ಪಾಸಿಟಿವಿಟಿ ದರ ಏರಿಕೆ ಹಿನ್ನೆಲೆ ಕೊಡಗಿನಲ್ಲಿ ಸದ್ಯಕ್ಕೆ ಶಾಲೆ ಆರಂಭ ಇಲ್ಲ
ಕೊಡಗು

ಪಾಸಿಟಿವಿಟಿ ದರ ಏರಿಕೆ ಹಿನ್ನೆಲೆ ಕೊಡಗಿನಲ್ಲಿ ಸದ್ಯಕ್ಕೆ ಶಾಲೆ ಆರಂಭ ಇಲ್ಲ

August 23, 2021

ಮಡಿಕೇರಿ,ಆ.22-ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಕಾರಣದಿಂದ ಮಕ್ಕಳ ಭೌತಿಕ ಕಲಿಕೆಗೆ ಸದ್ಯಕ್ಕೆ ಶಾಲೆ ಆರಂಭವಾಗುತ್ತಿಲ್ಲ.

ರಾಜ್ಯ ಸರ್ಕಾರ ಮಕ್ಕಳ ಶೈಕ್ಷಣಿಕ ಉನ್ನ ತಿಯ ದೃಷ್ಟಿಯಿಂದ ಆ.23ರಿಂದ ಶಾಲೆ ತೆರೆಯಲು ತೀರ್ಮಾನಿಸಿದೆ. ಆದರೆ ಕೊಡಗಿ ನಲ್ಲಿ ಶಾಲೆ ಆರಂಭಿಸುವ ಕುರಿತು ಯಾವುದೇ ಅಧಿಕೃತ ಆದೇಶ ಇನ್ನೂ ಬಂದಿಲ್ಲ. ಕೊಡಗು ಕೇರಳ ರಾಜ್ಯದ ಗಡಿ ಪ್ರದೇಶ ಹೊಂದಿರು ವುದರಿಂದ ಹಾಗೂ ಶೇಕಡವಾರು ಕೋವಿಡ್ ಪ್ರಮಾಣ ಹೆಚ್ಚಿರುವುದರಿಂದ ಶಾಲೆ ಆರಂಭದ ಕುರಿತು ಸರ್ಕಾರ ಆದೇಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ಯಾವುದೇ ರೀತಿಯ ತಯಾರಿ ಗಳು ಮಾಡಿಕೊಂಡಿಲ್ಲ.

ಕಳೆದ ವಾರದಿಂದ ಕೊರೊನಾ ಸೋಂಕಿನ ಪ್ರಮಾಣ ಶೇಕಡ 2ಕ್ಕಿಂತ ಹೆಚ್ಚಿರುವುದ ರಿಂದ ಮುಂದಿನ ಆದೇಶದವರೆಗೆ ಪರ್ಯಾಯ ವಿಧಾನದಲ್ಲಿ ಕಲಿಕೆ ಮತ್ತು ಬೋಧನ ಪ್ರಕ್ರಿಯೆ ಗಳನ್ನು ಮುಂದುರೆಸಲು ಆದೇಶಿಸಲಾಗಿದೆ ಎಂದು ಕೊಡಗು ಜಿಲ್ಲಾ ಶಿಕ್ಷಣ ಇಲಾಖಾ ಉಪನಿರ್ದೇಶಕ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 10 ದಿನಗಳ ಸರಾಸರಿ ಕೋವಿಡ್-19 ಸೋಂಕಿನ ಪ್ರಮಾ ಣವು ಶೇ.2ರಷ್ಟು ಇರುವುದರಿಂದ ಆ.23 ರಿಂದ 9 ಮತ್ತು ಮೇಲ್ಪಟ್ಟ ತರಗತಿಗಳನ್ನು ಆರಂಭಿಸಲು ಸಾಧ್ಯವಿಲ್ಲ. ತರಗತಿಗಳನ್ನು ಆರಂಭಿಸುವ ದಿನಾಂಕವನ್ನು ಮುಂದೆ ತಿಳಿಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕÀ ಶ್ರೀಧರನ್ ಮಾಹಿತಿ ನೀಡಿದ್ದಾರೆ.

Translate »