ದು, ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಇಲಾಖೆಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನ್‍ಪುರಿ ತಿಳಿಸಿದರು. ನಗರದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆಯಡಿ ಜನಸಾಮಾ…

ಕೋವಿಡ್ ಶಿಷ್ಟಾಚಾರ ಕಡ್ಡಾಯ ಪಾಲನೆಗೆ ಡಿಸಿ ಸೂಚನೆ
ಚಾಮರಾಜನಗರ

ಕೋವಿಡ್ ಶಿಷ್ಟಾಚಾರ ಕಡ್ಡಾಯ ಪಾಲನೆಗೆ ಡಿಸಿ ಸೂಚನೆ

August 22, 2021

ಚಾಮರಾಜನಗರ, ಆ.21- ಜಿಲ್ಲೆಯಲ್ಲಿ ಆಗಸ್ಟ್ 23 ರಿಂದ 9 ರಿಂದ 12ನೇ ತರಗತಿ ಆರಂಭವಾಗುತ್ತಿದ್ದು, ಶಾಲಾ ಕಾಲೇಜು ಗಳಲ್ಲಿ ಯಾವುದೇ ಲೋಪಗಳಿಗೆ ಅವಕಾಶ ವಾಗದಂತೆ ಕೋವಿಡ್ ಶಿಷ್ಟಾಚಾರ ಕಡ್ಡಾಯ ವಾಗಿ ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಂದು ಶಾಲಾ ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಕೋವಿಡ್-19 ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆ ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿ ದಂತೆ ಶಿಕ್ಷಣ ಇಲಾಖೆ ಹೊರಡಿಸಿರುವ…

ವಿದ್ಯಾರ್ಥಿ, ಪೋಷಕರ ಆತ್ಮವಿಶ್ವಾಸ ವೃದ್ಧಿಗೆ ಸೂಚನೆ  ನಾಳೆಯಿಂದ 9 ರಿಂದ 12ನೇ ತರಗತಿ ಆರಂಭ
ಚಾಮರಾಜನಗರ

ವಿದ್ಯಾರ್ಥಿ, ಪೋಷಕರ ಆತ್ಮವಿಶ್ವಾಸ ವೃದ್ಧಿಗೆ ಸೂಚನೆ ನಾಳೆಯಿಂದ 9 ರಿಂದ 12ನೇ ತರಗತಿ ಆರಂಭ

August 22, 2021

ಚಾಮರಾಜನಗರ, ಆ.21- ಇದೇ ತಿಂಗಳ 23ರಿಂದ 9ರಿಂದ 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಭೌತಿಕವಾಗಿ ಬೋಧನಾ ತರಗತಿಗಳು ಆರಂಭವಾಗಲಿರುವ ಹಿನ್ನೆಲೆ ಯಲ್ಲಿ ಕೋವಿಡ್ ಸಂಬಂಧಿ ಹೊರಡಿಸ ಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ)ವನ್ನು ಕಟ್ಟುನಿಟ್ಟಾಗಿ ಅನುಸರಿಸಿ ವಿದ್ಯಾರ್ಥಿಗಳು ಹಾಗೂ ಪೋಷಕ ರಿಗೆ ಆತ್ಮವಿಶ್ವಾಸ ಮೂಡಿಸಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಶನಿವಾರ ಕೋವಿಡ್ ಹಾಗೂ ಶಾಲಾ ಆರಂಭದ ಹಿನೆÀ್ನಲೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು…

ಮೈಸೂರು ನಾಗರಿಕರ ವೇದಿಕೆಯಿಂದ 62 ಭೋವಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಚಾಮರಾಜನಗರ

ಮೈಸೂರು ನಾಗರಿಕರ ವೇದಿಕೆಯಿಂದ 62 ಭೋವಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

August 21, 2021

ಚಾಮರಾಜನಗರ, ಆ.20(ಎಸ್‍ಎಸ್)- ತಾಲೂಕಿನ ಬಿ.ಜಿ.ಕಾಲೋನಿಯ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣ ದಲ್ಲಿ ಮೈಸೂರು ನಾಗರಿಕರ ವೇದಿಕೆ ವತಿ ಯಿಂದ 62 ಭೋವಿ ಕುಟುಂಬಗಳಿಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿನಸಿ ಕಿಟ್‍ಗಳನ್ನು ವಿತರಿಸಿದರು. ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಪಜ್ಞಾವಂತ ಜನರು ಸೇರಿ ಸ್ಥಾಪಿಸಿರುವ ಮೈಸೂರು ನಾಗರಿಕ ವೇದಿಕೆಯು ಗುಜರಾಜ್ ಭೂಕಂಪ, ಕೇರಳ, ಕೊಡಗಿನಲ್ಲಿ ಪ್ರವಾಹ ಸಂತ್ರಸ್ತರಿಗೂ ನೆರವಾಗಿದೆ. ಅಲ್ಲದೆ ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಜನತೆಗೂ ದಿನಸಿ ಕಿಟ್ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದೆ ಎಂದು…

1 2 3 4 5 138
Translate »