ಮೆಗಾ ಲೋಕ ಅದಾಲತ್‍ನಲ್ಲಿ ಹಲವು ಪ್ರಕರಣ ಇತ್ಯರ್ಥ
ಚಾಮರಾಜನಗರ

ಮೆಗಾ ಲೋಕ ಅದಾಲತ್‍ನಲ್ಲಿ ಹಲವು ಪ್ರಕರಣ ಇತ್ಯರ್ಥ

August 23, 2021

ಚಾಮರಾಜನಗರ, ಆ.22- ಜಿಲ್ಲೆಯಲ್ಲಿ ಆ. 14 ಹಾಗೂ 16ರಂದು ನಡೆದ ಮೆಗಾಲೋಕ್ ಅದಾ ಲತ್‍ನಲ್ಲಿ ಹಲವಾರು ವರ್ಷಗಳಿಂದ ಇತ್ಯರ್ಥವಾ ಗದೇ ಇರುವ ವ್ಯಾಜ್ಯ ಪ್ರಕರಣಗಳು ಇತ್ಯರ್ಥವಾ ಗಿದ್ದು, ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಇಲಾಖೆಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನ್‍ಪುರಿ ತಿಳಿಸಿದರು.

ನಗರದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆಯಡಿ ಜನಸಾಮಾ ನ್ಯರ ಅನುಕೂಲಕ್ಕಾಗಿ ಶೀಘ್ರ ಹಾಗೂ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ನ್ಯಾಯ ಒದಗಿಸಬೇಕೆಂಬ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದನ್ವಯ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲೂ ಮೆಗಾ ಲೋಕ್ ಅದಾಲತ್ ಅನ್ನು ಆಯೋಜಿಸಲಾಗಿತ್ತು. ಈ ಅದಾಲತ್‍ನಲ್ಲಿ ರಾಜಿಯಾಗಬಲ್ಲ ಎಲ್ಲಾ ಬಗೆಯ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದರು.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿದೆ. ಜಿಲ್ಲೆಯ ಎಲ್ಲಾ ನ್ಯಾಯಾಲಯ ಗಳಲ್ಲೂ ಲೋಕ್ ಅದಾಲತ್ ಸಂಬಂಧ ಸಾರ್ವಜನಿಕ ರಲ್ಲಿ ಅರಿವು ಮೂಡಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಪ್ರಕರಣಗಳು ಇತ್ಯರ್ಥವಾಗಿದ್ದು, ಜಿಲ್ಲೆಯು ರಾಜ್ಯ ಮಟ್ಟದಲ್ಲಿ 7ನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಮೆಗಾ ಲೋಕ್‍ಅದಾಲತ್‍ನ ಯಶಸ್ಸಿ ಗಾಗಿ ಸಹಕಾರ ನೀಡಿದ ಜಿಲ್ಲಾಡಳಿತ, ಪೊಲೀಸ್ ಹಾಗೂ ಕಂದಾಯ ಇಲಾಖೆ, ವಕೀಲರು, ಕಕ್ಷಿದಾ ರರು ಹಾಗೂ ಎಲ್ಲರ ಸಹಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನ್ ಪುರಿ ಹೇಳಿದರು.

ಲೋಕ್ ಅದಾಲತ್‍ನಲ್ಲಿ 2021ರ ಜೂನ್ ಅಂತ್ಯದ ವರೆಗೆ ಜಿಲ್ಲೆಯ ನಾಲ್ಕು ತಾಲೂಕುಗಳ ಒಟ್ಟು 20148 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಈ ಪೈಕಿ 7806 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸುವ ಗುರಿ ಹೊಂದಲಾಗಿತ್ತು. ಆ. 14ರಂದು 2976 ಪ್ರಕರಣಗಳು, 16 ರಂದು 683 ಪ್ರಕರಣಗಳು ಸೇರಿದಂತೆ ಒಟ್ಟು 3659 ಪ್ರಕರಣಗಳು ಬಗೆಹರಿದಿವೆ. ಪ್ರಕರಣಗಳ ಸರಾಸರಿ ಶೇ. 50ರಷ್ಟು ಒಮ್ಮತದಿಂದ ಇತ್ಯರ್ಥವಾದ ಪ್ರಕರಣಗಳಿಂದ 8,19,33,370 ರೂ. ಸಂಗ್ರಹವಾಗಿದೆ ಎಂದರು.

ಲೋಕ್ ಅದಾಲತ್‍ನಲ್ಲಿ ಹೆಚ್ಚಿನ ಪ್ರಕರಣಗಳು ವಿಲೇವಾರಿ ಆಗಿರುವುದರಿಂದ ಜನಸಾಮಾನ್ಯರಿಗೆ ಅನುಕೂಲ ವಾಗಿರುವುದಲ್ಲದೆ ನ್ಯಾಯಾಲಯಗಳ ಮೇಲೆ ಪ್ರಕರಣಗಳ ಹೊರೆ ತಗ್ಗಿದೆ. ಲೋಕ್ ಅದಾಲತ್‍ನಲ್ಲಿ ವ್ಯಾಜ್ಯಗಳನ್ನು ಬಹಳ ಕಡಿಮೆ ಸಮಯದಲ್ಲಿ ಬಗೆಹರಿಸಲು ಸಾಧ್ಯವಾ ಗಿದೆ. ಸಿವಿಲ್, ಕ್ರಿಮಿನಲ್, ಕೌಟುಂಬಿಕ ಇತರೆ ವಿಶೇಷ ಪ್ರಕರಣಗಳನ್ನು ಬಗೆಹರಿಸಲಾಗಿದೆ. ವಾರಾಂತ್ಯಾ ಕಫ್ರ್ಯೂ ಜಾರಿಯಲ್ಲಿದ್ದರೂ ಲೋಕ್ ಅದಾಲತ್‍ಗೆ ಪ್ರಕರಣಗಳ ಇತ್ಯರ್ಥಕ್ಕಾಗಿ ಹಾಜರಾಗುವ ವಕೀಲರು, ಕಕ್ಷಿದಾರರಿಗೆ ಅನುಮತಿ ನೀಡಿದ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್ ಮಾತನಾಡಿ, ಲೋಕ್ ಅದಾಲತ್ ಕೇವಲ ಪ್ರಚಾರಕ್ಕೆ ಮಾತ್ರವಲ್ಲದೇ ಜನರಿಗೆ ನ್ಯಾಯ ದೊರಕಿಸಿ ಕೊಡುವುದರ ಜೊತೆಗೆ ಹಣ, ಸಮಯ ಉಳಿತಾಯ ವಾಗಿದ್ದು ಹಲವು ಜನರಿಗೆ ಅನುಕೂಲವಾಗಿದೆ. ಅದಾಲತ್ ನಲ್ಲಿ ಬಾಕಿ ಉಳಿದಿದ್ದ ಹಳೆಯ ಪ್ರಕರಣಗಳ ಜೊತೆಗೆ ವಿಶೇಷ ಪ್ರಕರಣಗಳು ಇತ್ಯರ್ಥವಾಗಿರುವುದು ಉಲ್ಲೇಖನೀಯ ವಿಷಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯ ದರ್ಶಿ ಮಂಜು ಹರವೆ ಇತರರು ಹಾಜರಿದ್ದರು.

Translate »