ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯಿಂದ ವ್ಯಾಪಕವಾಗುತ್ತಿರುವ ಕೊರೊನಾ ಸೋಂಕು
ಮೈಸೂರು

ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯಿಂದ ವ್ಯಾಪಕವಾಗುತ್ತಿರುವ ಕೊರೊನಾ ಸೋಂಕು

August 22, 2021

ಮೈಸೂರು, ಆ.21(ಎಂಟಿವೈ)-ಕೊರೊನಾ 3ನೇ ಅಲೆ ಆತಂಕ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನಾಶೀ ರ್ವಾದ ಯಾತ್ರೆ ನಡೆಸುವ ಮೂಲಕ ಕೇಂದ್ರ ಸಚಿವರು ಹಾಗೂ ಆಡಳಿತಾರೂಢ ಪಕ್ಷದ ಸಂಸದರು ಪಾಲ್ಗೊ ಳ್ಳುವ ಮೂಲಕ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಕಾರಣರಾಗುತ್ತಿದ್ದಾರೆ ಎಂದು ಕರ್ನಾಟಕ ಪ್ರಜಾಪಾರ್ಟಿ ರಾಜ್ಯಾಧ್ಯಕ್ಷ ಡಾ. ಬಿ.ಶಿವಣ್ಣ ದೂರಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸರ್ಕಾರ ನಿರ್ಲಕ್ಷ್ಯತನದಿಂದ ಎರಡನೇ ಅಲೆಯಲ್ಲಿ ಸಾಕಷ್ಟು ಸಾವು- ನೋವು ಸಂಭವಿಸಿದೆ. ಸೋಂಕು ಹರಡುವಿಕೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳದ ಕಾರಣ ಜನಸಾಮಾನ್ಯರು ತತ್ತರಿಸಿ ದ್ದರು. ಎರಡನೇ ಅಲೆ ಅಂತ್ಯಗೊಳ್ಳುವ ಮುನ್ನ, ಮೂರನೇ ಅಲೆ ಆತಂಕ ಕಾಡುತ್ತಿದೆ. ತಜ್ಞ ವೈದ್ಯರು ಎಚ್ಚರಿಕೆ ನೀಡಿ ದ್ದರೂ ಸರ್ಕಾರ ಮಾತ್ರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಸೋಂಕು ಹರಡುವಿಕೆ ತಡೆಗಟ್ಟಲು ಗುಂಪು ಗೂಡುವುದನ್ನು ನಿರ್ಬಂಧಿಸಲಾಗಿದೆ. ಆದರೆ ಸಚಿವರು ಹಾಗೂ ಆಡಳಿತಾರೂಢ ಪಕ್ಷದ ಸಂಸದರು, ಶಾಸಕರು ಮಾತ್ರ ಸರ್ಕಾರ ಜಾರಿಗೆ ತಂದ ನಿಯಮವನ್ನು ಗಾಳಿಗೆ ತೂರುವ ಮೂಲಕ ಸೋಂಕು ಹರಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸೋಂಕು ಹರಡುವಿಕೆ ತಡೆಗೆ ಕ್ರಮ ಕೈಗೊಳ್ಳಬೇಕಾ ಗಿದ್ದ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ನಾರಾಯಣ ಸ್ವಾಮಿ, ಭಗವಂತ ಖೂಬಾ ಜನಾಶೀರ್ವಾದ ಯಾತ್ರೆ ಹೆಸರಲ್ಲಿ ಮೆರವಣಿಗೆ, ಸಭೆ ನಡೆಸಿ ತಮ್ಮ ಸ್ವ ಹಿತಾಸಕ್ತಿಗಾಗಿ ಸಾವಿ ರಾರು ಜನರನ್ನು ಸೇರಿಸಿದ್ದಾರೆ. ಸೋಂಕು ಹರಡುವಿಕೆ ತಡೆಗೆ ಸರ್ಕಾರ ಹೊರಡಿ ಸಿರುವ ಮಾರ್ಗಸೂಚಿಯನ್ನು ಗಾಳಿಗೆ ತೂರಿ ತಮಗಿಷ್ಟ ಬಂದ ರೀತಿಯಲ್ಲಿ ಮೆರವಣಿಗೆ, ಸಭೆ ಆಯೋಜಿಸಿ ಸುಲಭ ವಾಗಿ ಸೋಂಕು ಹರಡುವಿಕೆಗೆ ಕಾರಣರಾಗಿದ್ದಾರೆ. ಸಾಮಾ ಜಿಕ ಅಂತರವನ್ನು ಕಾಪಾಡಿಕೊಂಡಿಲ್ಲ. ಬಿಜೆಪಿ ಮುಖಂ ಡÀರು ಯಾವ ಪುರುಷಾರ್ಥಕ್ಕೆ ಜನಾಶೀರ್ವಾದ ನಡೆಸುತ್ತಿ ದ್ದಾರೋ ಎಂದು ತಿಳಿಯುತ್ತಿಲ್ಲ ಎಂದು ಲೇವಡಿ ಮಾಡಿದರು.

ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕಫ್ರ್ಯೂ ಅವೈಜ್ಞಾ ನಿಕ ಕ್ರಮ. ಲಾಕ್‍ಡೌನ್‍ನಿಂದಾಗಿ ಕಳೆದ ಒಂದೂವರೆ ವರ್ಷ ದಿಂದ ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳು ತತ್ತರಿಸಿದ್ದಾರೆ. ವ್ಯಾಪಾರ-ವಹಿವಾಟು ಇಲ್ಲದೆ ತೊಂದರೆಗೀಡಾಗಿದ್ದಾರೆ. ಈಗಾಗಲೇ ಸಂಕಷ್ಟದಲ್ಲಿರುವ ವ್ಯಾಪಾರಿಗಳನ್ನು ಮತ್ತೆ ಸಂಕಷ್ಟಕ್ಕೆ ದೂಡಿದಂತಾಗಿದೆ. ಒಂದೆಡೆ ಜನಾಶೀರ್ವಾದ ಹೆಸರಿನಲ್ಲಿ ಹೆಚ್ಚು ಜನಸಂಖ್ಯೆಯನ್ನು ಒಂದೆಡೆ ಸೇರಿಸಲು ಸರ್ಕಾರವೇ ಅನುಮತಿ ಕೊಡುತ್ತದೆ. ಮತ್ತೊಂದೆಡೆ ವಾರಾಂತ್ಯ ಕಫ್ರ್ಯೂ ಜಾರಿಗೊಳಿಸುತ್ತಿದೆ. ಈ ತಾರತಮ್ಯ ನೀತಿಯನ್ನು ಕರ್ನಾಟಕ ಪ್ರಜಾ ಪಾರ್ಟಿ ಖಂಡಿಸುತ್ತದೆ. ವಾರಾಂತ್ಯ ಕಫ್ರ್ಯೂವಿಗೆ ನಮ್ಮ ವಿರೋಧವಿದೆ. ಕಫ್ರ್ಯೂ ತೆರವುಗೊಳಿಸಿ, ಗಡಿಭಾಗ ದಲ್ಲಿ ಬಿಗಿಗೊಳಿಸಬೇಕೆಂದು ಒತ್ತಾಯಿಸಿದರು.

Translate »