ಗೂಡ್ಸ್ ಟೆಂಪೋ ಪಲ್ಟಿ: ಓರ್ವ ಸಾವು
ಚಾಮರಾಜನಗರ

ಗೂಡ್ಸ್ ಟೆಂಪೋ ಪಲ್ಟಿ: ಓರ್ವ ಸಾವು

August 23, 2021

ಚಾಮರಾಜನಗರ, ಆ.22(ಎಸ್‍ಎಸ್)- ಗೂಡ್ಸ್ ಟೆಂಪೋವೊಂದು ಪಲ್ಟಿ ಹೊಡೆದು ಓರ್ವ ಸಾವನ್ನಪ್ಪಿ, 7 ಮಂದಿ ಗಾಯಗೊಂಡಿರುವ ಘಟನೆ ನಗರದ ಸಮೀಪದ ಬೇಡರ ಪುರ ಬಳಿಯ ಸರ್ಕಾರಿ ಇಂಜಿ ನಿಯರಿಂಗ್ ಕಾಲೇಜು ಬಳಿ ಶನಿವಾರ ರಾತ್ರಿ ನಡೆದಿದೆ.

ತಾಲೂಕಿನ ಬ್ಯಾಡ್‍ಮೂಡ್ಲು ಗ್ರಾಮದ ಚಿಕ್ಕ ಮಹದೇವು (48) ಮೃತಪಟ್ಟವರು. ಉಳಿದಂತೆ ಚಾಲಕ ಸಿದ್ದಪ್ಪಾಜಿ, ನಾಗರಾಜು, ನಂದೀಶ್, ಮಹೇಶ್, ಪ್ರವೀಣ್, ನಿಂಗರಾಜು ಗಾಯಗೊಂಡು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ಯಾಡ್‍ಮೂಡ್ಲು ಗ್ರಾಮದ ಈ 7 ಜನರು ಶನಿವಾರ ಬೆಳಗ್ಗೆ ಗೂಡ್ಸ್ ವಾಹನದಲ್ಲಿ ಬಾಳೆಹಣ್ಣಿನ ಗೊನೆಗಳನ್ನು ತುಂಬಿಕೊಂಡು ನಂಜನಗೂಡಿನ ಹುಲ್ಲಹಳ್ಳಿ ಗ್ರಾಮಕ್ಕೆ ಸಾಗಣೆ ಮಾಡಿ ವಾಪಸ್ ಬರುತ್ತಿದ್ದಾಗ ಚಾಮರಾಜನಗರದ ಸಮೀಪದ ಬೇಡರಪುರ ಬಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಬಳಿ ಚಾಲಕನ ನಿಯಂತ್ರಣ ಕಳೆದು ಕೊಂಡು ವಾಹನ ಪಲ್ಟಿಯಾಗಿದೆ. ಪರಿಣಾಮ ವಾಹನದಲ್ಲಿದ್ದ ಚಿಕ್ಕಮಹದೇವು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರೇ, ಉಳಿದವರು ಗಾಯಗೊಂಡಿದ್ದಾರೆ.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »