ಮೈಸೂರು ನಾಗರಿಕರ ವೇದಿಕೆಯಿಂದ 62 ಭೋವಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಚಾಮರಾಜನಗರ

ಮೈಸೂರು ನಾಗರಿಕರ ವೇದಿಕೆಯಿಂದ 62 ಭೋವಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

August 21, 2021

ಚಾಮರಾಜನಗರ, ಆ.20(ಎಸ್‍ಎಸ್)- ತಾಲೂಕಿನ ಬಿ.ಜಿ.ಕಾಲೋನಿಯ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣ ದಲ್ಲಿ ಮೈಸೂರು ನಾಗರಿಕರ ವೇದಿಕೆ ವತಿ ಯಿಂದ 62 ಭೋವಿ ಕುಟುಂಬಗಳಿಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿನಸಿ ಕಿಟ್‍ಗಳನ್ನು ವಿತರಿಸಿದರು.

ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಪಜ್ಞಾವಂತ ಜನರು ಸೇರಿ ಸ್ಥಾಪಿಸಿರುವ ಮೈಸೂರು ನಾಗರಿಕ ವೇದಿಕೆಯು ಗುಜರಾಜ್ ಭೂಕಂಪ, ಕೇರಳ, ಕೊಡಗಿನಲ್ಲಿ ಪ್ರವಾಹ ಸಂತ್ರಸ್ತರಿಗೂ ನೆರವಾಗಿದೆ. ಅಲ್ಲದೆ ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಜನತೆಗೂ ದಿನಸಿ ಕಿಟ್ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೊನಾ ಮಹಾಮಾರಿಯಿಂದ ಇಡೀ ಜಗತ್ತೆ ತಲ್ಲಣಗೊಂಡಿದೆ. ಕೊರೊನಾ ರೀತಿ ಯಲ್ಲಿ ಹಿಂದೆ ಕೂಡ ಕಾಲರಾ, ಪ್ಲೇಗ್ ಬಂದು ಅನೇಕ ಸಾವು-ನೋವು ಸಂಭವಿಸಿತ್ತು ಎಂದು ಹಿರಿಯರು ಹೇಳುತ್ತಿದ್ದರು. ಇಂತಹ ಸಾಂಕ್ರಾ ಮಿಕ ರೋಗ ಬಂದರೆ ಎಚ್ಚರಿಕೆಯಿಂದ ಇರ ಬೇಕು ಎಂದು ಕಿವಿಮಾತು ಹೇಳಿದರು.

ಕಣ್ಣಿಗೆ ಕಾಣದ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವುದನ್ನೂ ನೋಡಿದರೆ ಭಗವಂತನ ಶಕ್ತಿ ಎಂತಹದು ಎಂದು ಅರ್ಥ ಮಾಡಿಕೊಳ್ಳಬೇಕು. ಇನ್ನೂ ಕೊರೊನಾ ಸಂಪೂರ್ಣವಾಗಿ ನಿಯಂತ್ರಣವಾಗಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದರ ಲ್ಲದೆ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಪಡೆದ ವಿದ್ಯಾರ್ಥಿನಿ ನಂದಿನಿಗೆ ಉಚಿತ ಶಿಕ್ಷಣ ನೀಡುವುದಾಗಿ ಶ್ರೀಗಳು ಘೋಷಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸುತ್ತೂರು ಶ್ರೀಗಳು ಚಾಮರಾಜನಗರಕ್ಕೆ ಅನೇಕ ಕೊಡುಗೆ ನೀಡಿದ್ದಾರೆ ಎಂದರಲ್ಲದೆ, ಕೋವಿಡ್ ನಿಂದ ಮೃತಪಟ್ಟ ಜಯರಾಂ ಕುಟುಂಬಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ವೈಯಕ್ತಿಕವಾಗಿ 10 ಸಾವಿರ ರೂ. ಧನಸಹಾಯ ವಿತರಿಸಿ ದರು. ಎಂಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬಿಸಲವಾಡಿ ಗ್ರಾಪಂ ಅಧ್ಯಕ್ಷ ಬೇಬಿ, ಉಪಾಧ್ಯಕ್ಷ ಮಹದೇವಪ್ಪ, ಸದಸ್ಯ ರಾದ ಮಣಿ, ಜ್ಯೋತಿ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಶಿವು, ತಹಸೀಲ್ದಾರ್ ಚಿದಾನಂದಗುರುಸ್ವಾಮಿ, ಜೆಎಸ್‍ಎಸ್ ಶಿಕ್ಷಣ ಸಂಸ್ಥೆಯ ಆರ್.ಎಂ. ಸ್ವಾಮಿ, ಕಾರ್ಯಕ್ರಮ ಸಂಘಟಕ ಮಹೇಶ್, ರೋಟರಿ ಸಂಸ್ಥೆ ನಾಗರಾಜು, ಕಾಳನಹುಂಡಿ ಗುರುಸ್ವಾಮಿ ಇತರರಿದ್ದರು.

Translate »