ಚಾಮರಾಜನಗರ

ಜಿಲ್ಲೆಯಾದ್ಯಂತ ಪ್ರೌಢಶಾಲಾ, ಕಾಲೇಜು ಪುನರಾರಂಭ: ಹಾಜರಾತಿ ಕಡಿಮೆ
ಚಾಮರಾಜನಗರ

ಜಿಲ್ಲೆಯಾದ್ಯಂತ ಪ್ರೌಢಶಾಲಾ, ಕಾಲೇಜು ಪುನರಾರಂಭ: ಹಾಜರಾತಿ ಕಡಿಮೆ

August 24, 2021

ಚಾಮರಾಜನಗರ, ಆ.23(ಎಸ್‍ಎಸ್)- ಕೋವಿಡ್ ಕಾರಣದಿಂದ ಜಿಲ್ಲೆಯಲ್ಲಿ ಒಂದೂ ವರೆ ವರ್ಷದಿಂದ ಸ್ಥಗಿತವಾಗಿದ್ದ ಪ್ರೌಢಶಾಲಾ, ಕಾಲೇಜು ತರಗತಿಗಳು ಪುನರಾರಂಭವಾ ಗಿದ್ದು, ಪ್ರಥಮ ದಿನವಾದ ಸೋಮವಾರ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿತ್ತು. 9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳು ಭೌತಿಕ ತರಗತಿ ಗಳಿಗೆ ಖುಷಿಯಿಂದ ತೆರಳಿದರು. ಬಹಳ ತಿಂಗಳ ಬಳಿಕ ಸಹಪಾಠಿ, ಶಿಕ್ಷಕರನ್ನು ಭೇಟಿಯಾದ ಸಂತಸ ವಿದ್ಯಾರ್ಥಿಗಳ ಮೊಗದಲ್ಲಿ ಕಂಡುಬಂದಿತು. ಎರಡು ದಿನಗಳ ಮೊದಲೇ ಸ್ವಚ್ಛಗೊಂಡು, ಸ್ಯಾನಿಟೈಜ್ ಆಗಿದ್ದ ಶಾಲಾವರಣವನ್ನು ತಳಿರು, ತೋರಣಗಳಿಂದ ಸಿಂಗಾರಗೊಳಿಸ ಲಾಗಿತ್ತು. ಶಿಕ್ಷಕರು ಮತ್ತು ಸಿಬ್ಬಂದಿ…

ಗೂಡ್ಸ್ ಟೆಂಪೋ ಪಲ್ಟಿ: ಓರ್ವ ಸಾವು
ಚಾಮರಾಜನಗರ

ಗೂಡ್ಸ್ ಟೆಂಪೋ ಪಲ್ಟಿ: ಓರ್ವ ಸಾವು

August 23, 2021

ಚಾಮರಾಜನಗರ, ಆ.22(ಎಸ್‍ಎಸ್)- ಗೂಡ್ಸ್ ಟೆಂಪೋವೊಂದು ಪಲ್ಟಿ ಹೊಡೆದು ಓರ್ವ ಸಾವನ್ನಪ್ಪಿ, 7 ಮಂದಿ ಗಾಯಗೊಂಡಿರುವ ಘಟನೆ ನಗರದ ಸಮೀಪದ ಬೇಡರ ಪುರ ಬಳಿಯ ಸರ್ಕಾರಿ ಇಂಜಿ ನಿಯರಿಂಗ್ ಕಾಲೇಜು ಬಳಿ ಶನಿವಾರ ರಾತ್ರಿ ನಡೆದಿದೆ. ತಾಲೂಕಿನ ಬ್ಯಾಡ್‍ಮೂಡ್ಲು ಗ್ರಾಮದ ಚಿಕ್ಕ ಮಹದೇವು (48) ಮೃತಪಟ್ಟವರು. ಉಳಿದಂತೆ ಚಾಲಕ ಸಿದ್ದಪ್ಪಾಜಿ, ನಾಗರಾಜು, ನಂದೀಶ್, ಮಹೇಶ್, ಪ್ರವೀಣ್, ನಿಂಗರಾಜು ಗಾಯಗೊಂಡು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಡ್‍ಮೂಡ್ಲು ಗ್ರಾಮದ ಈ 7 ಜನರು ಶನಿವಾರ ಬೆಳಗ್ಗೆ ಗೂಡ್ಸ್…

ಮೆಗಾ ಲೋಕ ಅದಾಲತ್‍ನಲ್ಲಿ ಹಲವು ಪ್ರಕರಣ ಇತ್ಯರ್ಥ
ಚಾಮರಾಜನಗರ

ಮೆಗಾ ಲೋಕ ಅದಾಲತ್‍ನಲ್ಲಿ ಹಲವು ಪ್ರಕರಣ ಇತ್ಯರ್ಥ

August 23, 2021

ಚಾಮರಾಜನಗರ, ಆ.22- ಜಿಲ್ಲೆಯಲ್ಲಿ ಆ. 14 ಹಾಗೂ 16ರಂದು ನಡೆದ ಮೆಗಾಲೋಕ್ ಅದಾ ಲತ್‍ನಲ್ಲಿ ಹಲವಾರು ವರ್ಷಗಳಿಂದ ಇತ್ಯರ್ಥವಾ ಗದೇ ಇರುವ ವ್ಯಾಜ್ಯ ಪ್ರಕರಣಗಳು ಇತ್ಯರ್ಥವಾ ಗಿದ್ದು, ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಇಲಾಖೆಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನ್‍ಪುರಿ ತಿಳಿಸಿದರು. ನಗರದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆಯಡಿ ಜನಸಾಮಾ…

ಕೋವಿಡ್ ಶಿಷ್ಟಾಚಾರ ಕಡ್ಡಾಯ ಪಾಲನೆಗೆ ಡಿಸಿ ಸೂಚನೆ
ಚಾಮರಾಜನಗರ

ಕೋವಿಡ್ ಶಿಷ್ಟಾಚಾರ ಕಡ್ಡಾಯ ಪಾಲನೆಗೆ ಡಿಸಿ ಸೂಚನೆ

August 22, 2021

ಚಾಮರಾಜನಗರ, ಆ.21- ಜಿಲ್ಲೆಯಲ್ಲಿ ಆಗಸ್ಟ್ 23 ರಿಂದ 9 ರಿಂದ 12ನೇ ತರಗತಿ ಆರಂಭವಾಗುತ್ತಿದ್ದು, ಶಾಲಾ ಕಾಲೇಜು ಗಳಲ್ಲಿ ಯಾವುದೇ ಲೋಪಗಳಿಗೆ ಅವಕಾಶ ವಾಗದಂತೆ ಕೋವಿಡ್ ಶಿಷ್ಟಾಚಾರ ಕಡ್ಡಾಯ ವಾಗಿ ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಂದು ಶಾಲಾ ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಕೋವಿಡ್-19 ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆ ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿ ದಂತೆ ಶಿಕ್ಷಣ ಇಲಾಖೆ ಹೊರಡಿಸಿರುವ…

ವಿದ್ಯಾರ್ಥಿ, ಪೋಷಕರ ಆತ್ಮವಿಶ್ವಾಸ ವೃದ್ಧಿಗೆ ಸೂಚನೆ  ನಾಳೆಯಿಂದ 9 ರಿಂದ 12ನೇ ತರಗತಿ ಆರಂಭ
ಚಾಮರಾಜನಗರ

ವಿದ್ಯಾರ್ಥಿ, ಪೋಷಕರ ಆತ್ಮವಿಶ್ವಾಸ ವೃದ್ಧಿಗೆ ಸೂಚನೆ ನಾಳೆಯಿಂದ 9 ರಿಂದ 12ನೇ ತರಗತಿ ಆರಂಭ

August 22, 2021

ಚಾಮರಾಜನಗರ, ಆ.21- ಇದೇ ತಿಂಗಳ 23ರಿಂದ 9ರಿಂದ 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಭೌತಿಕವಾಗಿ ಬೋಧನಾ ತರಗತಿಗಳು ಆರಂಭವಾಗಲಿರುವ ಹಿನ್ನೆಲೆ ಯಲ್ಲಿ ಕೋವಿಡ್ ಸಂಬಂಧಿ ಹೊರಡಿಸ ಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ)ವನ್ನು ಕಟ್ಟುನಿಟ್ಟಾಗಿ ಅನುಸರಿಸಿ ವಿದ್ಯಾರ್ಥಿಗಳು ಹಾಗೂ ಪೋಷಕ ರಿಗೆ ಆತ್ಮವಿಶ್ವಾಸ ಮೂಡಿಸಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಶನಿವಾರ ಕೋವಿಡ್ ಹಾಗೂ ಶಾಲಾ ಆರಂಭದ ಹಿನೆÀ್ನಲೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು…

ಮೈಸೂರು ನಾಗರಿಕರ ವೇದಿಕೆಯಿಂದ 62 ಭೋವಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಚಾಮರಾಜನಗರ

ಮೈಸೂರು ನಾಗರಿಕರ ವೇದಿಕೆಯಿಂದ 62 ಭೋವಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

August 21, 2021

ಚಾಮರಾಜನಗರ, ಆ.20(ಎಸ್‍ಎಸ್)- ತಾಲೂಕಿನ ಬಿ.ಜಿ.ಕಾಲೋನಿಯ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣ ದಲ್ಲಿ ಮೈಸೂರು ನಾಗರಿಕರ ವೇದಿಕೆ ವತಿ ಯಿಂದ 62 ಭೋವಿ ಕುಟುಂಬಗಳಿಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿನಸಿ ಕಿಟ್‍ಗಳನ್ನು ವಿತರಿಸಿದರು. ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಪಜ್ಞಾವಂತ ಜನರು ಸೇರಿ ಸ್ಥಾಪಿಸಿರುವ ಮೈಸೂರು ನಾಗರಿಕ ವೇದಿಕೆಯು ಗುಜರಾಜ್ ಭೂಕಂಪ, ಕೇರಳ, ಕೊಡಗಿನಲ್ಲಿ ಪ್ರವಾಹ ಸಂತ್ರಸ್ತರಿಗೂ ನೆರವಾಗಿದೆ. ಅಲ್ಲದೆ ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಜನತೆಗೂ ದಿನಸಿ ಕಿಟ್ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದೆ ಎಂದು…

ಡಿ.ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರರು
ಚಾಮರಾಜನಗರ

ಡಿ.ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರರು

August 21, 2021

ಚಾಮರಾಜನಗರ, ಆ.20-ಸರ್ವ ರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಪರಿಕಲ್ಪನೆಯಡಿ ಅನೇಕ ಜನಪರ ಯೋಜನೆ ರೂಪಿಸಿ ಸಮರ್ಪಕವಾಗಿ ಜಾರಿಗೊಳಿಸಿದ ಡಿ.ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರರು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಬಣ್ಣಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂ ದಿಗೆ ಸರಳವಾಗಿ ಆಯೋಜಿಸಿದ್ದ ಡಿ.ದೇವ ರಾಜ ಅರಸು 106ನೇ ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಹಾಗೂ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ…

ಮೂಲೆಹೊಳೆ ಚೆಕ್‍ಪೋಸ್ಟ್‍ನಲ್ಲಿ ತಪಾಸಣಾ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ
ಚಾಮರಾಜನಗರ

ಮೂಲೆಹೊಳೆ ಚೆಕ್‍ಪೋಸ್ಟ್‍ನಲ್ಲಿ ತಪಾಸಣಾ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ

August 21, 2021

ಚಾಮರಾಜನಗರ, ಆ.19-ಗುಂಡ್ಲು ಪೇಟೆ ತಾಲೂಕಿನ ಗಡಿಭಾಗದಲ್ಲಿರುವ ಮೂಲೆಹೊಳೆ ಚೆಕ್‍ಪೋಸ್ಟ್‍ಗೆ ಜಿಲ್ಲಾಧಿ ಕಾರಿ ಡಾ.ಎಂ.ಆರ್.ರವಿ ಇಂದು ಭೇಟಿ ನೀಡಿ ತಪಾಸಣಾ ಕಾರ್ಯ ಪರಿಶೀಲಿಸಿದರು. ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣ ಗಳ ಸಂಖ್ಯೆ ಏರುಗತಿಯಲ್ಲಿ ಇರುವುದರಿಂದ ಗಡಿ ಭಾಗಗಳಲ್ಲಿ ಕಟ್ಟೆಚ್ಚೆರ ವಹಿಸಲಾಗಿದ್ದು, ಗಡಿಭಾಗದ ಚೆಕ್‍ಪೋಸ್ಟ್‍ಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೂಲೆಹೊಳೆ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಬಹಳ ಹೊತ್ತು ಅಲ್ಲಿಯೇ ಇದ್ದು ವಾಹನಗಳ ತಪಾಸಣಾ ಕಾರ್ಯ ಸೂಕ್ಷ್ಮವಾಗಿ ವೀಕ್ಷಿಸಿದರು. ಚೆಕ್‍ಪೋಸ್ಟ್ ಮೂಲಕ ಸಂಚರಿಸುತ್ತಿ ರುವ ವಾಹನಗಳ ನಮೂದು…

ಮಾಜಿ ಶಾಸಕ ಸಿ.ಗುರುಸ್ವಾಮಿ ಸ್ಮಾರಕ ಅನಾವರಣ
ಚಾಮರಾಜನಗರ

ಮಾಜಿ ಶಾಸಕ ಸಿ.ಗುರುಸ್ವಾಮಿ ಸ್ಮಾರಕ ಅನಾವರಣ

August 20, 2021

ಚಾಮರಾಜನಗರ, ಆ.19(ಎಸ್‍ಎಸ್)- ಮಾಜಿ ಶಾಸಕ ಸಿ.ಗುರುಸ್ವಾಮಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯ ಕ್ರಮ ತಾಲೂಕಿನ ಯಾನಗಹಳ್ಳಿ ಗ್ರಾಮದ ಬಳಿಯ ಅಚ್ಚಟ್ಟಿಪುರ ತೋಟದಲ್ಲಿ ಗುರುವಾರ ನಡೆಯಿತು. ಅಚ್ಚೆಟ್ಟಿಪುರ ತೋಟದಲ್ಲಿರುವ ಸಿ.ಗುರು ಸ್ವಾಮಿ ಅವರ ಸಮಾಧಿ ಸ್ಥಳದಲ್ಲಿ ಭವ್ಯವಾಗಿ ನಿರ್ಮಿಸಿರುವ ಸ್ಮಾರಕವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣಗೊಳಿಸಿ ಪುಷ್ಪ ನಮನ ಸಲ್ಲಿಸಿ ದರು. ಈ ವೇಳೆ ಗುರುಸ್ವಾಮಿ ಅವರ ಕುಟುಂಬ ಸ್ಥರು ಭಾವುಕರಾದರು. ಪುಣ್ಯಸ್ಮರಣೆ ಕಾರ್ಯ ಕ್ರಮದಲ್ಲಿ ಜನರು ಪಕ್ಷಾತೀತವಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಹರವೆ…

ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಭರಾಟೆ: ಮಾರುಕಟ್ಟೆಯಲ್ಲಿ ಕಾಣದ ಕೋವಿಡ್ ಭೀತಿ
ಚಾಮರಾಜನಗರ

ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಭರಾಟೆ: ಮಾರುಕಟ್ಟೆಯಲ್ಲಿ ಕಾಣದ ಕೋವಿಡ್ ಭೀತಿ

August 20, 2021

ಚಾಮರಾಜನಗರ, ಆ.19(ಎಸ್‍ಎಸ್)- ಕಮಲಪ್ರಿಯೆ ವರಮಹಾಲಕ್ಷ್ಮಿ ಹಬ್ಬ ಶುಕ್ರ ವಾರ ನಡೆಯಲಿದ್ದು, ನಗರ ವ್ಯಾಪ್ತಿಯ ಮಾರು ಕಟ್ಟೆಗಳಲ್ಲಿ ಗುರುವಾರ ಜನಜಂಗುಳಿ ನಿರ್ಮಾಣ ವಾಗಿತ್ತು. ಪೂಜಾ ಸಾಮಗ್ರಿ ಖರೀದಿಸಲು ನಾಗರಿಕರು ಮುಗಿಬಿದ್ದರು. ವ್ಯಾಪಾರ ಭರಾಟೆ ಜೋರಾಗಿ ನಡೆಯಿತು. ಪ್ರತಿ ವರ್ಷವೂ ಶ್ರಾವಣ ಮಾಸದ ಎರಡನೇ ಶುಕ್ರವಾರ ಸಂಭ್ರಮದಿಂದ ನಡೆಯುವ ಹಬ್ಬದ ಮೇಲೆ ಕಳೆದ ವರ್ಷ ಕೊರೊನಾ ಕರಿನೆರಳು ಬಿದ್ದಿತ್ತು. ಆದರೆ, ಈ ಬಾರಿ ಅಂತಹ ಸ್ಥಿತಿ ಇಲ್ಲ. ಜನರು ವಸ್ತುಗಳನ್ನು ಖರೀದಿಸಲು ಉತ್ಸಾಹ ತೋರಿದ್ದಾರೆ. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿ…

1 4 5 6 7 8 141
Translate »