ಪೆರುಂಬಾಡಿಯಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಶಾಸಕ ಚಾಲನೆ
ಕೊಡಗು

ಪೆರುಂಬಾಡಿಯಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಶಾಸಕ ಚಾಲನೆ

August 23, 2021

ವಿರಾಜಪೇಟೆ, ಆ.22- ಖಾಸಗಿ ರೆಸಾರ್ಟ್‍ಗಳು ಪ್ರವಾಸೋದ್ಯಮಕ್ಕೆ ಮಾತ್ರ ಸೀಮಿತವಾಗದೆ ಸಮಾಜ ಸೇವೆಯಂತ ಜನೋಪ ಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು ತ್ತಿರುವುದು ಉತ್ತಮ ಕಾರ್ಯ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವಿರಾಜಪೇಟೆ ಬಳಿಯ ಪೆರುಂಬಾಡಿ ಗ್ರಾಮದ ಮ್ಯಾಗ್ನೋಲಿಯ ರೆಸಾರ್ಟ್ ಆಡಳಿತ ಮಂಡಳಿಯಿಂದ ರೇಸಾರ್ಟ್‍ನ ಸಭಾಂಗಣದಲ್ಲಿ ಪೆರುಂಬಾಡಿ ಗ್ರಾಮಾಸ್ಥರಿಗೆ ಏರ್ಪಡಿಸಿದ್ದ ದ್ವಿತೀಯ ಹಂತದ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಕೊವಿಡ್ ಸೋಂಕು ತಡೆಗೆ ನೀಡುವ ಲಸಿಕೆಯು ಸ್ವಲ್ಪ ಅಭಾವವಿದ್ದರೂ ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆ ನೀಡಲು ಮೆಗ್ನೋಲಿಯ ರೆಸಾರ್ಟ್ ಮಾಲೀಕರು ಹಾಗೂ ಆಡಳಿತ ಮಂಡಳಿ ಮುಂದಾಗಿರುವುದು ಶ್ಲಾಘನೀಯ. ಉದ್ಯಮಿಗಳು ಪ್ರವಾಸೋದ್ಯ ಮಕ್ಕೆ ಮಾತ್ರ ಸಿಮೀತ ಆಗದೆ ಸಮಾಜ ಸೇವೆ ನೀಡುತ್ತಿದ್ದಾರೆ. ಸಮಾಜ ಮತ್ತು ಸರ್ಕಾರದ ಕಾರ್ಯಕ್ರಮಗಳಿಗೆ ಇದೇ ರೀತಿ ಖಾಸಗಿಯವರು ಸಹಕಾರ ನೀಡುವಂತಾಗಬೇಕು ಎಂದರು

ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ ಸಿಂಪಿ ಮಾತನಾಡಿ, ಸಾರ್ವಜನಿಕರು ಕೊರೊನಾ ಲಸಿಕೆ ಪಡೆದರೂ ಕೂಡ ಮಾಸ್ಕ್ ಕಡ್ಡ್ಡಾಯವಾಗಿ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಎಚ್ಚರದಿಂದ ಇರುವಂತೆ ಕಿವಿಮಾತು ಹೇಳಿದರು.
ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಮಾತನಾಡಿ, ಸರ್ಕಾರಿ ಲಸಿಕಾ ಕೇಂದ್ರದಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದ್ದು. ಲಸಿಕೆಯ ಲಭ್ಯತೆಯಲ್ಲಿ ಎರುಪೇರಾಗಿದೆ. ಸರ್ಕಾರದ ಕಾರ್ಯಕ್ರಮದೊಂ ದಿಗೆ ಖಾಸಗಿ ಸಂಸ್ಥೆಗಳು ಕೈಜೋಡಿಸಿ ಸಾರ್ವಜನಿಕರಿಗೆ ಉಚಿತ ವಾಗಿ ಲಸಿಕೆ ನೀಡುತ್ತಿರು ವುದು ಒಳ್ಳೆಯ ಬೆಳವಣಿಗೆ ಎಂದರು.

ರೆಸಾರ್ಟ್‍ನ ವ್ಯವಸ್ಥಾಪಕ ಪ್ರವಿಣ್ ಮಾತನಾಡಿದರು. ಕಾರ್ಯ ಕ್ರಮದ ವೇದಿಕೆಯಲ್ಲಿ ನಾರಾಯಣ ಹೃದಯಲಯ ಆಸ್ಪತ್ರೆಯ ಡಾ.ಪೂರ್ಣಿಮ, ಆರ್ಜಿ ಗ್ರಾಪಂ ಪಿಡಿಓ ಆರ್.ರಾಜನ್, ಗ್ರಾಪಂ ಉಪಧ್ಯಕ್ಷ ಎನ್.ಕೆ. ಉಪೇಂದ್ರ, ಸದಸ್ಯರಾದ ಜೋಸ್, ನವೀನ್, ಮಾಜಿ ಉಪಾಧ್ಯಕ್ಷ ಬಿ.ಎನ್.ಗೀರಿ ಮತ್ತಿತ ರರು ಉಪಸ್ಥಿತರಿದ್ದರು. ಉಚಿತ ಲಸಿಕೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Translate »