ಕೋವಿಡ್ ಶಿಷ್ಟಾಚಾರ ಕಡ್ಡಾಯ ಪಾಲನೆಗೆ ಡಿಸಿ ಸೂಚನೆ
ಚಾಮರಾಜನಗರ

ಕೋವಿಡ್ ಶಿಷ್ಟಾಚಾರ ಕಡ್ಡಾಯ ಪಾಲನೆಗೆ ಡಿಸಿ ಸೂಚನೆ

August 22, 2021

ಚಾಮರಾಜನಗರ, ಆ.21- ಜಿಲ್ಲೆಯಲ್ಲಿ ಆಗಸ್ಟ್ 23 ರಿಂದ 9 ರಿಂದ 12ನೇ ತರಗತಿ ಆರಂಭವಾಗುತ್ತಿದ್ದು, ಶಾಲಾ ಕಾಲೇಜು ಗಳಲ್ಲಿ ಯಾವುದೇ ಲೋಪಗಳಿಗೆ ಅವಕಾಶ ವಾಗದಂತೆ ಕೋವಿಡ್ ಶಿಷ್ಟಾಚಾರ ಕಡ್ಡಾಯ ವಾಗಿ ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಂದು ಶಾಲಾ ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಕೋವಿಡ್-19 ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲೆ ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿ ದಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‍ಒಪಿ) ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಎಲ್ಲಿಯೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯ ವಹಿಸಬಾರದು. ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಅತ್ಯಂತ ಹೆಚ್ಚಿನ ನಿಗಾ ವಹಿಸಬೇಕು ಎಂದರು.

ಪ್ರತೀ ಶಾಲೆ ಕಾಲೇಜಿನಲ್ಲಿ ಕೋವಿಡ್ ಸಂಬಂಧಿ ಶಿಷ್ಟಾಚಾರ, ಮಾರ್ಗಸೂಚಿ, ಎಸ್‍ಒಪಿ ಅನುಷ್ಠಾನಕ್ಕಾಗಿ ಓರ್ವ ಶಿಕ್ಷಕರು ಉಪನ್ಯಾಸಕರನ್ನು ಅನುಷ್ಠಾನ ಅಧಿಕಾರಿ ಯಾಗಿ ನೇಮಿಸಬೇಕು. ನೇಮಕಗೊಂಡ ಅನುಷ್ಠಾನ ಅಧಿಕಾರಿ ಸಾಮಾಜಿಕ ಅಂತರ, ಆರೋಗ್ಯ ಸಂಬಂಧಿ ಮಾರ್ಗದರ್ಶನ ನಿರ್ವ ಹಣೆ ನೋಡಿಕೊಳ್ಳಬೇಕು. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಕೋವಿಡ್ ಸಂಬಂಧಿ ಪರಿಪಾಲಿಸುತ್ತಿ ರುವ ಕ್ರಮಗಳನ್ನು ಪರಿಶೀಲಿಸಬೇಕು. ಆಯಾ ಶಾಲೆಯ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗಳ ವೈದ್ಯರ ಸಂಪರ್ಕದಲ್ಲಿ ಶಿಕ್ಷಕರು, ಉಪನ್ಯಾ ಸಕರು ಇದ್ದು ಆರೋಗ್ಯ ಕುರಿತ ಸಲಹೆಯನ್ನು ಪಡೆಯಬೇಕು. ಎಲ್ಲಾ ಅಗತ್ಯ ಕ್ರಮಗಳೊಂ ದಿಗೆ ಯಾವುದೇ ತೊಂದರೆಯಾಗದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಕಾರ ಪಡೆದು ಸುಗಮವಾಗಿ ತರಗತಿಗಳು ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸೂಚಿಸಿದರು.

Translate »