ಗಂಜೀಫಾ ಚಿತ್ರಕಲಾವಿದ ರಘುಪತಿ ಭಟ್, ಯೋಗಾಚಾರ್ಯ  ಸುಧೇಶ್ ಚಂದ್‍ಗೆ ಚಂಪಕ ಕಲಾ ರತ್ನ ಪ್ರಶಸ್ತಿ ಪ್ರದಾನ
ಮೈಸೂರು

ಗಂಜೀಫಾ ಚಿತ್ರಕಲಾವಿದ ರಘುಪತಿ ಭಟ್, ಯೋಗಾಚಾರ್ಯ ಸುಧೇಶ್ ಚಂದ್‍ಗೆ ಚಂಪಕ ಕಲಾ ರತ್ನ ಪ್ರಶಸ್ತಿ ಪ್ರದಾನ

June 3, 2023

ಮೈಸೂರು, ಜೂ.1(ಎಂಕೆ)- ಮೈಸೂ ರಿನ ರಾಮಕೃಷ್ಣನಗರದಲ್ಲಿರುವ ಚಂಪಕ ಎಜುಕೇಶನಲ್ ಅಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ‘ಚಂಪಕ ಕಲಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ‘ಮೈಸೂರು ಮಿತ್ರ’ ಮತ್ತು ‘ಸ್ಟಾರ್ ಆಫ್ ಮೈಸೂರ್’ ಸಂಸ್ಥಾಪಕ ಸಂಪಾದಕರಾದ ಕೆ.ಬಿ.ಗಣಪತಿ, ಸಾಧಕ ರಾದ ರಘುಪತಿ ಭಟ್(ಗಂಜೀಫಾ ಚಿತ್ರಕಲೆ), ಯೋಗಾಚಾರ್ಯ ಸುಧೇಶ್ ಚಂದ್(ಯೋಗ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರು, ನಾಗ ರಿಕತೆಯ ಜೊತೆ ಜೊತೆಗೆ ಸಂಸ್ಕøತಿಯನ್ನು ಉಳಿಸುವುದು ಅತ್ಯಂತ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಚಂಪಕ ಎಜುಕೇಶನಲ್ ಅಂಡ್ ಕಲ್ಚರಲ್ ಟ್ರಸ್ಟ್ ಸೇವೆ ಶ್ಲಾಘ ನೀಯವಾದದ್ದು. ಸಮಾಜದಲ್ಲಿ ಜೀವನ ನಡೆಬಹುದು. ಆದರೆ ಸಾಧಕರಾಗಿ ಸಮಾಜದಲ್ಲಿ ಕಾಣಿಸಿಕೊಳ್ಳುವುದು ಮುಖ್ಯವಾಗಿದೆ. ಸಾಧನೆಯ ಮಾರ್ಗದಲ್ಲಿ ಸಾಗಿದ ಫಲವಾಗಿ ಈ ಸಾಧಕರಿಬ್ಬರು ‘ಚಂಪಕ ಕಲಾ ರತ್ನ’ ಪ್ರಶಸ್ತಿ ಪಡೆದಿದ್ದಾರೆ ಎಂದು ಮೆಚ್ಚುಗೆ ಮಾತುಗಳನ್ನಾಡಿದರು.

ನನ್ನ ಪ್ರಕಾರ ಈ ದೇಶದಲ್ಲಿ ಬ್ರಿಟಿಷರು ಸೇರಿದಂತೆ ಇತರರು 1100 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಇದೆಲ್ಲದರ ನಡುವೆಯೂ ನಮ್ಮ ಕಲೆ, ಸಂಸ್ಕøತಿ, ಸಾಹಿತ್ಯ ಉಳಿದಿದೆ ಎಂದರೆ ಅದಕ್ಕೆ ಸಾಂಸ್ಕøತಿಕ ಸೇವಾ ಸಂಸ್ಥೆಗಳ ಕೊಡುಗೆ ಮುಖ್ಯವಾಗಿದೆ. ನಮ್ಮಲ್ಲಿ ನಾನು ಎಂಬುದು ಹೋಗಿ ನಾವು ಎನ್ನುತ್ತಾ ಒಟ್ಟಾಗಿ ಬದುಕಿ ದಾಗ ಸಂಸ್ಕøತಿ ಇನ್ನಷ್ಟು ಗಟ್ಟಿಯಾಗುತ್ತದೆ. ಹಾಗೆಯೇ ದೇಶವೂ ಅಭಿವೃದ್ಧಿಯತ್ತ ಸಾಗುತ್ತದೆ ಎಂದರು.

ಸ್ವಾತಂತ್ರ್ಯ ಬಂದಾಗಿನಿಂದ ದೇಶದಲ್ಲಾ ಗಿರುವ ಬದಲಾವಣೆ ಎಂದರೆ ಅದು ತಂದೆಯಿಂದ ಮಗನಿಗೆ, ಮೊಮ್ಮಕ್ಕಳಿಗೆ ಅಧಿಕಾರ ಹಸ್ತಾಂತರವಾಗಿರುವುದು ಮಾತ್ರ. 2014ರಿಂದೀಚೆಗೆ ದೇಶದಲ್ಲಿ ಒಂದಷ್ಟು ಬದಲಾವಣೆಗಳನ್ನು ಕಂಡಿ ದ್ದೇವೆ. ರಾಷ್ಟ್ರಿಯತೆಯೇ ಮೊದಲು ಎಂದ ರಷ್ಟೇ ನಮ್ಮದು, ನಮ್ಮ ಸಂಸ್ಕøತಿ ಉಳಿ ಯುತ್ತದೆ-ಬೆಳೆಯುತ್ತದೆ. ಬ್ರಿಟಿಷರು ಮೈಸೂರು ಒಡೆಯರಿಗೆ ಅಧಿಕಾರ ಹಸ್ತಾಂತರ ಮಾಡಿದ ನಂತರ ಮೈಸೂ ರಿನ ಹಿರಿಮೆ-ಗರಿಮೆ, ಕಲೆ, ಸಂಸ್ಕøತಿ ಬೆಳೆದದ್ದು ಎಂದು ತಿಳಿಸಿದರು.

ಮಾರುಹೋಗುವ ಸ್ಥಿತಿ ಬಂದಿದೆ: ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆಗೆ ಸಾಂಸ್ಕøತಿಕ ಕಲಾಪ್ರಕಾರಗಳನ್ನು ಅಭ್ಯಾಸ ಮಾಡಿಸುವುದು ಅತ್ಯಂತ ಅವಶ್ಯ ವಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಚಂಪಕ ಎಜುಕೇಶನಲ್ ಅಂಡ್ ಕಲ್ಚರಲ್ ಟ್ರಸ್ಟ್‍ಗೆ ಅಭಿನಂದನೆ ಸಲ್ಲಿಸುತ್ತೇನೆ. ಇದೆಲ್ಲ ದರ ನಡುವೆ ಬೇರೆ ಸಂಸ್ಕøತಿಗೆ ಮಾರು ಹೋಗುವ ಪರಿಸ್ಥಿತಿ ನಮ್ಮ ಸಮಾಜ ದಲ್ಲಿದ್ದು, ನಮ್ಮ ನೆಲದ ಸಂಸ್ಕøತಿ ಉಳಿವಿಗೆ ಮುಂಜಾಗ್ರತೆ ವಹಿಸುವುದು ಮುಖ್ಯವಾ ಗಿದೆ ಎಂದು ಸಲಹೆ ನೀಡಿದರು. ಇದಕ್ಕೂ ಮುನ್ನ ‘ಚಂಪಕ ಕಲಾ ರತ್ನ’ ಪ್ರಶಸ್ತಿ ಸ್ವೀಕರಿ ಸಿದ ರಘುಪತಿ ಭಟ್ ಹಾಗೂ ಯೋಗಾ ಚಾರ್ಯ ಸುಧೇಶ್ ಚಂದ್ ತಮ್ಮ ಸಾಧನೆಯ ಹಾದಿ ಹಾಗೂ ಕಲೆ, ಸಂಸ್ಕøತಿ ಮತ್ತು ಯೋಗದ ಮಹತ್ವ ತಿಳಿಸಿಕೊಟ್ಟರು.

ಭರತನಾಟ್ಯ ನೃತ್ಯ ಪ್ರದರ್ಶನ: ನಂತರ ಚಂಪಕ ಅಕಾಡೆಮಿ ಸಂಸ್ಥಾಪಕರಾದ ವಿದುಷಿ ನಾಗಲಕ್ಷ್ಮಿ ನಾಗರಾಜನ್ ಅವರಿಂದ ‘ಶ್ರೀ ಕೃಷ್ಣ ಲೀಲಾ ವಿಭೂತಿ’ ಗೀತ ನಾಟಕಕ್ಕೆ ನೃತ್ಯ ಪ್ರದರ್ಶನ ನೀಡಿದರು. ವಿದುಷಿ ಚೇತನ ನಾಗರಾಜ್ ಸಂಗೀತ ಸಂಯೋಜನೆ ಹಾಗೂ ಗಾಯನದಲ್ಲಿ ಸಹಕರಿಸಿದರೆ, ಕೊಳಲು ವಾದನದಲ್ಲಿ ವಿದ್ವಾನ್ ಕೆ.ಎಸ್. ಗಣೇಶ್, ಮೃದಂಗದಲ್ಲಿ ಸಾಯಿ ವಂಶಿ, ಗಮಕ ಗಾಯನದಲ್ಲಿ ವಿದುಷಿ ಅನ್ನಪೂರ್ಣ ನಾಗೇಂದ್ರ ಹಾಗೂ ಸಂಭಾಷಣೆಯಲ್ಲಿ ಹೇಮಾ ರಮೇಶ್ ಸಹಕಾರ ನೀಡಿದರು. ಚಂಪಕ ಎಜುಕೇಶನಲ್ ಅಂಡ್ ಕಲ್ಚರಲ್ ಟ್ರಸ್ಟ್‍ನ ನಾಗರಾಜನ್ ಶ್ರೀನಿವಾಸನ್ ಮತ್ತಿತರರು ಉಪಸ್ಥಿತರಿದ್ದರು.

Translate »