ಇಂದಿನ ಕೌಟುಂಬಿಕ ವ್ಯವಸ್ಥೆ ಕುಸಿಯುವುದರ ಹಿಂದೆ ಹಿರಿಯರ ನಿರ್ಲಕ್ಷ್ಯ ಅಡಗಿದೆ
ಮೈಸೂರು

ಇಂದಿನ ಕೌಟುಂಬಿಕ ವ್ಯವಸ್ಥೆ ಕುಸಿಯುವುದರ ಹಿಂದೆ ಹಿರಿಯರ ನಿರ್ಲಕ್ಷ್ಯ ಅಡಗಿದೆ

August 22, 2021

ಮೈಸೂರು,ಆ.21-ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಕನಕಗಿರಿಯಲ್ಲಿರುವ ಭಾರತಿ ವೃದ್ಧಾಶ್ರಮ ದಲ್ಲಿ ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ವಿತರಿ ಸುವ ಮೂಲಕ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಇಂದಿನ ಕೌಟುಂಬಿಕ ವ್ಯವಸ್ಥೆ ಕುಸಿಯು ವುದರ ಹಿಂದೆ ಹಿರಿಯರ ನಿರ್ಲಕ್ಷ್ಯ ಅಡಗಿದೆ. ಮನೆ ಯಲ್ಲಿ ಹಿರಿಯರಿದ್ದರೆ ಸಂಬಂಧಗಳು ಗಟ್ಟಿಯಾಗು ತ್ತವೆ. ಗಂಡ-ಹೆಂಡತಿ ಬಹಳಷ್ಟು ಸಮಸ್ಯೆಗಳು ಅವರ ಸಲಹೆಗಳಿಂದ ಪರಿಹಾರ ಕಾಣುತ್ತವೆ. ಮಕ್ಕಳು ದಾರಿ ತಪ್ಪುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂದು ವಿಶ್ಲೇಷಿ ಸಿದರು. ಆಸ್ತಿ ಪಾಲುದಾರರಾದ ನಾವು, ಅವರ ದುಃಖ -ದುಮ್ಮಾನ, ಒಂಟಿತನಗಳ ಪಾಲುದಾರರಾಗಲು ಹಿಂದೇಟು ಹಾಕುವ ವಾತಾವರಣ ಎಲ್ಲಾ ಕುಟುಂಬಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಗರಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್ ಮಾತನಾಡಿ, ಹಿರಿಯರ ನಿರ್ಲಕ್ಷ್ಯ ದೇಶದ ಪರಂ ಪರೆಗೆ ತಕ್ಕದ್ದಲ್ಲ. ಹಿರಿತನ ಸಮಾಜದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದ ಅವರು, ಸಮಾಜದಲ್ಲಿ ಯಾವುದೋ ಕಾರಣಕ್ಕೆ ಗೌರವ ಸಿಗುತ್ತಿಲ್ಲ ಎಂಬ ಭಾವನೆಯಿಂದ ಹಿರಿಯರು ಆತ್ಮವಿಶ್ವಾಸ ಕಳೆದು ಕೊಳ್ಳಬಾರದು. ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಿರಿಯರು ತಮ್ಮ ಪಾತ್ರವನ್ನು ನಿಭಾ ಯಿಸಬೇಕು ಎಂದು ತಿಳಿಸಿದರು.
ಹಣದ ಹಿಂದೆ ಓಡುವಂತೆ ಮಕ್ಕಳನ್ನು ಪ್ರಚೋದಿಸಿ ದವರೇ ಇಂದು ತಮಗೆ ಒದಗಿರುವ ಸ್ಥಿತಿ ಬಗ್ಗೆ ಮರುಕ ಪಡುವಂತಾಗಿದೆ ಎಂದ ಅವರು, ಹುಷಾರಿಲ್ಲದಾಗ ಆಸ್ಪತ್ರೆಗೂ ಕರೆದುಕೊಂಡು ಹೋಗುವವರಿಲ್ಲದಿದ್ದರೆ ಇದು ಎಂತಹ ಸಂಬಂಧ ಎಂದು ವ್ಯಂಗ್ಯವಾಡಿದರು.

ಹಿರಿಯರು ವಾಸ್ತವ ಅರ್ಥ ಮಾಡಿಕೊಳ್ಳಬೇಕು. ಒಂದಿಷ್ಟು ಆಸ್ತಿಯನ್ನು ತಮ್ಮಲ್ಲೇ ಇಟ್ಟುಕೊಳ್ಳಬೇಕು. ಕನಿಷ್ಠ ಆಸ್ತಿಗಾದರೂ ತಮ್ಮನ್ನು ಯಾರಾದರೂ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್, ವಿನಯ್ ಕಣಗಾಲ್, ಕಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ, ಹರೀಶ್ ನಾಯ್ಡು ಸೇರಿದಂತೆ ಇನ್ನಿತರರು ಹಾಜರಿದ್ದರು.

Translate »