ವರ್ಷದಲ್ಲಿ ಕೆ.ಆರ್.ಕ್ಷೇತ್ರ `ಸೇಫ್ಟಿ ರೋಡ್’ ಶಾಸಕ ರಾಮದಾಸ್ ಕಾರ್ಯ ಯೋಜನೆ
ಮೈಸೂರು

ವರ್ಷದಲ್ಲಿ ಕೆ.ಆರ್.ಕ್ಷೇತ್ರ `ಸೇಫ್ಟಿ ರೋಡ್’ ಶಾಸಕ ರಾಮದಾಸ್ ಕಾರ್ಯ ಯೋಜನೆ

August 22, 2021

ಮೈಸೂರು,ಆ.21(ಎಂಟಿವೈ)- ಮೈಸೂ ರಿನ ಕೆ.ಆರ್.ವಿಧಾನಸಭಾ ಕ್ಷೇತ್ರವನ್ನು ಸಮಗ್ರ ವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಸಕ ಎಸ್.ಎ.ರಾಮದಾಸ್ ಶನಿವಾರ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಸ್ಥಿತಿ ಗನುಗುಣವಾಗಿ ಆದ್ಯತೆ ಮೇರೆಗೆ ತುರ್ತಾಗಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ ಸೇರಿ ದಂತೆ ಇನ್ನಿತರ ಅಧಿಕಾರಿಗಳೊಂದಿಗೆ ಕೆ.ಆರ್. ಕ್ಷೇತ್ರದ ಅಭಿವೃದ್ಧಿ ಸಂಬಂಧ ಚರ್ಚಿಸಿದರು. ಸಭೆಯಲ್ಲಿ ಮಾತನಾಡಿದ ರಾಮದಾಸ್, 75ನೇ ಸ್ವಾತಂತ್ರ್ಯೋತ್ಸವÀದ ವಿಶೇಷ ಸಂದರ್ಭ ದಲ್ಲಿ ಕೆ.ಆರ್ ಕ್ಷೇತ್ರ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಅದ ರಲ್ಲಿ ಸುರಕ್ಷತಾ ರಸ್ತೆ(ಸೇಫ್ಟಿ ರೋಡ್) ಹೊಂದಿ ರುವ ಕ್ಷೇತ್ರವನ್ನಾಗಿ ಪರಿವರ್ತಿಸಲು ಉದ್ದೇ ಶಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ 422 ಕಿ.ಮಿ ರಸ್ತೆಗಳಿದ್ದು, ಅವುಗಳಲ್ಲಿ 200 ಕಿ.ಮಿ ನಷ್ಟು ರಸ್ತೆ ದುಸ್ಥಿತಿಯಲ್ಲಿದೆ. ಈ ರಸ್ತೆಯನ್ನು ಸುಸ್ಥಿತಿಗೆ ತರಲು ಕ್ರಮ ಕೈಗೊಳ್ಳಬೇಕು. 2022ರ ಆ.15ರೊಳಗೆ ಸೇಫ್ಟಿ ರೋಡ್ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.

ನಗರೋತ್ಥಾನ ಕಾರ್ಯಕ್ರಮದಡಿ ಕೆ.ಆರ್. ಕ್ಷೇತ್ರ ವ್ಯಾಪ್ತಿಯಲ್ಲಿ 114 ಉದ್ಯಾನವನ ಹಾಗೂ 18 ಸ್ಮಶಾನಗಳು ಹಾಗೂ 6 ವೃತ್ತಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿ, ಇತರೆ ಕ್ಷೇತ್ರ ಗಳಿಗೆ ಮಾದರಿಯಾಗಿ ರೂಪಿಸಲು ಉದ್ದೇ ಶಿಸಲಾಗಿದೆ. ಸ್ವಂತ ಸೂರು ಇಲ್ಲದವರಿಗೆ ಮನೆ ಮಂಜೂರು ಮಾಡಲು ಉದ್ದೇಶಿಸ ಲಾಗಿದೆ. ಎಂದರು. ಈ ಸಭೆಯಲ್ಲಿ ಹೆಚ್ಚು ವರಿ ಆಯುಕ್ತ ಶಶಿಕುಮಾರ್, ಉಪ ಆಯುಕ್ತ (ಅಭಿವೃದ್ಧಿ), ಕಾರ್ಯ ಪಾಲಕ ಅಭಿಯಂತ ರರು, ಕೌನ್ಸಿಲ್ ಕಾರ್ಯದರ್ಶಿಗಳು, ಪಾಲಿಕೆ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.

Translate »