ಚಾಮರಾಜನಗರ

ಪುಣಜನೂರು ಚೆಕ್‍ಪೋಸ್ಟ್, ಅಂಗನವಾಡಿ ಕೇಂದ್ರಕ್ಕೆ ಶಾಸಕ ಭೇಟಿ: ಪರಿಶೀಲನೆ
ಚಾಮರಾಜನಗರ

ಪುಣಜನೂರು ಚೆಕ್‍ಪೋಸ್ಟ್, ಅಂಗನವಾಡಿ ಕೇಂದ್ರಕ್ಕೆ ಶಾಸಕ ಭೇಟಿ: ಪರಿಶೀಲನೆ

April 22, 2020

ಚಾಮರಾಜನಗರ ಏ.21- ತಾಲೂಕಿನ ಕಾಡಂಚಿನ ಗ್ರಾಮ ಪುಣಜನೂರಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಸರ್ಕಾರದ ವತಿಯಿಂದ ವಿತರಿಸಿರುವ ಆಹಾರ ಧಾನ್ಯ ಗಳ ದಾಸ್ತಾನನ್ನು ಪರಿಶೀಲಿಸಿದರು. ಪುಣಜನೂರಿನಲ್ಲಿ ವಾಸಿಸುವ ಗಿರಿಜನರಿಗೆ ಸರ್ಕಾರದಿಂದ ಪೂರೈಕೆ ಯಾಗಲಿರುವ ಪೌಷ್ಟಿಕ ಆಹಾರದ ಧಾನ್ಯ ಗಳಾದ ಅಕ್ಕಿ, ರಾಗಿ, ಜೋಳ, ಸಕ್ಕರೆ, ಬೆಲ್ಲ, ಅಡುಗೆ ಎಣ್ಣೆ, ತುಪ್ಪ ಆಹಾರ ಪದಾರ್ಥ ಗಳ ಪ್ರಮಾಣವನ್ನು ಪರಿಶೀಲಿಸಿದರು. ನಂತರ ಕೊರೊನಾ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಪುಣಜನೂರಿನಲ್ಲಿ ನಿರ್ಮಿಸಿರುವ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿ ಅಗತ್ಯ ವಸ್ತುಗಳ ಸಾಗಾಣಿಕೆ…

ಕಾಡಿಗೆ ಬೆಂಕಿಹಚ್ಚಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ನಾಲ್ವರ ಬಂಧನ
ಚಾಮರಾಜನಗರ

ಕಾಡಿಗೆ ಬೆಂಕಿಹಚ್ಚಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ನಾಲ್ವರ ಬಂಧನ

April 22, 2020

ಹನೂರು, ಏ.21- ಕಾಡಿಗೆ ಬೆಂಕಿಯಿಟ್ಟು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸಿರುವ ಘಟನೆ ಕಾವೇರಿ ವನ್ಯಧಾಮದ ಕೊತ್ತನೂರು ವಲಯದಲ್ಲಿ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದ ವಿನ್ಸೆಂಟ್, ಸಗಾಯ್ ರಾಜ್, ಚಾರ್ಲಿಸ್ ಸವರಿನಾಥನ್ ಹಾಗೂ ಜ್ಞಾನ ಪ್ರಕಾಶ್ ಬಂಧಿತ ಬೇಟೆಗಾರರು. ಆರೋಪಿ ಗಳು ಕಾಡಿಗೆ ಬೆಂಕಿಯಿಟ್ಟು ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನ ಬೇರೆಡೆಗೆ ಸೆಳೆದು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು ಎನ್ನಲಾಗಿದೆ. ಈ ಹಿಂದೆಯೂ ಬೇಟೆಯಾಡಿ ಆರೋಪಿಗಳು ಸಿಕ್ಕಿಬಿದ್ದಿದ್ದರು ಎಂದು ಡಿ ಎಫ್‍ಓ ಡಾ.ಎಸ್. ರಮೇಶ್ ತಿಳಿಸಿದ್ದಾರೆ. ಪರಿಕರಗಳ ವಶ:…

ಚಾಮರಾಜನಗರ ಜಿಲ್ಲೆಯಲ್ಲಿ ಕಲ್ಲಂಗಡಿ ಖರೀದಿಸಿದ ಸಂಸದ ಡಿ.ಕೆ.ಸುರೇಶ್
ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲಿ ಕಲ್ಲಂಗಡಿ ಖರೀದಿಸಿದ ಸಂಸದ ಡಿ.ಕೆ.ಸುರೇಶ್

April 21, 2020

ಚಾಮರಾಜನಗರ, ಏ.20- ಕೊರೊನಾ ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ರೈತರಿಗೆ ಚೈತನ್ಯ ತುಂಬುವ ಸಲುವಾಗಿ ರೈತರಿಂದ ಹಣ್ಣು, ತರಕಾರಿ ಖರೀದಿಸಿ ತಾವು ಪ್ರತಿನಿಧಿಸುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕ ಸಭಾ ಕ್ಷೇತ್ರದ ಬಡವರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಜಿಲ್ಲೆಯ ಹೂಗ್ಯಂ ಗ್ರಾಪಂ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ರೈತ ನಾಗೇಂದ್ರ, ನಾಗರಾಜು ಅವರು 18 ಎಕರೆ ಭೂಮಿಯಲ್ಲಿ ಬೆಳೆದಿದ್ದ ಕಲ್ಲಂಗಡಿ ತೋಟಕ್ಕೆ ಖುದ್ದು ಭೇಟಿದ ಅವರು, ಕೆಜಿಗೆ 6 ರೂ.ನಂತೆ ಕಲ್ಲಂಗಡಿ ಹಣ್ಣು ಖರೀದಿಸಿದರು. ಪಕ್ಕದಲ್ಲೇ ಬೆಳೆದಿದ್ದ…

ಪುರಾಣಿ ಪೋಡಿಗೆ ಡಿಸಿ ಭೇಟಿ: ಸೋಲಿಗರಿಗೆ ಪೌಷ್ಟಿಕ ಆಹಾರ ವಿತರಣೆ
ಚಾಮರಾಜನಗರ

ಪುರಾಣಿ ಪೋಡಿಗೆ ಡಿಸಿ ಭೇಟಿ: ಸೋಲಿಗರಿಗೆ ಪೌಷ್ಟಿಕ ಆಹಾರ ವಿತರಣೆ

April 21, 2020

ಚಾಮರಾಜನಗರ, ಏ.20- ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಪುರಾಣಿ ಪೋಡಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಸೋಮವಾರ ಭೇಟಿ ನೀಡಿ ಸೋಲಿಗರ ಕುಟುಂಬ ಗಳಿಗೆ ಪೌಷ್ಟಿಕ ಆಹಾರ ವಿತರಿಸಿ, ಅಹವಾಲು ಆಲಿಸಿದರು. ಜಿಲ್ಲಾ ಎಸ್ಪಿ ಹೆಚ್.ಡಿ ಆನಂದಕುಮಾರ್ ಅವರೊಡನೆ ಪುರಾಣಿ ಪೋಡಿಗೆ ಭೇಟಿ ಕೊಟ್ಟ ಜಿಲ್ಲಾಧಿಕಾರಿಗಳು, ರಾಗಿ, ತೊಗರಿಬೇಳೆ, ಅಲಸಂದೆ, ಕಡ್ಲೇಕಾಳು, ಅಡುಗೆ ಎಣ್ಣೆ, ನಂದಿನಿ ತುಪ್ಪ, ಮೊಟ್ಟೆ ಸೇರಿದಂತೆ 1600 ರೂ. ಮೌಲ್ಯದ ವಿವಿಧ ಆಹಾರ, ದಿನಸಿ ಸಾಮಗ್ರಿಗಳನ್ನೊಳಗೊಂಡ ಪೌಷ್ಠಿಕ ಆಹಾರವನ್ನು ಪ್ರತಿ ಸೋಲಿಗ ಕುಟುಂಬಗಳಿಗೆ ವಿತರಿಸಿದರು….

ಮಹದೇಶ್ವರಸ್ವಾಮಿ ದೇವಸ್ಥಾನದ 32 ಟನ್ ಅಕ್ಕಿ ಬಡಗ್ರಾಮಸ್ಥರಿಗೆ ವಿತರಣೆ
ಚಾಮರಾಜನಗರ

ಮಹದೇಶ್ವರಸ್ವಾಮಿ ದೇವಸ್ಥಾನದ 32 ಟನ್ ಅಕ್ಕಿ ಬಡಗ್ರಾಮಸ್ಥರಿಗೆ ವಿತರಣೆ

April 20, 2020

ಚಾಮರಾಜನಗರ, ಏ.19- ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿ ಹಾಗೂ ಕಾಡಂ ಚಿನ ಪ್ರದೇಶಗಳ 6500 ಕುಟುಂಬ ಗಳಿಗೆ ಶ್ರೀ ಮಲೆ ಮಹ ದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಲಾ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಇದಕ್ಕಾಗಿ ಒಟ್ಟು 32 ಟನ್ ಅಕ್ಕಿ ಬಳಕೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದರು. ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ರಾಷ್ಟ್ರಪತಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳಿಂದ ಕಾಣಿಕೆ…

ಚಾಮರಾಜನಗರ

ದಿನ್ನಳ್ಳಿಯಲ್ಲಿ ಕೋಳಿಗಳ ಅನುಮಾನಾಸ್ಪದ ಸಾವು

April 20, 2020

ಚಾಮರಾಜನಗರ, ಏ.19- ಹನೂರು ತಾಲೂಕು ರಾಮಾಪುರ ಹೋಬಳಿಯ ದಿನ್ನಳ್ಳಿ ಗ್ರಾಮದಲ್ಲಿ ಸ್ಥಳೀಯ ಕೋಳಿಗಳು, ಮಾಂಸದ ಕೋಳಿಗಳು ಹಾಗೂ ಕಾಗೆಗಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳೀಯ ಪಶು ವೈದ್ಯರು ಹಾಗೂ ತಾಲೂಕು ಸಹಾಯಕ ನಿರ್ದೇಶಕ ರೊಡನೆ ಖುದ್ದು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಸಿ.ವೀರಭಧ್ರಯ್ಯ ತಿಳಿಸಿದ್ದಾರೆ. ಕೋವಿಡ್-19ರ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸ್ಯಾನಿಟೈಸರ್ ಹಾಗೂ ಹೈಪೋಕ್ಲೋ ರೈಡ್‍ನ್ನು ಸಿಂಪಡಿಸಿರುವುದರಿಂದ ಅಥವಾ ಯಾವುದಾದರೂ ವಿಷ ಪದಾರ್ಥದ ಮೇವನ್ನು…

ಬಿಜೆಪಿಯಿಂದ ಸಾವಿರಾರು ಮಂದಿಗೆ ಆಹಾರ, ಪಡಿತರ ವಿತರಣೆ
ಚಾಮರಾಜನಗರ

ಬಿಜೆಪಿಯಿಂದ ಸಾವಿರಾರು ಮಂದಿಗೆ ಆಹಾರ, ಪಡಿತರ ವಿತರಣೆ

April 20, 2020

ಚಾಮರಾಜನಗರ, ಏ.19- ಜಿಲ್ಲೆಯ ಎಲ್ಲಾ 7 ಮಂಡಲಗಳ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಜಿಲ್ಲಾ ದ್ಯಂತ ಸಾವಿರಾರು ಬಡಕುಟುಂಬಗಳಿಗೆ ಆಹಾರ ಪೊಟ್ಟಣ ಹಾಗೂ ಪಡಿತರ ಕಿಟ್ ಗಳನ್ನು ವಿತರಿಸಿದುದಾಗಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವ ಕುಮಾರ್ ತಿಳಿಸಿದ್ದಾರೆ. ಲಾಕ್‍ಡೌನ್ ಆದ ದಿನದಿಂದ ಏ.17 ರವರೆಗೂ ಚಾಮ ರಾಜನಗರ, ಗುಂಡ್ಲುಪೇಟೆ, ಯಳಂ ದೂರು, ಕೊಳ್ಳೇಗಾಲ, ಹನೂರು ತಾಲೂಕಿ ನಾದ್ಯಂತ 30 ಸಾವಿರಕ್ಕೂ ಹೆಚ್ಚು ಆಹಾರ ಪೊಟ್ಟಣ, 10 ಸಾವಿರಕ್ಕೂ ಹೆಚ್ಚು ಪಡಿತರ ಕಿಟ್, 18 ಸಾವಿರಕ್ಕೂ ಹೆಚ್ಚು…

ಕೆಂದಾರೆ ಹಳ್ಳದಲ್ಲಿ ಆನೆ ಕಳೇಬರ ಪತ್ತೆ
ಚಾಮರಾಜನಗರ

ಕೆಂದಾರೆ ಹಳ್ಳದಲ್ಲಿ ಆನೆ ಕಳೇಬರ ಪತ್ತೆ

April 19, 2020

ಹನೂರು,ಏ.18-ಮಲೆ ಮಹದೇಶ್ವರ ವನ್ಯಜೀವಿ ವಲಯ ವಿಭಾಗದ ಪೊನ್ನಾಚಿ ಅರಣ್ಯ ಪ್ರದೇಶ ಮರೂರು ಬೀಟ್‍ನ ಕೆಂದಾರೆ ಹಳ್ಳದಲ್ಲಿ ಆನೆಯ ಕಳೇಬರ ಪತ್ತೆಯಾಗಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ಈ ಭಾಗ ದಲ್ಲಿ 5 ಆನೆಗಳ ಕಳೇಬರ ಪತ್ತೆಯಾಗಿದ್ದು, ಆನೆಗಳು ನೀರು, ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ಅಕ್ರಮ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪುತ್ತಿರುವುದು ಪ್ರಾಣಿ ಪ್ರಿಯರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕಾಡಾನೆಗಳು ಮೇವು, ನೀರಿನಿಂದ ಮೃತಪಡುತ್ತಿವೆಯೇ ಅಥವಾ ಬೇರೆ ಇನ್ಯಾವ ಕಾರಣಗಳಿಂದ ಮೃತಪಡುತ್ತಿವೆ ಎಂಬುದನ್ನು ಅರಿತು ಕ್ರಮ ಕೈಗೊಳ್ಳಬೇಕಾಗಿದೆ ಎಂದು…

ಇಂದಿನಿಂದ ಮನೆಗೆ ಔಷಧ ತಲುಪಿಸುವ ‘ಔಷಧ ಮಿತ್ರ’ ಸೇವೆ ಆರಂಭ
ಚಾಮರಾಜನಗರ

ಇಂದಿನಿಂದ ಮನೆಗೆ ಔಷಧ ತಲುಪಿಸುವ ‘ಔಷಧ ಮಿತ್ರ’ ಸೇವೆ ಆರಂಭ

April 18, 2020

ಚಾಮರಾಜನಗರ, ಏ.17- ಔಷಧಿ ಅಂಗಡಿಗಳಲ್ಲಿ ಜನಸಂದಣಿ ಕಡಿಮೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಇಂದಿನಿಂದ (ಏ.18) ನಾಗರಿಕರ ಮನೆ ಬಾಗಿಲಿಗೆ ಔಷಧವನ್ನು ಯಾವುದೇ ಸೇವಾ ಶುಲ್ಕವಿಲ್ಲದೇ ತಲುಪಿಸುವ `ಔಷಧ ಮಿತ್ರ’ ಸೇವೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರ, ಪಟ್ಟಣ ಪ್ರದೇಶಗಳ ಔಷಧಿ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಗಮನಿಸಲಾಗಿದೆ. ಹೀಗಾಗಿ ಲಾಕ್‍ಡೌನ್ ವೇಳೆ ಜನರ ಸಂಚಾರ ಕಡಿಮೆ ಮಾಡುವ ಹಾಗೂ ಅನಾರೋಗ್ಯದಿಂದ…

ವಿವಿಧ ಚೆಕ್‍ಪೋಸ್ಟ್‍ಗಳಿಗೆ ಮಧ್ಯರಾತ್ರಿ ಡಿಸಿ ದಿಢೀರ್ ಭೇಟಿ, ಪರಿಶೀಲನೆ
ಚಾಮರಾಜನಗರ

ವಿವಿಧ ಚೆಕ್‍ಪೋಸ್ಟ್‍ಗಳಿಗೆ ಮಧ್ಯರಾತ್ರಿ ಡಿಸಿ ದಿಢೀರ್ ಭೇಟಿ, ಪರಿಶೀಲನೆ

April 18, 2020

ಚಾಮರಾಜನಗರ, ಏ.17- ಕೋವಿಡ್-19 ಮುಂಜಾಗ್ರತಾ ಕ್ರಮಗಳ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ವಿವಿಧ ಚೆಕ್‍ಪೋಸ್ಟ್‍ಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಗುರುವಾರ ಮಧ್ಯರಾತ್ರಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಎಸ್ಪಿ ಹೆಚ್.ಡಿ.ಆನಂದಕುಮಾರ್ ಅವರೊಂದಿಗೆ ಮಧ್ಯ ರಾತ್ರಿ ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಚೆಕ್‍ಪೋಸ್ಟ್, ಕೊಳ್ಳೇಗಾಲ ತಾಲೂಕಿನ ಟಗರಪುರ ಹಾಗೂ ಸತ್ತೇಗಾಲ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿ ನಿರ್ವಹಿಸಲಾಗುತ್ತಿರುವ ಕಾರ್ಯ ವೀಕ್ಷಿಸಿದರು. ಅಂತರ ಜಿಲ್ಲೆ ಸಂಪರ್ಕಿಸುವ ಪ್ರಮುಖ ಚೆಕ್ ಪೋಸ್ಟ್‍ಗಳಿಗೆ ಯಾವ ಸುಳಿವು ನೀಡದೇ ಅನಿರೀಕ್ಷಿತವಾಗಿ ಮಧ್ಯರಾತ್ರಿ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು…

1 2 3 4 5 6 128