ಈ ಜೀವನ ನಮ್ಮದು

ಅಂಕಣಗಳು, ಈ ಜೀವನ ನಮ್ಮದು

ಕಳೆದ ತಿಂಗಳು ಮಂಗಳೂರು ಆಕಾಶವಾಣಿ ‘ದಾಂಪತ್ಯ ಗೀತೆ’ ಎಂಬ ನನ್ನ ಕವಿತೆಯನ್ನು ತಿಂಗಳ ಹಾಡು ‘ಭಾವಗಾನ’ ಕಾರ್ಯಕ್ರಮ ದಲ್ಲಿ ಪ್ರಸಾರ ಮಾಡಿತು. ಪ್ರತಿ ಶುಕ್ರವಾರ ತಿಂಗಳಲ್ಲಿ ನಾಲ್ಕು ಬಾರಿ ಪ್ರಸಾರ ಮಾಡಿದ ಆಕಾಶವಾಣಿಗೆ ನನ್ನ ಕೃತಜ್ಞತೆಗಳು. ದಾಂಪತ್ಯ ಪ್ರಾರಂಭವಾಗುವ ಮೊದಲೇ ದಂಪತಿ ದೂರವಾಗುವ ಕಾಲವಿದು. ನೂರಾರು ವರ್ಷಗಳಿಂದ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಕೌಟುಂಬಿಕ ಮೌಲ್ಯ ಗಳು ನಮ್ಮ ಕಣ್ಣೆದುರೇ ಛಿದ್ರವಾಗು ತ್ತಿರು ವುದಕ್ಕೆ ನಮ್ಮ ಅಸಹಾಯಕತೆ ಕಾರಣವೋ ಅಥವಾ ಪ್ರತಿಷ್ಠೆಯೋ ನನಗಂತೂ ತಿಳಿಯುತ್ತಿಲ್ಲ. ಹತ್ತಾರು ವರ್ಷಗಳು…